ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

351ಆದಿತ್ಯದೇವ ತ್ವತ್ಪಾದಯುಗಳಕಭಿ ವಾದನವ ಮಾಳ್ಪೆ ಅನುದೀನ | ಅನುದೀನ ಸಜ್ಜನರ ವ್ಯಾಧಿಯ ಕಳೆದು ಸುಖವೀಯೊ 1 352ಸಂಜ್ಞಾರಮಣ ನಿನಗೆ ವಿಜ್ಞಾಪಿಸುವೆನೊ ಸ ರ್ವಜ್ಞ ನೀನೆಂದು ಸರ್ವತ್ರ | ಸರ್ವತ್ರ ಎನಗೆ ಬ್ರ ಹ್ಮಜ್ಞಾನ ಭಕುತಿ ಕರುಣೀಸೊ 2 353 ಸೂರಿಗಮ್ಯನೆ ವಾಕ್ಶರೀರ ಬುದ್ಧಿಜವಾದ ಪಾರ ದೋಷಗಳನೆಣಿಸಾದೆ | ಎಣಿಸಾದೆ ಭಗವಂತ ನಾರಾಧನೆಯನಿತ್ತು ಕರುಣೀಸೊ 3 353 ರೋಹಿಣೀರಮಣ ಮದ್ದೇಹಗೇಹಾದಿಗಳ ಮೋಹ ಪರಿಹರಿಸಿ ಮನದಲ್ಲಿ | ಮನದಲ್ಲಿ ಎನಗೆ ಗರುಡ ವಾಹನನ ಸ್ಮರಣೆಯನು ಕರುಣೀಸೊ 4 354ಕ್ಷೀರಾಬ್ದಿಜಾತ ಮಾರಾರಿಮಸ್ತಕಸದನ ವಾರಿಜೋದ್ಭವನ ಆವೇಶ | ಆವೇಶಪಾತ್ರ ಪರಿ ಹಾರ ಗೈಸೆನ್ನ ಭವತಾಪ 5 355 ದತ್ತದೂರ್ವಾಸನನುಜ ಅತ್ರಿಸಂಭವನೆ ತ್ವ ದ್ಭøತ್ಯ ನಾನಯ್ಯ ಎಂದೆಂದು | ಎಂದೆಂದು ಪ್ರಾರ್ಥಿಸುವೆ ಹೃತ್ತಿಮಿರ ಕಳೆದು ಸಂತೈಸೊ 6 356 ಕೋಲ ಭೂನಂದನ ಪ್ರವಾಳ ಸಮವರ್ಣ ಕರ ವಾಳ ಸಮಖೇಟ ನಿಶ್ಯಂಕ | ನಿಶ್ಯಂಕನಾಖ್ಯ ಸುರ ಮೌಳಿ ನೀಯೆನ್ನ 7 357 ಮಂಗಳಾಹ್ವಯನೆ ಸರ್ವೇಂಗಿತಜ್ಞನೆ ಅಂತ ರಂಗದಲಿ ಹರಿಯ ನೆನೆವಂತೆ | ನೆನೆವಂತೆ ಕರುಣಿಸೊ ಅನುದಿನ 8 358 ಭೌಮರಾಜನೆ ತ್ವನ್ಮಹಾಮಹಿಮೆ ತುತಿಸಲ್ಕೆ ಪಾಮರನಿಗಳವೆ ಎಂದೆಂದು | ಎಂದೆಂದು ಸಜ್ಜನರ ಕಾಮಿತಾರ್ಥವನೆ ಕರುಣೀಸೊ 9 359 ಬುಧನೆ ನೀ ಸುಗುಣವಾರಿಧಿಯೆಂದು ಬಿನ್ನೈಪೆ ಕ್ಷುಧೆಯ ಸಂಹರಿಸಿ ಸುಜ್ಞಾನ | ಸುಜ್ಞಾನ ಸದ್ಭಕ್ತಿ ಸುಧೆಯ ಪಾನವನೆ ಕರುಣೀಸೊ 10 360 ಚಂದ್ರನಂದನ ಸತತ ವಂದಿಸುವೆ ಮನ್ಮನದ ಮಮದೈವ ಸರ್ವ ಗೋ ವಿಂದನಹುದೆಂದು ತಿಳಿಸಯ್ಯಾ 11 361 ತಾರಾತ್ಮಜನೆ ಮಚ್ಛರೀರದೊಳು ನೆಲೆಗೊಂಡು ತೋರು ಸಜ್ಜನರ ಸನ್ಮಾರ್ಗ | ಸನ್ಮಾರ್ಗ ತೋರಿ ಉ ದ್ಧಾರಗೈಸೆನ್ನ ಭವದಿಂದ 12 362 ನತಿಸಿ ಬೇಡುವೆ ಬೃಹಸ್ಪತಿ ಗುರುವೆ ಎನ್ನದು ರ್ಮತಿಯ ಪರಿಹರಿಸಿ ಸುಜ್ಞಾನ ಸುಜ್ಞಾನವಿತ್ತು ಶ್ರೀ ಪತಿಯ ತೋರೆನ್ನ ಮನದಲ್ಲಿ 13 363 ಸುರರಾಜಗುರುವೆ ತ್ವಚ್ಚರಣಾರವಿಂದಗಳಿ ಗೆರಗಿ ಬಿನ್ನೈಪೆ ಇಳೆಯೊಳು ಇಳೆಯೊಳುಳ್ಳಖಿಳ ಬ್ರಾಹ್ಮ ಣರ ಸಂತೈಸೋ ದಯದಿಂದ 14 364 ತಾರಾರಮಣನೆ ಮದ್ಬಾರ ನಿನ್ನದೊ ಮಹೋ ದಾರ ನೀನೆಂದು ಬಿನ್ನೈಪೆ | ಬಿನ್ನೈಪೆ ದುರಿತವ ನಿ ವಾರಿಸಿ ತೋರೊ ತವರೂಪ 15 365 ಶಕ್ರಾರಿಗಳ ಗುರುವೆ ಶುಕ್ರಮುನಿರಾಯ ದರ ಚಕ್ರಾಬ್ಜಪಾಣಿ ಗುಣರೂಪ | ಗುಣರೂಪ ವ್ಯಾಪಾರ ಪ್ರಕ್ರಿಯವ ತಿಳಿಸೊ ಪ್ರತಿದೀನ 16 366 ಕವಿಕುಲೋತ್ತಂಸ ಭಾರ್ಗವ ಬೇಡಿಕೊಂಬೆ ಭಾ ಗವತ ಭಾರತ ಮೊದಲಾದ | ಮೊದಲಾದ ಶಾಸ್ತ್ರಗಳ ಶ್ರವಣ ಸುಖವೆನಗೆ ಕರುಣೀಸೊ | 17 367 ನಿಗಮಾರ್ಥ ಕೋವಿದನೆ ಭೃಗುಕುಲೋತ್ತಂಸ ಕೈ ಮುಗಿದು ಬೇಡುವೆನೊ ದೈವಜ್ಞ | ದೈವಜ್ಞ ಹರಿಯ ಓ ಲಗದಲ್ಲಿ ಬುದ್ಧಿಯಿರಲೆಂದು 18 368 ತರಣಿನಂದನ ಶನೈಶ್ಚರ ನಿನ್ನ ದಿವ್ಯ ಪದಾಬ್ಜ ಕ್ಕೆರಗಿ ಬಿನ್ನೈಪೆ | ಬಿನ್ನೈಪೆ ಬಹುಜನ್ಮಕೃತ ಪಾಪ ತ್ವರಿತದಿಂದಿಳಿಸಿ ಪೊರೆಯೆಂದು 19 369 ಛಾಯಾತನುಜ ಮನೋವಾಕ್ಕಾಯ ಕ್ಲೇಶಗಳಿಂದ ಸಮಯದಿ ಶ್ರೀ ಲಕ್ಷ್ಮೀನಾ ರಾಯಣನ ಸ್ಮರಣೆ ಕರುಣೀಸೊ 20 370 ಇದನೆ ಬೇಡುವೆ ಪದೇಪದೆಗೆ ಪುಷ್ಕರನ ಗುರುವೆ ಹರಿಮೂರ್ತಿ ಕೀರ್ತನೆಗೆ ಳೊದಗಲೆನಗೆಂದು ಬಿನ್ನೈಪೆ 21 371ಅಹಿಕ ಪಾರತ್ರಿಕದಿ ನರಹರಿಯದಾಸರ ನವ ಗ್ರಹದೇವತೆಗಳು ದಣಿಸೋರೆ | ದಣಿಸೋರೆ ಇವರನ್ನು ಅಹಿತರೆಂದೆನುತ ಕೆಡಬೇಡಿ22 372 ಜಗನ್ನಾಥವಿಠ್ಠಲನ ಬದಿಗರಿವರಹುದೆಂದು ಹಗಲಿರುಳು ಬಿಡದೆ ತುತಿಸುವ | ತುತಿಸುವ ಮಹಾತ್ಮರಿಗೆ ಸುಗತಿಗಳನಿತ್ತು ಸಲಹೋರು 23
--------------
ಜಗನ್ನಾಥದಾಸರು
ನೀನೆನಗೆರವೆ ನಾನಿನ್ನೆಂತಗಲುವೆಬಾ ನನ್ನ ತನುವೆ ಸದ್ಗುರುವಿಗೊಂದಿಸುವರೆ ಪಮೊದಲಿಗಮಿತ ದುಷ್ಟತನುಗಳ ಸಂಗದಿಕುದಿದು ಸಂಸಾರಾಗ್ನಿಯೊಳು ಬಳಲಿದೆನುಅದರಿಂದ ನಿನ್ನ ನಿಗ್ರಹಿಸಿದೆನಲ್ಲದೆಪದರದಿರೆನ್ನೊಳು ಪಡೆಯೆ ನಿನ್ನೊಂದನೂ 1ಗುರುಸೇವೆಗಲಸದೆ ಛಳಿಮಳೆಯೆನ್ನದೆಬರಿಯ ಬಯಲ ಸಂಸಾರ ಭೋಗದಲಿಎರಗದಿರೆನ್ನ ದಾರಿಗೆ ಬಾ ನಿನ್ನಾರೈಕೆುರಲೆನ್ನೊಳಿನ್ನು ತಪಿಸಿ ಕಂಗೆಡಿಪುದಿಲ್ಲ 2ಶ್ರವಣ ಸುಖದಿ ನನ್ನ ಬೆರೆದು ಬೇರಾಗದೆಭವಶರಧಿಯ ದಾಂಟುನಂತೆ ನೀ ಮಾಡುವಿವರಿಸಿ ಹರಿಗುಣ ಕಥೆಗಳನೆಮ್ಮೊಳುಕವಿದಿಪ್ಪ ತಮವ ತೊಲಗಿಸಿಕೊಂಬ ನಾವಿನ್ನು 3ನಿನ್ನಿಂದ ಸಂಸಾರ ವಿಷಯ ಸುಖದ ಲಾಭನಿನ್ನಿಂದ ಕೃಛ್ರಾದಿ ತಪಸಿನ ಲಾಭನಿನ್ನಿಂದ ಸತ್ಕರ್ಮತೀರ್ಥಯಾತ್ರೆಯ ಲಾಭನಿನ್ನಿಂದ ವೈರಾಗ್ಯ ಭಾಗ್ಯದ ಲಾಭ 4ನಿನ್ನೊಳಗಿರುವಿಂದ್ರಿಯಂಗಳಿಂದ್ರಿಯಗಳೊಳುಣ್ಣುವ ಮನ ಮನದೊಳು ಕೂಡ್ವ ಜೀವಎನ್ನುವರೆನ್ನನೆನ್ನಿರವನರಿಯೆನಿದನಿನ್ನಿಂದ ಗುರುಕೃಪೆವಡೆದು ತಿಳಿಯಬೇಕೂ 5ನೆವವಿಲ್ಲದುಪಕಾರಗೈವೆ ನೀನೆನಗಾಗಿವಿವಿಧ ಭೋಗದ ಸುಖವೆನಗೆ ನಿನ್ನಿಂದವಿವರಿಸೆ ನಿನಗೆ ಉಂಟು ಲಾಭವು ಮತ್ತೆನವೆವೆಯಲ್ಲದೆ ವೃದ್ಧಿಯಾಗುವೆಯಾ ಪೇಳು 6ನಿನ್ನಿಂದ ಸುಖಬಟ್ಟು ನಿನ್ನ ಬಾಳಿಸಲಾರದೆನ್ನನುಳುಹುವದೆಂತನ್ಯಾಯ ಸುಖವುಉಣ್ಣುವರಾರಿದನುಂಡು ಬದುಕಿರುವಅಣ್ಣನ ತಿಳಿಯಲು ಗುರುವೆ ಗತಿ ಕಂಡ್ಯಾ 7ವಂದಿಸಿಯೂಳಿಗಗೈವಲ್ಲಿಯಲಸದೆದಂದುಗ ಸುಖಕಾಗಿ ದಾರಿದೆಗೆಯದೆಒಂದಾಗಿ ಯೆನ್ನೊಳಿದ್ದರೆ ನನ್ನ ಸುಖವ ನಾಹೊಂದಲು ನಿನಗಾನಂದವಪ್ಪುದೆ ಕೇಳು 8ಮರುಗಿ ಮನದಿ ನಮ್ಮ ಮರವೆಯಾಟವ ಕಂಡುತಿರುಪತಿ ವೆಂಕಟರಮಣನು ತಾನೆಗುರುವಾಸುದೇವಾರ್ಯನಾಗಿಹನಾತನಚರಣವ ಮರೆಯೊಕ್ಕು ಬದುಕುವ ನಡೆಬೇಗ 9ಕಂ||ಜೀವನ ನುಡಿಯನು ಲಾಲಿಸಿಭಾವದಿ ಸರಿಬಂದ ಬಗೆಯ ಕಾಣದೆ ಗರ್ವದಿತಾವೊಲಿವರೆ ಮನಬಾರದುನೀವೊಬ್ಬನೆ ಸಾಧಿಸೆನೆ ಮನ ಕೆರಳಿ ನುಡಿದುದೂ
--------------
ತಿಮ್ಮಪ್ಪದಾಸರು