ಒಟ್ಟು 8 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ಪ್ರೆಮಾಂಬುಧಿ ಶುಭದಾಯಕ ಜಯ ಜಯ 1 ಪ್ರಹ್ಲಾದಾವರ ಜಾತನೆ ಜಯಯ ಶಲ್ಯ ನೃಪಾಲಕ ಯೋಧನೆ ಜಯ ಜಯ 2 ಪುರುಹೂತಾರ್ಯ ಪೋತನೆ ಜಯ ಜಯ ಮರುತ ಪದಾರ್ಹರ ಪ್ರೀತನೆ ಜಯ ಜಯ 3 ನರಸಿಂಹಾರ್ಯರ ಪುತ್ರನೆ ಜಯ ಜಯ ಗುರುವರದೇಂದ್ರರ ಛಾತ್ರನೆ ಜಯ ಜಯ 4 ತುರುರಕ್ಷಕ ವಿಜಯಾರ್ಯರ ಜಯ ಜಯ ಕರುಣ ಪೂರ್ಣ ಪಡೆದಾತನೆ ಜಯ ಜಯ 5 ಪಂಕಜವೈರಿಯ ಭಾಗದಿ ಜಯ ಜಯ ಅಂಕಿತ ಪಡೆದ ಅಕಳಂಕನೆ ಜಯ ಜಯ 6 ಪಂಢರಿನಾಥನ ಮೂರುತಿ ಜಯ ಜಯ ಕಂಡು ಕೊಂಡಾಡಿದ ಧೀರನೆ ಜಯ ಜಯ 7 ರಂಗವಲಿದ ದಾಸ್ತೋತಮ ಜಯ ಜಯ ತುಂಗ ಮಹಿಮ ಶುಭಾಂಗನೆ ಜಯ ಜಯ 8 ನತಜನ ತತಿ ಮಂದಾರನೆ ಜಯ ಜಯ ಕೃತ ಹರಿಕಥಾಸುಧೆ ಸಾರವ ಜಯ ಜಯ 9 ಮೂಕರ ಮುಖದಿಂ ಕರುಣದಿ ಜಯ ಜಯ ವಾಕು ಪೇಳಿಸಿದ ಗುಣನಿಧಿ ಜಯ ಜಯ 10 ಮಾನವಿ ಮಂದಿರ ಮಾನಿತ ಜಯ ಜಯ ಕ್ಷೋಣಿ ವಿಬುಧ ಗಣ ಸೇವಿತ ಜಯ ಜಯ 11 ಕುಂಭಿಣಿನಾಥ ದಾಸಾಗ್ರಣಿ ಜಯ ಜಯ ನಂಬಿದೆ ನಿನ್ನ ಪದಾಂಬುಜ ಜಯ ಜಯ 12 ಸಾಧು ವರಿಯ ಪ್ರಹ್ಲಾದನೆ ಜಯ ಜಯ ಭೇದಜ್ಞಾನ ಸುಬೋಧಕ ಜಯ ಜಯ 13 ಭೂಸುರ ಕುಮುದಕೆ ಭೇಶನೆ ಜಯ ಜಯ ಭಾಸುರ ಸ್ತಂಭ ನಿವಾಸನೆ ಜಯ ಜಯ 14 ಪವನಾಗಮ ಪ್ರವೀಣನೆ ಜಯ ಜಯ ಸನ್ನುತ ಮಹಿಮನೆ ಜಯ ಜಯ 15 ತಂದೆ ನಮಗೆ ನೀನೆಂದಿಗು ಜಯ ಜಯ ಕುಂದು ಕ್ಷಮಿಸಿ ದ್ವಿಜ ವಂದ್ಯನೆ ಜಯ ಜಯ 16 ಕಂಸಾರಿಯ ಪ್ರೀಯ ಸಾಂಶನೆ ಜಯ ಜಯ ಭವ ಹಿಂಸೆಯ ಜಯ ಜಯ 17 ನಿನ್ನ ತಾಣ ಸುಕ್ಷೇತ್ರವು ಜಯ ಜಯ ನಿನ್ನ ಕವನ ಶೃತ್ಯರ್ಥವು ಜಯ ಜಯ 18 ಕಲುಷ ಕುಲಾದ್ರಿಗೆ ಕುಲಿಶನೆ ಜಯ ಜಯ ವಲಿದು ಕರಪಿಡಿದು ಸಲಹೈ ಜಯ ಜಯ 19 ಆರ್ತರಿಷ್ಟಾರ್ಥವ ಸಲಿಸಲು ಜಯ ಜಯ ಸ್ವಾರ್ಥರಹಿತರಿಗೆ ಕೀರ್ತಿಯು ಜಯ ಜಯ 20 ಎನ್ನವವ ಚನವಿದಲ್ಲವು ಜಯ ಜಯ ನಿನ್ನನು ಭವಕಿದು ಬಂದದು ಜಯ ಜಯ 21 ಮಂದ ಬುದ್ಧಿಯಲಿ ನಿಮ್ಮನು ಜಯ ಜುಯ ನಿಂದಿಪ ಮನುಜ ದಿವಾಂಧನು ಜಯ ಜಯ 22 ಧರ್ಮದ ಮಾರ್ಗವ ತೋರಿಸು ಜಯ ಜಯ ಕರ್ಮಜ ದೇವನೆ ಕೈಪಿಡಿ ಜಯ ಜಯ 23 ಅನಿಲ ಮತಾಂಬುಧಿ ಮೀನನೆ ಜಯ ಜಯ ಪ್ರಣತಾಮರಮಣಿಧೇನುವೆ ಜಯ ಜಯ 24
--------------
ಶಾಮಸುಂದರ ವಿಠಲ
ಮಂಗಳ ಪದಗಳು ಜಯದೇವ ಜಯದೇವ ಜಯ ಸುಬ್ರಹ್ಮಣ್ಯ ವರೇಣ್ಯ ಪ. ಅರಳಿದ ಕಮಲಸನ್ನಿಭಶುಭಚರಣ- ವರ ಪಂಚಾನನ ಪೋಲ್ವ ಕಟಿಕಾಂಚ್ಯಾಭರಣ ಉರುಶಕ್ತಿಕುಕ್ಕುಟಾಭಯವಜ್ರಹಸ್ತ ಶರಣಾಗತಜನದ ರಿತವಿಧ್ವಸ್ತ1 ಬಲಮುರಿಶಂಖದಂತಿಹ ಚೆಲ್ವಗ್ರೀವ ಸುಲಲಿತಮಾಣಿಕ್ಯಹಾರದಿಂ ಪೊಳೆವ ನಲಿವ ಕರ್ಣಕುಂಡಲಗಳ ಶೋಭ ಜ್ವಲಿತಕಿರೀಟಮಸ್ತಕ ಸೂರ್ಯಾಭ2 ಈ ಕ್ಷಿತಿಯೊಳಗೆ ಪಾವಂಜೇತಿ ನಾಮ ಸುಕ್ಷೇತ್ರವಾಸ ಸುಜನಜನಪ್ರೇಮ ಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರ ರಾಕ್ಷಸಾರಣ್ಯದಹನವೀತಿಹೋತ್ರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆತು ಇರುವರೆ ಸರ್ವಜ್ಞನೆನಿಸಿ ಪ ಮರೆತು ಇರುವರೇನೋ ಕರುಣಾ ವಾರಿಧಿ ನರಹರಿಯೆ ಬಾಲನ ದುರುಳತನಗಳೆಣಿಸಿದೊಡೆ ನೀ ಕರೆದು ಮುಂದಕೆ ಪೊರೆವರ್ಯಾರು 1 ಕಲ್ಲು ಕೊಟ್ಟ ಬಿಲ್ಲಿಲಿಟ್ಟ ಕ್ಷುಲ್ಲಕ ಮಾತಾಡಿ ಬಿಟ್ಟ ಕಳ್ಳ ಸುಳ್ಳ ಜಾರನೆಂದ ಗೊಲ್ಲತಿಯರನೆಲ್ಲ ಪೊರೆದಿ 2 ತರಳ ನಿನ್ನ ಪೂಜಿಸಲಾರದೆ ಕರವ ಶಿರದಿ ಇರಿಸೆ ಕೂತು ಕರದಿ ಗುಂಜವಿರಿಸಿ ಸಿರಿಯ ಮರೆತು ಇರುವವರಂತೆ 3 ವರ ಸುಮೌನೀಗಣಕೆ ಬಲ ನಾ ನರಿಯಿರೆಂದು ಬೀರಿ ಚರಣ ಚರಣದರ ಮನೆಯೊಳಿರಿಸಿ ಪೊರೆವಿ ತರಳನ ನೀ ಜರಿವರೇನೊ 4 ಧರಣಿಯೊಳಗೆ ಇರುವ ಕ್ಷೇತ್ರದಿ ವರ ಸುಕ್ಷೇತ್ರವಿದೆಂದು ಅರುಹಿ ಬರುವ ಸಜ್ಜನರನು ಪೊರೆವಿ ಭಾರ ನಾನೊಬ್ಬನೇ ಪೇಳೋ 5 ಶ್ರೀ ನರಹರಿಯೆ ಇನಿತು ಜ್ಞಾನ ಶೂನ್ಯನ ಮಾಡಿ ನಿನ್ನ ಕಾಣಿಸುವರೊಡನೆ ಮಾಧವ 6
--------------
ಪ್ರದ್ಯುಮ್ನತೀರ್ಥರು
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆ ನಿರ್ಭಯವ ಪಾಲಿಸು ಪ್ರೇಮಿಪ. ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ- ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕಅ.ಪ. ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದ ಸೇವೆಗಾಲಸ್ಯವ ಮಾಳ್ಪರು ಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು- ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1 ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ- ರಿಂದ ಪೂಜೆಗೊಳೈ ಷಣ್ಮುಖ ವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷ ಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2 ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶ ಕೇವಲ ವಿಜ್ಞಾನಪ್ರಕಾಶ ಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ- ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಪದಗಳು492ಜಯದೇವ ಜಯದೇವ ಜಯ ಸುಬ್ರಹ್ಮಣ್ಯಆರತಿ ಮಾಡುವೆ ನಿನಗೆವರೇಣ್ಯಪ.ಅರಳಿದ ಕಮಲಸನ್ನಿಭಶುಭಚರಣ-ವರಪಂಚಾನನಪೋಲ್ವ ಕಟಿಕಾಂಚ್ಯಾಭರಣಉರುಶಕ್ತಿಕುಕ್ಕುಟಾಭಯವಜ್ರಹಸ್ತಶರಣಾಗತಜನದ ರಿತವಿಧ್ವಸ್ತ 1ಬಲಮುರಿಶಂಖದಂತಿಹ ಚೆಲ್ವಗ್ರೀವಸುಲಲಿತಮಾಣಿಕ್ಯಹಾರದಿಂ ಪೊಳೆವನಲಿವ ಕರ್ಣಕುಂಡಲಗಳ ಶೋಭಜ್ವಲಿತಕಿರೀಟಮಸ್ತಕ ಸೂರ್ಯಾಭ 2ಈ ಕ್ಷಿತಿಯೊಳಗೆ ಪಾವಂಜೇತಿ ನಾಮಸುಕ್ಷೇತ್ರವಾಸ ಸುಜನಜನಪ್ರೇಮಲಕ್ಷ್ಮೀನಾರಾಯಣನ ಪ್ರೀತಿಯ ಪಾತ್ರರಾಕ್ಷಸಾರಣ್ಯದಹನವೀತಿಹೋತ್ರ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸುಬ್ರಹ್ಮಣ್ಯ ಸ್ವಾಮಿ ತೇ ನೌಮಿ ಶರಣಾಗತರ್ಗೆನಿರ್ಭಯವ ಪಾಲಿಸು ಪ್ರೇಮಿ ಪ.ಅಭ್ರವಾಹನಾದಿದೇವ ಸಭ್ಯ ಸಂಭಾವಿತ ಜಗ-ದಭ್ಯುದಯ ತೇಜೋಮಯ ಕರ್ಬುರಾಂತಕ ನಿಶ್ಯೋಕ ಅ.ಪ.ಭಾವಭಕ್ತಿಭಾಗ್ಯಶೂನ್ಯರು ನಿನ್ನಯ ಪದಸೇವೆಗಾಲಸ್ಯವ ಮಾಳ್ಪರುಕೇವಲ ದುರ್ಜನರು ಬಾರರು ದೇವದೇವ ನಿನ್ನ ಕರು-ಣಾವಲಂಬಿಗಳನೆಲ್ಲ ಕಾವನೆ ಮಹಾನುಭಾವನೆ 1ಚಂದ್ರಸೂರ್ಯರಿರುವ ತನಕ ಸ್ಥಾನಿಕ ವಿಪ್ರ-ರಿಂದ ಪೂಜೆಗೊಳೈ ಷಣ್ಮುಖವಂದನೀಯ ಪಾರ್ವತಿಯ ನಂದನ ನಳಿನಾಯತಾಕ್ಷಇಂದುಶೇಖರಕುಮಾರ ಸ್ಕಂದನೆ ನಿತ್ಯಾನಂದನೆ 2ಪಾವಂಜಾಖ್ಯಸುಕ್ಷೇತ್ರವಾಸ ಪೊರೆಯೊ ಪರಮೇಶಕೇವಲ ವಿಜ್ಞಾನಪ್ರಕಾಶಭಾವಜೋಪಮ ಲಾವಣ್ಯ ಕೋವಿದಾಗ್ರಗಣ್ಯ ಮಹಾ-ದೇವ ಲಕ್ಷ್ಮೀನಾರಾಯಣನ ಸೇವಕ ಬುದ್ಧಿದಾಯಕ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ