ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಭಾಗೀರಥಿದೇವಿ ಜಯ ಜಾನ್ಹವಿ | ಭವ ಭಯನಿವಾರಿಣಿ ಸುಖಕಾರಣಿ ಪ ಪಟು ತ್ರಿವಿಕ್ರಮನ ಉಂಗುಟ ಸೋಂಕಲಾರ್ಭಟದಿ | ಸ್ಫುಟಿತ ಬ್ರಹ್ಮಾಂಡ ನಿಜಕಟಹದಲ್ಲುದಿಸಿ | ನೆಟನೆ ಪದುಮಜಪಾತ್ರ ತಟಕೆೃದು ತೀರ್ಥೆನಿಸಿ | ನಿಟಲಲೋಚನ ನಘನಜಟೆಗೆ ಬಂದು 1 ಕೆಲವು ಕಾಲಕೆ ಹಿಮಾಚಲದಿಂದ ಭಗೀರಥಗೆ | ಒಲಿದು ಕಾಶೀ ಪ್ರಯಾಗದಲಿ ಬಂದು | ಸಲೆಜಗವ ತಾರಿಸುತಲಿ ಮುಖ ಸಹಸ್ರದಿಂ | ಫಣಿ ನಿಲಯಕಿಳಿದೇ2 ಸ್ಮರಣೆಯಿಂದಘಹರಿಪೆ ದರುಶನದಿ ಗತಿಯೀವೆ | ನೆರೆ ಸ್ನಾನದಾ ಫಲವನರಿವರಾರು | ಗುರುಮಹೀಪತಿಜನುದ್ಧರಿಸು ಕರುಣದಲಿ | ಸಾಗರಪ್ರೀತೆ ಖ್ಯಾತೆ ಲೋಕಮಾತೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಾರಾಯಣ ನಾರಾಯಣನಾರಾಯಣ ನಳಿನೋದರ ಪ ನಾರದಪ್ರಿಯನಾಮ ಜಯನಾರಾಯಣ ನರಕಾಂತಕಅ.ಪ. ಸುರಸಂಚಯ ಸುಖಕಾರಣ ದಿತಿಜಾಂತಕ ದೀನ ಶರಣಪರಾತ್ಪರ ಪಾಂಡವಪ್ರಿಯ ಪರಿಪೂರ್ಣ ಪರಮ ಜಯ1 ಅಘಕುಲವನದಾವಾನಲ ಅಗಣಿತಗುಣಗಣನಿರ್ಮಲತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ2 ಅತಿಮೋಹನಚರಿತ ನಮೋ ಅತಿ ಸದ್ಗುಣಭರಿತ ನಮೋಹತ ಕಲ್ಮಶ ಹಯವದನ ಹರಿ ಹಯರಿಪುಹರಣ ಜಯ 3
--------------
ವಾದಿರಾಜ
ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ. ಪಾದ ದಾನವ ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ 1 ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ ಮನದೊಳಗಿಂಬುಗೊಳು ಕಮಲಾಂಬಕ 2 ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ 3 ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ 4 ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ 5 ಮುಳುಗಿಕೊಂಡಿಹ ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ 6 ದೈತ್ಯನ ತರಿದು ಬಿಸುಟು ವಿ- ಜನಿತ ಪವಿತ್ರ ಯಜ್ಞ ವರಾಹನೆ 7 ಘಡುಘಡಿಸಿ ಕಂಬದೊಳು ಬಂದ ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ 8 ದಾನಕೊಂಡನಾನೆವನದಿ ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ 9 ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ ನೃಪರ ಕಡಿದ 10 ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ 11 ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ 12 ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ 13 ಸುಧೆಯನು ಕರೆದು ಶಿರದಲಿ ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ 14 ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ 15 ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು 16 ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ- ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ 17 ಬಳಲಿ ಕರ್ಮವ ಮಾಡಲಾರೆ ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ 18 ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ 19
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ ಪ. ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕನಾರಾಯಣ ನಳಿನೋದರಾ ಅ.ಪ. [ಸುರಸಂಚಯ]ಸುಖಕಾರಣ ದಿತಿಜಾಂತಕ ದೀನಶರಣಮರುತಪ್ರಿಯ ಪಾಂಡವಪ್ರಿಯ ಪರಿಪೂರ್ಣ ಪರಮ ಜಯ1 ಅಘಕುಲವನದಾವಾನಳ ಅತಿಸದ್ಗುಣಗಣ ನಿರ್ಮಲತ್ರಿಗುಣಾತೀತ [ತ್ರಿದಶೇಶ್ವರ]ವಂದಿತ ಜಯ2 ಅತಿಮೋಹನಚರಿತ ನಮೊ ಅತಿಸದ್ಗುಣ ಭರಿತ ನಮೊಹತರಿಪುಪೂರ್ಣಂ ಜಯ ಗತಕಲ್ಮಷ ಹಯವದನ 3
--------------
ವಾದಿರಾಜ