ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿರಶಾಂತಿ ಪ್ರದಾತಾ ಗುರುವರಾ ಪರಮಾರ್ಥಪ್ರಬೋಧಾ ಸುಖಕರಾ ಭವವಿತರಣಾ ದಿವ್ಯಚರಣಾ ತಿಮಿರ ಮುಸುಕಿರೆ ಸೋಹಮೆನಿಪ ಜ್ಞಾನಸೂರ್ಯ ಉದಿಸಿ ನೀ ಘನಸ್ವಾತ್ಮರಂಜನಾ ಶೃತಿಶಿರಗಳಿಗೂ ಪೇಳಲಾಗದೆ ನೇತಿ ಎನ್ನುವ ಮೌನವ ಧರಿಸಿದ ಆತ್ಮತತ್ವವ ಪೇಳ್ದೆ ಧೀರನೇ ಭವಶರಧಿಯಲಿ ನಾವಿಕ ನೀನೇ ಸಾವಕಾಶದಿ ದಾಂಟಿಸುತಿರುವೀ
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಸುಖಕರಾ ಗುರುಬೋಧಸಾರಾ ಮರಣಾ ಜರಾ ದುರಿತಾದಿ ದೂರಾ ಪ ಜೀವಭಾವವಾ ಸಟೆಯಾಗಿ ಗೈವ ದೇವಭಾವನಾ ಬಗೆಸಿನಿಲಿಸುವಾ ಸಾವಿನಂಜಿಕೆ ದೂರಾಗಿ ಮಾಳ್ಪ ಜೀವಂತಮುಕುತಿ ಕರದೀಯುವಾ 1 ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ ದೃಶ್ಯವಸ್ತುವಿಂದ ಬೇರೆನಿಸುವಾ ಶಾಶ್ವತಾದ ಆ ಪದ ತೋರಿ ಮನದ ಕಶ್ಮಲವನು ಕಳೆವ ಭವತಾರಕಾ 2 ಭೇದಭಾವವಾ ಛೇದಿಸುತ ಮನದಿ ಬೋಧನಾರಾಯಣನ ಕೃಪೆ ಪೊಂದಿದಾ ಬೋಧರೂಪ ಗುರುವು ಪೇಳಿರ್ದ ಬೋಧ ಸಾಧು ಶಂಕರಾರ್ಯ ತಾನೆನ್ನುವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಶ್ರೀ ಗೌರೀವರೇಂದ್ರನೇ ನಮೋ ನಮೋ ನಮೋ ಯೋಗಮಯನೆ ಭೋಗದಯನೆ ನಾಗಾಭರಣನೆ ಭೋಗೀ ಭೂಷಣ ವ್ಯಾಘ್ರವಸನನೆ ಪ ವಾಸುದೇವ ಪ್ರಿಯನೇ ಸದಾ ಶಿವಾ ಶಿವಾ ಶಶಾಂಕಧರನೇ ಕ್ಲೇಷಹಾರನೇ ದೋಷನಾಶನೇ ಭಾಸುರ ಪ್ರಕಾಶಾ ತೋಷದಾತನೇ 1 ಪಂಚ ಪ್ರಾಣಧಾರನೇ ಪರಾತ್ಪರಾವರಾ ಸಂಚಿತ ಅಘದೋಷಹರಣ ಸರ್ವಸುಖಕರಾ ಪಂಚವದನಾ ಪಂಚಶರಹರಾ 2 ಜ್ಞಾನಮಯ ಸುಚೇತನಾ ಕೃತಾಘನಾವನಾ ಸ್ವಾನುಭವ ಸ್ವಶಾಂತಿದಾತ ಧ್ಯಾನಿಪಾಜನಾ ದೀನೋದ್ಧಾರಕಾ ವಿಜ್ಞಾನಮಯನೇ 3
--------------
ಶಾಂತಿಬಾಯಿ