ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ಚಿಂತಿಸು ಮನವೆ ಶ್ರೀಹರಿಯ ನಿ- ಶ್ಚಿಂತೆಯೊಳಗೆ ಪುಲಿಗಿರಿದೊರೆಯ ಪ ಮಾರ ಚತುರ್ಮುಖರಿಗೆ ಪಿತನ ನಾರದ ಶರ್ವ ಪಿತಾಮಹನ ಮದ ವಾರಣಮುಖ ಪ್ರಪಿತಾಮಹನ 1 ನಿಜಶಿರದಿ ಕೀರಿಟವನಿರಿಸಿಹನ ನಿಜಕರುಣದಿ ಭಕ್ತರಿಗೊಲಿದಿಹನ 2 ಮಾಲೆಯ ಕೊರಳೊಳು ಪೊತ್ತಿಹನ ಬಾಲಕ ಸುಕೃತಾನುಗ್ರಹನ ನಿಜ ಲೀಲೆಯೊಳಾಸುರ ನಿಗ್ರಹನ 3 ಅಂಗಜನಿಭ ಸುಂದರನ ಸುರ ಗಂಗೆಯ ಪಡೆದ ಪಾದಾಂಬುಜನ ತುಂಗ ವಿಹಂಗಮ ರಂಗಮನ ಶುಭ ಮಂಗಳ ಗುಣಗಣ ಸಂಗತನ 4 ಸರಸಜಸನ್ನಿಭಲೋಚನನ ನಿಜ ಶರಣರ ಭವಭಯ ಮೋಚನನ ವರದ ವಿಠಲ ವರದಾಯಕನ 5
--------------
ವೆಂಕಟವರದಾರ್ಯರು
ನಿತ್ಯ ನಿಜಾನಂದನಿರ್ಲೇಪ ನಿಗಮಾಂತವೇದ್ಯ ನರಸಿಂಹ 1ವಿಶ್ವನಿರ್ಮಾಣಾದಿ ವಿವಿಧ ಶಕ್ತ್ಯಾತ್ಮಕವಿಧಿಹರ ರೂಪ ಶ್ರೀ ವೀರನರಸಿಂಹ 2ಪರಿಭ್ರಾಜಮಾನಾರ್ಕ ಪಾವಕ ಶಶಿಯುಕ್ತಪದ್ಮ ಮಹಾಯೋಗಪೀಠ ನರಸಿಂಹ 3ಸಮ ಕಾಲೋದಿತ ಸೂರ್ಯಶಶಿಕೋಟಿಸಂಕಾಶಸರಸಿಜಜಾತಾಯುತೋತ್ಸಂಗ ಸಿಂಹ 4ಬ್ರಹ್ಮಾಮರೇಂದ್ರಾದಿ ಬೃಂದ ಕಿರೀಟಾಗ್ರಮಣಿ ನೀರಾಜಿತ ಪಾದಪದ್ಮ ನರಸಿಂಹ 5ಧೃತ ಶಂಖ ಚಕ್ರಾಬ್ಜ ದಿವ್ಯ ಚತುರ್ಭುಜಧರಣೀಧರಾಚ್ಯುತ ದೇವ ನರಸಿಂಹ 6ಪ್ರಹ್ಲಾದಖೇದಾಪಹಾರಕ ಪರಿಪೂರ್ಣಆಹ್ಲಾದ ಸುಕೃತಾಟ್ಟಹಾಸ ನರಸಿಂಹ 7ಆಂತ್ರಮಾಲಿಕಾಕಂಠ ಅಮಿತ ನಖಾಯುಧಅಂಕಾರೋಪತ ದೈತ್ಯಕಾಯ ನರಸಿಂಹ 8ಮಕುಟಮಂಡಿತ ಶುಭ ಮಕರಕುಂಡಲ ಧರಪ್ರಕಟಿತಕರುಣಾಕಟಾಕ್ಷ ನರಸಿಂಹ 9ಕೇಯೂರ ಹಾರ ಕೌಸ್ತುಭಮಣಿ ಭೂತಕಾಂಚನಚೇಲ ಕಲುಷಹರ ಸಿಂಹ 10ಸಕಲ ಲೋಕಾಧೀಶ ಸಾಧು ಸಂರಕ್ಷಕಸುರ ಸಿದ್ಧ ಮುನಿ ವಂದ್ಯ ಶ್ರೀ ನರಸಿಂಹ 11ತೂಲನಾಮಕ ಗ್ರಾಮ ನಿಕಟಾದ್ರಿ ಸ್ಥಿರವಾಸಪಾಲಿತಬಹುಭುವನೇಶ ನರಸಿಂಹ 12ದ್ವಿತೀಯ ಶ್ರೀ ತಿರುಪತಿ ಕ್ಷೇತ್ರಸಮಾನಾದ್ರಿ ವೆಂಕಟಪತಿ ಪ್ರತಿವೇಷ ನರಸಿಂಹ 13ಓಂ ಅನಾದಿ ಬ್ರಹ್ಮಚಾರಿಣೇ ನಮಃ
--------------
ತಿಮ್ಮಪ್ಪದಾಸರು
ಪುಲಿಗಿರಿ ಧೊರೆಯ ಪ ಶ್ರೀರಮಣೀ ನಿಜವಲ್ಲಭನ-ಮಾರ ಚತುರ್ಮುಖರಿಗೆ ಪಿತನ ನಾರದ ಶರ್ವ ಪಿತಾಮಹನ-ಮದ- ವಾರಣಮುಖ ಪ್ರಪಿತಾಮಹನ 1 ಕಿರೀಟವ ನಿರಸಿಹನ ಕರದಲ್ಲಿ ಚಕ್ರವ ಪಿಡಿದಿಹನಾ-ನಿಜ-ಕರುಣದಿ ಭಕ್ತರಿಗೊಲಿದಿಹನ2 ಕೊರಳೊಳು ಪೊತ್ತಿಹನ ಬಾಲಕ ಸುಕೃತಾನುಗ್ರಹನ-ನಿಜ ಲೀಲೆಯೊಳಾಸುರ ನಿಗ್ರಹನ 3 ಪಡೆದ ಪಾದಾಂಬುಜನ ವಿಹಂಗ ಗುಣಗಣ ಸಂಗತನ 4 ಭವಭಯ ಮೋಚನನ ವರವ್ಯಾಘ್ರಾಚಲ ನಾಯಕನ-ನಮ್ಮ- ವರದವಿಠಲ ವರದಾಯಕನ5
--------------
ಸರಗೂರು ವೆಂಕಟವರದಾರ್ಯರು
ಶರಣು ಭಾರತಿರಮಣ ಶಮಲವರ್ಜೀತ ಚರಣ ಕೆರಗಿ ಬೇಡುವೆ ವರವ ಪಿಡಿಯೆನ್ನ ಕರವಾ ಪ ಇಪ್ಪತ್ತೊಂದು ಸಾವಿರದಾರುನೂರು ಜಪ ತಪ್ಪದೆಲೆ ಸಕಲ ಜೀವರೊಳು ಜಪಿಸಿ ಮುಪ್ಪಿಲ್ಲದ ಜನ ಪದವಿಯನೈದಿ ಭಜಕರಿಗೆ ಸುಪ್ತಿ ಸ್ವಪ್ನವ ಬಿಡಿಸಿ ಮುಕ್ತರನು ಮಾಳ್ಪೆ 1 ಪವಮಾನರಾಯಾ ನೀ ಸಲಹದಿರೆ ಪಾಲಿಸುವ ದಿವಿಜರಿನ್ನುಂಟೇನೋ ಲೋಕದೊಳಗೆ ಯವನರಿಂದಲಿ ಬಂದ ಭಯವ ಪರಿಹರಿಸಿ ನಿ ನ್ನವರ ಸಂತೈಸು ಸರ್ವಕಾಲದಲೀ 2 ಲೋಗರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು ಚ ನ್ನಾಗಿ ಸಂತೈಪೆನೆಂದನು ದಿನದಲೀ ಭೋಗಪುರದಲಿ ಬಂದು ನೆಲೆಸಿದೆಯ ನೀ ಪರಮ ಭಾಗವತ ತಿಲಕ ಪಾಲಕ ವೀತಶೋಕ 3 ಭಾನುನಂದನಗೆ ನೀ ಒಲಿದ ಮಾತ್ರದಲಿ ರಘು ಸೂನು ಸಂರಕ್ಷಿಸಿದ ಸುರಪತನಯಾ ವಾನÀರೋತ್ತಮ ವಾಲಿಯನು ಸದೆದ ನಿನ್ನ ದಯ ಕಮಲ ಸಂಭವನ ಪದಕೆ ಯೋಗ್ಯ 4 ಶುಚಿನಾಮಕನೆ ಎನಗೆ ಹರಿಕಥಾ ಶ್ರವಣದಲಿ ರುಚಿಪುಟ್ಟುವಂತೆ ಮಾಡುನುಗಾಲದೀ ಮುಚುಕುಂದ ವರದ ಜಗನ್ನಾಥವಿಠಲನ ಗುಣ ರಚನೆಗೈವ ಸಮರ್ಥ ನೀನೇ ಸುಕೃತಾರ್ಥ 5
--------------
ಜಗನ್ನಾಥದಾಸರು
ಶರಣೆಂಬೆನೋ ಪರಮಾತ್ಮನೆ ನೀ ಕರುಣಿಸೆನ್ನನು ಪ ಶರಣಾಶ್ರಯ ಹಿತಾಯ ಸತ್ಯ ಸುಗುಣಿಯನಿನ್ನು ಅ.ಪ ಪರಮಾನಿನಿಯರ ಸಂಗದೊಳಗೆ ಯಿರಿಪುವುದೂ ಮನ ನರಸಿಂಹನಾಮ ಖಡ್ಗವೀಯೊ ಬೇಡ್ವೆ ನಾನದನಾ 1 ಸಕಲಾರ್ಥಮೆನಗೆ ಅರುಹಿ ಕಾಯೊ ಸರ್ವಾರ್ಥ ಫಲಪ್ರದಂ ಸುಕೃತಾರ್ಯ ಸೇವೆಯೊಳಿರಿಸಿ ಸಲಹೊಸರ್ವಸ್ಯಾತ್ಪರಂ2
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀನಿವಾಸ ಶ್ರೀಮನೋಲ್ಲಾಸ ಶ್ರೀನಿವಾಸ ಪ ಶ್ರೀನಿವಾಸ ಶುಭಮಾಮವ ಗಾನಲೋಲಿತ ಸನ್ಮಾನಿತಲೀಲಾ ಅ.ಪ ಭೂದೇವನಿವಹ ಸಂಭಾವಿತ ಭಾವ 1 ರಾಮರಾಮ ರಘುವಂಶ ಲಲಾಮ ರಾಮ ರಾಮ ರಮ್ಯಗುಣಧಾಮ ಮುನಿಜನಪ್ರೇಮ ದನುಜಸಂಗ್ರಾಮಭೀಮ2 ಕಂಜನಾಭ ಕಾಲಾಂಬುಧಾಭಾ ಕಂಜನಾಭ ರಿಪು ವಕ್ತ್ರ 3 ಸುಂದರಾಂಗ ಸುಕೃತಾಂತರಂಗ ಸುರಸುಂದರೀನಿಚಯ ನಂದಗೋಕುಲಾನಂದ ಮುಕುಂದ 4 ಭವ್ಯರೂಪ ಭಕ್ತಾಲಯ ದೀಪ ಭವ್ಯರೂಪ ಧೃತ ದಿವ್ಯಚಾಪ ಸುರಭಾವ್ಯಮಹಿಮ ಮಾಂಡವ್ಯಸುಸೇವ್ಯ 5 ವ್ಯಾಘ್ರಶೈಲಾವಾಸ ಸುಶೀಲಾಶೈಲಶಿಖ- ರಾಗ್ರಲೋಲ ದೇವಾಗ್ರಗಣ್ಯ ಭಕ್ತಾಗ್ರ ಶರಣ್ಯ 6 ದುರಿತದೂರಾ ದುಃಖಾಭ್ರಸಮೀರಾ ದುರಿತದೂರ ಘಣಿಗಿರಿವಿಹಾರ ಶ್ರೀವರದವಿಠಲಾ 7
--------------
ವೆಂಕಟವರದಾರ್ಯರು
ಶ್ರೀನಿವಾಸ-ಶ್ರೀಮನೋಲ್ಲಾಸ-ಶ್ರೀನಿವಾಸ ಪ ಶ್ರೀನಿವಾಸ ಶುಭಮಾಮವ ಗಾನಲೋಲಿತ ಸನ್ಮಾನಿತಲೀಲಾ ಅ.ಪ. ದೀಪಿತ ಭವದಾವ-ದೇವದೇವ ನಿವಹಸಂಭಾವಿತಭಾವ 1 ರಾಮ ರಾಮರಘುವಂಶಲಲಾಮ ರಾಮ ರಾಮ ದನುಜ ಸಂಗ್ರಾಮ ಭೀಮ 2 ಕಂಜನಾಭಕಲಾಂಬುಧಾಭ ಕಂಜನಾಭ ರಿಪು ವಕ್ತ್ರ 3 ಸುಂದರಾಂಗ ಸುಕೃತಾಂತರಂಗ ಸುರಸುಂದರೀ ನಿಚಯ ನಂದಗೋಕುಲಾನಂದ ಮುಕುಂದ 4 ಭವ್ಯರೂಪ ಭಕ್ತಾಲಯ ದೀಪ ಮಾಂಡವ್ಯ ಸುಸೇವ್ಯ 5 ವ್ಯಾಘ್ರಶೈಲಾವಾಸ ಸುಶೀಲಾ ಶೈಲ ಶಿಖರಾಗ್ರಲೋಲ ದೇವಾಗ್ರಗಣ್ಯ ಭಕ್ತಾಗ್ರ್ಯಶರಣ್ಯ 6 ದುರಿತದೂರಾ-ದುಃಖಾಭ್ರಸಮೀರಾ ದುರಿತದೂರ ಘಣಿಗಿರಿವಿಹಾರ ಶ್ರೀವರದ ವಿಠಲಾ 7
--------------
ಸರಗೂರು ವೆಂಕಟವರದಾರ್ಯರು