ಒಟ್ಟು 12 ಕಡೆಗಳಲ್ಲಿ , 9 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಹೇಳದೆ ಹೋದಿ ಹಂಸ ಪ. ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ ನೋಳ್ಪರೆ ಒಂಬತ್ತು ಬಾಗಿಲು ಬೇರಿಗೆ ಹೇಳಿ ಹೋಯಿತೆ ಒಂದು ಮಾತ 1 ಏರಿಯು ನೀರನು ತೆಗೆದುಕೊಂಡಿದ್ದೇನೊ ಭೋರೆಂಬೋ ಮಳೆ ಹೊಯ್ದು ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ ಏರಿಗೆ ಹೇಳಿಹೋಯಿತೆ ಒಂದು ಮಾತ 2 ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು ಇಟ್ಟಿತ್ತು ಜೇನು ತನ್ನ ಸುಖಕಾಗಿ [ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ 3 ಹೆಸರು ಹೇಳುವೆ ನಾನನುದಿನವು ರಸಭೋಜನವವುಂಡು ಜೋತಿತಾಹೋಗುವಾಗ ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ 4 ಸಪರ್Àಶಯನ ಹಯವದನನಾಡಿದ ಮಾತು ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ ಚಿಪ್ಪಿಗೆÀ ಹೇಳಿ ಹೋಯಿತೆ ಒಂದು ಮಾತ 5
--------------
ವಾದಿರಾಜ
ಏಕ ಚಿಂತಿಸಲಯ್ಯ ಈ ಜಗದ ಸುಖಕಾಗಿ ಸಾಕು ಇದರೊಳು ಸುಖದ ಲೇಶವನು ಕಾಣೆ ಪ ಒಂದು ಸುಖ ಬಯಸಿದೊಡೆ ಹಿಂದೆ ನೂರೆಂಟಾಗಿ ಸಂದಣಿಪ ದುಃಖಗಳು ಬಂದು ಒದಗುವವಿದಕೆ ಎಂದಿಗೂ ಬಯಸೆನಾ ಈ ತೆರೆದ ಸುಖವನ್ನು ಹಿಂದಿನಾ ಕರ್ಮದಂತಾಗುತಿರುವುದಕೆ 1 ಮೊದಲು ಸವಿಯಾಗಿಹುದು ತುದಿಯಲಿದು ವಿಷವಹುದು ಬದಲಾಗುತಿಹ ಇಂಥ ಸುಖ ಬೇಡವೆನಗೆ ಮೊದಲುಕೊನೆ ಇಲ್ಲದಿಹ ಸದಮಲಾನಂದವಹ ಪದವ ಮರೆಯಿಸುತಿರುವದಿದು ಬೇಡವೆನಗೆ 2 ಅನಿಸಿಕೆಯೆ ಕೂಡಿರುವ ಈ ಸುಖವು ನಿಜವಲ್ಲ ಮನವಾಣಿಗಳಿಗಾಚೆಗಿಹ ಸುಖವು ನಿಜವು ತಾನೆ ಸುಖರೂಪನೆಂದನಿತರೊಳು ನಿಶ್ಚಯಿಸಿ ಜ್ಞಾನಿಶಂಕರನೆ ನಾನಾದ ಮೇಲಿನ್ನು 3
--------------
ಶಂಕರಭಟ್ಟ ಅಗ್ನಿಹೋತ್ರಿ
ಗಾಢದಿಂ ಹರಿಯೇ ಪ ಹರಿಸದನಕ್ಕೆ ಹೋಗದ ತಪ್ಪು ಅಗ್ರೋದಕ ತಾರದೇ ಬಿಟ್ಟ ತಪ್ಪು ಸದಮಲಸುಜ್ಞಾನದಿ ಹರಿ ಕೀರ್ತನೆ ಕೇಳದೆ ಬಿಟ್ಟೆನ್ನ ತಪ್ಪು 1 ಸ್ನಾನ ಜಪವನು ಬಿಟ್ಟು ಕುಪಿತನಾಗಿ ಕಪಿಯಂತೆ ತಿರುಗಿದ ತಪ್ಪು ಅಪರಿಮಿತ ದ್ರವ್ಯ ಅಪಹರಿಸಿ ಕೆಟ್ಟ ಅಪಕೀರ್ತಿ ಹೊತ್ತೆನ್ನ ತಪ್ಪು ಅನುದಿನ ಸ್ನಾನ ಸಂಧ್ಯಾದಿಗಳನು ಬಿಟ್ಟ ತಪ್ಪು 2 ಮನಿ ಮನಿ ತಿರುಗಿದ ತಪ್ಪು ತನು ಸುಖಕಾಗಿ ವನಿತೇರ ರಮಿಸಿನಾ ಘನ ಪಾಪ ಮಾಡಿದ ತಪ್ಪು ಅನುದಿನದಲಿ ಹನುಮೇಶ ವಿಠಲನ ನೆನೆಯದೆ ಬಿಟ್ಟ ತಪ್ಪು 3
--------------
ಹನುಮೇಶವಿಠಲ
ಗೆಲವ ನೀಡೆನಗೆ ಇಹ್ಯದ ಗೆಲವ ನೀಡೆನಗೆ ಪ ಗೆಲವ ನೀಡಿಯೆನ್ನ ಮಲಿನಬಿಡಿಸಿ ನಿನ್ನ ವರ ದಿವ್ಯಪಾದನಳಿನದೊಲುಮೆಯಿತ್ತು ಅ.ಪ ಎಡರು ಆವರಿಸಿದ ಕಾಲದಿ ದೈರ್ಯವ ದಯಮಾಡೊ ಸಡಗರಸಿರಿ ಬಂದ ಕಾಲದಿ ಶಾಂತಿ ವಿನಯ ಕೊಡೊ ಕಡುಜವ್ವನದಲಿ ದುಡುಕನುಕೊಡದಿರು ಪಿಡಿದು ನೇಮವನು ಬಿಡದ ಛಲವನಿತ್ತು 1 ಧರಣಿಯ ಸುಖಕಾಗಿ ಎನ್ನಿಂ ಪುಸಿಯ ನುಡಿಸದಿರೋ ಹರಣಪೋದರು ಪರರಿಗೆ ದೇಹಿಯೆನಿಸದಿರೋ ಪರಮಹರುಷದಿಂದ ಹರಿಶರಣರು ಮೆಚ್ಚಿ ಶಿರವದೂಗುವಂಥ ನಿರುತವರ್ತನೆಯಿತ್ತು 2 ಸತತದಿ ಕರ್ಣಕ್ಕೆ ಹರಿಕಥೆ ಕೀರ್ತನೆ ಕರುಣಿಸೊ ಪತಿತಪಾವನವೆನಿಪ ಭಜನಾನಂದವ ಪಾಲಿಸೊ ಕ್ಷಿತಿಯೋಳಧಿಕ ಸದುಗತಿ ಮೋಕ್ಷಾಧಿ ಪತಿ ಶ್ರೀರಾಮ ನಿಮ್ಮ ಪಾದಭಕ್ತಿಯಿತ್ತು 3
--------------
ರಾಮದಾಸರು
ನೀನೆನಗೆರವೆ ನಾನಿನ್ನೆಂತಗಲುವೆಬಾ ನನ್ನ ತನುವೆ ಸದ್ಗುರುವಿಗೊಂದಿಸುವರೆ ಪಮೊದಲಿಗಮಿತ ದುಷ್ಟತನುಗಳ ಸಂಗದಿಕುದಿದು ಸಂಸಾರಾಗ್ನಿಯೊಳು ಬಳಲಿದೆನುಅದರಿಂದ ನಿನ್ನ ನಿಗ್ರಹಿಸಿದೆನಲ್ಲದೆಪದರದಿರೆನ್ನೊಳು ಪಡೆಯೆ ನಿನ್ನೊಂದನೂ 1ಗುರುಸೇವೆಗಲಸದೆ ಛಳಿಮಳೆಯೆನ್ನದೆಬರಿಯ ಬಯಲ ಸಂಸಾರ ಭೋಗದಲಿಎರಗದಿರೆನ್ನ ದಾರಿಗೆ ಬಾ ನಿನ್ನಾರೈಕೆುರಲೆನ್ನೊಳಿನ್ನು ತಪಿಸಿ ಕಂಗೆಡಿಪುದಿಲ್ಲ 2ಶ್ರವಣ ಸುಖದಿ ನನ್ನ ಬೆರೆದು ಬೇರಾಗದೆಭವಶರಧಿಯ ದಾಂಟುನಂತೆ ನೀ ಮಾಡುವಿವರಿಸಿ ಹರಿಗುಣ ಕಥೆಗಳನೆಮ್ಮೊಳುಕವಿದಿಪ್ಪ ತಮವ ತೊಲಗಿಸಿಕೊಂಬ ನಾವಿನ್ನು 3ನಿನ್ನಿಂದ ಸಂಸಾರ ವಿಷಯ ಸುಖದ ಲಾಭನಿನ್ನಿಂದ ಕೃಛ್ರಾದಿ ತಪಸಿನ ಲಾಭನಿನ್ನಿಂದ ಸತ್ಕರ್ಮತೀರ್ಥಯಾತ್ರೆಯ ಲಾಭನಿನ್ನಿಂದ ವೈರಾಗ್ಯ ಭಾಗ್ಯದ ಲಾಭ 4ನಿನ್ನೊಳಗಿರುವಿಂದ್ರಿಯಂಗಳಿಂದ್ರಿಯಗಳೊಳುಣ್ಣುವ ಮನ ಮನದೊಳು ಕೂಡ್ವ ಜೀವಎನ್ನುವರೆನ್ನನೆನ್ನಿರವನರಿಯೆನಿದನಿನ್ನಿಂದ ಗುರುಕೃಪೆವಡೆದು ತಿಳಿಯಬೇಕೂ 5ನೆವವಿಲ್ಲದುಪಕಾರಗೈವೆ ನೀನೆನಗಾಗಿವಿವಿಧ ಭೋಗದ ಸುಖವೆನಗೆ ನಿನ್ನಿಂದವಿವರಿಸೆ ನಿನಗೆ ಉಂಟು ಲಾಭವು ಮತ್ತೆನವೆವೆಯಲ್ಲದೆ ವೃದ್ಧಿಯಾಗುವೆಯಾ ಪೇಳು 6ನಿನ್ನಿಂದ ಸುಖಬಟ್ಟು ನಿನ್ನ ಬಾಳಿಸಲಾರದೆನ್ನನುಳುಹುವದೆಂತನ್ಯಾಯ ಸುಖವುಉಣ್ಣುವರಾರಿದನುಂಡು ಬದುಕಿರುವಅಣ್ಣನ ತಿಳಿಯಲು ಗುರುವೆ ಗತಿ ಕಂಡ್ಯಾ 7ವಂದಿಸಿಯೂಳಿಗಗೈವಲ್ಲಿಯಲಸದೆದಂದುಗ ಸುಖಕಾಗಿ ದಾರಿದೆಗೆಯದೆಒಂದಾಗಿ ಯೆನ್ನೊಳಿದ್ದರೆ ನನ್ನ ಸುಖವ ನಾಹೊಂದಲು ನಿನಗಾನಂದವಪ್ಪುದೆ ಕೇಳು 8ಮರುಗಿ ಮನದಿ ನಮ್ಮ ಮರವೆಯಾಟವ ಕಂಡುತಿರುಪತಿ ವೆಂಕಟರಮಣನು ತಾನೆಗುರುವಾಸುದೇವಾರ್ಯನಾಗಿಹನಾತನಚರಣವ ಮರೆಯೊಕ್ಕು ಬದುಕುವ ನಡೆಬೇಗ 9ಕಂ||ಜೀವನ ನುಡಿಯನು ಲಾಲಿಸಿಭಾವದಿ ಸರಿಬಂದ ಬಗೆಯ ಕಾಣದೆ ಗರ್ವದಿತಾವೊಲಿವರೆ ಮನಬಾರದುನೀವೊಬ್ಬನೆ ಸಾಧಿಸೆನೆ ಮನ ಕೆರಳಿ ನುಡಿದುದೂ
--------------
ತಿಮ್ಮಪ್ಪದಾಸರು
ಪೋಗದಭಿಮಾನವೇಗೈವೆನಕಟಾಆಗದಾನಂದಪದ ಇದರಿಂದಲಕಟಾ ಪತನುವೆನ್ನದೆಂದು ಪೋಸಿ ಪೊರೆದಫಲವೇನುಧನವೆನ್ನದೆಂದು ಸಾಧಿಸಿದುದೇನುಮನವೆನ್ನದೆಂದು ಮತಿಯನು ಪಡೆದ ಬಗೆಯೇನುಅನುಕೂಲವಾಗಿ ಬಾಳಿಸಿದುದೆ ತಾನು 1ವನಿತೆಯೆನ್ನವಳೆಂದು ಒಡಲಾದ ಬಗೆಯೇನುತನುಜರೆನ್ನವರೆಂದು ತಡಿಗಂಡುದೇನುಮನುಜರೆನ್ನವರೆಂದು ಮೃತ್ಯುತೊಲಗುವದೇನುಇನಿತು 'ಧದಲಿ ಸುಖವ ಕಾಣದೆುನ್ನು 2ಇದರಿಂದ ಬಂತು ಋಣಬಾಧೆ ಮಾಸಿತು ಬೋಧೆಒದಗಿದಾ 'ರತಿಯನು ನೀಗಿ ನಿಂದೆಮದ ಹೆಚ್ಚಿ ಮೈಮರೆದೆ ಮೋಹಕ್ಕೆ ಒಳಗಾದೆಎದೆಯಲಿ 'ಷಯಸುಖಕಾಗಿ ಮತಿದೊರೆದೆ 3ಆವ ಜನ್ಮಾಂತರದ ಪೈಶಾಚವೋ ಕಾಣೆಆವ ಮಾಂತ್ರಿಕನಿದನು ಬಿಡಿಸುವನೊ ಕಾಣೆಆವ ವ್ರತನಿಯಮಗಳಿಗಂಜುವುದೊ ನಾ ಕಾಣೆಆವ ಜಪಗೈದಿದನು ಕಳೆಯಲೊ ಕಾಣೆ 4ಕರುಣಿ ಚಿಕನಾಗಪುರವರನಿಲಯ ಎನ್ನೊಡೆಯಗುರುವಾಸುದೇವಾರ್ಯ ಗೂಢಚರ್ಯಮರೆಯೊಕ್ಕೆ ನಿನ್ನಡಿಯ ಮಾನಪೈಶಾಚಭಯಹರಿವಂತೆ ಮಾಡು ನ'ುಸಿದೆನು ದಮ್ಮಯ್ಯ 5
--------------
ವೆಂಕಟದಾಸರು
ಪ್ರಾಣೇಶ ಹರಿ ವಿಠಲ | ಪೊರೆಯ ಬೇಕಿವಳಾ ಪ ನಿನಲ್ಲದಿನ್ನಿಲ್ಲ | ಪ್ರಾಣಾಂತರಾತ್ಮಾ ಅ.ಪ. ಸಾರ ಕೂಪದಿಂದ |ಕಾರುಣ್ಯ ಮೂರುತಿಯೆ | ಆರು ಅನ್ಯರ ಕಾಣೆನೀರ ಜಾಸನ ವಂದ್ಯ | ನಿರ್ಮಲಾತ್ಮಕನೇ 1 ಕನ್ಯೆಮಣಿ ಇವಳೀಗೆ | ನಿನ್ನ ನಾಮಾಮೃತದಬೆಣ್ಣೆಯನು ಉಣಿಸುತ್ತ | ಕಾಪಾಡೊ ಇವಳಾಚಿನ್ನುಮಯ ಶ್ರೀ ಹರಿಯೆ | ಸಮ್ಮೋದ ಪಾಲಿಸುತಚೆನ್ನಾಗಿ ಪೊರೆ ಇವಳ | ಅನ್ನಂತ ಮಹಿಮಾ 2 ಸಾಧು ಸತ್ಸಂಗವನು | ನೀ ದಯದಿ ಕೊಟ್ಟವಳಸಾಧನವ ಗೈಸುವುದೊ ಮಾಧವನೆ ದೇವಾ |ಆಧ್ಯಂತ ರಹಿತ ಹರಿ | ವೇದಾಂತ ವೇದ್ಯನೆಕಾದುಕೋ ಬಿಡದಿವಳ | ಮಧ್ವಮುನಿ ವಂದ್ಯಾ 3 ಕಾಮ ಜನಕನೆ ದೇವ | ಕಾಮಿತವ ಕರುಣಿಸುತನೇಮ ನಿಷ್ಠೆಯನಿತ್ತು | ನೀ ಮುದದಿ ದೇವಾ |ಪಾಮರಳ ಉದ್ಧರಿಸೋ | ಶ್ರೀ ಮನೋಹರ ಹರಿಯೆಸಾಮಜಾಸದ್ವಂದ | ಸಾಮ ಸನ್ನುತನೇ 4 ಕೇವಲಾನಂದವೆನೆ | ಶಾಶ್ವತದ ಸುಖಕಾಗಿಬಾಳ್ವ ಅಳವಡಿಸುತ್ತ | ಕಾವುದೋ ಇವಳಾ |ಗೋವಿಂದಂ ಪತಿಯೆ ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಭಾಗ್ಯ ಬೇಕೈ ಗುರುವೇ ಬೋಧವ ಕೇಳೆ ಭಾಗ್ಯ ಬೇಕೈ ಜೀವಿಗೆ ಭಾಗ್ಯದ ಹೊರತಾಗಿ ಬೋಧ ಭೋಗಲಂಪಟ ಭವ ರೋಗಿಗೆ ದೊರಕೀತೆ ಪ ಮಾನವಜನ್ಮವ ತಾಳೆ ಬೇಕೆಲೋ ಭಾಗ್ಯ ಹೀನಬಾಳುವೆ ಬೇಸರಾಗೆ ಬೇಕೆಲೋ ಭಾಗ್ಯ ಜ್ಞಾನಿಯ ದರುಶನವಾಗೆ ಬೇಕೆಲೋ ಭಾಗ್ಯ ತಾನು ತನ್ನಯ ನಿಜವ ತಿಳಿಯೆ ಪರಮ ಭಾಗ್ಯ 1 ಬಾಳಿನ ಸುಖಕಾಗಿ ಆಳಾಗಿ ದುಡಿವಂಗೆ ಕೀಳುತನದಿ ಜ್ಞಾನವಲ್ಲಗಳೆಯುವಗೆ ಮೇಲು ತಾನೆಂದು ತಿಳಿದೋಡಾಡುವವನಿಗೆ ಕಾಲನಂಜಿಕೆ ಕಳೆವ ಬೋಧವು ತಿಳಿವೊಡೆ 2 ಏನಾದೊಡೇನಯ್ಯ ಎನ್ನ ಪೂರ್ವದಭಾಗ್ಯ ನಾನಾದೆ ದೇವನು ಗುರು ನೀನೇ ಯೋಗ್ಯ ಹೀನರ ಕೊಂಡೇನು ನಾನೊಂದು ಪಾರಾದೆ ಜ್ಞಾನಿಶಂಕರನೆ ನಾನಾದೆ ಎನ್ನಯ ಭಾಗ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಮಾನವ ಅಜಹರವಿನುತ ನಿಜಪಾದ ಅನುದಿನವು ಭಜಸಿಬದುಕೆಲೊ ಪ ತ್ಯಜಿಸಿ ಅವಗುಣ ಸುಜನರೊಡಗೂಡಿ ನಿಜಾನಂದದಿ ಸುಜನ ಭಜಗಶಯನನ ಅ.ಪ ಹಲವು ಭ್ರಾಂತಿಗಳ್ಯಾಕೆಲೊ ಸುಳ್ಳೆ ಸುಳ್ಳೆ ಸಂಸಾರ ಕೊಳಪಟ್ಟು ಕೆಡದಿರೆಲೊ ಮಲಿನಮನಸಿನ ಸರ್ವ ಹೊಲೆಯ ಯೋಚನೆ ಬಿಟ್ಟು ತಿಳಕೊಂಡು ನಿಜಸುಖ ಪದವಿಗೆ ನದರಿಟ್ಟು ಉಳಕೋ ಸಿಕ್ಕ್ಹೊತ್ತುಗಳೆಯದಲೆ ಶುನಕೆಲುವು ಕಡಿದಂತೆ ಅಳಿವ ಸುಖದಾಸೆಗೆಳಸಿ ಕೆಡಬೇಡ ಜಲಜನಾಭನ ಒಲಿಸಿ ನಲಿಯೊ 1 ಬರುವಾಗ್ಗೆ ಬೆನ್ನಿನ್ಹಿಂದೆ ಹೆಡತಲೆ ಮೃತ್ಯುವಿನ ಕರಕೊಂಡು ಧರೆಗೆ ಬಂದಿ ಅರಲವದ ಸುಖಕಾಗಿ ಮರೆದು ಎಲ್ಲವ ನೀನು ಮರುಳನಾದದ್ದು ಕಂಡು ನಗುತಿಪ್ಪ ಮೃತ್ಯವ ಹೊರಳಿನೋಡದೆ ದುರುಳತನದ ಸ್ಥಿರದ ಪ್ರಪಂಚ ಖರೆಯೆಂದೆನ್ವುದು ಸರಿಯಲ್ಲೆಲೊ ಇದು ನಿರುತದ್ಹರಿಪಾದ ಸ್ಮರಣಾನಂದದಿ ಮರೆಯೊ ಬಿಡದೆ 2 ಫಣೆಯ ಬಾಯೊಳಗಿರುವಂಥ ಕಪ್ಪೆಯು ಮುಂದಾಡ್ವ ನೊಣಕ್ಹವಣಿಸುತಿರುವಂತೆ ಒಣಭ್ರಾಂತಿ ಪಡದಿರು ಮನಸಿಗೆ ಬಂದಂತೆ ಕ್ಷಣತೋರಿ ಅಡಗುವ ಕನಸು ಜಗಸುಖ ಜನನ ಮ ರಣೆಂಬ ದಣಿವು ಕಳೆವಂಥ ಜನಕಜಾತೆಯ ಧಣಿಯ ಶ್ರೀರಾಮನೊನರುಹಂಘ್ರಿಯ ಘನವ ಪೊಗಳುತ ಕುಣಿ ಕುಣಿದು ಧನ್ಯವಾಗೆಲೊ 3
--------------
ರಾಮದಾಸರು
ಮೂರ್ಖ ತಿಳಿವನೆ ಗುರುವೆ ನಿನ್ನ ಬೋಧದ ಸವಿಯ ಅರ್ಕನಾ ತೇಜವನು ಗೊಗೆಯರಿದಪುದೇ ಪ ನೀನೆ ಪರಮಾತ್ಮನಿಹೆ ಎಂದು ನೀ ಬೋಧಿಸಲು ಮಾನವ ನಾನು ಪರಮಾತ್ಮನೆ ಏನಾದರೂ ಪೇಳಿ ಮೋಸಮಾಳ್ಪನು ಎಂದು ಸ್ವಾನುಭವ ಪಡೆಯದಲೆ ನಿನ್ನ ನಿಂದಿಸುವಾ 1 ಕರ್ಮದಾ ಸಂಕಲೆಯ ಕಟ್ಟಿಕೊಂಡಿಹ ಜೀವ ಕರ್ಮ ಕಳೆಯುವ ದಿವ್ಯ ಜ್ಞಾನವರಿಯುವನೇ ದುರ್ಮತಿಯು ದ್ವೇಷಿಸುತ ಬೋಧದಲಿ ಮನವಿಡದೆ ಧರ್ಮವಂತನು ಎಂಬ ಒಣ ಹೆಮ್ಮೆ ಪಡುತಿರುವ 2 ಈ ನಿಂದೆ ಸ್ತೋತ್ರಗಳಿಗೊಳಗಾಗುವವನೆ ನೀ ಸ್ವಾನುಭವಸಂವೇದ್ಯ ಕೇವಲಾನಂದಾ ನೀನೆ ಸರ್ವವ್ಯಾಪಿ ನಿನ್ನ ನಿಂದಿಸಿದೊಡೆ ತಾನು ತನ್ನನು ಬೈದು ದೂರಿಕೊಂಡಂತೆ 3 ಜಗದ ಸುಖಕಾಗಿ ಬಲು ಕಾತರಿಪ ಮನುಜನಿವ ಜಗದಾಚೆಗಿಹ ಪರಮಶಾಂತಿಯರಿಯುವನೇ ಸೊಗಸಾಗಿ ತಿಳಿಯುವೊಡೆ ಜಿಜ್ಞಾಸುವಲ್ಲದೆ ಅಘನಾಶಶಂಕರನೆ ಅನ್ಯರರಿಯುವರೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಚಂಚಲಿಸದಿರು ನೀನು ಚತುರನಾಗುವಂಚಿಸದೆ ಸಕಲವೊಪ್ಪಿಸು ಹರಿಗೆ ಮನವೆ ಪ.ಆರು ನಿನ್ನವರೆಂಬೆ ಅವರಗಲಿದರು ಕಡೆಗೆಭೂರಿಸಂಚಿತ ಸಂಪದೆರವಾಯಿತುಜಾರುತಿವೆ ಕ್ಷಣಲವಗಳೀಗಾಗೆ ತಿಳಿಯದುನಾರಸಿಂಹನ ನಂಬು ನಿಷ್ಠೆಯಲಿ ಮನವೆ 1ಅಲ್ಪಸುಖಕಾಗಿ ನೀ ಅನೇಕ ಸುಖ ಮರೆವರೆಕಲ್ಪಕಲ್ಪಕೆ ನಿರಯವುಣಲಿಬಹುದೆಅಲ್ಪರುಪದೇಶದಲಿ ಭ್ರಾಂತನಾಗದೆಶೇಷತಲ್ಪನ್ನ ಮರೆಹೋಗು ತಡೆಯದಲೆ ಮನವೆ 2ನಿನ್ನಿಂದಭವಬಂಧನವು ಮೋಚನವುನೋಡುನಿನ್ನಿಂದ ಪ್ರಸನ್ವೆಂಕಟೇಶನೊಲುಮೆಇನ್ನೆನ್ನ ದಣಿಸದಿರು ಇದರಿಂದ ಮೀರಿದರೆಘನ್ನಗುರು ಮಧ್ವೇಶನಾಣೆ ನಿನಗೆ 3
--------------
ಪ್ರಸನ್ನವೆಂಕಟದಾಸರು
ತನುವಿನೊಳಗೆ ಅನುದಿನವಿದ್ದುಎನಗೊಂದು ಮಾತ ಪೇಳದೆ ಪೋದೆ ಹಂಸಾ ಪ.ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆರೂವಾರವೆಂಬ ಒಂಬತ್ತು ಬಾಗಿಲ ದಾಟಿಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗಕಾಯಕೆ ಹೇಳದೆ ಹೋಯಿತು ಒಂದು ಮಾತ 1ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿಬಳ್ಳಿ ಕಾಯಿಕಾತು ಫಲವಾಯಿತುಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗಬಳ್ಳಿಗೆ ಹೇಳದೆ ಹೋಯಿತು ಒಂದು ಮಾತ 2ಗಟ್ಟಿ - ಬೆಟ್ಟಗಳಲಿ ಶಾಖೆಯ ತುದಿಯಲಿಕಟ್ಟಿತು ಜೇನನು ಸುಖಕಾಗಿಗಟ್ಟಿ ತುಪ್ಪವನುಂಡು ನೊಣ ಹಾರಿ ಪೋಪಾಗಹಿಪ್ಪೆಗೆ ಹೇಳದೆ ಹೋಯಿತು ಒಂದು ಮಾತ 3ರವಿವಿಸ್ತಾರವ ಹಂಸ ಕೇಳಿದನೈ ನಿನ್ನಪೆಸರ ಪೇಳಲೆನ್ನಳವಲ್ಲರಸ ವಸ್ತುವನುಂಡು ಜ್ಯೋತಿ ತಾ ಪೋಪಾಗಪಣತಿಗೆ ಪೇಳದೆ ಹೋಯಿತು ಒಂದು ಮಾತು 4ಸಿರಿಪುರಂದರ ವಿಠಲನ ಮಾತು ಪುಸಿಯಲ್ಲಹಣೆಯ ಬರೆಹವ ಮೀರಲು ಬಲ್ಲುದೆ ?ಸರಸವನಾಣೆಯ ಮುತ್ತು ಆಗಲಿ ತಾ ಪೋಪಾಗತಿಪ್ಪಿಗೆ ಪೇಳಿದಾಯಿತು ಒಂದು ಮಾತ 5
--------------
ಪುರಂದರದಾಸರು