ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನೆ ತಾನಾದನಮ್ಮಾ ಎನ್ನೊಳು ಘನಬ್ರಹ್ಮ ಧ್ರುವ ಕಣ್ಣಿಲೆ ನೋಡಲಿಕ್ಕೆ ಕಣ್ಣಿನೊಳಾದನಮ್ಮ ಕಣ್ಣಿಗೆ ಕಣ್ಣಾಗಿ ಪೂರ್ಣ ಕಾಣಿಸಿದಾನಂದೋಬ್ರಹ್ಮ ಅಣುರೇಣುದೊಳು ವ್ಯಾಪಿಸಿ ಜನ ಮನ ದೊಳು ತುಂಬಿಹ ತನುಮನದೊಳು ತಾನೆತಾನಮ್ಮ 1 ಎತ್ತ ನೋಡಿದತ್ತ ಸುತ್ತ ಸೂಸುವನಮ್ಮ ನೆತ್ತಿ ಒಳಗೆ ಪೂರ್ಣ ಮೊತ್ತವಾದ ಪರಬ್ರಹ್ಮ ಅನುದಿನ ಸಂತತ ಸದ್ಗುರು ಪೂರ್ಣ ಅಂತರಾತ್ಮದೊಳಗಿಹನಮ್ಮ 2 ನಾನು ನಾನೆಂಬುದಿದು ಇಲ್ಲದಂತಾಯಿತು ನಮ್ಮ ತಾನೆ ತಾನಾದ ನಿಜ ಓಮಿತ್ಯೇಕಾಕ್ಷರ ಬ್ರಹ್ಮ ಚೆನ್ನಾಗಿ ಮಹಿಪತಿಗೆ ಸನ್ಮತಸುಖದೋರಿತುಉನ್ಮನವಾಗ್ಯೆನ್ನೊಳಗೆ ಘನಸುಖ ಹೊಳೆಯಿತು ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಸಂಗವು ಲೇಸು ಸ್ವಹಿತಕೆ ಧ್ರುವ ನೆರಿಲವರನುದಿನ ಬಾಳುದು ಲೇಸು ಸರಸ ಸುಮಾತನೆ ಕೇಳುದು ಲೇಸು 1 ನೋಡಿದವರಾಚರಣೆಯ ಲೇಸು ಮಾಡಿದವರನು ಸರಣಿಯ ಲೇಸು 2 ಮಹಿಪತಿಗಿದೆ ಸುಖದೋರಿತು ಲೇಸು ವಿಹಿತಕ ವಿಹಿತಾಯಿತು ಬಲುಲೇಸು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸದ್ಗುರುವಿನ ಕೃಪೆ ಸದ್ಗತಿ ಸುಖದೋರಿತು ಧ್ರುವ ಮಸ್ತಕದ ಮ್ಯಾಲೆ ಅಭಯ ಹಸ್ತ ತಾವಿಡಲಿಕ್ಕೆ ಸ್ವಸ್ತಹೊಂದಿತು ಮನವು ವಸ್ತುದ ಸುಳವಿಲೆ 1 ಕರುಣಿಸಿ ನೋಡಲಿಕ್ಕೆ ಕರಗಿಹೋಯಿತು ಮಹಾಪಾಪ ಸೆರಗು ಸಿಲುಕಿತು ಸುಪಥ ಪರಮಾನಂದದ 2 ಹರುಷಾನಂದವಾಯಿತು ತರಳ ಮಹಿಪತಿಗೆ ಗುರುನಾಮಾಮೃತ ಸೇವಿಸಿ ವರಕೃಪೆಯಿಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು