ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ದೇಹಾಭಿಮಾನವೇ ಸಂಸಾರಮೂಲವಯ್ಯ ಕೇಳೀಗಲೇ ಜ್ಞಾನದಿಂದಾ ನೀ ದೂಡನಿನ್ನಭಿಮಾನ ವಿಷಯಾಭಿಲÁಷಾ ಮನದಲ್ಲಿ ಮೂಡಿ ಜೀವಂಗೆ ಗುಣದಲ್ಲಿ ಅನುರಾಗ ಕೂಡಿ ಇದೇ ಭೋಗನೇ ಮುಂದೆ ಸುಖದುಃಖವಾಗಿ ಜನುಮಕ್ಕೆ ಮೂಲಾದಿದೇ ವಾಸನಾಳಿ ಇದೇ ವಾಸನಾಳಿ ಇದೇ ಬಾಳುವೆ ಇದೇ ಬಾಳುನೆ ಇದೇ ಬಾಳು ದೇಹಾಭಿಮಾನಾಸ್ಪದಾ ಮೂಲ ಕೇಳಿಗಲೇ ಜ್ಞಾನದಿಂದ 1 ಮನದೇಹಗಳು ನಿನ್ನ ನಿಜರೂಪವಲ್ಲ ಇವುತೋರಿ ಬಯಲಾಗುತಿಹವಾಗಿವೆಲ್ಲ ನಿಜರೂಪವಲ್ಲ ಇದರಾಚೆಗಿಹ ಶುದ್ಧ ಚೈತನ್ಯ ನಾನೇ ಅದೇನಾನಿಹೆ ಅದೇ ನಾನಿಹೆ ಅದೇ ಸತ್ಯನೆಂದಾಗ ಹರಿವುದು ದೇಹಾಭಿಮಾನ ನೋಡುನೀ ಜ್ಞಾನದಿಂದ 2 ಈ ರೀತಿ ಸುವಿಚಾರವನು ಮಾಡಿಕÉೂಂಡು ನಿಜನನ್ನು ಕಂಡು ಸ್ವರೂಪಾತ್ಮನೋಳು ನಾನು ನೆಲೆ ನಿಂತು ಕೊಂಡು ಇದೆಲ್ಲ ಈ ಸಂಸಾರ ಕನಸೆಂದು ಕಂಡು ಪರಮಾತ್ಮನನೆ ವೃತ್ತಿಯೊಳು ತುಂಬಿಕೊಡು ಆನಂದ ಉಂಡು ಬಿಡೋ ಚಿಂತೆಯ ಬಿಡೋ ಚಿಂತೆಯಾ ಬಿಡೋ ಬಾಳ ಚಿಂತೆಯಾ ಶ್ರೀ ಶಂಕರಾಚಾರ್ಯರಿ ಬÉೂೀಧದ ಜ್ಞಾನದಿಂದ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಎಲೆ ಮಾನವಾ ಅಭಿಮಾನವಾ ಅವಿವೇಕವಾ ದೂಡೈ ಸುಖದುಃಖದಾ ಘನ ಮೂಲವಾ ಸುವಿವೇಕದೀ ನೋಡೈ ಪ ಪರರಿಂದ ಈ ಪರಿತಾಪವು ಬರುತಿರ್ಪುದೆಂಬುದಿದೋ ಬರಿ ಬ್ರಾಂತಿಯೋ ನಿಜವಲ್ಲವೋ ಅಲೋಚಿಸಿ ನೋಡೈ 1 ಗ್ರಹಕಾಲಗಳ್ ಘನ ಕರ್ಮಗಳ್ ಇವು ಕಾರಣಲ್ಲವಿದೋ ಮನವೇ ಇದೇ ಪರಿತಾಪದ ಘನಮೂಲವೈ ನೋಡೋ 2 ಸಟೆಯಾಗಿಹ ಸಂಸಾರವ ದಿಟವೆಂದು ತೋರ್ಪುದಿದೋ ಮನದಿಂದಲೇ ಇದು ಕಾಂಬುದೋ ಮನವಿಲ್ಲದಾಗಿಲ್ಲ 3 ಪರಮಾತ್ಮನ ಪರಿಪೂರ್ಣನ ಮರೆಮಾಡುತೀಮನವು ಹರಿದಾಡುತಾ ಸುಖದುಃಖವಾ ಗುಣಿಸುತ್ತ ತಾನಿಹುದೋ 4 ವನದಾಟಕೇ ಮರುಳಾಗದೇ ಗುರುಶಂಕರಾರ್ಯನಲಿ ಮನ ನಿಲ್ಲಿಸಿ ಈ ಮೋಹವಾ ಬಿಡು ಬೇಗ ನೀನೀಗ 5
--------------
ಶಂಕರಭಟ್ಟ ಅಗ್ನಿಹೋತ್ರಿ
ಸರ್ವಾಂತರ್ಯಾಮಿ ನೀ ಸಲಹೋ ಎನ್ನ ಪ ದುರ್ವಾರ್ತೆ ಕೇಳಿ ಮನ ಬರಿದೆ ಚಿಂತಿಸುತಿದೆ ಅ ಕಾಲ ಕರ್ಮ ಪ್ರಕೃತಿಯು ಸ್ವ ಭಾವಗಳನನುಸರಿಸಿ ಸುಖದುಃಖವಾ ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ ದಾತ 1 ಸತ್ಯ ಸಂಕಲ್ಪ ನೀನೆಂದೆಂದಿಗೂ ಸರಿ ಭೃತ್ಯವತ್ಸಲನೆಂಬ ಬಿರುದಲ್ಲವೇ ದತ್ತರೂಪನೆ ನಿನ್ನ ಸ್ಮರಣೆ ಮಾತ್ರದಲಿ ಅಪ ಮೃತ್ಯು ಪರಿಹರವಾಹುದು ಸಂದೇಹವಿಲ್ಲಿದಕೆ 2 ಮಾಪತಿ ಎನ್ನ ವಿಜ್ಞಾಪನೆ ಕೈಕೊಂಡು ಪಾಪಿಜನರಿಂದ ಬಂದಾಪತ್ತನು ನೀ ಪರಿಹರಿಸಿ ಸಲಹೋ ದ್ರೌಪದಿ ವರದ 3
--------------
ಜಗನ್ನಾಥದಾಸರು