ಒಟ್ಟು 8 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಭ್ಯಾಸವಮಾಡಿ ಅಭ್ಯಂತ್ರದೊಳಗಿಹುದು ಧ್ರುವ ಕಣ್ಣು ಕಾಣುವದ್ಹಚ್ಚಿ ಚೆನ್ನಾಗಿ ಚಿತ್ಸ ್ವರೂಪವ ಭಿನ್ನವಿಲ್ಲದೆ ಭಾಸುವದು ಪುಣ್ಯಪ್ರಭೆಯು 1 ಕಿವಿಯು ಕೇಳುವದ್ಹಚ್ಚಿ ಸವಿಸವಿ ಸಾರಾಯದ ಶ್ರುತಿ ಆವಾಗ ನಿಮ್ಮೊಳಾಲಿಸಿ ಪವಿತ್ರ ಪ್ರಣವ 2 ಘ್ರಾಣ ಗ್ರಹಿಸುವದ್ಹಚ್ಚಿ ದೇಹದೊಳಾವಾಗ ಪೂರ್ಣ ಸೋಹ್ಯ ಸೂತ್ರವಿದು ಸೋಹ್ಯವೆಂಬುದಾ 3 ಜೀವಕೆ ಜೀವ್ಹಾಳಚ್ಚಿ ಸುವಿದ್ಯಸೇವೆ ಸೂತ್ರದ ಸರ್ವದಾ ಸವಿಸಾರವ ನೋಡಿ ದಿವ್ಯನಾಮದ 4 ಶಿವಸುಖವಿದುರಿಡುವಾಂಗೆ ಜೀವ ಜೀವದಾ 5 ಮನಸಿಗೆ ಮನಹಚ್ಚಿ ಮನೋನ್ಮನಮಾಡಿ ಘನಸುಖದೊಳು ಬೆರೆದಾಡಿ ಅನುಭವಿಸಿ ನೋಡಿ 6 ಗುರುವಿಗೆ ಗುರುವೆಂದರಿದು ನರದೇಹದ ಭಾವನೆಯ ಮರೆದು ಕರಕೊ ಮಹಿಪತಿ ಇರುಳ್ಹಗಲೆ ಸ್ಮರಿಸಿದಾಕ್ಷಣ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮನಿಯಲಿ ಆನಂದ ಬಂದ ನೋಡಿ ಮುಕುಂದ ಗುರುಕೃಪೆಯಿಂದ ಧ್ರುವ ಸದಮಲ ಸುಖಕಲ್ಲೋಳ ಬೆಳಗುದೋರುತಲ್ಯದೆ ಬಹಳ ಹೇಳಲಳವಲ್ಲದು ಬಲುಸೂಕ್ಷ್ಮ ತಿಳಿದವ ತಾ ವಿರಳ ಇಳೆಯೊಳು ನಿಜ ಆನಂದವು ದೋರಿತು ಸ್ವಾನುಭವಕ ಸುಕಾಲ 1 ಮಾಯವಗಂಡು ಧನ್ಯಧನ್ಯಗೈಯಿತು ಜೀವನ ತಾ ಸನ್ಮತ ಸುಖಸವಿಗೊಂಡು ಪುಣ್ಯರಥ ಪರಿಣಾಮದಲನುದಿನ ಮನಬೆರೆಯಿತು ನೆಲೆಗೊಂಡು ಸ್ಮರಣಿಯ ಸವಿದುಂಡು 2 ಸದ್ಗುರು ಎನ್ನೊಡೆಯ ಚಂದವಾಯಿತು ಆನಂದದ ಸುಖವಿದು ಮಹಿಪತಿಗೆಡೆಯಡಿಯ ಸಂದಹರೆವ ಜನ್ಮ ಮರಣದ ಹೇಳಿದ ತಾ ನಿಜನುಡಿಯ ಹೊಂದಿ ಹರುಷಬಡುವಾನಂದವುದೋರುತಿದೆ ಸಿಲುಕಡಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉದಯವಾಯಿತು ಹೃದಯ ಕಮಲದೊಳಗೆ ಧ್ರುವ ಗುರುಕರುಣಾನಂದಬೋಧ ಅರುಣೋದಯವಾಯಿತು ಸ್ಮರಣಿಗರವು ದೊರೆಯಿತು ಹರಿಯ ಚರಣದ 1 ಸಮ್ಯಜ್ಞಾನದ ಪ್ರಭೆ ಸಮ್ಯವಾಗಿದೋರಿತು ತಾಮಸನಿದ್ರೆ ಹರಿಯಿತು ತಿಮಿರಾಂಧದ 2 ಥಳಥಳಿಸುವ ರವಿಕೋಟಿ ಬೆಳಗಾಯಿತು ಹೊಳೆಯುತ ತೇಜೋನ್ಮಯವು ಒಳಗೊರಗೆಲ್ಲ 3 ಒದಗಿ ಬಂತೆದುರಿಟ್ಟು ಮೊದಲೆ ಪುಣ್ಯದ ಘಲ ಉದಯವಾಯಿತದೃಷ್ಟವು ಸದೃಷ್ಟವಾಗಿ 4 ಸದ್ಗತಿ ಸುಖವಿದು ಸದೋದಿತವಾಯಿತು ಸಾಧಿಸಿ ಮಹಿಪತಿಗೆ ಸದ್ಗರು ಕೃಪೆಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನು ಕೆಟ್ಟೆಯಲ್ಲೋ ಮನುಜ ಹಾನಿಯಾದೆಯಲ್ಲೋ ಪ ಕಾಣದೆ ಏನೇನು ಗಾಣದೆತ್ತಿನಂತೆ ನಾನಾ ಯೋನಿಗಳು ಖೂನವಿಲ್ಲದೆ ತಿರುಗಿ ಅ.ಪ ಕಾಲ ಕಳೆದೆಯಲ್ಲ ಕಾಲದ ಮೂಲ ತಿಳಿಯಲಿಲ್ಲ ಮೂಳನಾದೆಯಲ್ಲ ಭವದ ಮಾಲ ಗೆಲಿಯಲಿಲ್ಲ ಕಾಳುಕತ್ತಲೆಂಬ ಹಾಳು ಸಂಸಾರ ಮಾಯಾ ಜಾಲದಿ ಬಿದ್ದೆಮಧಾಳಿಗೀಡಾದೆಯಲ್ಲ 1 ನಾರಿ ನಿನ್ನವಳಲ್ಲ ಹುಟ್ಟಿದ ಪೋರ ನಿನಗಿಲ್ಲ ಯಾರಿಗೆಯಾರಿಲ್ಲ ನಿನ್ನ್ಹಿಂದೆ ಯಾರು ಬರುವುದಿಲ್ಲ ಧಾರುಣಿಸುಖವಿದು ಸಾರಮಯ ಸುವಿ ಚಾರದೆ ನೋಡದೆ ಘೋರನರಕಿಯಾದೆ 2 ಮನೆಮಾರು ನಿನಗಿಲ್ಲ ಗಳಿಸಿದ ಧನವು ನಿನ್ನದಲ್ಲ ಕ್ಷಣಿಕವಾದದ್ದೆಲ್ಲ ಜಗಸುಖ ನಿನಗೊಂದು ಸ್ಥಿರವಿಲ್ಲ ವನಜನಾಭ ನಮ್ಮ ಜನಕ ಶ್ರೀರಾಮನ ವನರುಹಂಘ್ರಿ ನಂಬಿ ಘನಮುಕ್ತಿ ಪಡೀಲಿಲ್ಲ 3
--------------
ರಾಮದಾಸರು
ಬರಿದೆ ಭ್ರಾಂತಿಯಾತಕೆ ಎರಡು ದಿನದ ಬಾಳಿಗೇ ಪ ಕರೆಕರೆ ಸಂಸಾರಕೆ ಕೆಲಕಾಲವಿರಲಿ ಎಚ್ಚರಿಗೆ ಅ.ಪ ಸಂದೇಹವ ಪಡುವನು ಎಂದಿಗು ಸುಖಿಯಾಗನು 1 ಶಾಸ್ತ್ರವೇನು ಪೇಳ್ವುದು ಸ್ಥಿರವೆ ಅಲ್ಪ ಸುಖವಿದು ಗಾತ್ರವ ನೋಯಿಸುವದು ರಾತ್ರಿಪಗಲು ದಣಿವುದು 2 ಹಿತದ ಮಾರ್ಗ ತ್ಯಜಿಸುವೆ ಅತಿಶಯಗಳ ಬಯಸುವೆ ಪಥಿಕರಂತೆ ನುಡಿಯುವೆ ಪಾಪಿಯಾದೆ ಛೀ ಮನವೆ 3 ವಾರಿಧಿ ಸಂಶಯಾತ್ಮನೆನಿಸಿದಿ ಕಂಸ ವೈರಿಯ ಮರೆದಿ 4 ಯೋಗಸಿದ್ಧಿಯೇ ಬಲಾ ಕೂಗಿದರದು ನಿಷ್ಫಲಾ ಹ್ಯಾಗು ನಮ್ಮ ಕೈ ಬಿಡನಲಾ ಶ್ರೀಗುರುರಾಮ ವಿಠಲಾ 5
--------------
ಗುರುರಾಮವಿಠಲ
ಸಾರಿ ಚೆಲ್ಯದೆ ನೋಡಿಹಸ್ವರೂಪ ತೋರುವ ಗುರುದೀಪ ಧ್ರುವ ಒಳಹೊರಗಿದು ಥಳಥಳಿಸುತಲಿಹುದು ಮೊಳೆಮಿಂಚಿನಕಳೆ ಝಳಝಳಿಸುತ ನಿಜ ಹೊಳೆಯುತಿಹುದು ಇಳೆಯೊಳಗಿಂದು ತಾ ಬೆಳಗಿನೊಳಿಹ ಘನ ಬೆಳಗಿನ ಪ್ರಭೆಯು 1 ಅನುದಿನ ನೋಡಿ ತುಂಬಿ ತುಳುಕುವದು ಮುನಿಜನ ನೋಡುವಾನಂದದ ಸುಖವಿದು ಘನಪರಬ್ರಹ್ಮಾನಂದದ ಬೆಳಗು 2 ಕಣ್ಣಿಗೆ ಕಾಣಿಸುತಿಹುದು ನೋಡಿ ಭಿನ್ನವಿಲ್ಲದೆ ಅಣುರೇಣುದೊಳೆಲ್ಲ ಧನ್ಯಗೈಸಿತು ಮಹಿಪತಿ ಜೀವನವಿದು ತನ್ನಿಂದಲಿ ತಾನೆ ತಾನೊಲಿದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಧ್ರುವ ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಗ್ಗಿ ಸುಕಾಲಾಯಿತು ಜಗದೊಳಗೆ ಅಗ್ಗಳತ್ಯಾಯಿತು ಗುರುದಯಲೆನಗೆ ಧ್ರುವ ಭಕ್ತಿ ಭೂಮಿಯು ಕೈಗೊಟ್ಟಿತು ಪೂರ್ಣ ತತ್ವೋಪದೇಶ ತಿಳಿಯಿತು ನಿಧಾನ ಭಕ್ತರಿಗಿದರಿಡುವದು ಅನುದಿನ ಮುಕ್ತಿಯ ಫಲ ಮುನಿಜನರಾಭಣ 1 ಮಳೆಗರಿಯಿತು ಮಹಾಗುರುದಯ ಕರುಣ ಬೆಳೆಬೆಳೆಯಿತು ಮಹಾ ಸುಙÁ್ಞನದ ಸ್ಫುರಣ ತಿಳಿಯಿತು ಬರವಿದು ಭವಬಂಧನ ಕಳೆಯಿತು ಕಾಂಕ್ಷೆ ಹುಟ್ಟುವ ಹೊಂದುಣ2 ಮನೋಹರವಾಯಿತು ಗುರುಕೃಪೆಯಿಂದ ಜನವನದೊಳು ಕಾಣಿಸಿದ ಗೋವಿಂದ ಅನುಭವ ಸುಖವಿದು ಬ್ರಹ್ಮಾನಂದ ಘನಸುಖಪಡೆದ ಮಹಿಪತಿ ಇದರಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು