ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರಿಯ ವಿಡಿರಣ್ಣ | ಸ್ವಹಿತದ ದಾರಿಯ ಹಿಡಿರಣ್ಣಾ ಪ ದಾರಿಯ ವಿಡಿನಿಜ ಸಾರಿಹ ಶೃತಿಗಳ | ಚಾರು ಭಕುತಿಯಾ ಅ.ಪ ಬಲ್ಲವರಿಗೆ ಬೆಸಗೊಳ್ಳುತ ಮನಸಿನ | ಖುಳ್ಳತನದ ಗುಣವೆಲ್ಲವು ಹೋಗಿ | ಬಲ್ಲವರನು ಕಂಡು ಮೆಲ್ಲಡಿಗಳ ವಿಡಿ | ದುಳ್ಳ ಸಿದ್ಧಾಂತದ ಸೊಲ್ಲವ ಕೇಳಿ | ಉಲ್ಹಾಸದಿಂದಲಿ ಮೆಲ್ಲನ ಭ್ಯಾಸವ | ಮೆಲ್ಲನೆ ಮಾಡುತ ಸುಲ್ಲಭ ತೆರದಾ 1 ಕಂಡ ಪಥಕ ಹರಿದಂಡಲೆಯದೆನೆರೆ | ತಂಡಿಸುತಿಹ ಪಾಷಾಂಡ ಹೋಗಿ | ಚಂಡ ಸುಜ್ಞಾನದ ಲುಂಡನು ಭವದೃಢ | ಗಂಡು ಸದ್ಭೋಧದಿ ಪಂಡಿತನಾಗಿ | ಹಿಂಡ ಭಾಗವತರ ಮಂಡಲದೊಳು ಕೂಡಿ | ಪುಂಡರೀಕಾಕ್ಷನ ಕೊಂಡಾಡುತ ನಿಜ 2 ಹಿಂದಿನ ಸುಕೃತಗಳಿಂದ ನೃದೇಹದಿ | ಬಂದೆನು ನಾನಿನ್ನು ಮುಂದಣ ಗತಿಯಾ | ಹೊಂದುವೆ ನಾವದುಯಂದು ವಿಚಾರವಾ | ತಂದು ಸದ್ಭಾವಲಿಂದೇ ನಿಷ್ಠೆಯಲಿ ತಂದೆ ಮಹಿಪತಿ ಪ್ರಭುಪದ ಭವ ಬಂಧನ ಹರಿವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ ಗುರುವಿಗೆ ಬಾಗಿ ಶರಣವ ಹೋಗಿ | ತರಳತೆ ನೀಗಿ ಅರಹುತರಾಗಿ 1 ಭ್ರಾಂತರಕೂಡಿ ಮತಿಗಳ ಬ್ಯಾಡೀ | ಸಂತರೊಳಾಡಿ ಅನಂತನ ಪಾಡಿ 2 ಸಂಧಿಸಿ ತಂದ ಸುಕೃತಗಳಿಂದ | ಹೊಂದುವವೆಂದೇ ನರದೇಹ ಮುಂದೆ 3 ವಿವೇಕದಿಂದಾ ವಿಡಿರಿದೆ ಛಂದಾ | ಅವನಿಲಿ ಬಂದಾ ಜನುಮಕ ಛಂದಾ 4 ಗುರುಮಹಿಪತಿಯಾ ಚರಣದ್ವಿತಿಯಾ | ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಳೆಸಗುವುದು ಶಿತಿ ಕೃಷ್ಣವೆಂಬುವು ಅಸುರರೇ ಷಟ್ ಷಷ್ಟಿ ಕೋಟಿಯು ಸುರರದರೊಳರ್ಧ 1 ಉತ್ತರಾಯಣ ಶುಕ್ಲದಿವಿ ಶಿಖಿ ಹತ್ತುವರು ರಗಮಾರ್ಗದಲ್ಲಿಯೆ ಪಾರ್ಥಗರುಹನೆ ಗೀತೆಯಲಿ ವಿದ್ವಾಂಸರರಿಯುವುದು 2 ಕೆಲರು ಮುಕ್ತರು ಸುಮನಸರು ಮಿಗೆ ಹಲವು ಜನಗಳು ದೈತ್ಯರೆನಿಪರು ಜಲಜರಿಪುವೆನಿಸುವನು ಈ ಪ್ರಭು ಕಲುಷ ಸುಕೃತಗಳಿನಿತು ಭಾಗವು ತಿಳಿವ ಬುಧಜನಕೆ 3 ಪಾಪವಸುರರು ಪುಣ್ಯವಮರರು ವ್ಯಾಪಿಸಿಹುದ್ಯರಡೇ ಪ್ರಪಂಚದಿ ಪರಿ ಸಾಪರಾಧಿಗಳೆನಿಸುತಿಹರು ಮ ಹಾಪ್ರಯತ್ನ ದುರಾಶೆಯಿರುವರೆಯಸುರರೆನಿಸುವರು 4 ಯರಡರೊಳು ದುಃಖಧಿಕರೆ ಸಾಮಾನ್ಯ ಜನರೆಲ್ಲ ವರು ಸದಾ ಗುರುರಾಮ ವಿಠಲನವರ ಕೈಬಿಡುನು 5
--------------
ಗುರುರಾಮವಿಠಲ
ಹೀಗೆ ಮಾಡಬೇಕೋ-ವಿಠಲ ತಂದೆಹೀಗೆ ಮಾಡಬೇಕೋ ಪಹೇಗಾದರು ದುರಿತಗಳೆನ್ನ ಕಾಡದಹಾಗೆ ಮಾಡ ಬೇಕೋ ಅ.ಪಹಿಂದಿನ ಸುಕೃತಗಳ ಫಲದಿಂದ ಬಂದೀ ನರಜನುಮಮುಂದೆ ನಾ ತಾಯ ಉದರದಲಿ ಜನಿಸದಹಾಗೆ ಮಡಬೇಕೋ ವಿಠಲ ತಂದೆ 1ದಾನಿ ನಿನ್ನನು ಬೇಡುವೆ ದುಷ್ಕರ್ಮದ -ಹಾನಿಯೊಂದೇ ಸಾಲದೆಹೀನ ಮಾನವರಿಗೆ ನಾನು ಕೈಯಾನದಹಾಗೆ ಮಾಡಬೇಕೋ - ವಿಠಲ ತಂದೆ 2ಕರುಣಿಪುರಂದರವಿಠಲ ತಂದೆನೆರೆನಂಬಿದೆ ನಿನ್ನಶರಣ ರಕ್ಷಕನೆಂಬ ಬಿರುದು ಬೇಕಾದರೆಹೀಗೆ ಮಾಡಬೇಕೋ - ವಿಠಲ ತಂದೆ 3
--------------
ಪುರಂದರದಾಸರು