ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ನರಹರಿಯೆ ಸುಕ್ಷೇಮವ ಪ. ಪರಮಪ್ರಿಯರಿಗೆ ಇತ್ತು ವರ ಸೇವೆ ಕೈಕೊಂಡು ನಿರುತದಿ ಪಾಲಿಸೆನ್ನ ಘನ್ನ ಅ.ಪ. ದಾಸ ಗುರುಕುಲತಿಲಕರಿವರಿಗೆ ನೀನೀಗ ಘಾಸಿಗೊಳಿಸುವುದುಚಿತವೆ ದೋಷದೂರನೆ ಎಮ್ಮ ಮನವನರಿತವ ಜನರ ದೂಷಣೆಗೆ ಗುರಿ ಮಾಳ್ಪರೆ ಘಾಸಿಪಡುತಿಹರ ಆಯಾಸಪಡಿಸುವುದು ಬಹು ಲೇಸಲ್ಲ ನಿನಗೆ ಥರವೆ ಶೇಷಶಯನನೆ ಎಮ್ಮ ಮಾತು ಲಾಲಿಸಿ ಈಗ ಪೋಷಿಸಲಿ ಬೇಕೊ ಸ್ವಾಮಿ ಪ್ರೇಮಿ 1 ಕಲ್ಪತರುವಂತಿಹರು ಶಿಷ್ಯವೃಂದಕೆ ಇವರು ಇಪ್ಪರೋ ಚಂದ ಜಗದಿ ತಪ್ಪದಲೆ ಆಯುರಾರೊಗ್ಯ ಕೊಟ್ಟು ನೀ ಸರ್ಪಶಯನನೆ ರಕ್ಷಿಸೊ ಒಪ್ಪದಿಂದಲಿ ಎಮ್ಮ ಸೇವೆ ಸಫಲವಗೊಳಿಸಿ ಅಪ್ಪ ಸಂತಸವಪಡಿಸೊ ಬಪ್ಪ ಪೋಪ ಕೀರ್ತಿ ಅಪಕೀರ್ತಿ ನಿನ್ನಡಿಗೆ ಪುಷ್ಪದಂತರ್ಪಿಸುವೆನೊ ನೃಹರಿ 2 ಮನವಚನ ಕಾಯದಲಿ ಅನ್ಯ ಬಗೆಯದೆ ಎಮ್ಮ ಗುರುಗಳನು ಸೇವಿಸುವೆವೊ ಚಿನುಮಯನೆ ನೀ ಸಾಕ್ಷಿಯೋ ಮನುಜರಿದನೇನ ಬಲ್ಲರು ಕೇಳು ತಂತಮ್ಮ ಮನ ಬಂದ ತೆರ ನುಡಿವರೊ ಎನಗದರ ಗೊಡವೇನು ನೀನಿರಲು ಭಯವೇನು ಘನ ಮಹಿಮ ಪೊರೆಯೊ ಬೇಗ ಸ್ವಾಮಿ 3 ಪಂಚಪ್ರಾಣರು ಇವರು ವಂಚನಿಲ್ಲದೆ ಪೇಳ್ವೆ ಮುಂಚೆ ನೀ ಕಾಪಾಡೆಲೊ ಸಂಚಿತಾಗಾಮಿ ಪ್ರಾರಬ್ಧ ದುಷ್ಕರ್ಮಗಳು ಮಿಂಚಿನಂದದಿ ಮಾಡೆಲೊ ಸಂಚಿತಾಗಾಮಿಗಳ ಶಿಷ್ಯರಿಗೆ ಕಳೆವರಿಗೆ ಕೊಂಚ ಬಾಧೆಯ ಕೊಡದೆಲೊ ಸಂಚಿತಿತ ಪ್ರದನೆ ಎನ್ನ ಮೊರೆ ಲಾಲಿಸು ಅಚಂಚಲದ ಕ್ಷೇಮವೀಯೋ ದೇವ 4 ಪರಿ ಪ್ರಾರ್ಥಿಸುವೆ ಶ್ರೀ ಪತಿಯೆ ದಯವ ಮಾಡೊ ನಾ ಪೇಳ್ವುದಿನ್ನೇನು ನಿನ್ನ ಸೇವಾದಿಗಳು ಕೃಪೆಯಿಂದ ಗುರುಗಳಿಂದ ಪಾಪ ಪರಿಹರನೆ ನೀ ಕೈಕೊಂಡು ಕೀರ್ತಿಯನು ಈ ಪೃಥ್ವಿಯಲ್ಲಿ ನೆಲಸೊ ಗೋಪಾಲಕೃಷ್ಣವಿಠ್ಠಲನೆ ನೀ ಕಾಪಾಡು ಕಾಪಾಡು ಜಗದ್ರಕ್ಷಕ ಹರಿಯೆ 5
--------------
ಅಂಬಾಬಾಯಿ
ಬಾರೈಯ ಬಾರೈಯ ಸೂರಿವರಿಯ ಐಕೂರು ನಿಲಯ ಪ ನೀನ್ಹಾಕಿದ ಸುಜ್ಞಾನದ ಸಸಿಗಳು ಮ್ಲಾನವಾಗುತಿವೆ ಸಾನುರಾಗದಲಿ 1 ಸತಿ ತವಕರುಣ ಸಲಿಲವ ಎರೆದು ಫಳಿಲನೆ ವೃಥ್ಧಿಯ ಗಳಿಸಿ ಸಲಹಲು 2 ನಾಟಿಸಿದ ಸಸಿಗಳು ನೀಟಾಗುವ ಪರಿ ತೋಟಗ ನೀ ಕೃಪೆ ನೋಟದಿ ನೋಡಲು 3 ಕೋವಿದರ ನೀ ಕಾವಲಿ ಇರಲು | ಕು ಜೀವಿಗಳಿಂದಲಿ ಹಾವಳಿಯಾಗದು 4 ನೀಮರೆದರೆ ಸುಕ್ಷೇಮವಾಗದು ಶಾಮಸುಂದರನ ಪ್ರೇಮದ ಪೋತ 5
--------------
ಶಾಮಸುಂದರ ವಿಠಲ
ಮನ್ಮಥನಯ್ಯನ ಮನದಲಿ ಸ್ಮರಿಸಿರೊ ಮನ್ಮಥ ನಾಮ ಸಂವತ್ಸರದಿ ಪ ಸುಮ್ಮನೆ ಕಾಲವ ಕಳೆಯುವದೇತಕೆ ಬ್ರಹ್ಮನಪಿತ ನಂಘ್ರಿಗಳ ಭಜಿಸುತ ಅ.ಪ ಬಂಧು ಬಳಗ ಮಂದಿಮಕ್ಕಳೆಲ್ಲರು ಕೂಡಿ ಒಂದೆ ಸ್ಥಳದಿ ಭಜನೆಯಮಾಡಿ ಇಂದಿರಾರಮಣನ ಚಂದದಿ ಪೊಗಳಲು ಬಂದ ದುರಿತಗಳ ಪೊಂದಿಸನೆಂದೆಂದು 1 ಮಾಕಮಲಾಸನ ಲೋಕದ ಜನರಿಗೆ ತಾಕಾಣಿಸಿ ಕೊಳ್ಳದೆ ಇಹನು ಶ್ರೀಕರ ಸಲಹೆಂದು ಏಕ ಭಕುತಿಯಲಿ ಲೋಕವಂದ್ಯನ ಸ್ತುತಿಗೆ ನೂಕುವ ಅಘಗಳ 2 ಅತಿಶಯದಿಂದಲಿ ಸತಿಸುತರೆಲ್ಲರು ಪತಿತಪಾವನನ ಕೊಂಡಾಡುತಲಿ ಗತಿ ನೀನಲ್ಲದೆ ಮತ್ತೆ ಹಿತರ್ಯಾರಿಲ್ಲವೆನೆ ಸತತ ಸುಕ್ಷೇಮವಿತ್ತು ಪಾಲಿಸುವಂಥ 3 ಶ್ರಮವ ಪರಿಹರಿಸೆಂದು ನಮಿಸಿಬೇಡುವ ಭಕ್ತ ಜನರನು ಸಂತೈಸುತಲಿಹನು ಹನುಮ ಭೀಮ ಮಧ್ವಮುನಿಗಳ ಸೇವಿಪ ಮನುಜರ ಮನೋರಥಗಳನೆ ಪೂರೈಸುವೊ 4 ವತ್ಸರ ಆದಿಯಲಿ ಅಕ್ಷರೇಡ್ಯನ ಪಾದ ಕ್ಷಿಪ್ರದಿಂದಲಿ ಸೇವಿಪ ನರನ ಭಕ್ತವತ್ಸಲ ತನ್ನ ಭಕ್ತರ ಸಂಗದೊಳಿಟ್ಟು ಸಂತೈಸುವ ಸತ್ಯಸಂಕಲ್ಪ ಶ್ರೀ5 ತಾಳ ತಂಬೂರಿ ಸುಸ್ವರಗಳಿಂದಲಿ ಬಹು ನೇಮದಿಂದಲಿ ಸರುವರು ಕೂಡಿ ಗಾನಲೋಲನ ಭಜನೆಯ ಮಾಡುತ ಸತ್ಯ ಸ್ವಾಮಿಯ ಗುಣಗಳ ಪೊಗಳುವ ಸುಜನರು 6 ಸಡಗರದಿಂದಲಿ ಕಡಲೊಡೆಯನ ಗುಣ ಪೊಗಳುತ ಹಿಗ್ಗುತ ಅಡಿಗಡಿಗೆ ಕಡಲ ಶಯನ ಕಮಲನಾಭ ವಿಠ್ಠಲನೆಂದು ತೊಡರು ಬಿಡಿಸುವ ಶ್ರೀ 7
--------------
ನಿಡಗುರುಕಿ ಜೀವೂಬಾಯಿ
ನಮೋ ನಮಸ್ತೇ ಉಮಾತನಯ ಕುಮಾರಾಗ್ರಜ ಪ.ಅಮೋಘ ಶಮದಮಾದಿಗುಣಸಮೂಹ ಗತವಿಮೋಹ ಸದಾ ಅ.ಪ.ಭಾರತವ ಬಾದರಾಯಣನು ಪೇಳಿದಂತೆ ಬರೆದೆ ಭಾರತವಮಾರಜ ಭ್ರಮೆಯ ದೂರಗೈದ ಸುವಿ-ಚಾರಧೀರ ಸುರವಾರವಿನುತ ಪದ 1ವಂದಿಸುವೆವೃಂದಾರಕೇಂದ್ರಯೋಗೀಂದ್ರತವಚರಣಕೆ ವಂದಿಸುವೆವೃಂದಾರಮಂದಾರಚಂದನಚರ್ಚಿತಚಂದ್ರಚೂಡ ಮನೋನಂದ ಮೂರುತಿಯೆ 2ಸುಕ್ಷೇಮವಸುಜನಪಕ್ಷಪಾವನಮುಮುಕ್ಷುಜನಪ್ರಿಯ ಸುಕ್ಷೇಮದಲಕ್ಷ್ಮೀನಾರಾಯಣ ಲಕ್ಷಿತಾತ್ಮನೆ ವಿ-ಪಕ್ಷರಕ್ಷೋಗಣಶಿಕ್ಷ ಸೂಕ್ಷ್ಮ ಮತೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಾರದೇತಕೋ ತವದಯ ಭಗವತಿಭಾರ್ಗವಿದೇವೀಪಘೋರದುರಿತಪರಿಹಾರಿಣಿ ಭಕ್ತೋದ್ಧಾರಿಣಿ ಭಾಗ್ಯ ವಿಹಾರಿಣಿ ಜನನೀ 1ವಂದಿಪೆ ಪಾದದ್ವಂಧ್ವ ಸರೋಜವಇಂದಿರೆಹರಿಯುರಮಂದಿರ ವಾಸಿನಿ2ನಾರಿಶಿರೋಮಣಿ ನಂಬಿದೆ ನಿನ್ನನುನಾರಾಯಣೀ ಭವನಾಶಿನಿ ಶಾರ್ಙಣಿ 3ದಾರಿದ್ರ್ಯಾಪಹ ಧನಧಾನ್ಯಪ್ರದಕ್ಷೀರಾರ್ಣವ ಸುತೇ ಶ್ರೀಮಹಾಲಕ್ಷ್ಮೀ 4ಹೇಮಗಿರೀಶ್ವರಿ ಭಾಮಾ | ತುಲಸೀರಾಮದಾಸನುತ ಸುಕ್ಷೇಮವು ನಿನ್ನದು 5
--------------
ತುಳಸೀರಾಮದಾಸರು
ಯಾತಕೆ ಕೃಪೆಮಾಡದೆ ಯಿರುತಿಹೆ ಸಿರಿಯೇಪೀತಾಂಬರಧರ ತರುಣಿಯೆ ಪಪಾತಕಹಾರಿಣಿ ಭಾವಜನನೀಭಕ್ತ ಕುಟುಂಬಿನಿಭವಭಯ ನಾಶಿನಿ 1ದಾರಿದ್ರ್ಯಾಂಬುಧಿ ತರುಣೋಪಾಯವುತೋರಿಸು ರಘುಕುಲದೊರೆ ಸುಪ್ರಿಯಳೆ 2ರತ್ನಾಭರಣಯುಕ್ತ ಸುಗಾತ್ರೇರತ್ನಾಕರಸುತೇ ರಾಜೀವಾಲಯೇ 3ಹೇಮಭೂಧರ ಸ್ವಾಮಿನಿ ತುಲಸೀರಾಮದಾಸ ಸುಕ್ಷೇಮವು ನಿನ್ನದು 4
--------------
ತುಳಸೀರಾಮದಾಸರು
ಶ್ರೀವಿಭವಸಂವತ್ಸರ ಸ್ತೋತ್ರ146ರಾಜ ರಾಜೇಶ್ವರ ಉಪೇಂದ್ರನಿಗೆ ನಮೋ ಎಂಬೆಭ್ರಾಜ ಲಕ್ಷ್ಮಿ ಭೂಮ ನಾರಸಿಂಹನಿಗೂ ಆನಮಿಪೆ ಪರಾಜಿಸುವವಿಭವನಾಮ ಸಂವತ್ಸರ ನಿಯಾಮಿಕ ಏಕಾತ್ಮನಲ್ಲಿನಿಜ ಭಕ್ತಿಯಿಂದ ಸ್ತುತಿಪರನ್ನ ಸಂರಕ್ಷಿಪ ಶ್ರೀಹರಿಯು 1ಭಾಸ್ಕರೋದಯದಲ್ಲಿ ಪ್ರಭವಾಸಿತ ಪಕ್ಷ ನಂತರವಿಭವಸಿತ ಪ್ರತಿಸತ್ಊಶನ ಶುಕ್ರಭಾರ್ಗವವಾಸರವು ನಮೋ ಎಂಬೆಶುಕ್ರನಿಗೆ ನಮ್ಮ ಹಿತಕಾಯ್ವಿ 2ದಿನೋದಯದಿವಿಭವಸಂವತ್ಸರಸಿತಪಕ್ಷದ್ವಿತಿಯೇಯು ಸೌರವಾಸರವುರಾಜಶನೈಶ್ಚರಗೂ ಮಂತ್ರಿಬುಧಮೊದಲಾದವರಿಗೂನಮೋ ಎಂಬೆ ದಯವಾಗಲಿ 3ಊದ ಕೊರತೆ ಅತಿ ಉಷ್ಣ ಸಸ್ಯಸಾಂದು ರಾಜರಾಜರಾಜ ಜನ ಮನಸ್ತಾಪಜನಕಾಷ್ಟ ನೀದಯದಿ ಪರಿಹರಿಸಿ ಸಲಹೋಕೃಪಾನಿಧಿಯೇ ನರಹರಿಯೇ 4ಧವಳಗಂಗೆಗೆ ಅಪ್ರಸಿದ್ಧ ಹೆಸರು ಕೂರ್ಮತೀರ್ಥವುಎಂದುಂಟು ಅದು ಪ್ರಾಮಾಣಿಕ ಎಂದುತಿಳಿಯುವುದು ವಿಭವದಲಿ ನೀರಿನ ಮಟ್ಟ ಸ್ವಲ್ಪಕಾಲ ತಗ್ಗುವಾಗ 5ಸಂವತ್ಸರ ನಿಯಾಮಕಹರಿರೂಪಗಳ ಸೋಚಿತಆಚರಣೆ ಸಹ ಸಂಸ್ಮರಿಸಿಕುಲ ಇಷ್ಟದೇವರ ಮತ್ತು ಗುರುಗಳ ನೆನೆದು ಭಕ್ತಿಮಾಳ್ಪಜನರಿಗೆ ಸುಖಕಾಲ 6ಕಮಲಸಂಭವ ಪಿತ ಕಮಲಾಲಯಪತಿಅಮಲಪೂರ್ಣಾನಂದಾದಿಗುಣ ನಿಧಿಯುಸುಮನಸರೊಡೆಯ ಶ್ರೀ ಪ್ರಸನ್ನ ಶ್ರೀನಿವಾಸನುತನ್ನ ಭಕ್ತರಿಗೆಈವಸುಕ್ಷೇಮವನು ಸರ್ವದಾ7
--------------
ಪ್ರಸನ್ನ ಶ್ರೀನಿವಾಸದಾಸರು