ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಬಾಹ್ಯಾಂತ್ರ ಪರಿಪೂರ್ಣ ನೀನೆ ಸದೋದಿತ ಸಹಕಾರ ನಿಜವಸ್ತು ನೀನೆ ಅಖಂಡಿತ ಗುಹ್ಯ ತಿಳಿಯದೊ ನಿನ್ನ ಸದ್ಗುರು ಸಮರ್ಥ 1 ಸೆರಗ ಸಿಲುಕದೆಂದು ತಿರುಗಿತು ವೇದ ಸರಸ್ವತಿ ಸ್ತುತಿಗೆ ತಾ ತೀರಲಿಲ್ಲ ಬೋಧ ವರಣಿಸಲಿಕ್ಕೆ ಶೇಷ ತಲೆಯು ಬಾಗಿದ ಮೊರೆ ಇಡುತಿಹುದೆಲ್ಲ ನಿನಗೆ ಗೋವಿಂದ 2 ಋಷಿಮುನಿಗಳಿಗೆ ತಾ ಪೆಸರೊಡೆಯದು ತುಸು ಕೊರತೆಲ್ಲ ತಾ ಪಸರಿಸಿಹ್ಯದು ಮಸಿ ಮಣ್ಣಾಯಿತು ಲೋಕ ಹೆಸರಿಗೆ ಬಂದು ದೆಸೆಗೆಟ್ಟಾಯಿತು ಬಹಳ ಉಸುರೊಡಿಯೆಂದು 3 ಮಾಡದ ಮಾಡಿತು ಲೋಕ ನೋಡೊ ನಿನಗಾಗಿ ಬಡದ ಭವಣೆಬಟ್ಟು ಹಿಡಿಯಲಿಕ್ಕೆ ಹೋಗಿ ಕೊಡಲಿಲ್ಲ ನಿಜಗುಟ್ಟು ಇವ್ಹನೀ ಅಡಗಿ ಯೋಗಿ 4 ಇದೆ ಮುಂದಣುವಾದ ನನ್ನದೇನು ಪಾಡು ಸಾಧಿಸಿ ಸದ್ಗುರು ಕೃಪೆ ನೀನೆ ದಂiÀiಮಾಡು ಒದಗಿ ಮಹಿಪತಿ ನೀ ದಯದಿಂದ ನೋಡು ಸದಮಲ ಸುಖವಾದ ಸುಧಾರಸವ ಕೊಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪೇಳಿದರೆ ತಿಳಿಯುವುದೆ ಮಾಯಮೋಹಿಗಳಿಗೆ ನೀಲಶ್ಯಾಮನ ದಿವ್ಯಗೂಢದಿಹಮಹಿಮೆ ಪ ಬಂಜೆಗ್ಹೊಳೆವುದೆ ಪ್ರಸೂತಿವೇದನೆ ಸುದ್ದಿ ಸಂಜೀವನ ಮಹಿಮೆ ತಿಪ್ಪೆ ತೃಣಕೆ ತಿಳಿಯುವುದೆ ಅಂಜುಬುರುಕಗ್ವೀರತ್ವ ಸಾರಸವಿದೋರುವುದೆ ವಂಜಗೊಳುಪಾಗುವುದೆ ಹರಿಭಕ್ತಿಸಾರ 1 ನಾಗನ್ಹೆಡೆಯೆತ್ತಾಡಲಮೇಧ್ಯಜಂತರಿಯುವುದೆ ಕೋಗಿಲೆಯು ಕೂಗಲು ಕಾಗೆ ತಿಳಿಯುವುದೆ ಗೂಗೆಗ್ಹೇಳಲು ಅರುಣಪ್ರಭೆ ನೋಡಬಲ್ಲುದೆ ಭಾಗವತರ ನಡೆ ಭವರೋಗಿಗ್ಹೊಳಪಹ್ಯದೆ 2 ರಾಜ್ಯದಾಡಳಿತವನು ಚಾಂಡಾಳ ತಿಳಿಯುವನೆ ತೇಜಿಯ ಮಹಯೋಗ ಪಾಜಿಗ್ಹುಟ್ವುದೆ ಭೋಜನದ ಸವಿಸಾರ ರೋಗಿಗ್ಹೇಳಲು ಫಲವೆ ರಾಜಿಪ ಪರಲೋಕ ಕುಜನರರಿಯುವರೆ 3 ಹೀನನಿಗತಿ ತಿಳಿಯುವುದೆ ಜ್ಞಾನಬೋಧಾಮೃತ ಶ್ವಾನನಿಗೆ ಸೇರುವುದೆ ರಾಗ ಸುಖಸ್ವಾದ ಕೋಣಗ್ಹೊಳೆವುದೆ ವೇಣು ಮೃದಂಗ ಸುಖವಾದ್ಯ ಧ್ಯಾನಮಹಿಮೆಯ ಫಲವು ಭವಿಗೆ ತಿಳಿಬಲ್ಲುದೆ 4 ನೇಮದೊರುಷವು ಸುರಿಯೆ ಕಲ್ಲು ನೀರು ಕುಡಿಯುವುದೆ ಕಾಮಿಗಳಗನುಭವದ ಹಾದಿ ತಿಳಿ ಬಲ್ಲುದೆ ಪಾಮರಧಮರಿಗಿಲ್ಲ ದೀನಜನನಾಥ ಶ್ರೀ ರಾಮನಡಿ ನಿಜಭಕ್ತಿ ಸಾಧ್ಯವಾಗುವುದೆ 5
--------------
ರಾಮದಾಸರು
ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ಪ ಸುಖವಾದಡೆ ಕಾಣುತ ಮುಖ ಕಮಲವುವಿಕಸಿತವಾಹುದು ಶ್ರೀಹರಿ ಕರುಣದಿದುಃಖವಾದಡೆ ದುಸ್ಥಿತಿಯಲಿರಲು ಅಂ-ಬಕದಲಿ ಜಲ ಪೋಗುವುದೇಕೊ ?ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ-ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರಮಕರ ಕುಂಡಲಾಭರಣನ ನೆನೆ ಮನವೆ1 ಸಿರಿ ಬಂದರೆ ಸಿರಿಗಾನಂದವ ಮಾಡುವಿರೇತಕೆ ಮನ ನಿರ್ಮಳ ಧ್ವನಿಯಲಿದರಿದ್ರವು ಬಂದರೆ ಧಾತುಗೆಟ್ಟು ದೇಹಾ-ತುರ ಹೊಂದುವಿರೇತಕೆ ದುಗುಡದಿಸಿರಿ ದಾರಿದ್ರ್ಯವು ಸುರತತಿಗಡರುವತೆರನೆಂದರಿದದರಿಂದಲಿ ಮಾನ-ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪಮುರವೈರಿಯ ಬಿಡದಿರು ಎಲೆ ಮನವೆ 2ಬಿ ಜನನವಾದರೆ ಹಾಡಿ ಹರಸಲೇತಕೆಅನುಗತಿಯನು ಹೇಳಿದರಳಲೇಕೆಜನನಮರಣವದೆಲ್ಲರಿಗೆ ಗತಿಬಾಹುದು ಏಕೆಜನನ ಮರಣವನೊಂದು ಹೊರಗೆ ಮಾಡಿ ಪರಜನದೊಳಗಿರಿಸುವ ಸುಜನೇಶ ಮುನೀಶನೆಂ-ದೆನಿಸುವ ಕಾಗಿನೆಲೆಯಾದಿಕೇಶವರಾಯನಅನುಶ್ರುತಿಯನು ಬಿಡದಿರು ಎಲೆ ಮನವೆ 3
--------------
ಕನಕದಾಸ
ಮಾಧವಾ ರಕ್ಷಿಸೆನ್ನಾ ಮೋಹನಾ|ನಿನ್ನಾ| ನಂದನಂದನಾ ಪ ತನ್ನ ತಾನುದ್ಧರಿಸಿ ಕೊಳ್ಳಲರಿಯದೆ | ಸಲೆ | ಮುನ್ನಿನಾ ದುರ್ಗುಣವನು ಜರಿಯದೆ ರಂಗಾ | ನಿನ್ನ ನಿಜ ಭಕ್ತಿಯೊಳು ಬೆರಿಯದೇ ವ್ಯರ್ಥ | ಮಾನ್ನ ನಾದೆನು ನಾಮಾಮೃತವ ಸುರಿಯದೇ | ಭವ ತೊರಿಯದೇ 1 ಮಾಯಾ ಮೋಹ ಪಾಶಕ ಅನುಗೊಡುತಾ | ವಿ | ಷಯ ದಾಶೆಗೆ ಬಿದ್ದು ಬಾಯಿ ಬಿಡುತಾ | ಎನ್ನ | ಕಾಯದ ಸುಖಸಾಧನ ನೋಡು | ವ್ಯರ್ಥ | ದು:ಖ ಪಡುತಾ 2 ಸುಖವಾದರೆ ಮನದೊಳುಬ್ಬುಗೊಂಬೆನಾ | ಬಲು | ದು:ಖವಾದರೆ ಹರಿ ಮಾಡಿದ ಎಂಬೆನಾ | ನೆರೆ | ಇಂದು | ಬಲಗೊಂಬೆನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುಖವಾದರುಬರಲಿಈ ಕ್ಷಣ ದುಃಖವಾದರು ಬರಲಿಅಕಲಂಕ ಚರಿತನು ಸಕಲರಕ್ಷಕನು ಮಕರಾಂಕರಿಪು ಶಿವಸುಖನಾಗಿರುತಿರೆ ಪ ಬಾಳಬಲ್ಲವನೆನಲಿಮೂರ್ಖನು ಖೂಳನು ಇವನೆನಲಿಕಾಲಕಾಲ ಕರುಣಾಲವಾಲನನೀಲಕಂಠನ ನಾಮ ನಾಲಗೆಯಲ್ಲಿರೆ1 ನಿಂದಿಸಿದವರುಗಳುಗುರುಗಳು ಬಂಧು ಬಾಂಧವರವರುಸಿಂಧುರ ಬಂಧುರ ಚರ್ಮಾಂಬರನ-ರ್ಧೇಂದುಮೌಳಿ ತಾ ಬಂದು ರಕ್ಷಿಸುತಿರೆ 2 ದೊರೆ ಮುನಿದರದೇನುಮತ್ರ್ಯು ಜರೆದು ನುಡಿದರೇನುಸುರರು ದಾನವರು ಮುನಿದರಂಜುವೆನೆವರ ಕೆಳದಿಯ ರಾಮೇಶ್ವರನು ರಕ್ಷಿಸುತಿಹರೆ 3
--------------
ಕೆಳದಿ ವೆಂಕಣ್ಣ ಕವಿ
ಸೇವಿಸುವ ಬನ್ನಿರೋ ಭಾವಿಕರೆಲ್ಲ ಸವಿಸುಖವಾದ ಸದ್ಗುರುವಿನ ಸೊಲ್ಲ ಧ್ರುವ ತುಂಬಿ ಬಡಿಸ್ಯದ ಕೊಂಬವರಿಗೆ ಸಂಭ್ರಮವಾಗ್ಯದ 1 ಅರ್ತವರಿಗ್ಯದ ಅರ್ಥಿ ತಾನಾಗ್ಯದ ಕರ್ತು ಸದ್ಗುರು ಕೃಪೆ ಪಡೆದವಗದ 2 ಸವಿಸವಿದುಂಬುವ ಭಾವಿಸಿಕೊಂಬುವಆವಾಗ ಮಹಿಪತಿಸ್ವಾಮಿ ನೆನೆವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು