ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಂದಿಪೆವು ತವಪಾದಪಂಕಜಕೆ ಶ್ರೀ ರಾಘವೇಂದ್ರ | ಇಂದು ಬಿನ್ನೈಸುವೆವು ನಿನ್ನಡಿಗೆ ಪ ಇಂದು ದಿನವಂಭತ್ತು ವದ್ಯದಿ | ವೆಂದು ತೋರುವ ಸುದಿನವೆಮಗೆಅ.ಪ ಕಾಲವನು ಬಣ್ಣಿಸಲು ಭಯವಹುದು | ಏನೆಂದು ಪೇಳಲಿ | ನಾಲಿಗೆಯು ಒಣಗುತ್ತಲಿಹುದು | ಮೇಲೆನಿಪ ಶಾಲ್ಯಾನ್ನವೀದಿನ | ಸಾಲದಾಯಿತು ಹಸಿವುತಾಳದೆ | ಕಾಲಪುರಕೈದುವೆವು ಗುರುವೇ 1 ಹಿಂದೆ ತಂಜಾಊರಿನಲಿ ಕ್ಷಾಮ | ವಂಜಿಸಲು ನಿನಬಳಿ | ಬಂದ ರಾಜನ ಮೊರೆಯ ಕೇಳುತಲಿ | “ಶ್ರೀ” ಬೀಜಮಂತ್ರವ ರಚಿಸಿ ಭಕುತರ | ದನ್ನ ವುಣಿಸಿದೆ ಜನಕೆ ಗುರುವೇ 2 ಧರ್ಮಮಾರ್ಗವೆ ಕಾಣದಂತಾಯ್ತು | ಎಲ್ಲೆಲ್ಲಿ ನೋಡಲ | ಧರ್ಮಕೃತಿಗಳೆ ಕಂಡುಬರುತಿಹವು | ಇಂದು ನಿರ್ಮಲಾತ್ಮಕ ನಿನ್ನ ಬಳಿಯಲಿ ಧರ್ಮಭಿಕ್ಷವ ಬೇಡುತಿಹರೈ3 ಅಖಿಲ ಸಜ್ಜನ ನಿಚಯ ಸಹಿತಾಗಿ ನೀನಿಲ್ಲೆ ನೆಲೆಸು | ಭಕುತರಿಷ್ಟಾರ್ಥವನು ನೀಡುತಲಿ | ಲಕುಮಿಯರಸನ ದಯದಿ ಶರಣರ | ಮುಕುತರಾಗುವ ತೆರದಿ ಹರಸೈ4 ದೇಶದೊಳು ಮಳೆಬೆಳೆಯು ಹುಲುಸಾಗಿ ಸೂಸಿಸಲಿನ್ನು | ದೇಶದೊಳು ಸುಖಶಾಂತಿ ಸ್ಥಾಪಿಸಲಿ | ಶ್ರೀಶಕೇಶವನಲ್ಲಿ ಭಕುತಿಯ | ಲೇಸೆನಿಪ ಧರ್ಮಾರ್ಥ ಮಾರ್ಗದಿ | ದಾಶೆಯಲಿ ಬಿನ್ನಹ ಗುರುವೇ 5
--------------
ಶ್ರೀಶ ಕೇಶವದಾಸರು
ವೇದಾಂತ ಸಾಮ್ರಾಜ್ಯ ರಾಜಾಧಿರಾಜ ತೇಜೋಮಯರ ಪಾದಾಬ್ಜನೇ ಶರಣಪ ರಾಜಾಧಿರಾಜ ಕರಾರ್ಚಿತ ಚರಣ ಪ್ರಾಜ್ಯಪ್ರಜ್ಞರ ಶುದ್ಧಕುಲ ದಿವ್ಯಾಭರಣ ಅ.ಪ ಭ್ರಾಂತಿಗೆ ನಿಧನ ಸುಖಶಾಂತಿಗೆ ಸದನವೇ ದಾಂತಿಯ ಮಾನಸ ಕಾಂತಿಗೆ ಸಾಧನ 1 ಇಂದಿರಾಪತಿಯ ಆನಂದಾದಿ ಸದ್ಗುಣ ವೃಂದ ತೋರಿದ ಶೇಷಚಂದ್ರಿಕಾಚಾರ್ಯ 2 ಹಿರಿದು ನಿಮ್ಮಯ ವ್ಯಾಪ್ತಿ ಕಿರಿದು ಎಮ್ಮಯ ಶಕ್ತಿ ಪರಮ ಪ್ರಸನ್ನ ಶ್ರೀಗುರು ಸಾರ್ವಭಾಮ 3
--------------
ವಿದ್ಯಾಪ್ರಸನ್ನತೀರ್ಥರು
ಶ್ರೀನಿವಾಸನೆ ನಿನ್ನ ಧ್ಯಾನದಲಿ ನಾನಿದ್ದೆ ಕರವ ಪಿಡಿದೆ ಪ ಭಾನುಶತತೇಜ ನಿನ್ನಾನನಾಬ್ಜದ ಮಧುವ ಪಾನ ಮಾಡುತ ತೃಪ್ತಿ ಕಾಣದಿರುವೆ ಅ.ಪ ಕಾಮನಂತಹ ರೂಪ ಸೋಮನಂತಹ ಕಾಂತಿ ರಾಮನಂತಹ ಸತ್ಯ ಧರ್ಮ ನಡತೆ ಈ ಮಹಾ ಸುಗುಣಶಾಲಿಯು ನೀನು ನಿನ್ನಯ ಪ್ರೇಮವನು ಕಾಮಿಸುವ ಹಸುಳೆ ನಾನು 1 ಗಂಧ ಫಲಪುಷ್ಪ ತಾಂಬೂಲಗಳನು ಅಂದದ ಹೇಮದ ತಬಕದಲ್ಲಿ ತಂದು ಕೊಡುವೆನು ಪ್ರೇಮ ಕಾಣಿಕೆಯನು ಮಂದಹಾಸದಿ ನಿನ್ನ ಪಾಂಗದಿಂದ ನೋಡೋ 2 ಒಂದು ದಿನ ಕನಸಿನಲಿ ಕಂಡೆನಚ್ಚರಿ ದೃಶ್ಯ ಮುಂದೆ ನಿಂತಳು ಯುವತಿ ನಸುನಗುತಲಿ ಗಂಧ ತಾಂಬೂಲ ಫಲಪುಷ್ಪ ಪರಿಮಳದ್ರವ್ಯ ತಂದಿಹಳು ಚಿನ್ಮಯದ ತವಕದಲ್ಲ್ಲಿ ಕಂದನಿದ ನಿನಗಾಗಿ ತಂದಿರುವೆನೆಂದು ಮೃದು ಮಂದಹಾಸದಿ ತಲೆಯ ಸವರಿ ನುಡಿಯೆ ಸುಂದರಿಯೆ ನೀನಾರು ಬಂಧುವರ್ಗಗಳಲ್ಲಿ ಹಿಂದೆ ನಾ ನೋಡಿಲ್ಲವೆಂದು ನುಡಿಯೆ ನಂದಗೋಕುಲದಲ್ಲಿ ನಂದನಕುಮಾರನಿಗೆ ಅಂದ ರಾಣಿಯು ನಾನು ಸತ್ಯಭಾಮೆ ಇಂದ್ರದೇವನ ದಿವ್ಯ ನಂದನವನದಿಂದ ತಂದಿರುವೆ ನಿನ್ನ ವರಕುಲವನರಿತು ಸುಂದರಾಂಗನ ಸೇರಿ ಸುಖಪಡುವ ಸೌಭಾಗ್ಯ ಮುಂದಿಹುದು ನಿನಗೆ ಬಲು ತ್ವರಿತದಲ್ಲಿ ಅಂದು ನೀ ಈ ಸ್ವರ್ಣಮಯ ತವÀಕದಲ್ಲಿರುವ ಗಂಧ ಪುಷ್ಪಾದಿಗಳ ಫಲವನರಿವೆ ಚಂದದಲಿ ದಾಂಪತ್ಯ ಸುಖಶಾಂತಿ ಪಡೆಯುವೆ ಕಂದ ನೀ ಸ್ವೀಕರಿಸು ಪೋಗಿ ಬರುವೆ ಎಂದು ನುಡಿಯಲು ತರುಣಿ ಎಚ್ಚರಿತೆನು ಶುಭ ಸುದ್ದಿಯು ತಂದಿರುವೆ ತಬಕವ ಪ್ರಸನ್ನ ವದನ
--------------
ವಿದ್ಯಾಪ್ರಸನ್ನತೀರ್ಥರು