ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಚಂದ್ರಿಕಾಚಾರ್ಯ ಗುರುವೇ ಪ ಯಾಚಿಪೆ ನಿನ್ನ ಶ್ರೀ ಚರಣ ಸೇವೆ ಅ.ಪ ಜಲಧಿ ಚಂದ್ರ ಯತೀಂದ್ರ ಭೂಪೂರ್ವ ಪ್ರಹ್ಲಾದ ಸಜ್ಜನಾಹ್ಲಾದ ಗೋಪಾಲಕೃಷ್ಣ ಚರಣಾಂಬುರುಹ ಲೋಲ ಶ್ರೀಪಾದರಾಜಪ್ರಿಯ ಬಾಲಸುಶೀಲ 1 ಸಮೀರನ ರಾಶಿಯನು ರಚಿಸಿ ಸನ್ಮಾನ್ಯರೆನಿಸಿ ದಾಸಕೂಟಕೆ ನೆಲೆಯಿತÀ್ತು ಪುರಂದರ ದಾಸರನು ಕರುಣಿಸಿದೆ ಧೀರ ಉದಾರ 2 ಕುಹುಯೋಗ ಪರಿಹಾರಗೈದ ಮಹಾಯೋಗಿವರ ಕುಹಕ ವರ್ಜಿತ ಚಿತ್ತ ಶೋಭಿತ ಸುಖಾಂತ ಪಾದ ಧ್ಯಾನಿಪರ ಸಹವಾಸವೆನಗಿತ್ತು ಸಲಹುವುದು ಸತತ 3
--------------
ವರಾವಾಣಿರಾಮರಾಯದಾಸರು
ಶ್ರೀಕರ ಅಷ್ಟಾಕ್ಷರ ಮಂತ್ರ ಗುಣವಾರಿನಿಧಿ ಅನಘ ಉತ್ತಮಮಹಾ ಪ್ರಭುವೆ ನಿನಗೆ ನಮೋ ಶ್ರೀಕರ ನಾರಾಯಣನೆ ಶರಣು ಪ ಉತ್ತಮೋತ್ತಮಗುತ್ತ ಮೋತ್ತ ಮೋದೀತ ಚೇತನಾಚೇತನರಿಗುತ್ತಮಾಶ್ರಯನು ಉತ್ತಮ ಉಮೇಶಾದಿ ಭಾರತಿಗುತ್ತಮ ವಾಯು ಆತಗುತ್ತಮೆ ಸಿರಿಗೆ ಉತ್ತಮೋತ್ತಿಷ್ಠ 1 ಶ್ರೀ ಎಂದರೆ ಜ್ಞಾನಸುಖಪೂರ್ಣೆ ಲಕ್ಷ್ಮಿಸ್ಥ ಕ ಎಂದರಾನಂದಶತ ಸುಖಾಂತಸ್ಥ ರ ಎಂದರೆ ಸ್ವರತ ಸುಖಪ್ರದ ಸುಖಾಶ್ರಯನು ಇಂದಿರೇಶನೆ ಎನಗೆ ಸೌಭಾಗ್ಯವೀಯೊ 2 ಸ್ವಾಹಾ ಆತ್ಮನು ಸ್ವವಶ ಸರ್ವವಶಿ ಶ್ರೀಪನು ಹರಿ ಹಂಸ ನಿರ್ದೋಷ ಬ್ರಹ್ಮ ನಾರಾಯಣ ಅಹರ್ನಿಶಿ ಈ ರೀತಿ ನಿನ್ನ ಸ್ಮರಿಸುವ ಜನಕೆ ನಿಖಿಳ ಐಶ್ವರ್ಯವೀವೆ 3 ಕಂಬು ಅರಿ ಶಂಖನಿಧಿ ಪದ್ಮನಿಧಿ ದಿವ್ಯ ಹಸ್ತಗಳಲಿ ಶೋಭಿತವಾಗುಂಟು ದ್ರವ್ಯ ಹಾಟಕ ರತ್ನ ಧನ ಕೊಡುವ ಕರಗಳು ದೇವಿ ಶ್ರೀ ಹ್ರೀ ಸಹ ಗರುಡಾಂಶಸಂಸ್ಥ 4 ಮೀನಾದಿರೂಪ ತ್ವದ್ ಮಸ್ತಕಾದ್ಯಂಗದಿ ಇನಗಮಿತದೀಪ್ತ ಆಭರಣ ಜ್ವಲಿಸುತಿವೆ ಶ್ರೀನಿವಾಸನೆ ಸ್ವರ್ಣವರ್ಣ ನಮೋ ಶರಣು 5
--------------
ಪ್ರಸನ್ನ ಶ್ರೀನಿವಾಸದಾಸರು