ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಳಲಾರೆನೆ ಜಗದಿ ಬಾಳಲಾರೆನೆ ನಾಗೇಶಾಂಗಶಯನನ ಸುಖಭೋಗ ಪ ಎಂದಿಗೆ ಆಗದಿರ್ದೊಡೆ ತಾಳಲಾರೆನೆ ಜಗದಿ ಬಾಳಲಾರೆÀನೆ ಅ.ಪ ಸವತಿ ರುಗ್ಮಿಣಿ ಭವನದಿ ಮು ದವನೆ ತಾ ಮರೆತು ಕುಳಿತಾ 1 ಇಂದಿರೇಶ ನಂದಧೀಶ ಮಂದಿರದೀಗ ಬಾರದಿರಲು 2 ನರಸಿಂಹ ವಿಠಲನೀಗ ಭರದಿ ಮೊಗವ ತೋರದಿರಲು 3
--------------
ನರಸಿಂಹವಿಠಲರು
ನಿಜ ವಸ್ತುನೆ ಮುಂದುಗಾಣಿ ಥಳ ಥಳ ಗುಡುವುತ ಹೊಳೆವುತಲ್ಯದೆ ಬಲಿಯೊ ಸದ್ಗುರು ಸುಪ್ರಾರ್ಥನೆ ಧ್ರುವ ಜನ್ಮದ ಸಂದೇಹಗಳೀತೆ ಒಂದಾದರ ಮಾತಿಗಿಳಿಯಿತೆ ನಿಜಘನ ನೆಲೆಗೊಳ್ಳಿತೆ ಹೊಂದಿತೆ ಅರಿಯದಿಹುದು ಒಳಿತೆ1 ನಿನ್ನೊಳು ನೀ ನಿಜ ತಿಳಿಯದೆ ಖೂನ ಇನ್ನೊಬ್ಬರಿಗ್ಹೇಳುವುದೇನ ಕನ್ನಡಿಯೊಳು ಕಾಂಬುವ ಕಾಂಚನ ಸನ್ನಿದಾಗುವದೆ ಪೂರ್ಣ ಭಿನ್ನಭೇದವು ಹೋಗದೆ ಅನುಮಾನ ಚೆನ್ನಾಗ್ಯಾಗುವದೆ ಜ್ಞಾನ ಧನ್ಯಗೈಸುವ ಸದ್ಗುರು ಕರುಣ ಮನ್ನಿಸಿ ಪಡಕೊ ನಿಧಾನ 2 ಮುಗ್ದದಿ ಗುರುಪಾದ ಈಗ ಏನೆಂದು ತಾ ತಿಳಿಯುವದು ಆಗ ಸ್ವಾನುಭವದ ಸ್ವಸುಖಭೋಗ ಅಣುರೇಣುದೊಳಗ ತಾ ಬ್ಯಾಗ ದೀನ ಮಹಿಪತಿಗದೆ ಒಳಹೊರಗೆ ಫನ ಭಾಸುತಲ್ಯದೆ ಆವಾಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪರಮ ಪುರುಷನ ಮೊದಲು ನಮಿಸುತಚರವವೈದಿದ ದೈವತಂಗಳಿಗೆರಗುವೆನು ಕ್ರಮದಿಂದ ಕೂಡುತಧರಣಿ ತಳದಲ್ಲಿ 1 ದರ್ಭ ಮುಖ ವಿಸ್ತರದಿ ಹಾಕುತಪದ್ಮ ಮೊದಲಾಸನದಿ ಪ್ರಾಂಗ್ಮುಖಇದ್ದರಗ್ರ್ಯಾಳ ಸಮ್ಮುಖ ಶ್ರದ್ಧೆ ಮಾಡುವುದು 2 ಕೂರ್ಮ ಆಸನಈಸು ಚಿಂತಿಸಬೇಕು ಎಂಬೋಭಾಷೆ ರಾಜಿಪುದು 3 ಧಾರುಣಿ ಮಂತ್ರದಲಿ ಕೂಡುತನಾರಸಿಂಹ ಸುದರ್ಶನಾಸ್ತ್ರದಿಆರು ದಿಕ್ ದಿಗ್ಬಂಧನಾಡಿಯಸೂರಿ ಮಾಡುವುದು 4 ನಾಗಭೂಷಾಜ್ಞೆಯಲಿ ಭೂತಗಳ್‍ಹೋಗಲೆಂಬುವ ಮಂತ್ರ ಪಠಿಸುತಯೋಗಿಗಳ ಪ್ರಾರ್ಥಿಸುತ ಸಂತತಯಾಗ ಮಾಡುವದು 5 ಹರಿಯ ಗುರುಗಳ ನಮನಗೋಸುಗಕರವ ಮನವನು ಶೋಧಿಸೂವುದುಎರಡು ಬೀಜಾಕ್ಷರದಿ ನಾಂಕುಎರಡು ಸ್ಥಾನದಲಿ 6 ಬ್ರಹ್ಮಹತ್ಯಾ ಮಂತ್ರದಿಂದಲಿತಮ್ಮ ವಾಮಾಂಗವನೆ ಮುಟ್ಟುತಅಧರ್ಮ ಪುರುಷನ ಚಿಂತಿಸುವುದುಕರ್ಮ ಕರ್ತೃಕನು 7 ಶೋಕ್ಷ ನಾಭಿಲಿ ಪಾಪ ಪುರುಷನನಾಶ ಹೃದಯದಿ ಭಸ್ಮ ತ್ಯಜಿಸುತಲೇಸು ವರುಣದಿ ಸುಧೆಯ ವೃಷ್ಟಿಲಿಸೂಸುವುದು ತನುವ 8 ಹೀಗೆ ನಿತ್ಯದಿ ಕಾಮಿನೀಯರುಬಾಗಿ ಪತಿಯಲೆ ಕಾರ್ಯ ಮಾಡುತನಾಗಶಯನ ನಕ್ಷರದ ತತ್ಸುಖಭೋಗ ಬಯಸುವುದು9 ನಾರಿಯರು ಗುರು ಮಂತ್ರದೀಪರಿಪೂರ್ವದಲೆ ಮಾಡುತ ಕೃಷ್ಣನಆರು ವರ್ಣವ ಪಠಿಸುತಲೆ ಗೃಹಕಾರ್ಯ ಮಾಡುವುದು 10 ರಾಮ ಮೊದಲಾದನ್ಯ ಮಂತ್ರಗಳ್‍ಕಾಮಿನೀಯರು ಜಪಿಸುತಲೆ ನಿಜಕಾಮದಿಂದಲೆ ಯೋಗ್ಯತಾವನುನೇಮದಿಂದಿರಲು 11 ತಾರತಮ್ಯವು ಪಂಚಭೇದವುಭೂರಿ ಭಕುತಿಲಿ ಭಜಿಸಿ ಕೃಷ್ಣನಆರು ವರ್ಣವು ಪಠಿಸುತಲೆ ತನ್ನು -ದ್ಧಾರ ಮಾಡುವನು12 ವಾಸು ಮಾಡುತಲೆನ್ನ ಮನದೊಳುಆಶು ಭೇದಕ ಸ್ತ್ರೀಜನಂಗಳಿಗೀಶ ಮಾಡಿದ ಇದನ ಇಂದಿ-ರೇಶಗರ್ಪಿಸುವೆ 13
--------------
ಇಂದಿರೇಶರು
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ
ಮೋಸ ಪೋದೆಯಲ್ಲೇ ಭಾಸುರಾಂಗಿ ನೀನು ಪ ಕಾಶಿ ನಿವಾಸಿ ವಿಶ್ವೇಶ್ವರನಹುದೆಂದು ಅ.ಪ. ವಿಶ್ವೇಶ್ವರನವನಲ್ಲ ತಿಳಿದು ನೋಡು ನೀನು ವಿಶ್ವಪತಿಯಾ ವಿಷ್ಣುವಿನಡಿಯಾಳು ಅವನು ಸುಸ್ವಭಾವದ ಸರಳ ಹೃದಯಾನ್ವಿತಳು ನೀನು ಕಪಟ ಕಿರಾತನವನು 1 ತ್ರಿಪುರ ಸುಂದರಿಯೆಂಬ ಬಿರುದು ಪೊತ್ತಿಹೆ ನೀನು ಕಪಟ ವೇಷದೊಳು ಬಂದ ವಿಷಕಂಠನವನು ಚಪಲಾಕ್ಷಿಯೆ ನಿಜಸ್ಥಿತಿ ಅರಿಯಲಿಲ್ಲ ನೀನು ಗುಪಿತದಲಿ ನಿನ ಕಂಡು ಮರುಳು ಮಾಡ್ದನವನು 2 ರಾಜರಾಜೇಶ್ವರಿಯಾಗಿ ರಾಜಿಸುವೆ ನೀನು ಭೋಜನಕಾಗಿ ಭಿಕ್ಷ ಬೇಡುವನಲ್ಲೆ ಅವನು ಮೂಜಗವು ಮೋಹಿಸುವ ಕೋಮಲಾಂಗಿಯು ನೀನು ಈ ಜಗವರಿಯೆ ಸರ್ವದ ಭಸ್ಮಾಂಗನವನು 3 ಕನಕ ಮಣಿಮಯದಂತಃಪುರವಾಸಿಯು ನೀನು ಶುನಕ ಗೋಮಾಯ್ಗಳೆಡೆ ಮಸಣವಾಸಿಯವನು ಘನ ವಿಶಾಲಾಕ್ಷಿಯೆ ಮಂದಹಾಸಮುಖಿ ನೀನು ಮಿನುಗುವ ಬೆಸಗಣ್ಣಿನುರಿಮೊಗದೊಳಿಹನವನು 4 ಚಾರು ಪೀತಾಂಬರ ಧರಿಸಿ ಶೋಭಿಸುವೆ ನೀನು ಕೋರಿ ಗಜಚರ್ಮಧರಿಸುವ ಭಿಕಾರಿಯವನು ಭೂರಿ ಸುಖಭೋಗಂಗಳನನುಭವಿಸುವೆ ನೀನು ನಾರಸಿಂಹ ಮಂತ್ರ ಜಪಿಪ ವಿರಾಗಿಯವನು5 ಕರುಣಾ ಕಟಾಕ್ಷದಿಂ ಜಗವ ಪೊರೆದಪೆ ನೀನು ಕರುಣವಿಲ್ಲದೆ ಮೂಜಗವನುರುಹುವನವನು ಪರಮ ಭಕತರಿಗೆ ಮುಕುತಿಪಥ ತೋರುವೆ ನೀನು ನರನಾದ ಭಕ್ತನೊಳು ಹೋರಾಡಿದವನು 6 ಮಂಗಳಪ್ರದೆಯೆಂದು ಖ್ಯಾತಿಗೊಂಡಿರುವೆ ನೀನು ಜಂಗಮ ಜೋಗಿಗಳಿಗೆ ನೆಲೆಯಾಗಿಹನವನೂ ಗಂಗಾಜನಕನ ಪ್ರಿಯತಮ ಸೋದರಿಯು ನೀನು ರಂಗೇಶವಿಠಲನ ಚರಣ ಸೇವಕನವನು 7
--------------
ರಂಗೇಶವಿಠಲದಾಸರು