ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷಯ ಗುಣಪೂರ್ಣ ಲಕ್ಷ್ಮೀರಮಣ ಪ ಕುಕ್ಷಿಯೊಳಗೆ ಜಗವಿಟ್ಟು ರಕ್ಷಿಪ ಸ್ವಾಮಿ ಈಕ್ಷಿಸಿ ಕರುಣ ಕಟಾಕ್ಷದಿ ಸತತ ಅ.ಪ. ಏಸೇಸು ಕಲ್ಪದಲ್ಲೂ ಈಶ ನೀನಿಹುದಯ್ಯ ದಾಸರು ಜೀವರ್ಕಳು ಕೃಪಾಳು ಕ್ಲೇಶ ಸುಖಂಗಳಿಗೆ ನೀನೆ ಸ್ವತಂತ್ರನೆಂದು ಸೂಸಿ ಪೇಳುತ್ತಲಿಹರು ಸಜ್ಜನರು ವಾಸುದೇವನೆ ಸರ್ವಾಸುನಿಲಯನೆ ಏಸೇಸು ಬಂದರು ದಾಸರ ಬಿಡದಿರು ನೀ ಸಲಹದೆ ಉದಾಸೀನ ಮಾಡಲು ಆಸರೆ ಯಾರಿನ್ನು ಶಾಶ್ವತ ವಿಭುವೆ 1 ನಿನ್ನಧೀನನÀವನು ನಿನ್ನ ದಾಸರ ಸೂನು ಎನ್ನುವ ಸಥೆಯಿಂದ ಮುಕುಂದ ನಿನ್ನನೆ ಬೇಡುವೆ ನಿನ್ನನೆ ಕಾಡುವೆ ಅನ್ಯಥಾ ಗತಿಗಾಣೆ ನಿನ್ನಾಣೆ ನಿನ್ನ ದಾಸರ ಪದವನ್ನು ಪಿಡಿದು ನಾ ನಿನ್ನನು ಸ್ತುತಿಸಿದೆನೆನ್ನುತ ಕೃಪೆಗೈದು ಬಿನ್ನಪ ಲಾಲಿಸಿ ಬನ್ನವ ಕಳೆದು ಘನ್ನ ಭಕುತಿಯಿತ್ತು ಧನ್ಯನ ಮಾಡೊ 2 ಶರಣರ ಮಹದೇವ ಶರಣರ ಬಿಡದೆ ಕಾವ ಶರಣರ ಉದ್ಧಾರ ಗಂಭೀರ ಶರಣ ರಕ್ಷಾಮಣಿ ಶರಣ ತ್ರಿದಶ ತರು ಶರಣ ಸುರಧೇನು ಎನಿಸಿನ್ನು ನಿರುತದಿ ಪೊರೆಯುವ ಬಿರುದಗಳರಿತು ಶರಣೆಂದು ನಿನ್ನಯ ಚರಣ ಕಮಲವನು ಮರೆಹೊಕ್ಕೆನು ಕಾಯೊ ಪರಮ ದಯಾಕರ ಕರಿರಾಜವರದ ಶ್ರೀಕಾಂತ ನಿಶ್ಚಿಂತ 3
--------------
ಲಕ್ಷ್ಮೀನಾರಯಣರಾಯರು
ಆರಿಲ್ಲಿಲ್ಲೋ ಮನುಜಾ | ಅರಿಲ್ಲಿಲ್ಲೋ | ಹರಿಭಕ್ತರಿಗೆ ಸರಿ ಉಂಟೇನಣ್ಣಾ | ಆರಿಲ್ಲಿಲ್ಲೋ ತಮ್ಮಾ | ಬಿರದಿನ ಘಲಗಳ ನಡೆಸುವರಯ್ಯಾ ಪ ಕಂಭದೊಳಗ ಹರಿ ಬಿಂಬವ ತೋರಿಸಿ | ಹಿರಣ್ಯ ಕನಾ | ವೆಂಬ ಶಾರ್ದೂಲ ಕರಳವ ಹಾರಿಸಿದ | ನಂಬಿದ ಪ್ರಲ್ಹಾದ ಮಾಸಾಳ ನಮಾ 1 ಕಂಡು ಸೀತಾಪತಿ ನೊಯ್ದು ರಾವಣ ನೆಂಬಾ | ಖಂಡಿಸಿ ಮದ ಸೊಕ್ಕಿದಾನಿಯನು | ತುಂಡ ಮುಂಡ ಮಾಡಿ ಪದವಿಯ ಪಡದಾ | ಚಂಡ ವಿಭೀಷಣ ಮಾಸಾಳ ನಮಾ 2 ಖಂಡ ದಾಸನಬೇಡಿ ಹೊಂದಿದ್ದ ಕಾಯನ | ಸಂದ ಬಿಡಿಸಿ ಮಲ್ಲಯುದ್ಧದಲಿ | ಮಂದರ ಧರನತಿ ಮೆಚ್ಚಿಸಿ ಮೆರೆದಾ | ನಂದ ಭೀಮಶೇನ ಮಾ-ಸಾಳ ನಮಾ 3 ಬೊಮ್ಮ ಸಾರಥಿ | ಉರಗಸ ಹದಿ ಮೇರು ಗಿರಿ ಪಾಪವು | ಹರಿಶರದಿಂದಲಿ ತ್ರಿಪುರವ ಕೆಡಹಿದ | ಸುರ ರಕ್ಷ ಮಹೇಶ ಮಾಸಾಳನಮಾ 4 ಹಿಂದಿನ ಮಾತಿಂದು ಇಂದಿಲ್ಲ ವೆನಬ್ಯಾಡಿ | ಎಂದೆಂದು ಸ್ವರ್ಗದ ಸುಖಗಳಿಗೆ | ಕುಂದವ ನಿಡುವರು ಮಹಿಪತಿ ಸುತ ಪ್ರಭು | ಹೊಂದಿದ್ದ ದಾಸರು ಮಾಸಾಳರೈಯ್ಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೆನೆ ಮನವೆ ಮಾಧವನ ಪ ಮುನಿವರೇಣ್ಯರ ಮನದಿ ಅನುದಿನವು ನೆಲಸಿಹ ವನರುಹ ಲೋಚನನ ಅ.ಪ ಸತಿಸುತರ ಮೋಹವನು ಹಿತವೆಂದು ಅರಿಯುತಲಿ ಮತಿಯ ಕೆಡದಂತೆ ನೀ ಅತಿಶಯದ ಭಕುತಿಯಲಿ 1 ಮರುಳು ಮಾಡುವ ಭವದ ಪುರಳು ಸುಖಗಳಿಗೆ ನೀ ಇರುಳು ಹಗಲಲ್ಲಿ ಉರಳಿ ಕೆಡದಿರುವಂತೆ 2 ಮುನ್ನಗಳಿಸಿದ ಬಹಳ ಉನ್ನತದ ಅಘಗಳಿಗೆ ಖಿನ್ನನಾಗುತ ಸುಪ್ರಸನ್ನ ಶ್ರೀ ನರಹರಿಯ 3
--------------
ವಿದ್ಯಾಪ್ರಸನ್ನತೀರ್ಥರು
ಮಧ್ವಮತಕಿನ್ನು ಸರಿಯುಂಟೆ - ಪ್ರ - |ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ಪ.ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ - ನೀ ಕೇಳೊ |ಪಕ್ಷಿವಾಹನನೆನಿಪ ದೇವ ತಾ ಬಲ್ಲ 1ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |ಮುಕುತಿ ಸುಖಗಳಿಗೆಣೆಯಿಲ್ಲ - ನೀ ಕೇಳೊ |ಅಖಿಳಬ್ರಹ್ಮಾಂಡನಾಯಕ ತಾ ಬಲ್ಲ2ಪ್ರಥಮಯುಗದಲಿ ಹನುಮ , ದ್ವಿತಿಯ ಯುಗದಲಿ ಭೀಮ |ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |ರತಿಪತಿಗಿಂತ ಚೆಲುವರಿಲ್ಲ - ನೀ ಕೇಳೊ |ಕಥೆಯನು ಪುರಂದರವಿಠಲ ತಾ ಬಲ್ಲ 3
--------------
ಪುರಂದರದಾಸರು