ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಶ್ರೀ ಪರಾತ್ಪರವಿಠಲ ಪಾಲಿಸಿವರ ಪ ಚರಾಚರಾತ್ಮಕದೇವ ಪರಮ ಪ್ರೀತಿಯಿಂದ ಅ.ಪ. ಮೂರ್ತಿ ಭಾಗವತ ಪ್ರಧಾನ ಸಾಗರೋಪಮ ಭಕ್ತಿ ಪ್ರದದೇವ ಬಾಗಿ ಬೇಡುವೆ ವಿಜ್ಞಾನರೂಪದಿ ನಿನ್ನ 1 ಭಾಗವತೋತ್ತಮರ ಪದ್ಧತಿಯಲಿ ಗುಪ್ತಸಾಧನ ಪಾಲಿಸು ಶುಕಾನುಬಂಧದಿ ಶುಕಪ್ರೇಮ ಪಾತ್ರನಾಗಿ ಸುಖಮಯನ ಭಜಿಸುತಿರಲಿ 2 ಆಪ್ತತಮ ಗುಣಸಮುದ್ರ ಶ್ರೀಜಯೇಶ- ವಿಠಲ ಪೂರ್ಣ ಪ್ರೀತಿಯಲಿ ನಿತ್ಯ ಭಾಗವತರ ಸಂಗದಲಿಟ್ಟು ನಿರುಪಮ ಸುಖನೀಡು 3 ಮರುತಾತ್ಮಜನು ನಿರುತದಿ ಭಜಿಪನು ಪರಿಪರಿ ಪಾಡಿ ಸುಖಗೂಡಿ 1 ಪತಿತ ಪಾವನ್ನ ಸತತ ಈ ನಾಮ ಗತಿಯಿಲ್ಲದವರಿಗೆ ಗತಿ ಈವ ನಾಮ ಹತವೆ ಮಾಡುತಲಿದ್ದ ಕಿತವನಿಗೊಲಿದು ಕ್ಷಿತಿಯೊಳು ಮುನಿಪತಿ ಎನ್ನಿಸಿತು ಪಥದಿ ಪಾಷಾಣವ ಪೆಣ್ಣನು ಮಾಡಿದ ಅತುಳ ಮಹಿಮನ ಹಿತನಾಮ 2 ಕುಲಶೀಲಗಳನ್ನು ಎಂದೊ ಎಣಿಸನೊ ಸುಲಭರೊಳಗೆ ಬಲು ಸುಲಭನು ಇವನು ಕಲುಷದಿ ದೂರನು ಶಬರಿಯ ಫಲವನು ಮೆಲ್ಲುತೆ ಮುಕ್ತಿಯನಿತ್ತಿಹನು ಲಲನೆಯ ಕದ್ದೊಯ್ದ ಖಳನ ತಮ್ಮನಿಗೆನೆಲವಿತ್ತ ದಯವಂತ ಶ್ರೀಕಾಂತ 3
--------------
ಜಯೇಶವಿಠಲ
ಲೇಸು ಲೇಸಾಯಿತು ನೋಡಿ ಭಾಸ್ಕರನ ಕೂಡಿ ಧ್ರುವ ಲೇಸು ಲೇಸಾಯಿತು ನೋಡಿ ಸ್ವಸುಖಗೂಡಿ ಆಶೆ ಪೂರಿಸಿದ ನೋಡಿ ಭಾಸಿ ನೀಡಿ 1 ಶಿರದಲಿ ಅಭಯನಿಟ್ಟ ಹರುಷವ ಕೊಟ್ಟ ಹರಿದು ಭವಜೀವ ಸುಟ್ಟ ಸ್ಮರಣಿಯೊಳಿಟ್ಟ 2 ಮಾಯದ ಮೊನೆ ಮುರಿದ ಭಯ ಹರಿದ ಸಾಯೋಜ್ಯಪದ ತೋರಿದ ದಯ ಬೀರಿದ 3 ಸದ್ವಾಕ್ಯವೆ ಬೋಧಿಸಿದ ಸದ್ಗುಣದ ಸದ್ಭಾವ ಭಕ್ತಿ ತೋರಿದ ಸದ್ಗೈಸಿದ 4 ಅನುಭವ ಸುಖದೋರಿದ ಸ್ವಾನುಭವದ ಮನವಿಗ್ಯೆನುಕೂಲಾದ ತಾನೆ ತಾನಾದ 5 ಸವಿಸುಖವನುಣಿಸಿದ ಸುವಿದ್ಯದ ರವಿ ಕೋಟಿ ಪ್ರಭೆಯ ತೋರಿದ ಅವಿನಾಶದ 6 ತರಳ ಮಹಿಪತಿ ಪ್ರಾಣ ಗುರುನಿಧಾನ ಹರುಷಗೈಸಿದ ಜೀವನ ಪರಮಪಾವನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೇದದ ಮೂಲ ಆದಿ ಅನುಕೂಲ ಸಾಧು ಜನರ ಸದ್ಛನ ಲೋಲ ಧ್ರುವ ಕೀಲ ಬುಧರಕನುಕೂಲ ಇದೇ ನಿಜ ನೋಡಿರೊ ಸಾಧಿಸಿ ಘನಸುಖಗೂಡಿರೊ 1 ಜ್ಞಾನದಾಸರ ಧ್ಯಾನದಂತರ ಖೂನದಾ ವಿವರ ಅನುಭವಾಧಾರ ಕಣ್ಣಾರ ಎನ್ನ ಮನೋಹರ 2 ಗುಹ್ಯ ಗೌಪ್ಯಸ್ಥ ಮಹಾಪ್ರಶಸ್ತ ಈಹ್ಯ ಸೌಭ್ಯಸ್ಥ ಮಹಿಮರ ತಸ್ತ ಸುವಸ್ತ ಶ್ರೀಗುರು ಸಮರ್ಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀರಾಮ ಎನ್ನಿರೊ ಶ್ರೀರಾಮ ಎನ್ನಿರೊ ಪ ದುರಿತ ಪರ್ವತಕೆ ವರವಜ್ರವೆನಿಪುದು ಜಗವರಿಯೆ ಅ.ಪ. ನಿತ್ಯ ಪೊರೆಯುವ ಸತ್ಯ ತಾರಕ ನಾಮಕೆ ಮತ್ತೊಂದು ಸಾರ ಸಹಸ್ರನಾಮಕೆ ಶ್ರೀರಘುನಾಥನ ನಾಮವೆಂತೆಂದು ಸಾರಿ ಮಹೇಶನು ಸುರನರ ವಂದ್ಯನು ಗಿರಿಜೆಗೆ ಪ್ರೇಮದಿ ಪೇಳಿದನು ಮರುತಾತ್ಮಜನು ನಿರುತದಿ ಭಜಿಪನು ಪರಿಪರಿ ಪಾಡಿ ಸುಖಗೂಡಿ 1 ಪತಿತ ಪಾವನ್ನ ಸತತ ಈ ನಾಮ ಗತಿಯಿಲ್ಲದವರಿಗೆ ಗತಿ ಈವ ನಾಮ ಹತವೆ ಮಾಡುತಲಿದ್ದ ಕಿತವನಿಗೊಲಿದು ಕ್ಷಿತಿಯೊಳು ಮುನಿಪತಿ ಎನ್ನಿಸಿತು ಪಥದಿ ಪಾಷಾಣವ ಪೆಣ್ಣನು ಮಾಡಿದ ಅತುಳ ಮಹಿಮನ ಹಿತನಾಮ 2 ಕುಲ ಶೀಲಗಳನ್ನು ಎಂದೂ ಎಣಿಸನೊ ಸುಲಭರೊಳಗೆ ಬಲು ಸುಲಭನು ಇವನು ಕಲುಷದಿ ದೂರನು ಶಬರಿಯ ಫಲವನು ಮೆಲ್ಲುತೆ ಮುಕ್ತಿಯನಿತ್ತಿಹನು ಲಲನೆಯ ಕದ್ದೊಯ್ದ ಖಳನ ತಮ್ಮನಿಗೆ ನೆಲವಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು
ಸಂಕೀರ್ಣ ಇದೇ ವೀಳ್ಯ ಅಡಕ್ಯೆಂಬುದು ನೋಡಿ ಹದನಿಸಿ ನಾಲ್ಕುಗುಣ ಚೂರ್ಣಮಾಡಿ ಧ್ರುವ ಅಡಕೆಂಬದನುಮಾನಪೂಟ ಒಡೆದ ಹೋಳು ಮಾಡಿ ಚೊಕಷ್ಟ ಮಡಿಚಿಮ್ಮನೆಂಬುದು ವೀಳ್ಯ ನೀಟ ತೊಡೆದು ಅಹಂ ಸುಣ್ಣ ಖಾರಟಾ 1 ಗುರುವರ್ಮ ಕಾಚೆಂಬುದು ಪೂರ್ಣ ಸುರಮುನಿ ಜನರ ನಿಧಾನ ತೋರುತಿಹ್ಯದೊಂದೆ ನಿಜ ಖೂನ ಕರಗಿಹೋಯಿತು ಮೂರೊಂದು ವರ್ಣ 2 ವೀಳ್ಯ ಮಾಡಲು ಮರ್ದನ ಕಳದ್ಹೋಯಿತು ಅದರವಗುಣ ಕಳೆ ಹೆಚ್ಚಿತು ರಂಗ ಸಗುಣ ಥಳಿಥಳಿಸುವ ಜ್ಞಾನ ಸುಬಣ್ಣ 3 ನುಂಗಿ ತಾಂಬೂಲ ರಸ ಹಲವಂಗ ಹಿಂಗಿ ಹೋಯಿತು ಭವಭಯಭಂಗ ಕಂಗಳದ್ಯರಿಯತು ಅಂತರಂಗ ರಂಗದೋರಿತ್ಯನ್ನೊಳು ಸತ್ಸಂಗ 4 ವೀಳ್ಯ ಅಡಕಿ ಮಹಿಪತಿಗೆ ನೋಡಿ ತಿಳದವರಿದೆ ನಿಜಪೂರ್ಣ ಮಾಡಿ ಕಳೆದು ಕಲ್ಪನಿ ಕೊನೆ ಆಗ್ಯೀಡ್ಯಾಡಿ ಇಳಿಯೊಳಗಿದೆ ಸವಿ ಸುಖಗೂಡಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಹಿತ ಸುಪಥ ಸಾಧನ ಪಡೆದು ಸ್ವಸುಖಗೂಡಿರೊ ವಿಹಿತ ಮರೆದು ವಿಭ್ರಮಾಚರಿಸಬ್ಯಾಡಿರೋ ಧ್ರುವ ದಾರು ತಿಳಿದು ನೋಡಿರೊ ಜ್ಞಾನ ಹೀನರಾಗಿ ಗರ್ವ ಹಿಡಿಯಬ್ಯಾಡಿರೊ ಸ್ವಾನುಭವಾಮೃತವನ್ನುಂಡು ಸವಿ ಸೂರ್ಯಾಡಿರೊ ನಾನು ನೀನು ಎಂಬ ಬಿನಗುಭ್ರಮ ಈಡ್ಯಾಡಿರೊ 1 ಮನದ ಕೊನಿಯಲಿದ್ದ ಘನದಾಶ್ರಯವು ಮಾಡಿರೊ ತನುವು ಲಂಪಟ್ಹಿಡಿದು ತನ್ನ ಮರಿಯಬ್ಯಾಡಿರೊ ಜನುಮ ಸಫಲವಾಗುವ ಸುಜಾಗ್ರತಿಯ ಪಡೆಯಿರೊ ನೆನವು ನೆಲೆಯಗೊಂಡು ನಿಜದಾಶ್ರಯದಲಿ ನಡೆಯಿರೊ2 ಮರ್ತು ಮೈಯ ವ್ಯರ್ಥ ದಿನವಗಳಿಯಬ್ಯಾಡಿರೊ ನಿರ್ತದಿಂದ ಅರ್ತ ಭಾವದರ್ಥಿ ನೋಡಿರೊ ಕರ್ತು ಭಾನುಕೋಟಿತೇಜನ ಗುರ್ತು ಮಾಡಿರೊ ಅರ್ತು ಮಹಿಪತಿ ಸ್ವಾಮಿಪಾದ ಬೆರ್ತುಕೂಡಿರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು