ಜೋ ಜೋ ಸುಖಸಾರ ಪ ಜೋ ಜೋ ಜೋಜೋ ದೋಷ ವಿದೂರ ಅ.ಪ ಸುಮ್ಮನೆ ಸಾಗೆಲೊ ಮುಂದೆ ನಮ್ಮ ಮಗುವು ತಾ ಮಲಗಿಹನಿಂದು ನಿಮ್ಮ ಮಂದಿಗೆ ಈ ಶಿಶುವು ಬೊಮ್ಮನು ಫಣಿಯಲಿ ಬರೆದಿಹನೇನೊ 1 ನಿದ್ರೆಯ ಸುದ್ದಿಯ ಕಾಣದ ನಾನು ನಿದ್ರೆಯ ಮಾಡುವ ಸಡಗರವೇನು ಮುದ್ದು ಮಾತುಗಳಲಿ ಫಲವೇನು ನಿದ್ರೆ ನಾ ಮಾಡಲು ಎದ್ದಿರುವರ್ಯಾರು2 ನಿದ್ರೆ ಮಾಡುವುದೆಂತು ಬೇಕಾದ ಜೋಗುಳ ಪಾಡುವೇನೊ ಏಕಮನದಿ ನೀ ಪ್ರಾಜ್ಞನ ಕೂಡೊ ದಧಿ ಕ್ಷೀರಗಳು ನಾಕು ನಿಮಿಷದಲಿ ಜೀರ್ಣವಾಗುವುವೊ 3 ಕಣ್ಣನು ಮುಚ್ಚಿದೆ ಪ್ರಾಜ್ಞ ನಾನು ಚನ್ನಾಗಿ ತಬ್ಬಿದೆ ನೋಡಮ್ಮ ಎನ್ನಯ ಕುಕ್ಷಿಯು ಬರಿದಾಯ್ತು ಇನ್ನು ಪ್ರಸನ್ನಳಾಗುಣಬಡಿಸಮ್ಮ 4
ತಿಳಿ ನೀನೆ ಪರಬ್ರಹ್ಮ ರೂಪ ಏ ಜೀವಾ ತಿಳಿ ನೀನೆ ಪ ಪ್ರಾಣಕ್ಕೂ ಪ್ರಾಣ ಇದೆ ನೋಡು ಜಾಣ ಈ ವಿಶ್ವದಲ್ಲೇಕ ತಾಣಾ ಒಳ ಹೊರಗೂ ತುಂಬಿರ್ದ ಘನವೇ ನಿರಾಕಾರ ವಿಭುವೇ ಈ ಬ್ರಹ್ಮ ತಿಳಿ ನೀನೆ 1 ಕಲ್ಪನಾ ನೀಗಿ ತಾನೊಂದೆ ಆಗಿ ಅಲ್ಪತ್ವವೆಲ್ಲವು ಪೋಗಿ ಅದೇ ನೋಡು ಸುಖರೂಪಬ್ರಹ್ಮ ಅದೇ ಪೂರ್ಣಬ್ರಹ್ಮ ಆ ಬ್ರಹ್ಮ ತಿಳಿ ನೀನೆ ಪರಬ್ರಹ್ಮರೂಪಾ 2 ಸರ್ವಾಧಾರಾ ನಭದಂತೆ ಪೂರಾ ನಿರ್ವಿಕಲ್ಪ ಸುಖಸಾರಾ ಅದೇ ನೋಡು ಘನಾನಂದರೂಪ ಶಂಕರರೂಪಈ ರೂಪಾ ತಿಳಿ ನೀನೆ ಪರಬ್ರಹ್ಮರೂಪಾ3
ನೋಡುವ ಬನ್ನಿ ಸ್ವಾಮಿಯ ಅಂತರ್ಯಾಮಿಯ ಭಕ್ತಿಯ ದೃಢಯುಕ್ತಿಯ 1 ದೇವದೇವನ ಪೂರ್ಣ ನೋಡುವ ಸೇವೆಮಾಡುವ ಸರ್ವದಾ ಕೊಂಡಾಡುವ ನವವಿಧ ಭಕ್ತಿಯ ಮಾಡುವ ಭಾವವಿಡುವ 2 ತನು ಮನಧನ ಅರ್ಪಿಸಿ ಬಿಡುವ ಮನಗೂಡುವ ಪ್ರಾಣಾಯಾಮ ಮಾಡುವ ಅನುದಿನ ಸಾಧಿಸಿ ನೋಡುವ ಘನಗೂಡುವ 3 ಇಡಾಪಿಂಗಳ ಮಧ್ಯ ನೋಡುವ ನಡೆವಿಡುವ ನಡುಹಾದಿಗೂಡುವ ಒಡನೆ ಸ್ವಸುಖ ಪಡೆವ ಗೂಢ ನೋಡುವ 4 ಸವಿಸುಖಸಾರ ಸುರುತದೆ ದ್ರವಿಸುತದೆ ಠವಠವಿಸುತದೆ ರವಿಕೋಟಿಪ್ರಭೆ ಭಾಸುತದೆ ಆವಾಗಲ್ಯದೆ 5 ಏನೆಂದನಬೇಕನುಭವ ಖೂನದೋರುವ ಘನ ಮಳೆಗರೆವ ಸ್ವಾನುಭವದಲಿ ಸೇವಿಸುವ ಅನುಸರಿಸುವ 6 ಜಾಗಿಸುತ್ತದೆ ವಸ್ತುಮಯ ಬಗೆಬಗೆಯ ಯೋಗ ಇದೆ ನಿಶ್ಚಯ ಸುಗಮಸಾಧನ ಮಹಿಪತಿಯ ಸುಜ್ಞಾನೋದಯ 7