ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಬಲು ಸುಖದಾಟ ಸಾಧಿಸಿ ನೋಡಿರೋ ನೀಟ ಧ್ರುವ ಕರ್ಮಕಮಂಧವಿಲ್ಲ ವರ್ಮ ತಿಳಿದವ ಬಲ್ಲ ಧರ್ಮ ಗುರುವಿನ ಸರಿ ಇಲ್ಲ ನಿರ್ಮಲ ನಿಜವೆಲ್ಲ 1 ಅನುಭವಕನುಭವದ ಅನಂದೋ ಬ್ರಹ್ಮದ ಬೋಧ ಏನೇಂದ್ಹೇಳಲಿ ಸುಸ್ವಾದ ತಾನೆ ತಾನಾದ 2 ಸಾಧಿಸಿದಲ್ಲದೆ ಖೂನ ಇದರಿಟ್ಟು ಮಹಿಪತಿ ಪೂರ್ಣ ಒದಗಿ ಕೈಗೂಡದು ಧನ ಸದ್ಗುರು ಚರಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎನೊ ಎಂತೊ ತಿಳಿಯದು ತಿಳಿಯದು ಸ್ವಾನಂದದ ಸುಖದಾಟ ಧ್ರುವ ಒಳಗೊ ಹೊರಗೊ ಬೈಗೊ ಬೆಳಗೊ ಕಾಳೊ ಬೆಳದಿಂಗಳವೊ ಮಳಿಯೊ ಮಿಂಚೊ ಹೊಳವೊ ಸಳವೊ ತಿಳಿಯದ ಕಳೆಕಾಂತಿಗಳು 1 ಉದಿಯೊ ಅಸ್ತೊ ಆದ್ಯೊ ಅಂತ್ಯೊ ಮಧ್ಯೋ ತಾ ತಿಳಿಯದು ತುದಿಮೊದಲಿಲ್ಲದೆ ಸದಮಲ ಬ್ರಹ್ಮವು ಉದಿಯವಾಗಿಹ್ಯದು ನೊಡಿ 2 ಜೀವೋ ಭಾವೋ ಶಿವೊ ಶಕ್ತೋ ಆವದು ತಾ ತಿಳಿಯದು ಘವಘವಿಸುವ ಅವಿನಾಶನ ಪ್ರಭೆಯಿದು ಮಹಿಪತಿ ವಸ್ತುಮಯವೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನದಿಂದಲಿ ಮನನೋಡಿ ಮನವರಿತು ಘನ ಕೂಡಿ ಧ್ರುವ ಮನಸಿನಿಂದ ತಾ ನೋಡುವ ಖೂನ ಮನ ಮರೆಯಲದೆ ನಿಧಾನ ಮನವರಿಯದೆ ಇಹುದ್ಯಾತರ ಜ್ಞಾನ ಮನವೇ ಸ್ವಹಿತ ಕಾರಣ 1 ಮನದ ಕೊನಿಯಲಿದೆ ಘನಸುಖದಾಟ ಅನುದಿನ ನೋಡುದು ನೀಟ ಸ್ವಾನುಭವದಲಿದು ನೋಡುವ ನೋಟ ಮುನಿಜನರ ಸುಖದೂಟ 2 ಮನೋನ್ಮನದೊಳಗದೆ ಘನಸ್ಫೂರ್ತಿ ಙÁ್ಞನಕಿದೆ ಮನೆ ವಾರ್ತಿ ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ ಮನಕಾಗಿಹ ತಾಂ ಸಾರ್ಥಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾನುಭವದ ಸುಖ ಸಾಧಿಸಿ ನೋಡಿ ತಾನಾಗದೇ ನಿಜಗೂಡಿ ಸ್ವಾನುಭವ ಧ್ರುವ ಮನದ ಕೊನಿಯಲ್ಯದ ಘನಸುಖದಾಟ ಅನುಭವಕಿದು ಬಲು ನೀಟ ಖೂನದೋರುವ ಘನ ಗುರುದಯ ನೋಟ ಮುನಿಜನಕಾಗುವ ಪ್ರಗಟ 1 ಸುರಿಯುತಲ್ಯದ ಸುಖ ಸಂತ್ರಾಧಾರಿ ಇರುಳ ಹಗಲದೀ ಪರಿ ಅನುದಿನ ನಿಜಸಾರಿ ತೋರುತಲ್ಯದ ಘನ ಬೀರಿ 2 ಸ್ವಹಿತ ಸಾಧನಕಿದು ಸವಿಸಾರ ಮಹಾನುಭವದಾಗರÀ ಮಹಿಪತಿಗಿದು ಮಾಡುವ ಮನೋಹರ ಇಹಪರ ಘನ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನಿಮ್ಮ ಕರುಣ ನಮ್ಮ ಸರ್ವಾಭರಣ ಸ್ವಾಮಿ ನಿಮ್ಮ ಚರಣ ನಮ್ಮ ಜನ್ಮೋದ್ಧಾರಣ ಧ್ರುವ ಸ್ವಾಮಿ ನಿಮ್ಮ ದಯ ನಮ್ಮ ಹಿತೋಪಾಯ ಸ್ವಾಮಿ ನಿಮ್ಮ ಭಯ ನಮ್ಮ ಪುಣ್ಯೋದಯ 1 ಸ್ವಾಮಿ ನಿಮ್ಮ ಖೂನ ನಿಜಸ್ಥಾನ ಸ್ವಾಮಿ ನಿಮ್ಮ ಙÁ್ಞನ ನಿಜಧ್ಯಾನ 2 ಸ್ವಾಮಿ ನಿಮ್ಮ ನೋಟ ನಮ್ಮ ಮನದೂಟ ಸ್ವಾಮಿ ನಿಮ್ಮ ಮಾಟ ನಮ್ಮ ಸುಖದಾಟ 3 ಸ್ವಾಮಿ ನಿಮ್ಮ ನಾಮ ನಮ್ಮ ಅತಿಪ್ರೇಮ ಸ್ವಾಮಿ ನಿಮ್ಮ ನೇಮ ನಮ್ಮ ನಿಜಾಶ್ರಮ 4 ಸ್ವಾಮಿ ನಿಮ್ಮ ಸೋಹ್ಯ ನಮ್ಮ ನಿಜಾಶ್ರಯ ಸ್ವಾಮಿ ನಿಮ್ಮ ಸಾಹ್ಯ ಮಹಿಪತಿ ಮನೋತ್ರಾಹ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು