ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸಾಧಾರಣ ವಿಠಲ ನೀ ಸಲಹೊ ಇವಳಾ |ಈಶಾದಿ ದಿವಿಜೇಡ್ಯ | ಶ್ರೀರಾಮಚಂದ್ರಾ ಪ ವಿಶ್ವ ಮೂರುತಿಯೇ |ಮೀಸಲ ಮನದಲಿರೆ | ನೀ ಸ್ವಪ್ನ ಸೂಚಿಸಿದೆಏಸು ಕರುಣವೊ ನಿನಗೆ | ದಾಸ ಜನರಲ್ಲೀ1 ಪರಿಪರಿಯ ಭವಣೆಗಳ | ಪರಿಹರಿಸಿ ಭಕ್ತಳಿಗೆಪೊರೆಯೊ ಕರುಣಾವನಧಿ ನರಹರಿಯೇ ಸ್ವಾಮೀ |ತರತಮದ ಜ್ಞಾನ ಸ | ದ್ವೈರಾಗ್ಯ ಭಕುತಿಯನುಕರುಣಿಸೀ ಪೊರೆ ಇವಳ | ಮರುತಾಂತರಾತ್ಮ 2 ಪಂಚಾತ್ಮಕನೆ ಪ್ರಾ | ಪಂಚ ಸುಖದೊಳಗೆ ತವಸಂಚಿಂತನೆಯ ಕೊಟ್ಟು | ಕಾಪಾಡೊ ಹರಿಯೇಪಂಚಭೇದವು ಅಂತೆ | ನೀಚೋಚ್ಚ ಕ್ರಮ ತಿಳಿಸೀವಾಂಛಿತಾರ್ಥದ ಕಳೆಯೊ | ಸಂಚಿತಾಗಮವಾ 3 ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಭ್ರಷ್ಟಸಂಗವ ಕೊಡವೆ | ಶಿಷ್ಟರಲ್ಲಿಡಿಸೋ |ಇಷ್ಟ ಮೂರ್ತಿಯ ಮನದಿ | ಸ್ಪಷ್ಟ ತೋರುತ ಸಲಹೋಶಿಷ್ಟ ಜನ ಸದ್ವಂದ್ಯ | ವಿಷ್ಣು ಪ್ರಾರ್ಥಿಸುವೇ 4 ಗೋವರ್ಧನೋದ್ದರಗೆ | ಭಾವುಕರ ಪರಿಪಾಲಪಾವನಕೆ ಪಾವನನೆ | ಕಾವುದೀಕೆಯನುದೇವನೀನಲ್ಲದಲೆ | ಕಾವರನ್ಯರನ ಕಾಣೆಗೋವಿದಾಂಪತಿ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಆತ್ಮನಿವೇದನೆ ಮನವೇ ನಿನ್ನಯ ನಿಜಮೂಲ ನೀನೋಡು ಸಮರಸವನೆಗೂಡು || ಚಾಲ || ವಿಷಯವಾಸನೆಗಳ ನಿಶಿದು ಹೋಗಲಿ ಕುಳ ಅಸಮ ಸಾಹಸಿಯಾಗಿ ನಿಜಸುಖದೊಳಗೆ ಪ ಹಿಂದೆ ಬಹು ಜನ್ಮದೊಳು ನೀ ತೊಳಲಿ ವಾಸನೆಯೊಳು ಬಳಲಿ ಇಂದೆ ನೀ ಬಂದೆ ನರಜನ್ಮದಲಿ ಎಚ್ಚರು ನಿನಗಿರಲಿ ಮುಂದೆ ಸಿಕ್ಕುವ ನಿಜವಿಲ್ಲದರಲ್ಲಿ ಆ ನಿಮಿತ್ಯದಲೀ ನಿಜದೊಳತಿ ಛಂದದಿ ನಿಲ್ಲೈ 1 ಗುರುಪಾದ ಕಮಲದ ಸೇವೆಯ ಮಾಡಿ ಇಷ್ಟಾರ್ಥವ ಬೇಡಿ ದೃಢದೀ ಅದರಲ್ಲಿ ನಲಿನಲಿಹಾಡಿ ಸತ್ ಶಬ್ದವ ಗೂಡಿ ಮೂಧ್ರ್ನಿಯಲಿ ಲೋಲ್ಯಾಡಿ ದೃಢತರವದಗಿ ನಿರಂತರ 2 ಭಕ್ತಿಭಾವವನೆ ದೃಢಮಾಡು ಸದ್ಧರ್ಮವಗೂಡು ಯುಕ್ತಿಯಿಂದಲೀ ಸಾಧನೆಮಾಡು ಗುರುಪದದೊಳಗಾಡು ವಿ ರಕ್ತಿ ನಿಜವಾಗಿ ಹುರಿಯನೆ ಮಾಡು ಸತ್ಸಂಗದೊಳಾಡು ಅನುರಕ್ತನಾಗಿ ನಿಜ 3 ಕಾಷ್ಠದೊಳಗಿಂದಾ ಅಗ್ನಿಯ ಪುಟ್ಟು ಕಾಷ್ಠವನೆ ಸುಟ್ಟು ಉತ್ಕøಷ್ಟ ಚಿತ್ತವನೆ ಪುಟವಿಟ್ಟು ಜಡಭಾವನೆ ಬಿಟ್ಟು ಥಟ್ಟನೇ ಜ್ಞಾನಾಗ್ನಿ ಪುಟವಿಟ್ಟು ಕ್ಷಡ್ರಿಪುಗಳ ಸುಟ್ಟು ಸದ್ಗುರುವಿನೊಳ್ ಇಟ್ಟ ಶಾಂತಿ ನಿಜ 4
--------------
ಶಾಂತಿಬಾಯಿ
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ