ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಂಗವಾಸಿಗಳು ಏನು ಸುಕೃತಿಗಳೊ ಪ ಅರುಣ ಉದಯದೊಳೆದ್ದು ಮರುದ್ವøಧೆ ಸ್ನಾನವ ಮಾಡಿ ಪರಮಪುರುಷನ ವಿಶ್ವರೂಪ ನೋಡಿ ಪರವಾಸುದೇವರ ಪ್ರಣವವಿಮಾನದಿ ನೋಡಿ ವರಭಿಗಮನ ಮೊದಲಾದ ಐದು ಪೂಜೆ ಸೇವಿಸುವರು 1 ಶ್ರಾವಣಮಾಸದಿ [ರಂಗನಿಗೆ] ಪವಿತ್ರೋ ತ್ಸವವು ಭಾದ್ರಪದದಲಿ ಲಕ್ಷ್ಮೀಕೊಲುವು ಪಾರ್ವಟೆಯು ಆಶ್ವೀಜಮಾಸದಿ ಉಯ್ಯಾಲೆಯು ತ್ಸವವು ಕಾರ್ತೀಕಮಾಸದಿ ಕೌಶಿಕ ಕೃತ್ತಿಕದೀಪಾ 2 ಮಾರ್ಗಶಿರ ಮಾಸದಿ ಪವಿತ್ರ ಕೊ ಟ್ಟಿಗೋತ್ಸವ ಪುಷ್ಯಮಾಸದಿ ಪುನರ್ವಸುರಥವೂ ಮಾಘಮಾಸದಲಿ ತೆಪ್ಪೋತ್ಸವ ಸಂಭ್ರಮವು ಫಾಲ್ಗುಣಮಾಸದಿ ಪಂಗುನೋತ್ಸವ ನೋಳ್ಪರು 3 ಪುಷ್ಪಸೇವ[ಯು] ಚೈತ್ರಮಾಸದಿ ಚಿತ್ರರಥವು ವೈಶಾಖಮಾಸದಿ ವಸಂತೋತ್ಸವವು ಜೇಷ್ಠಮಾಸದಲಿ ಜೇಷ್ಠಾಭಿಷೇಕವು ಆಷಾಢಮಾಸದಿ ಕಾವೇರಿ ವೈಭೋಗವು 4 ದೇಶಾಂತ್ರದೊಳಗಿದ್ದು ವಾಸುದೇವನ ಸ್ಮರಿಸೆ ನಾಶವಾಗುವುದವರ ಪಾಪರಾಶಿಗಳು ಆ ದೇಶವಾಸಿಗಳನ್ನು ಇನ್ನೇನು ಪೇಳಲಿ [ಬಿಡದೆ] ವಾಸುಕಿಶಯನ ವೆಂಕಟರಂಗನ ನೋಳ್ಪರು 4
--------------
ಯದುಗಿರಿಯಮ್ಮ
ಹಂಬಲ ಮರೆವುದುಂಟೆ ಪ ಬೆಂಬಲವಾಗಿಯೆ ಇಂಬುದೋರದ ನೀನು ಡೊಂಬಿಗಾರರ ಮುಂದೆ ಕಂಬದಂದದಿ ನಿಂದೆ ಅ.ಪ ತೃಣವಾದ ಕಾಯಗಳು ಮನದೊಳಗೆ ಘನವಾಗಿ ತೋರುತಿದೆ ಗುಣವಿಲ್ಲ ಬದುಕಿನೊಳು ಅಣಿತಪ್ಪಿ ಹೋಯಿತು ಪ್ರಣವರೂಪನೆ ಕೇಳು ಕ್ಷಣ ಜೀವ ನಿಲ್ಲದು 1 ಆಯ ತಪ್ಪಿದ ಮಾತನು ಆಡುತ ಎನ್ನ ಬಾಯನು ಹೊಯ್ಪವರ ಸಾಯ ಬಡಿದು ಮುಂದೆ ನ್ಯಾಯ ತೋರದ ಹಾಗೆ ಕಾಯಬೇಕೆನ್ನ ಉಪಾಯದಿಂದಲೆ ಜೀಯ 2 ಎರವು ಮಾಡಿದ ಕಾಲದೊಳಗೆ ಸೂರೆಗೊಂಡವರನೆಲ್ಲ ವಾರಿಜಾಕ್ಷನೆ ನೀ ವಿಚಾರವ ಮಾಡದೆ ದೂರುಗಳೆಲ್ಲವ ಪಾರು ಮಾಡಿದೆ ನಿನ್ನ 3 ಹಸ್ತ ಬಲಿದ ಕಾಲದಿ ಮಸ್ತಕದೊಳು ಹಸ್ತಿಯಂದದಿ ಹೊತ್ತೆನು ಸ್ವಸ್ಥವಿಲ್ಲದ ನರನಸ್ಥಿ ಚರ್ಮದ ಮೇಲೆ ಕಷ್ಟಾಗಿ ಕರುಣವ ನಾಸ್ತಿ ಮಾಳ್ಪೆಯ ಎನ್ನ 4 ಎನ್ನ ಸರ್ವಸ್ವವನು ತಿಂದವರೀಗ ಇನ್ನೇನು ಸುಕೃತಿಗಳೊ ನಿನ್ನ ಮನಸಿಗದು ಚನ್ನವಾದರೆ ಮೇಲೆ ಇನ್ನಾರು ಕೇಳ್ವರು ವರಾಹತಿಮ್ಮಪ್ಪ ನಿನ್ನ 5
--------------
ವರಹತಿಮ್ಮಪ್ಪ