ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನನಗಾವ ಬಲವಿಲ್ಲ ನಿರುಪಮನೆ ಹೇಳೈಯ ವನಜ ಸಂಭವ ಜನಕ ತವ ಚರಣ ವಲ್ಲದಲೆ ಪ ಮಣಿದು ಬೇಡುವೆನೈಯ ಪ್ರಣತಾರ್ಥಿ ಹರಕೃಷ್ಣ ಜನುಮಗಳ ಹರಿಸುತಲಿ ಭವಬಂಧ ಬಿಡಿಸೈಯಅ.ಪ ನರರ ನಂಬಿದೆ ನೈಯ ಸಿರಿಯುರಿಗೆ ಬಾಯ್ಬಿಟ್ಟೆ ಅರಿಯದೆಲೆ ತವ ಮಹಿಮೆ ಬರಿದೆ ಬಳಲಿದೆಭವದಿ ಧೊರೆ ತನವು ಸವಿಯಹುದೆ ತವ ಸವಿಯ ಕಂಡವಗೆ ಜರಿಯ ದಲೆ ಬಡವನನು ಕರೆದು ಪಾಲಿಸು ತಂದೆ 1 ಹಣ ವನಿತೆ ಭೂ ವಿಷಯ ಉಂಡುಂಡು ಬೆಂಡಾದೆ ತನುಜ ಕರಣಗಳಿನ್ನು ಶತ್ರುಗಳ ಸಮವಿಹವು ಗುಣ, ಪೂರ್ಣ ಬಿಂಬನನು ನೆನೆಯ ಗೊಡದಲೆ ನಿತ್ಯ ಇನಸುತನ ಪುರದೆಡೆಗೆ ಸೆಳೆಯುತಿಹವೋ ಸ್ವಾಮಿ 2 ಸುರರು ಸುರರಿಗಾಶ್ರಯ ನೀರ ಮರುತಗಾಶ್ರಯ ಸಿರಿಯು ಸಿರಿರಮಣನೀನಿರಲು ಚರಣ ಸೇವಕ ನೆನ್ನ ನರರಿಗೊಡ್ಡುವರೇನೊ ಸರ್ವೇಶ ಅಕ್ಷರನೆ ಮೊರೆ ಹೊಕ್ಕೆ ಸಲಹೈಯ 3 ದೇವ ದೇವರ ದೇವ ದೇವತ್ವ ನೀಡುವನೆ ಕಾವ ಜೀವರ ನಿಚಯ ಸಾರ್ವಭೌಮನು ನೀನು ನೀವಲಿದು ಪೊರೆಯದಿರೆ ಆಗುವುದೆ ಸುಖಮುಕ್ತಿ ನಾವಿಕನು ನೀನೆಂದು ನಂಬಿದೆನು ಕೈಪಿಡಿಯೊ 4 ಅಗಲಿ ಬದುಕಿರಲಾರೆ ಗೋಪ ಪುರುಷನೆ ನಿನ್ನ ಸುಗಮ ಮಾಡಿಸು ಪಥವ ಸರ್ವಜ್ಞ ತವಪುರಕೆ ನಗವೈರಿ ಜಯತೀರ್ಥ ವಾಯು ವಂತರದಿರ್ಪನಗೆ ಮೊಗದ ಶ್ರೀಕಾಂತ ಕೃಷ್ಣವಿಠಲನೆ ಬೇಗ 5
--------------
ಕೃಷ್ಣವಿಠಲದಾಸರು
ನಿಂದಕರು ಎಂದವರ ತುಚ್ಚಿಸಲಾಗದುಸಂದೇಹವಿಲ್ಲವು ಅವರು ಅತಿಹಿತರು ಪ ಸಂಚಿಸಿದ ಕರ್ಮದಿಂ ಸತ್ಪುರುಷರುದಿಸಿರಲುಹಂಚಿಕೊಂಬರು ತಾವು ಎಲ್ಲರದನುವಂಚಕರು ಎಂದವರ ನೀಚಸಲಿಕಾಗದು ಮುಂಚೆವಂದಿಸಬೇಕು ಅವರ ಪದಕೆ 1 ತಾಯಿ ಶಿಶುವಿನ ಮಲವ ತಾ ತೃಣದಿ ತೆಗೆಯುವಳುಮಾಯಹರ ಮಹಾಪುರುಷರ ಮಲವನುಆಯಾಸವಿಲ್ಲದಲೆ ತಮ್ಮ ನಾಲಿಗೆಯಲಿ ತೆಗೆಯುವರುಪ್ರಿಯರಿಂತವರಿಗಿಂತ ಹಿತವರುಂಟೆ 2 ಉದಯ ಮಧ್ಯಾಹ್ನ ಮುಹೂರ್ತಗಳ ನೋಡದಲೆವಿಧವಿಧದ ಪಾಪಗಳ ತಮ್ಮ ಮುಖದಿಮುದದಲುಚ್ಚರಿಸಿ ಚಿದಾನಂದ ಗುರುಭಕ್ತರನುಸುಧೆಯ ಸುಖಮುಕ್ತಿಯೊಳು ಹೊಂದಿಸುವವರು 3
--------------
ಚಿದಾನಂದ ಅವಧೂತರು