ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲಿ ಬಾರೋ ಹರಿ ತಾತ್ಸಾರ ಥರ ಪರಿ ಪ. ಬಿಲ್ಲಹಬ್ಬದ ನೆವನದಿಂದತಿ ಮಲ್ಲಕಂಸಾದಿಗಳ ಮಡುಹಿದ ಬಲ್ಲಿದನೆ ಲೋಕದಲಿ ಸರಿ ನಿನ- ಗಿಲ್ಲ ಶ್ರೀ ಭೂನಲ್ಲ ಕೃಪೆಯಿಂದ ಅ.ಪ. ಶ್ರೀ ಪಯೋಜಭವ ಶಿವ ಶಕ್ರಾದಿಗಳನ್ನು ಕಾಪಾಡಿ ಖಳಕುಲವ ಖಂಡಿಪ ಸರ್ವ ಭೂಪತಿ ತವ ಪಾದವ ನಂಬಿರಲೆನ್ನ ದುರಿತ ಮ- ಹಾಪಯೋಧಿಯೊಳಿಳಿಸಿದರೆ ಸುಜ- ನಾಪವಾದವು ಬಿಡದು ನಿನ್ನ ಪ- ದೇ ಪದೇ ಇನ್ನೆಷ್ಟು ಪೊಗಳಲಿ 1 ಕರ್ಮ ಕೊಡುವುದು ಫಲವೆಂಬ ನುಡಿಯನುಭವಸಿದ್ಧವು ಆದರು ಜಗ ದೊಡೆಯಗಾವದಸಾಧ್ಯವು ನೀ ಮಾಳ್ಪ ಚೋದ್ಯವು ನುಡಿ ಮನೋಗತಿಗಳುಕವೆಂಬೀ ಸಡಗರವು ವೇದ ಪ್ರಸಿದ್ಧವು ನಡೆಯಲೇಳಲು ಶಕ್ತಿ ಕುಂದಿದ ಬಡವನನು ಕೈಪಿಡಿದ ತವಕದೊಳ್ 2 ಬೆಟ್ಟದೊಡೆಯ ವೆಂಕಟೇಶ ನೀ ಗತಿ ಎಂದು ಘಟ್ಯಾಗಿ ನಂಬಿರುವ ದಾಸನ ಕೈಯ ಬಿಟ್ಟರೆ ಸರಿಯೆ ದೇವ ಸಜ್ಜನರ ಕಾವ ಸಟ್ಟಸ ಶಿಗಡಿ ನೀರ ಸುರಿಸುತ ಕಟ್ಟಿಕಟ್ಟಿಸುತದರ ಛಾಯ ದೊ - ಳಿಟ್ಟ ಗದ್ದಿಗೆಯಲ್ಲಿ ಕುಳಿತು ಸ- ಮೃಷ್ಟ ಸುಖವುಂಬರಸನಂದದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ಪ ಬೃಂದಾವನಪತಿ ದಯದಿಂದಲೆನಗೆ ಅ ಫಲಭಾರಗಳಿಂದ ತಲೆವಾಗಿ ಶುಕಪಿಕಕಲಕಲದೊಳು ನಿನ್ನ ತುತಿಸಿ ತುಂಬೆಗಳಗಳರವದಿಂ ಪಾಡಿ ಅಪ್ಸರರಂತೆ ಪೂ-ಮಳೆಯಗರೆವ ತರುಲತೆಯ ಜನ್ಮವನು1 ಕೊಳಲ ಶೃತಿಯ ಕೇಳಿ ಸುಖದ ಸಂಭ್ರಮದಲಿಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿನಳಿನಾಸನದಿ ಮೌನಗೊಂಡು ಪರಮ ಹಂಸಕುಲದಂತೆ ಧ್ಯಾನಿಪ ಹಂಸ ಜನ್ಮವನು 2 ಚಕೋರ ಜನ್ಮವನು3 ಭಾವಜನೈಯನ ಕಡುಚಲ್ವಿಕೆಯನ್ನುಭಾವಿಸಿ ನಿಡುಗಂಗಳಿಂದ ದಣಿದುಂಡುಗೋವಳೇರಂತೆ ಮನೆ ಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು 4 ತೋಳದಂಡಿಗೆಮಾಡಿ ಹೀಲಿಯ ಚಾಮರವಮೇಲೆ ಎತ್ತಿದ ತಾವರೆ ಗೊಂಡೆಯಿಂದಓಲೈಸಿ ನಿನ್ನನು ಒಲಿಸಿ ಮುಕುತರಂತೆನಾಲೋಕ್ಯ ಸುಖವುಂಬ ಗೋಪರ ಜನ್ಮವನು5 ಕೊಳಲ ಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನನಳಿನನಾಭಾ ಅವಧಾರೆಂದು ಪೊಗಳೇತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನಚೆಲುವ ಸವಿವಂಥ ಗೋಪೇರ ಜನ್ಮವನು 6 ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತಎಂದು ಮೊಸರ ಕಡೆಯುತ್ತಲಿ ನಿನ್ನಅಂದಿನ ಶ್ರುತಿಯೋ ಉಪ್ಪವಡಿಪ ವ್ರಜ-ದಿಂದುಮುಖಿಯರ ಜನ್ಮವ ಸಿರಿಕೃಷ್ಣ7
--------------
ವ್ಯಾಸರಾಯರು
ಯಾತಕೆನ್ನ ಮೇಲಿನ್ನು ಪಂಥ ಸಾಕೊ ಶ್ರೀಕಾಂತ ಪ. ಘೋರ ಷಡ್ವೈರಿಗಳಾರುಭಟಿಗಳನ್ನು ದೂರಗೈದರೆ ನಿನ್ನ ಮಂದಿರವನು ಸಾರಿಸಿ ಶುಚಿಗೈವನಿಂದಿರಾ- ವರ ಬಾರೊ ಭಕ್ತ ಕುಮುದ ಚಂದಿರಾ ಶ್ರುತಿ ಸಾಗರಾ ಲೋಕೈಕ ಸುಂದರಾ 1 ವ್ಯರ್ಥವಾಗಿ ಬಹಿರರ್ಥದಿ ಮಾನಸ ವರ್ತಿಸದಿರೆ ನಿನ್ನ ನೋಡುವೆ ಬಹ- ಳರ್ಥಿಯಿಂದಲಿ ಪಾಡಿ ಪೊಗಳುವೆ ಮೋಹ ಕಾರ್ಥ ಶಾಸ್ತ್ರವ ದೂರ ದೂಡುವೆ ಪುರು- ಷಾರ್ಥದಾಯಕ ನಿನ್ನ ಕೂಡುವೆ 2 ಪತಿಯೆಂದು ಸಂಭ್ರಮಗೊಂಬೆನು ಭೂ- ಪತಿಯಲಿ ನೀನಿಹೆಯೆಂಬೆನು ಸಮ ರತಿಯಿಂದ ಪುರುಷ ಸುಖವುಂಬೆನು ಭಕ್ತಿ ಸತಿಯರ ಭರವನಿಂತು ಕಾಂಬೆನು 3
--------------
ತುಪಾಕಿ ವೆಂಕಟರಮಣಾಚಾರ್ಯ