ಒಟ್ಟು 4 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಪುರುಷಾರ್ಥ ಮನಜ ಪರಮಾತ್ಮ ಪಡೆವುದಿದು ವೇದಾರ್ಥ ಇದನ್ನು ಬಿಸುಟಿನ್ನು ಬಾಳುವೆ ಬದುಕನ್ನು ಮಾಡುವುದಿದುದೇ ವ್ಯರ್ಥ S ದೇಹವಿರುವಾಗಲೇ ಪೂರ್ಣಪದನಾ ದೊರಕಿಪನೆ ಜಾಣ ಮೋಹಮಾಯಾವಿಕಾರವ ದಾಂಟಿ ಪೋಗುವನೆ ಜಾಣ ಸಾಹಸದಿ ಈ ಸಾವನು ನೀಗೀ ಮೋದಿಸುವ ಜಾಣ ಉಳಿದ ನರ ಕೋಣ ಅವನಿಯುಳು ಪ್ರಾಣ ತಳೆದಿರುವುದೇ ವ್ಯರ್ಥ ತನ್ನ ಒಳಗಿರ್ವ ಸಂಪೂರ್ಣ ಸುಖತಾ ಅರಿಯುವನೆ ಜಾಣ ಭಿನ್ನವಾಗಿರ್ಧ ತೋರಿಕೆ ಇದನಾ ಭಾದಿಸುವ ಜಾಣ ಮುನ್ನ ಸುಖದುಃಖಗಳನ್ನು ನೀಗಿ ನಿಲ್ಲುವನೆ ಜಾಣ ಇವನೇ ಗುರುನಾಥಾ ಶಂಕರ ಭಗವಂತಾಪೇಳಿದ ನುಡಿ ವೇದಾರ್ಥ
--------------
ಶಂಕರಭಟ್ಟ ಅಗ್ನಿಹೋತ್ರಿ
ಇದೇ ಸೀತಾ ಮಹಾಮಂತ್ರ ಭವಾಬ್ದಿ ದಾಂಟುವಾ ಮಂತ್ರಾ ನಿತ್ಯ ಅನುದಿನಾ ಪಠಿಸುತಿರುವಾತಾ ಮುಕುತಿಪಂಥ ಪಡೆವ ನಿರುತಾ ಇದೇ ದೇಹದಲಿ ತಾನಿರುತಾ 1 ವಿರಾಗಿಯಾಗಿ ಮನದಲ್ಲಿ ಪರಾನಂದಾತ್ಮರೂಪವನು ತಿಳಿಯುವಾ ಚೈತನ್ಯರೂಪವನು ಇದೇ ಗೀತಾಪರಣಫಲ ತಾ ಪ್ರಶಾಂತಾಕಾಮನಾಗಿರುತಾ 2 ನಿಧಾನಾ ನೊಂದಮನನಿಗಿದೆ ಪ್ರಧಾನಾ ಶಾಸ್ತ್ರ ಸಂಚಯ ದೇ ಪ್ರಧಾನಾ ಷಟ್‍ಶಾಸ್ತ್ರ ಸಂಚಯದೇ ಸದಾ ಧ್ಯಾನಾ ಇದೇ ಮನನಾ ಮನುಜನೇ ಇದುವೆ ಸುಖತಾಣಾ 3 ತಿಳಿ ನೀ ಗೀತೆಯಾ ಬೋಧಾ ಅಳಿ ನೀ ಜೀವಪರ ಬೇಧಾ ತಿಳಿ ನೀ ಪರಮಾತ್ಮಪದ ಬೋಧಾ ಪಡೆವ ಮೋದಾ ಶ್ರವಣದಿಂದಾ ಇದೇ ಶ್ರೀ ಶಂಕರನ ಬೋಧಾ 4
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ