ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ಮೂರು ಪೂತನಾ ಅಸುಹಾರಿಣಿ ನಮಃ ಪದ್ಯ ಪೊಡವಿಯಲಿ ಎಲ್ಲರಿಗೆ ಒಡಿಯನಾಗಿರುವಂಥ ಖಡು ಪಾಪಿ ಕಂಸಗೆ ಬಿಡದೆ ಪ್ರತಿವರ್ಷಕ್ಕೆ ಕೊಡತಕ್ಕ ಕಪ್ಪವನು ಕುಡಬೇಕು ಎಂತ್ಯೆಂದು ನಡದು ತಾ ಮಥುರೆಯಲಿ ಖಡುನಂದಗೋಪಾ| ಒಡಿಯನಪ್ಪಣಿಯಿಂದ ಗಡಬಡಿಸೆ ಪೂತನಿಯು ಹುಡುಗರನ್ನು ಹುಡುಕುತಲೆ ಬಡಿವಾರ ತೋರುತಲೆ ನÀಡದು ಬಂದುಳು ಹಾದಿ ಹಿಡಿದು ಗೋಕುಳಕೆ|| 1 ಧಡಿಯ ದಿವ್ಯಾಂಬರವು ಶಡಗರದಿ ಉಟ್ಟಿಹಳು ಕಿಡಿಯಂಥ ಕುಪ್ಪುಸವು ದೃಢ ಬಿಗಿದು ತೊಟ್ಟಿಹಳು| ಬಿಡÀದೆ ಸರ್ವಾಭರಣ ಜಡದಿಹಳು ತಾ ಮಿಂಚು ಹೊಡದಂತೆ ತೋರುವಳು ಉಡುರಾಜ ಮುಖಿಯು| ಎಡಬಾರಿ ದುರಬಿನಲಿ ದೃಢವಾಗಿ ಮಲ್ಲಿಗಿಯು ಮುಡಿದಿಹಳು ಉರದಲ್ಲಿ ದೃಢವಾದ ಕುಚವೆರಡು ನಡವುದಾ ಕಾಲಕ್ಕೆ ನಡಗುತಿಹವು 2 ಬಿಂಬೋಷ್ಟಿ ಮಾಯ ಅವಲಂಬಿಸುತ ಗೋಕುಲದ ತುಂಬ ಬೆಳಕವು ಮಾಡಿ ಜಂಭದಲಿ ಬರುತಿಹಳು ಗಂಭೀರಳಾಗಿ ತನಗುಂಭ ತಿಳಿಗುಡದೆ ಕುಚ ಕುಂಭಗಳವಳಗ ವಿಷ ತುಂಬಿಟ್ಟು ಕೊಂಡು ಅಂಬುಜಾಕ್ಷಿಯ ಕಂಡು ಸಂಭ್ರಮದಿ ಗೋಕುಲದ ಜಗದಂಬಿಯೊ ಎಂದೂ 3 ಮುಂದ ಆ ಪೂತನಿಯು ನಂದಗೋಪನ ಮನಿಗೆ ಬಂದು ದೇವೇಚ್ಛಿಯಲಿ ನಂದನಂದನನ ಕಣ್ಣಿಂದ ನೋಡಿದಳಾಗ ಛಂದದ್ಹಾಸಿಕೆಯಲಿ ಛಂದಾದ ಲೌಕೀಕದ ಕಂದನಂತೆ| ಮುಂದವನ ತೊಡಿಯ ಮ್ಯಾಲೆ ಛಂದಾಗಿ ಧರಿಸಿದಳು ಕಂದರ್ಪನೈಯನೆ ಕಂದನಾಗಿರುವನೆಂತ್ಯೆಂದು ತಿಳಿಯದೆ ನಿದ್ರಿ ಯಿಂದಿರುವ ಸರ್ಪ ಕರದಿಂದ್ಹಿಡಪರಿ ರಜ್ಜು ಎಂದುಬ್ಯಾಗೆ 4 ಶ್ರೀನಿವಾಸನ ಜನನಿ ಮೌನ ಹಿಡಿದಳು ಕಪಟತನ ತಿಳಿಯದೆ ಬುದ್ಧಿಹೀನ ಪೂತನಿಯು ಸ್ತನಪಾನ ಮಾಡಿಸಿದಳಾ ದಾನವಾರಿಗೆ ಅವನು ಪ್ರಾಣಸಹಿತಾಗಿ ವಿಷಪಾನ ಮಾಡಿದನು| ದ್ರೂಣನಾಗಿರುವವನ ಪಾಣಿಯಲಿ ಸಿಕ್ಕು ಗತಿಗಾಣದಲೆ ಉತ್ಕøಷ್ಟ ವಾಣಿಯಿಂದಲೆ ಒದರಿ ಭ್ರೂಣಹನನಕ ಬಹಳ ಜಾಣಿ ಎಂತ್ಯೆನಿಸುವಳು ಪ್ರಾಣ್ಹೋಗಿಬಿದ್ದಳಾ ಪ್ರಾಣಿ ಪೂತನಿಯು. ಪದ:ರಾಗ :ಶಂಕರಾಭರಣ ಅಟತಾಳ, ಸ್ವರಷಡ್ಜ ಬಿದ್ದಾಳು ಪ್ರಾಣ ಹೋಗಿ ಪೂತನಿ ಜನ್ಮಗೆದ್ದಾಳು ಬಾಲಕ ಘಾತಿನಿ| ಬಂತುದೆವಾಯಿತು ಮತ್ತಲ್ಲೆ|| 1 ಗಿರಿಯಂತೆ ಆ ದೇಹ ಇರುವೋದು ಆರು ಹರದಾರಿ ಪರಿಯಂತೆ ಬಿದ್ದಿಹದು| ಕರಚರಣಗಳ್ಹರವಿ ಇರವದು ಅಲ್ಲಿ ಇರವೂ ವೃಕ್ಷಗಳೆಲ್ಲಾ ಮುರದಿಹದು|| 2 ಎರಡು ಕಣ್ಣುಗಳು| ದಾಡುವರಲ್ಲೆ ನದಿಗಳು|| 3 ಭಾವಿಯಪರಿ ತೋರುವುದು ಹೇಳುವದಿನ್ನು ಉಳದಿಹುದು ದಾನವಾರಿಯಕೊಂಡು ಕರದಿಂದ ವಿಷಪಾನ ಮಾಡಿಸಿದ ಕಾರಣಿದಿಂದ | ಹಾನಿತನಗೆ ಬಂತು ತ್ವರದಿಂದ| ಅಚುತಾನಂತಾದ್ರೀಶ ಕರದಿಂದ|5 ಪದ್ಯ ಬಾಲಕಾಕಿಯ ಎದಿಯಮ್ಯಾಲೆ ನಿರ್ಭಯದಿಂದ ಲೀತಿಯನ ಮಾಡುತಿಹ ಬಾಲಿಯರು ಬ್ಯಾಗ ಆ ಬಾಲಕನ ಕರಕೊಂಡು ಮ್ಯಾಲೆ ಗೋಮೂತ್ರದಲಿ ಬಾಲಗ್ಯರದರು ಅವರು ಭಾಳ ಸಂಭ್ರಮದಿ| ಕಾಲ ಆ ಕಾಲಕಿಟ್ಟರು ನಂದ ಬಾಲಕರನೆನಿಸುವ ಜಗತ್ಪಾಲಕಗ ರಕ್ಷಾ|| 1 ಬಾಲ ನಿನ್ನನ್ನು ಜಗತ್ಪಾಲಕನು ರಕ್ಷಿಸಲಿ| ಪದಾಗಳು ಆ ಮೂರು ಪಾದದವ ರಕ್ಷಿಸುತಾ ಜಂಘವನು ಮತ್ತ ಶ್ರೀರಂಗ ತಾ ರಕ್ಷಿಸಲಿ ಜಾನುವನು ರಕ್ಷಿಸಿ ಜಾನ್ಹವಿಜನಕಾ | ಉರುಗಳಾ ರಕ್ಷಿಸಲಿ ಉರ್ವೀಶ ಹರಿತಾನು ನಾಭಿಯನು ಶ್ರೀಪದ್ಮನಾಭ ಸಂರಕ್ಷಿಸಲಿ ಹೃದಯಗತ ಶ್ರೀ ಹರಿಯು ಭುಜಗಳನು ರಕ್ಷಿಸಲಿ ಭುಜಗಶಯನಾ||2 ಕಂಠವನು ಮತ್ತ ವೈಕುಂಠಪತಿ ರಕ್ಷಿಸಲಿ ಮುಬವನ್ನು ರಕ್ಷಿಸಲಿ ಮುಕುಟವರ್ಧನ ಹರಿಯು| ಶಿರವನ್ನು ರಕ್ಷಿಸಲಿ ಶಿರಿಯರಮಣನನು ತಾನು ಅಂಗಜನ ಜನಕ ಸರ್ವಾಂಗ ರಕ್ಷಿಸಲಿ| ಜಲಜಾಕ್ಷಿಯರು ಹೀಂಗ ಹಲವು ದೇವತಿಗಳನ ಬಲಗೊಂಡು ಮತ್ತವರ ಬಲದಿ ರಕ್ಷೆಯ ನೀಡಲು| ಜಲಜಮುಖಿ ಜನನಿ ತನ್ನ ಚಲುವ ಬಾಲಕಗ ತಾ ಮೊಲಿಕೊಟ್ಟು ಮಂಚದಲಿ ಮಲಗಿಸಿದಳವನಾ| ಖಳಕಂಸಗಾ ಕಪ್ಪುಗಳ ಕೊಟ್ಟು ನಂದ ತಾ ಇಳದ ಮನಿಯಲಿ ಇರಲು ತಿಳದು ಆ ಸುದ್ದಿ ತನ್ನ ಸ್ಥಳವನ್ನು ಬಿಟ್ಟು ಆ ಸ್ಥಳಕ ಬಂದನು ಪರಮ ಗೆಳೆಯ ವಸುದೇವ ಮನದೊಳಗ ಹಿಗ್ಗುತಲೆ|| 3 ಆರ್ಯಾ ಜಾಣನು ಆತನ ಕಾಣುತಲ್ಯದ್ದನು ಪ್ರಾಣಬರಲು ದೇಹದ ಪರಿಯು| ಪ್ರಣಾಮಮಾಡಿ ಆ ಪ್ರಾಣಯನಪ್ಪಿದ ಪಾಣಿಹಿಡಿದು ಗೋಕುಲ ಧೊರಿಯು|| 1 ಆಮ್ಯಾಲಿಬ್ಬರು ಪ್ರೇಮದಿ ಕುಳಿತರು ಕ್ಷೇಮವಿಚಾರ ಮಾಡುತಲೆ| ಆಮ್ಯಾಲ ಶೌರಿಯು ಕೋಮಲ ಹೃದಯದಿ ತಾ ಮಾತಾಡಿದ ಪ್ರೇಮದಲೆ|| 2 ಪದ:ರಾಗ:ಶಂಕರಾಭರಣ ತಾಳ:ಭಿಲಂದಿ ಸ್ವರ:ಪಂಚಮ ಸಕಲ ಜನರು ನಂದಗೋಪ ಸುಖದಲಿರುವರೆ ಸಖನೆ ನಿನ್ನ ಮನಿಗೆ ಭಾವುಕರು ಬರುವರೆ|| ಪ ದೃಷ್ಟ ವಿಷಯನಾದಿ ನೀ ಅದೃಷ್ಟಯೋಗದಿ| ವೃಷ್ಟಿ ಮಾಡಿದಿ|| 1 ನಿನಗ ಪುತ್ರನಾದ ಸುದ್ದಿ ಎನಗ ಮುಟ್ಟಿತು | ನನಗೆ ಕಡೆಯ ಪುತ್ರನವನೆ ನಿನಗೆ ಒಪ್ಪಿತು|| 2 ಸಕಲರಿಂದ ಕೂಡಿ ಅವನು ಸುಖದಲಿರುವನೆ ಸಕಲ ಜನರಿಗ್ಯವನು ಪ್ರಾಣಸಖನು ಆದನೆ|| 3 ಅಲ್ಯೆ ಗೋಗಳೆಲ್ಲ ರೋಗ ಇಲ್ಲದಿರುವವೆ| ಹುಲ್ಲು ನೀರಿನಿಂದ ಸೌಖ್ಯದಲ್ಲಿ ಇರುವವೆ|| 4 ಚನ್ನಿ ಗಾನಂತಾದ್ರೀಶನ್ನ ನೆನುವರೆ 5 ಆರ್ಯಾ ಛಂದಾಗ್ಯವ ಹೀಗೆಂದ ಮಾತು ಆನಂದಗೋಪ ತಾ ಕೇಳುತಲೆ| ಮುಂದಾ ಶೌರಿಯಮುಂದ ನುಡದನು ಮಂದಹಾಸ್ಯದಲಿ ನಗುವುತಲೆ|| 1 ಪದ, ರಾಗ :ಮುಖರಿ ತಾಳ :ಆದಿ ದುಃಖವು ಸುಖಕಾರಿಯೆ ಪ ಎನಗೆ ತಿಳಿನೀನು|| 1 ಹಿಂದಿನ ದುಃಖ ಹಿಂದೆ ಹೋಯಿತು | ತಿಳಿ ಮುಂದ ನಿನಗೆ ಸೌಖ್ಯವಾದೀತು|| 2 ಚಿಂತಿಮಾಡಲಿ ಬ್ಯಾಡಾ ವಸುದೇವಾ| ಚಲುವಾನಂತಾದ್ರೀಶನೆ ದಯ ಮಾಡಿರುವಾ|| 3 ಆರ್ಯಾ ನಂದ ಗೋಪನಾನಂದ ವಚನಗಳ ಛಂದದಿ ಕೇಳುತ ವಸುದೇವಾ | ಮುಂದ ನುಡದ ಹೀಗಂದು ಮತ್ತ ತ್ವರದಿಂದ ತನ್ನ ಹೃದ್ಗತ ಭಾವಾ || 1 ಪದ ರಾಗ:ಸಾರಂಗ ಆದಿತಾಳ ಸ್ವರ:ಷಡ್ಜ ಭಿಡಯಾ ಬಿಟ್ಟ ಹೇಳುವೆ ಎನ್ನ ನುಡಿಯು ಲಾಲಿಸಿ|| ಪ ಉತ್ತಮ ಕೇಳಿನ್ನಾಮಗನಾ ಉತ್ಪತ್ತಿ ಕಿವಿಯಿಂದ ಕೇಳಿ| ಉತ್ಪನ್ನವಾದಾವು ಬಹಳ ಉತ್ಪಾತಗಳು|| 1 ಕಂಸನ ಅಂಜಿಕೆಯಿಂದ ಸಂಶಯ ಬಿಡುವÀಲ್ಲದಿನ್ನು| ಸಂಸಾರದೋಳ್ಸುಖವು ಸ್ವಲ್ಪಾ ಸಂಶಯವೆ ಭಾಳಾ||2 ಮುಟ್ಟಿತು ಕಂಸಗ ಕಪ್ಪ ಭೆಟ್ಟಿ ಆಯಿತು ನಿಮ್ಮನು| ಘಡ್ಯಾಗಿ ಅನಂತಾದ್ರೀಶನ ಮುಡ್ಡಿ ಭಜಿಸುತ|| 3 ಪದ್ಯ ಯಾದವನ ಮಾತಿಗ್ಯನು ಮೋದವನು ಬಟ್ಟು ನಂದಾದಿಗಳು ಗೋಕುಲದ ಹಾದಿಯನು ಹಿಡಿದು ಪರಮಾದರದಿ ನಡದರು. ಅಗಾಧವಾಗಿಹ ದೇಹ ಹಾದಿಯಲಿ ಬಿದ್ದಿಹುದು ಹಾದಿಯನು ಕಟ್ಟಿ| ಆ ದೇಹ ನೋಡುತ ಅಗಾಧ ಬಟ್ಟವರು ಅಲ್ಯಾದದ್ದು ಮನದಲ್ಲಿ ಶೋಧಿಸ್ಯಂದರು ಹೀಗೆ | ಸಾಧು ವಸುದೇವ ಹುಸಿ ಆದದ್ದು ಉಂಟೇ| 1 ಪರಿ ಅವರು ಕೊಡಲಿಯನು ಕೊಂಡು ಕಡಕಡದು ಈ ದೇಹವನು ಸುಡಲು ದೂರದಲಿಟ್ಟು ಕಡೆ ಬಿಡದೆ ಆಕಾಶಕ್ಕೆ ಅಡರಿತಾಗೆ| ಖಡುಪಾಪಿ ಪೂತನಿಯು ಕುಡಲು ವಿಷ ಮೊಲಿಯನ್ನು ಕುಡುದು ಸದ್ಗತಿಕೊಟ್ಟ ತಡವಿಲ್ಲದಲೆ ಹರಿಯು ದೃಢಭಕ್ತಿಯಿಂದಲೆ ಕಡಿಗೆ ಕ್ಷೀರಾದಿಗಳು ಕೊಡಲು ಸದ್ಗತಿಯನ್ನು ಕುಡವದೇನÀದು|| 2 ಶೌರಿಸಖನಂದ ಪರಿವಾರ ಸಹಿತಾಗಿ ತಾ ಈ ರೀತಿ ಉತ್ಪಾತ ಮೀರಿ ಮನಿಯಲಿ ಬಂದು ಪೂರ್ವದಲಿ ಆಗಿಹ ಅಪೂರ್ವ ವೃತಾಂತವನು ಪೂರ ಕೇಳ್ಯಾಶ್ಚರ್ಯ ಪೂರಿತನು ಆಗಿ ವೈರಿ ಪೂತನಿಯ ಸಂಹಾರಿಯಾ ಕರಕೊಂಡು| ಚಾರುಮುಖ ನೋಡಿ ಸುಖಪೂರನಾದಾ | ಈ ರೀತಿ ಚರಿತವನು ಆರು ಕೇಳುವರು ಅವರ ಘೋರ ದುರ್ಷಟವೆಲ್ಲ ದೂರಾಗಿ ಹೋಗುವದು ಶುಭಚನ್ಹ ಚಾರ್ವನಂತಾದ್ರೀಶ ಮೂರುತಿಯು ಮುಗಿಸಿದಿದು ಭಾಗವತ ದಶಮಸ್ಕಂಧ 3 ಪೂತನಾದಧೋ ನಾಮ ತೃತಿಯೋಧ್ಯಾಯಃ| || ಶ್ರೀ ಕೃಷ್ಣಾರ್ಪಣಮಸ್ತು|| || ಮೂರನೆಯ ಅಧ್ಯಾಯವು ಸಂಪೂರ್ಣ||
--------------
ಅನಂತಾದ್ರೀಶ - ಕಥನಕಾವ್ಯಗಳು
ಗುರುಬೋಧ ಪರಮಸುಖಕಾರಿ ಬಾರಿ ಬಾರಿಗೂ ಕೇಳೈ ಭವರೋಗೀ ಪ ಬಿಡು ಬಾಳಿನ ಭ್ರಮೆಯ ಸಂಸಾರಿ ದುಃಖದ ಬಾಳಿದು ವಿನಾಶಕಾರಿ ಇದರೊಳು ಸಿಗುತಿಹ ಸುಖವು ವಿಕಾರಿ ತಿಳಿಯೈ ಮುಕ್ತನಾಗಲಿದು ದಾರಿ 1 ಆರಿ ನಿನ್ನಯ ನಿಜವಾ ಸುವಿಚಾರಿ ಅರಿವೇ ನಿನ್ನಯ ಈ ಭವತಾರಿ ಬೇರಾವುದು ನಿನಗಾಗದು ದಾರಿ ಈ ನುಡಿ ಪೇಳುತಿಹುದು ಶೃತಿಸಾರಿ 2 ಜಾಗರಾ ಕನಸು ನಿದ್ರೆಯ ಮೀರಿ ಅಮರವಾಗಿರುವ ಪದವನೆ ತೋರಿ ಅದೆ ನೀನೆನ್ನುತ ಪರಿಪರಿ ಸಾರಿ ಶಂಕರಭೋಧವಿದುವೆ ಭವಹಾರಿ3
--------------
ಶಂಕರಭಟ್ಟ ಅಗ್ನಿಹೋತ್ರಿ
ತಂದೆ ನೀನಹುದೆಂಬುದೆಂದಿಗು ದಿಟವಯ್ಯ ಇಂದಿರೆಯರಸ ಜೀಯಾ ಕುಂದುಕೊರತೆಗಳನೊಂದು ನೋಡದೆ ಕೃಪೆ ಯಿಂದ ನಿನ್ನಂತೆ ರಕ್ಷಿಪರುಂಟೆ ರಘುರಾಯ ಪ. ತನಗನುವಾಗಿರೆ ತೋಷಬಡುವ ತಾತ ಕೊನರಿಕೊಂಬುವ ಕಷ್ಟಕಾಲದಲಿ ವನರುಹದಳನೇತ್ರ ವಾರ್ಧಿಬಂಧನ ನೀನು ನೆನೆದಬೀಷ್ಟವ ಕೊಟ್ಟು ನಿರ್ಮಲ ಪದವೀವಿ 1 ಅಘಟಿತಾಘಟಕನೆ ಆದಿ ಪರುಷಮಹ- ದಘನಿವಾರಣ ಶಕ್ತ ಗುಣವಾರಿಧೆ ಸ್ವಗತ ಮಾನಸ ಶಬರಿಯ ಸಲಹಿದ ನಮ್ಮ ರಘುಕುಲತಿಲಕ ರಾವಣವೈರಿ ಸುಖಕಾರಿ 2 ಮುಪ್ಪುರ ಹರ ಜಪಿಸುವ ಮೂಲ ಮಂತ್ರೇಶ ಅಪ್ಪ ನೀನಹುದೆಂಬ ನಿರ್ಣಯವ ತಪ್ಪದೆ ಬಿನ್ನಹ ಒಪ್ಪಿಲ್ಲಿ ನೆಲೆಯಾಗು ಸರ್ಪಾದ್ರಿನಿಲಯಾ ತಿಮ್ಮಪ್ಪ ಚಿಂತಿತದಾತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶರಣು ಶಾರದೆ ವಾಣಿ ಪಡರಮಾನಂದದ ಕೇಣಿ ಸುರಸಕಲ ಕೀರ್ವಾಣಿ ಕಲ್ಯಾಣಿ 1 ವಿದಿತ ಸುವಿದ್ಯದಾನಿ ಸದಮಲ ಸುಪ್ರವೀಣಿ ಮದಮತ್ತಗಜಗಾಮಿನಿ ಕಲ್ಯಾಣಿ 2 ಸ್ಪಹಿತ ಸುಖಕಾರಿಣೀ ಸಹಕಾರಿ ನಿರಂಜನ ಮಹಿಪತಿಸುತ ಸ್ವಾಮಿನೀ ಕಲ್ಯಾಣಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕ್ಷಣಕೆಲವಕೆ ನೆನೆ ಹರಿಯ ಮನವೆಕ್ಷಣಕೆ ಲವಕೆ ಹರಿಯ ಪ.ಮನಕೆ ಶ್ರುತಿಗಳಿಗೆ ದೊರೆಯಶಶಿದಿನಕರವಂಶಕೆ ಹಿರಿಯಘನಕಲುಷದೊಳವತಾರಿಯ ಪೆತ್ತಜನಕ ತಿರುಮಲೆಯ ದೊರೆಯ 1ಕನಕಾಂಗಿಯಳ ಸಿರಿಯಭವಕನಕೋದರರಿಗೆ ವರಿಯಮುನಿಕುಲಕಾಂತಿ ಅತಿಪರಿಯ ತನ್ನಜನಕನ ವರಕುಪಕಾರಿಯ 2ಜನಕನಳಿಯ ಖಳರರಿಯದಿನದಿನಕೆ ಲಾವಣ್ಯದ ತೆರೆಯಸನಕಾದ್ಯರ ಮನೋಹರಿಯವೈರಿನಿಕರದ ಕದಳಿಗೆ ಕರಿಯ 3ಮೀನ ಕಮಠಾದ್ಯವತಾರಿಯ ಭುವನಕೊಬ್ಬನೆ ಸುಖಕಾರಿಯಧನು ಕರದಿ ಮುರಿದ ಶೌರಿಯಮಾವನಕೆಡಹಿದ ಹೊಂತಕಾರಿಯ4ತನ್ನ ಕರುಣಕೆನಿತ್ಯಗುರಿಯಾಗಿಹನ ಕಾಯುವನು ಪರಂಪರೆಯಎನ್ನ ಕುಲದೈವ ಮೇಲ್ಗಿರಿಯ ಪ್ರಸನ್ನವೆಂಕಟಕೃಷ್ಣ ನಮ್ಮ ಮರೆಯ 5
--------------
ಪ್ರಸನ್ನವೆಂಕಟದಾಸರು
ಭಳಿ ಭಳಿರೆ ಭಳಿರೆ ಹನುಮಭಳಿ ಭಳಿರೆ ಋಜುನಿಕರ ಮಕುಟಮಣಿ ಪ.ಅಂಜನಿಜಠರಸಂಜನಿತಪ್ರಾಜÕಮೌಂಜಿಯುತಕೋದಂಡಧೃತಕರಕಂಜನೆದುರಲಿ ಪ್ರಾಂಜಲಿತ ಬಹುಭಕುತಿ ಅಭಿನಯಅಚ್ಛಿನ್ನ ಅಚ್ಚಿನೊಳು ಶುಭಚಿಹ್ನಪಾವನ್ನಗುಣರನ್ನ ಪರಿಪೂರ್ಣಅ.ಪ.ತಾಟಕಾಂತಕ ಭಟರೊಳು ನೀಮೀಟೆನಿಸಿ ಧೀಂಕಿಟ್ಟು ಶರಧಿಯದಾಂಟಿದವನಿಜೆ ತೋಷಕಾರಿ ಅಶೋಕವನಹಾರಿಕೋಟಿ ಕೋಟಿ ನಿಶಾಟ ಹೃದಯಸ್ಫೋಟಕಕ್ಷಯ ಪಾಟವಕರಿತ್ತಟಕೇಸರಿಕಟಿತಟದಿ ಕರವಿಟ್ಟ ಹನುಮದಿಟ್ಟ ವಿಕಟ ಖಳಕಳ ಪಟಾರ್ಭಟಪಟು ಹರಿದ್ವಿಟ್ಟದ್ವಿಟ್ಟು ಚಟುಲವಟು 1ವೀರ ಸಮೀರಕುಮಾರ ಪಾರಾವಾರ ಚರಿತ ಮಾರಜಿತಘನವಾರಿಜೋದ್ಭವಶರಕೆ ಮನ್ನಿಸಿದೇರಿದೌದಾರಿಈರೈದು ಮುಖದವನ ಪುರಪ್ರಸರಾಗಾರವನುರುಹಿ ರಘುಜನಚಾರುಚರಣವ ಕಂಡ ಪ್ಲವಗಪ್ರಚಂಡಶುಭತುಂಡಬಾಲದಂಡಅಗಣಿತಲೆಂಡರ ಖಂಡಪುಂಡರಗಂಡಗಂಡಭೈರುಂಡುದ್ದಂಡ2ಜೀವಜಾಲರ ಜೀವ ವಿಪ ಮಹಾದೇವ ಮುಖ್ಯರ ದೇವ ಚತುರ್ದಶಭುವನಾಶ್ರಿತ ಭೂತಭರ್ಗಸದಾವಿರತಿಭರಿತಾಆವಜನುಮಜ್ಜನುಮ ಎನಗೆನೀ ಒಡೆಯನಾಗ್ಯಾಳುತ ನನಗೀವುದೆಲೆಗುರುಪರಮಭಾಗವತಾರ್ಯ ಆಚರಿಯಹರಿಯ ಕಾರ್ಯಕಕ್ಕರದ ಹಿರಿಯಪರಮವೀರ್ಯಾಚ್ಚರಿಯ ಸಚ್ಚರಿಯ3ಹರಿಸೇವ್ಯಂಗೀಕರಿಸಿ ಒಡನವತರಿಸಿ ಆಜÕಂವೆರಸಿ ಅಟ್ಟಿದಹರಸಿ ಮದಮತ್ತರಿ ಸಮೂಹ ಭಯಹರಿಸ್ಯಭಯ ಧರಿಸಿಹರಿಶುಭಚರಣ ಸರಸಿಜದಿ ಶಿರವಿರಿಸಿ ಸುಗಿರೋಚ್ಚರಿಸಿ ಅಖಿಳೊಪ್ಪಿರಿಸಿ ವಿಷಯ ಸ್ಪರ್ಶವಿಲ್ಲದ ಅರಸ ನೀನೆ ಕಣಾ ಜಾಣರೊಳು ಜಾಣ ಪ್ರಾಣಮುಖ್ಯಪ್ರಾಣಕೇಣಿಗರಗಂಟಲಗಾಣ ಪ್ರವೀಣ ಹನುಮ4ವಾಸವಾರಿಯ ಘಾಸಿಗಂದು ಕಪೀಶರಳಿದಿರಲಾಸಮಯದೊಳೌಷಧವ ತಂದಾಸಮರ್ಥರ ಪೊರೆದ ಕಪಿವರದಶ್ರೀಶ ವರದ ಪ್ರಸನ್ನವೆಂಕಟಾಧೀಶ ಭೃತ್ಯೋಲ್ಲಾಸ ಅಜಪದಧೀಶ ಮೂರವತಾರಿ ಸುಖಕಾರಿ ಸದಾಶೂರಿ ಸಮೀರ ಕುಮಾರ ಭಾರತ ಧೀರಸಾರಯಂತ್ರೋದ್ಧಾರ ತತ್ವವಿಚಾರ5
--------------
ಪ್ರಸನ್ನವೆಂಕಟದಾಸರು
ಶರಣು ಶುಭಾಮಲಕಾಯ ಋಜುಗಣಾಭರಣಾನಂದ ಮುನಿರಾಯಹರಿಗುಣಗಣವಾರಿಧಿಮಗ್ನನೆ ಜಯಪರಮಪದಜÕನೆ ಜಯತು ಸದಾ ಜಯ ಪ.ಶುಕ್ಲರುಧಿರನಿರ್ಲಿಪ್ತ ಪರತತ್ವಕ್ಲುಪ್ತನೆ ತ್ರಿಜಗವ್ಯಾಪ್ತಅಕ್ಲೇಶಾನ್ವಿತ ಮಾಯಾಮನಹರಅಜÕಜನೋದ್ಧರ ಜಯತು ಸದಾ ಜಯ 1ಶಲ್ಯರಾಜನ ಭಟಹಾರಿ ಮಹಾವಾತ್ಸಲ್ಯಾಂಕಿತ ಸುಖಕಾರಿಬಾಲ್ಯತನದಿ ಜಗದ್ಗುರುವೆನಿಸಿದೆ ಕೈವಲ್ಯದಾಯಕ ಪ್ರಭು ಜಯತು ಸದಾ ಜಯ 2ಸೂತ್ರಾರ್ಥದ ಧೀ ಮಾತ್ರದೇಹಿ ವಿಧಾತೃ ಜನಕ ಪದಪ್ರೇಮಪಾತ್ರಪೌತ್ರ ಪ್ರಸನ್ನವೆಂಕಟಪತಿ ಪೂರ್ಣವೇತೃ ನಂಬಿದೆ ಜಯತು ಸದಾ ಜಯ 3
--------------
ಪ್ರಸನ್ನವೆಂಕಟದಾಸರು