ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ನಮ್ಮಾಳ್ವಾರ್ ವಕುಳಾಭರಣನೆ ಶರಣೆಂಬೆ ಸಕಲ ಬಂಧು ನೀ ಸಲಹೆಂಬ ಪ ನಿಖಿಲ ಲೋಕಿಗರ ಶಿಶುನಡೆನೂಕಿದೆ ಅಕಳಂಕನೆ ಶಠಗೋಪ ನೀನಾದೆ ಅ.ಪ ನಾಥನಾಯಕಿಯೆ ಕಾರಿಕುಮಾರ ಪೂತನೆ ಸೇನಾಪತಿಯವತಾರ ಪಾತಕಹರ ತಾಮ್ರಪರ್ಣಿತೀರ ಕೀರ್ತಿ ಪಡೆದ ಸುರಪೂಜ್ಯನುದಾರ 1 ಪದುಮ ಪವಿತ್ರನಂದದ ಪ್ರಭೆನೋಡಿ ಮಧುರಕವಿಯು ಬರೆ ಮುದಗೂಡಿ ಅದುಭುತ ಮಂತ್ರವನೊರೆದೆ ಹರಿಯಪಾಡಿ ಸದಮಲ ಸೇವಕನಲಿ ಮನೆಮಾಡಿ2 ಹದಿನಾರು ವರುಷಾಹಾರವಿಲ್ಲದೆ ಬದಿರಾಂಧ ಮೂಕನಾದ ಮುನಿ ವಿಧಿ ಪಿತನದುಭುತಧ್ಯಾನ ಮೈಗೂಡಿ ಸುಧೀಂದ್ರ ಶುಭದ ಅಮೃತಪದ 3 ನಾಥಗೊಲಿದು ತಿರುವಾಯ್ಮೊಳಿಯನು ಪ್ರೀತಿಯೊಳುಪದೇಶವ ಗೈದು ಪಾತಕ ಹರಿಸುತ ಪರಿಸರ ಪೊರೆಯುತ ದಾತಾರಂ ಸುಖದಾತಾರಂ 4 ಮಧುರಾಪೀಠವು ನೀರೊಳು ಮುಳುಗಲು ವಿಧಿಯಿಲ್ಲದೆ ಪಂಡಿತರೊರಲಿ ಅಧಿಕರಿಸುತ ತವ ಪದಗಳಿಗೆರಗೆ ಮಧುರವಾಣಿಯಿಂ ಹಾಡಿದ 5 ಹತ್ತಾಳ್ವಾರರ ಶರೀರವಾಗಿ ಪೆತ್ತಿಹ ಪರಮೌದಾರ ಮುನಿ ಎತ್ತಲು ಹರಿಗುರು ಸರ್ವೋತ್ತಮರೆನು ತುತ್ತುಮಪದವಿಯ ಮಾರ್ಗವತೋರಿದ6 ಆದಿವೈಷ್ಣವ ದೀಕ್ಷಾಚಾರ್ಯ ವೇದವ ದ್ರಾವಿಡದೊಳು ಪೇಳ್ದೆ ಶ್ರೀಧರಸನ್ನಿಧಿಯೊಳಗಿದ ಪಠಿಸಲು ಸಾದರದೊಲಿವಂ ಜಾಜೀಶಂ 7
--------------
ಶಾಮಶರ್ಮರು
ಯತಿರಾಜಂ ಭಜರೇ ರಾಘವ ಸದ ಗತಿ ತಂ ಭಜರೆ ಕಲುಷಿತ ಕುಟಿಲ ಮನಸೇ ಪ ಯತಿಪಾದ ತೀರ್ಥವೆ ಗತಿಯೆಂಬರಸನಿಗೆ ಪತಿತಪಾವನ ತನ್ನ ಪದವ ತೋರುವನಯ್ಯ ಅ.ಪ ಗುರುವಚನವೇ ವೇದ ಗುರುನಾಮ ಸುಖದಾ ಗುರುಪೂಜೆ ಪರಂಧಾಮ ಗುರುವೆ ಶ್ರೀರಾಮ ಗುರುರಾಘವೇಂದ್ರ ಮಾಂಗಿರಿಯ ರಂಗಯ್ಯ ಗುರುರಾಜ ಪ್ರಹ್ಲಾದ ಚಿರ ಸುಖದಾತಾರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಿಜಯರಾಯರ ಪಾದವ ನೀ ಮಾನವ ಪ ವೃಜಿನವೆಲ್ಲವ ಕಳೆದು ಕರುಣದಿ | ಅಜನನಯ್ಯನ ತೋರುವ ಅ.ಪ. ಜಗಕೆ ಹರಿ ಪರನೆಂದು ತಾ ಭುಜ ಯುಗಗಳೆತ್ತಿ ಸಾರಿದಾ || ಭೃಗು ಮುನಿ ಇವರೆಂದು ಭಾವಿಸಿ ಮಿಗೆ ಸುಭಕ್ತಿಲಿ ಸರ್ವದಾ 1 ವರಹಜಾ ತಟದಲ್ಲಿ ಚೀಕಲ | ಪರವಿಗ್ರಾಮದಿ ಜನಿಸಿದ || ಪರಿಪರಿಯಲನುಭವಿಸಿ ಬಡತನ ಭವ ವೈರಾಗ್ಯ ಧರಿಸಿದ 2 ಭಕುತಿ ಪೂರ್ವಕವಾಗಿ ಬಿಡದಲೆ | ಸಕಲಕ್ಷೇತ್ರವ ಚಲಿಸಿದಾ || ಮುಕುತಿ ಸುಖದಾತಾರನಾದ | ಲಕುಮಿ ರಮಣನ ತುತಿಸಿದಾ 3 ತಾ ಸುಸ್ವಪ್ನದೊಳೊಂದು ದಿನ ಶ್ರೀ ವ್ಯಾಸ ಕಾಶಿಗೆ ತೆರಳಿದಾ || ವಾಸುದೇವನ ಕಂಡು ನಮಿಸಿ ಲೇಸು ವರ ಸ್ವೀಕರಿಸಿದಾ 4 ಪುರಂದರಾರ್ಯರ ಕವನಗಳು ಮೂರೆರಡು ಲಕ್ಷಕೆ ತ್ರಯಪದ ಕೊರತೆ ತಾ ಪೂರೈಸಿದ 5 ಬಾಲೆಯೋರ್ವಳು ಬಂದು ಪ್ರಾರ್ಥಿಸೆ ಕೇಳುತಾಕೆಯ ಪತಿಯನು ಕಾಲ ಪಾಶವ ಬಿಡಿಸಿ ಕರುಣದಿ ಪಾಲಿಸಿದ ಸುಮಹಾತ್ಮರ 6 ಶ್ರೀಮನೋಹರ ಶಾಮಸುಂದರ ನಾಮ ಮಹಿಮೆಯ ವಿಧ ವಿಧ ಭೂಮಿ ಸುಮನಸ ಸ್ತೋಮಕನುದಿನ ಪ್ರೇಮದಿಂದಲಿ ಬೀರಿದ 7
--------------
ಶಾಮಸುಂದರ ವಿಠಲ