ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಗ ನೀಗಿಸು ದುರ್ಭೋಗದ ಸೆರೆಯ ನಾಗಶಯನ ಬಾಗಿ ಬೇಡುವೆ ಪ ನೀತಿಗೆಡಿಸಿ ಮಂಗನೆನಿಸಿ ಮಾತುಮಾತಿಗೆ ಭಂಗಬಡಿಸಿ ಪಾತಕನೆನಿಸಿ ದಂಗು ಹಿಡಿಸಿ ಘಾತಮಾಳ್ಪ ಹೊನ್ನಿನಾಸೆ 1 ಕುನ್ನಿಯಂದದಿ ಕುಣಿಸಿ ಕುಣಿಸಿ ಬನ್ನ ಬಡಿಸಿ ಬನ್ನಂಗನೆನಿಸಿ ಉನ್ನತ ಸುಖಗೆಲಿಪ ಹೇಸಿ ಗನ್ನಗತಕ ಹೆಣ್ಣಿನಾಸಿ 2 ಮೋಸಪಾಶದೊಳಗೆ ಮುಳುಗಿಸಿ ದೋಷದೆಳಸಿ ಮುತಿಯಕೆಡಸಿ ನಾಶ ಯಮನ ಕೊಲೆಗೀಡೆನಿಸಿ ಘಾಸಿ ಮಾಳ್ಪ ಹೆಣ್ಣಿನಾಸಿ 3 ಇಷ್ಟೆ ಜಗದ ಸುಖವಿದನು ಎಷ್ಟುನಂಬಿ ಫಲವೇನು ಅಷ್ಟು ಮಾಯವೆನಿಸಿ ಎನ್ನನು ನಷ್ಟಗೊಳಿಪ ಕೆಟ್ಟಾಸಿಯನು 4 ಮೀರಿ ಮಹ ಘೋರಬಡಿಸಿ ಸಾರಸುಖದ ಮಾರ್ಗ ಕೆಡಸಿ ಧೀರ ಶ್ರೀರಾಮ ನಿನ್ನ ಮರೆಸಿ ಗಾರುಮಾಳ್ಪ ಪಾಪರಾಸಿ 5
--------------
ರಾಮದಾಸರು
ಯಾಕ ಸ್ಮರಸದೀ ಮನಸಿಗೇ ಪ ಯಾಕ ಸ್ಮರಸದೀ ಮನಸಿಗೆ | ಲೋಕದೊಳು ತನ್ನ ಸುಖಗೆ | ಮಾಕಾಂತ ನಡಿಗಳ ಮರೆಹೊಕ್ಕು | ವಿ ವೇಕ ಸೌಖ್ಯ ಪಡಿಯದೀಗ 1 ಉತ್ತಮ ಸಂಗವ ನೆರೆಮಾಡಿ ತನ್ನ | ಚಿತ್ತದ ಚಂಚಲ ನೀಡ್ಯಾಡೀ | ನಿತ್ಯದಿ ಗುರು ಹಿರಿಯರ ಶೇವೆಯಲಿ| ಹೊತ್ತು ಸಾರ್ಥಕ ಕಳಿಯದು ನೋಡು 2 ಸಣ್ಣ ದೊಡ್ಡವರಿಂದ ಭಲರೇಯಾ ಯಂದು | ಮನ್ನಿಸಿಕೊಳ್ಳದೇ ಅವರ ಕೈಯ್ಯಾ | ಕುನ್ನಿಯ ಛೀ ಸುಡು ಸುಡು ಯಂದು | ನಿನ್ನ ಜನ್ಮಕೆನಿಸುವದು ಬಲು ಕುಂದು 3 ವಿಹಿತವೇ ಅಹಿತವೆಂದು ಬಗೆವದು ತನ್ನ | ಸ್ವಹಿತವೇ ಅಹಿತೆಂದಾಚರಿಸುವುದು | ಇಹಪರ ಲೋಕಕ ಸಲ್ಲದು ಆಗಿ | ಕುಹಕ ಬುದ್ಧಿಯಿಂದಲೇ ಬಾಳುದು 4 ಜನಲಜ್ಜಾ ಮನಲಜ್ಜಾ ವೆರಡಿಲ್ಲಾ ಇದ | ಕೇನೋ ಮುಂದಣಗತಿ ಶಿವಬಲ್ಲಾ | ಅನುಮಾನ ವಿಲ್ಲಿದರೊಳು ಕಂಡು ಕೇಳಿ | ಘನಗುರು ಮಹಿಪತಿ ಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು