ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(1) ಸತಿ-ಪತಿ ಭಾವದ ಸ್ತುತಿಗಳು (ಜಾವಡಿಗಳು) ಎಂದಿಗೆ ತೀರಿದೆ ಸುಂದರನಾಯಕಿ ಅಂಗಜ ಬಾಣದ ಅತುರವನ್ನೂ ಪ ಚಂದ್ರಮುಖಿಯೇ ನೀ ನಾದಿನ ಹೇಳಲ್ ಬಂದೆನುನಾನಹುದೇ ಭಾವಕರನ್ನೇ ಕುಂದುಗಳನೀಪರಿ ಉಸುರುವೆ ಉಚಿತವೆ ಸಂದಣಿಯಾಗೆನ್ನೊಳಿಂದಿನ ಕಾಲಯೆಂದಿಗೆ 1 ಬಲ್ಲೆನು ನಿನ್ನಂ ಭಾವದ ಸೊಲ್ಲಂ ಬೆಲ್ಲದ ಮಾತನಾಡಿ ಕಳುಹಿಪೆನೇಂ ಬೊಲ್ಲಿದಿಗೆ ಸಾಕುಬಿಡು ಇಂಪಿನ ಕವಚತೊಡು ಸಲ್ಲಿದೆ ಸುಂಕವ ಸಮ್ಮತಿಯಿಂದಾ 2 ಮಾರನು ಬಂದೂ ಮನದೊಳು ನಿಂದೂ ದಾರಿಯನು ತಪ್ಪಿಸಿ ಧಣಿಸುವ ಕಾಣೆ ಓರದೆ ಕೋರಿದ ಕಾರ್ಯವ ತೀರಿಸೆ ಕಾಂಕಳು ನೀನಾಗಿ ಕಾಮಶಾಸ್ತ್ರವಂ 3 ಈ ಸುಖಸಂಪದ ಈಶ್ವರ ಬಲ್ಲಂ ಆಸೆಯ ತೋರಿ ನೀ ಮೋಸವಗೆಯ್ವೆ ದಾಸನು ವಂದಿಪ ಸುಖತೋರಿದೆ ದೇಶಿಕನಲೆ ತುಲಸಿರಾಮಾ 4
--------------
ಚನ್ನಪಟ್ಟಣದ ಅಹೋಬಲದಾಸರು
ಕೇಳೆ ಕೊಳಲಿನ ದನಿಯ ಸಖಿಯೆ ನಾಳೆಯೆಂದೆನಬೇಡವೆ ಪ ಹೇಳೆ ಕೊಳಲಿನ ನಾದ ಸೇರಲಿ ತಾಳವನು ಬಿಡಬೇಡವೆ ಬಾಳು ಹಸನಾಗಿರಲು ಗಾನವು ಮೇಳವಿಸಬೇಕಲ್ಲವೆ ಅ.ಪ ಗಾನವೇ ಸುಖಸಂಪದದ ನೆಲೆ ಗಾನವೆ ಶಿಶುಲಾಲನೆ ಗಾನವೇ ಫಣಿಗಿಷ್ಟವಲ್ಲವೇ ಗಾನವೇ ಪಶುಪಾಲನೆ ಗೋಪಿ ನಲಿದಳು ಗಾನ ವೇದದ ಸಾಧನೆ 1 ವೈರಿ ಅಂಗಜಾತನ ಪಿತನ ಕೊಳಲಿನ ಗಾನವೇ ಮಧುಪಾನವು ಮಂಗಳಾಂಗನ ಪಾದಸೇವೆಗೆ ಮಾಂಗಿರೀಶನ ನಾಮವು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದೊರೆಯೆನ್ನನು ಕಾಯೈ ಶ್ರೀಚಕ್ರಪಾಣಿ ಪ ನಿರುತವು ಶರಣೆಂದೆನ್ನುತ ಕೋರುವೆ ಪರಿಯೊಳುಸೇರೇ ಬಂದಿಹೆ ಕರಪಿಡಿ ಅ.ಪ ಆಯುರಾರೋಗ್ಯ ಸುಖಸಂಪದಕೊಡುವ ಸೌಭಾÀಗ್ಯ ಕರ್ತೃವು ಶ್ರೇಯದ ವಿದ್ಯೆಯ ಕರುಣಿಸ ಪ್ರಭೆಯೊಳು ಸನ್ಮಾನವೀವಾ ಧ್ಯೇಯನೇಭತ್ತಿಜ್ಞಾನವೈರಾಗ್ಯವನಿತ್ತುವಿಮುಕ್ತಿಕೊಡುವ ಅ ನ್ಯಾಯದೆ ನಡೆವರ ವ್ಯರ್ಥರಗೈವನು ನೀನೈ ಶ್ರೀಶ್ಯಾಮಸುಂದರ 1 ಮನ್ನರೋಗಕ್ಕೆ ನಿನ್ನ ಪಾದತೀರ್ಥ ಔಷಧವು ಬೇಡ ಉನ್ನತ ಭಯಕ್ಕೆ ಸುದರ್ಶನ ಸ್ಮರಣೆ ಮಂತ್ರವೇತಕ್ಕೆ ಇನ್ನಿತರ ಕಷ್ಟಗಳಿಗೆಲ್ಲ ನಿನ್ನ ನಾಮಮಂತ್ರ ಭಜನ ಚೆನ್ನಪಾದಕೃಪೆ ಇನ್ನೊದಗಿಹುದೈ ನಾಂ ನಿತ್ಯಸಂತೊಷಿ 2 ನಿರಾಯಾಸದಿಂ ದಾಸಗಂತ್ಯದಲಿ ಪ್ರಶಾಂತನಾಗಿ ಹರಿನಾರಾಯಣ ನಾರಾಯಣಯೆಂದು ಕರೆವಂತೆ ಮಾಡಿ ಹರುಷದಿ ನೋಹರಾಕಾರವ ತೋರಿ ವೈಕುಂಠಕೆನ್ನನು ಕರುಣದಿ ಕರೆದೊಯ್ ಅಜಪೂಜಿತ ಹೆಜ್ಜಾಜಿಕೇಶವ 3
--------------
ಶಾಮಶರ್ಮರು