ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಗಿದ್ದ ಇರವೇ ಮನುಜರಿಗೆ ಈಗಿದ್ದ ಇರವೇ ? ಪ ಮಾಯಾಪ್ರಪÀಂಚದ ಬಲೆಯ ಪಾಶಕ್ಕೆ ಸಿಕ್ಕಿ ಕಾಯದೊಳಿಹ ಪರಮಾತ್ಮನನರಿಯದೆ ಅ.ಪ. ನರರ ಯೋನಿಗೆ ಬಂದು ನಡತೆ ಸಜ್ಜನರೆಂದು ಬರಿಯ ಬನ್ನಣೆಯೊಳು ಬೆರೆತಿಹರಲ್ಲದೆ ಶರೀರ ಸುಖವನ್ನೆಲ್ಲ ಮರೆತು ತನ್ನಾತ್ಮನೊಳಿರುವ ಸುಖವು ತಾನು ಬಯಸಬೇಕಲ್ಲದೆ ಈಗಿದ್ದ 1 ಮಂದಮತಿಗಳಾಗಿ ಮಮತೆಮಾರ್ಗಕೆ ತಾಗಿ ಅಂದಣದೈಶ್ವರ್ಯ ಬಯಸುವವರಲ್ಲದೆ ಹೊಂದಿಸಿ ಸಚ್ಚಿದಾನಂದ ಬ್ರಹ್ಮದಿಮನ ಬಂದಾಗಿ ನಲಿಸಿ ವಿರಕ್ತಿಯ ಬಂದಿಯೊಳ್ಬಲಿಸಿ ನಿಂದು ನಿಜದ ನಿರುಪಮನೆ ನಿತ್ಯಾತ್ಮನೆ ಎಂದು ಕುಂದದೆ ಸಹಜಾನಂದನಾಗದ ಮೇಲೆ ಈಗಿದ್ದ 2 ಪರಮಪುರುಷರಾದ ಪ್ರಹುಢ ಸಂತರ ಪಾದ ಸ್ಮರಣೆಯ ನಿರುತ ಮಾಡಿರಬೇಕಲ್ಲದೆ ಪರತತ್ವಮಯನಾದ ಗುರುಮಹಾರಾಯನ ಕರುಣವ ಪಡೆದು ಕಣ್ಣಿನೊಳು ಶ್ರೀ ಚರಣವ ಪಿಡಿದು ಬರಿಯಮಾತಲ್ಲವೆಂದರಿತು ಪೂರ್ಣ ಬ್ರಹ್ಮ ಗುರುವಿಮಲಾನಂದ ಭರಿತನಾಗದ ಮೇಲೆ ಈಗಿದ್ದ 3
--------------
ಭಟಕಳ ಅಪ್ಪಯ್ಯ
ನರರೇನು ಬಲ್ಲರು ಪ ಘೋರದುರಿತ ಸಂಹಾರ ಕೇಶವಧೀರಾ ಮಾರಜನಕ ಸುಂದರ ಹೇ ವೀರಾ ಸುರಾಸುರಪವಂದ್ಯ ಸುಗುಣ ಶ್ರೀಗೋವಿಂದ ವೀರಾ ಶ್ರೀರಾಮಾವತಾರ ಎತ್ತಿದ ಧೀರಾ 1 ಆದಿಮೂಲ ಕರ್ತನೆಂದು ಅರಿತು ಮನದಿ ಶೋಧಿಸೆ ಸಕಲ ಸಾರವನು ಭೇದಾನರಿತು ಯದಾಯುಗ ಭಟಗಾಳಾರು ಮೋದದಿ ನವಯುಗದ ಮರ್ಮವ ನರಿತು 2 ಸಕಲ ಪ್ರಪಂಚವೆಂಬ ಸುಖವನ್ನೆ ಅತಿಗಳೆದು ಮುಕುತಿ ದಾಯಕ 'ಹೊನ್ನ ವಿಠ್ಠಲ’ ನೆಂದೆನ್ನು ಭಕುತಿಯಿಂದಲಿ ಸದಾಭಾವನೆಯ ನೀ ಬಿಡದೆ ಅಕಳಂಕ ಮಹಿಮನ ಅರಿತು ಸ್ತುತಿಸುವರಿಗಲ್ಲದೆ 3
--------------
ಹೆನ್ನೆರಂಗದಾಸರು
ಪಾಂಡುರಂಗನೆ ಪಾಲಿಸೆನ್ನನು ಬೇಡಿಕೊಂಬೆನು ವರವ ನೀಡಯ್ಯ ನೀನು ಪ. ಸುರರು ನಿರುತ ನಿನ್ನನು ಬಿಡರು ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ ಭೀಮರಥಿಯ ತೀರದಲ್ಲಿ ಮಹಾನಂದ ಭರಿತ ನಂದನ ಕಂದ ಪೂರ್ಣಸುಖವನ್ನೆ ಕೊಟ್ಟು ಅನುದಿನ ಸೇರಿಸೊ ವೈಕುಂಠ 1 ಇಂದು ನಾ ಮಾಡ್ದ ಪುಣ್ಯ ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ ಬಂಧ ಪರಿಹರಿಸಿ ಬೇಗದಿಂದ ಉದ್ಧರಿಸೋ ಈಗ ನಂದನ ಕಂದ ರಂಗ ಬಂಧುವೇ ಪಾಂಡುರಂಗ ಕಮಠ ವರಹ ವೇಷಧಾರಕನೆ ನಾರಸಿಂಹನೆ ದೈತ್ಯಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ 2 ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀ ಕೃಷ್ಣರಾಯ ಕಷ್ಟಪರಿಹರಿಸು ಗೋಪಾಲಕೃಷ್ಣವಿಠ್ಠಲ ಜೀಯ ಪಾಡಲಿ ಹಗಲಿರುಳು ಕೊಡದಿರು ವಿಠ್ಠಲಯ್ಯ ಬಲವಂತÀ ರಕ್ಷಿಸೆನ್ನ ವಸಂತ ಶ್ರೀದ ಕೈಯ ಮುಗಿವೆ ಸರ್ವದಾ 3
--------------
ಅಂಬಾಬಾಯಿ
ಸಾಕು ನೀನೋಬ್ಬನೆ ಲೋಕನಾಯಕನೆ ಯಾಕನ್ಯ ದೈವವ ಭಜಿಸುವ ಸುಮ್ಮನೆ ಪ. ಸೂನು ಪರಮಾದರದಿಂದ ನೀಕರಿಸುತ ಯದು ಬಲಿ ಸಹಾಯವನು ಶ್ರೀಕರ ನೀನೊಬ್ಬನೆ ಸಾರಥಿಯಾಗೆ ಸಾಕೆಂದವರ ಬೊಮ್ಮನೆ ವೈರಿಗಳನ್ನು ವ್ಯಾಕುಲಗೊಳಿಸಿ ಭೂಮಿಪನಾದ ಸುಮ್ಮನೆ 1 ನಿಖಿಳ ದೈವಗಳೆಲ್ಲ ತಾನಾಗಿ ಪರಮಾನುಕೂಲರಾಗುವರು ಏನೆಂದು ಪೇಳ್ವದಿನ್ನು ಸಕಲ ಸುರ ಪಾದ ಪದ್ಮ ಧ್ಯಾನ ಮಾನವನಿತ್ತು ಪಾಲಿಸೆನ್ನನು 2 ಅಖಿಳಾಂಡಕೋಟಿ ಬ್ರಹ್ಮಾಂಡ ನಾಯಕನೆಂದು ನಿಖಿಳ ದೈವಗಳು ನಿನ್ನನೆ ಪೊಗಳುವವು ಸಕಲಾರ್ಥದಾಯಿ ನೀನು ನಾಮ ಸ್ಮøತಿ ಸುಖವನ್ನೆ ಪಾಲಿಸಿನ್ನು ಉದಯಗಿರಿ ಶಿಖಿರ ಸಂವಾಸನುಮಾನವ್ಯಾಕಿನ್ನು 3
--------------
ತುಪಾಕಿ ವೆಂಕಟರಮಣಾಚಾರ್ಯ