ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃತಕೃತ್ಯನಾದೆನಿಂದಿನ ದಿನದಲಿ ವ್ರತಿ ಕುಲೋತ್ತಂಸ ಭುವನೇಂದ್ರರಾಯರ ಕಂಡು ಪ ಗಂಗಾ ಪ್ರಯಾಗ ಗಯಾ ನೈಮಿಷಾರಣ್ಯ ಕುರು ಜಾಂಗಳಾದ್ಯಖಿಳ ಸುಕ್ಷೇತ್ರಗಳಲಿ ಸಾಂಗ ಕರ್ಮಗಳ ಹರಿಗರ್ಪಿಸಿದ ಫಲವು ಮುನಿ ಪುಂಗವರ ಕಂಡ ಮಾತ್ರದಿ ಸಮನಿಸಿತೆನಗೆ 1 ಹಿಂದೆ ಬಹು ಜನ್ಮದಿ ಮಾಡಿದ ಸುಕೃತಕೆ ಕ ಪಾದ ಕಮಲ ಸಂದರ್ಶನವೆ ಮಹತ್ಪಲವಾಯಿತೆನಗೆ ಗೋ ವಿಂದನ ಪ್ರತಿಬಿಂಬರಾದ ಕಾರಣದಿಂದ 2 ಅನ್ಯಸಾಧನೆಗಳಿನ್ನಾಚರಿಸಲ್ಯಾಕೆ ಮ ತ್ತನ್ಯರಾರಾಧನೆಯ ಮಾಡಲ್ಯಾಕೆ ಸನ್ನುತ ಮಹಿಮ ಜಗನ್ನಾಥ ವಿಠಲನ ಕಾ ರುಣ್ಯ ಪಾತ್ರರಾ ಕರುಣವಾಯಿತೆನ್ನೊಳಿಂದು 3
--------------
ಜಗನ್ನಾಥದಾಸರು
ತನುವೆನ್ನದು ಚೇತನವೆನ್ನದು ಎಂದು ಅನುದಿನ ಪೋಷಣೆಯನು ಮಾಡಿದೆ ಹರಿ ಪ ಚಿನುಮಯ ನಿನ್ನನು ನೆನೆವೆನೆಂದರೆ ಮನ ತನುಮಧ್ಯೆಯರ ತನುವಿನೊಳಿರುತಿಹುದು ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ1 ಚರಣದ ಪೂಜೆಯೊಳಿರುವೆನೆಂದರೆ ಕರವರೆಡು ಕೋಮಲೆಯರನರಸುವುವು ಹರಿಕಥಾಶ್ರವಣದೊಳಿರೆ ಈ ಕಿವಿಗಳು ಹರಿಣಾಕ್ಷಿಯರ ಕಂಠಸ್ವರಕೆ ಮೋಹಿಪವಯ್ಯ 2 ದುರಿತದೂರನ ನಾಮ ಸ್ಮರಿಸದು ನಾಲಿಗೆ ಸರಸಿಜಾಕ್ಷಿಯರೊಳು ಸರಸೋಕ್ತಿ ಪಡೆದು ಚರಣಶ್ರೀತುಳಸಿಯನರಿಯದೆ ನಾಸಿಕ ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3 ನಿನ್ನಂಘ್ರಿಗೆರಗದೆ ಕುನ್ನಿಶರೀರವಿ ದುನ್ನುತಸ್ತನವುಳ್ಳ ಕನ್ನೆಯರೊಳ್ ತನ್ನ ಸುರತಸುಖವನೆ ಚಿಂತಿಸುವದು ಎನ್ನಾಧೀನದೊಳಿಲ್ಲ ನೀನೆ ಬಲ್ಲೆ 4 ಎರವಿನ ಸಿರಿಯಂತೆ ಕರಣಕಳೇವರ ಬರಿದೆ ನನ್ನದು ಎಂದು ಮೆರೆದೆ ನಾನು ಹರಿ ನಿನ್ನದೇ ಸರಿ ದುರಿತಸುಕೃತಕೆನ್ನ ಗುರಿಮಾಡದೆ ಕಾಯೋ ವರದವಿಠಲ ಕೃಷ್ಣ 5
--------------
ವೆಂಕಟವರದಾರ್ಯರು
ಮುಳಿಯ ಬೇಡಿರಿ ಎನ್ನಪ್ಪಗಳಿರೆ ಕೇಳಿ ಪ. ಎಳದಂಗೆ ನುಡಿದುದನು ಹಳಿವಿರೇ ಪೇಳೀ ಅ.ಪ. ಶೃತಿ ಸ್ಮøತಿ ಪುರಾಣ ಇತಿಹಾಸ ಶಾಸ್ತ್ರಗಳ ಗತಿಮಿತಿ ತತ್ವಮದೊಂದನರಿಯೆ ಅತಿಶಯಿತ ಪಾಂಡಿತ್ಯ ಪ್ರಭೆಯಿಂ ರಾಜಿಪರಲ್ಲಿ ಕ್ಷಿತಿನಾಥನಾಡಿಸಿದ ಪರಿಯಿದೆಂದೆನುವೆ ವಿನಯದಲಿ 1 ಅಪ್ಪಗಳಿರೆ ನಿಮ್ಮಡಿಯೊಳೊಪ್ಪಿಸಿರುವೀ ಕೃತಿಯ ತಪ್ಪೊಪ್ಪುಗಳ ಸಲೆ ನೋಡಿ ನಲವಿಂ ತಪ್ಪುಳ್ಳೊಡದನೊಪ್ಪದಿಂಸಾವರಿಸಿ ಮುಂ ದೊಪ್ಪುತಿಹ ಜಸವನಪ್ಪುಗೊಳ್ಳಿರಿ ದಿಟದಿಂ2 ಕಕ್ಕುಲತೆಯುಳ್ಳೆನ್ನ ಅಕ್ಕತಂಗಿಯರಿಗಿದನು ಅಕ್ಕರತೆಯಿಂದೊಪ್ಪಿಸಿಹೆನೆಂದರಿಯಿರಿನ್ನು ಕಕ್ಕಸದಿ ನೋಡದಿರಿ ಧಿಕ್ಕರಿಸಿ ನುಡಿಯದಿರಿ ಚಿಕ್ಕಮಕ್ಕಳ ನೋಡಿ ತಕ್ಕೈಸಿ ನುಡಿಗಲಿಸಿರಿ ಸುಕೃತಕೆ ಸಾಕ್ಷಿಯೆಂಬೆ ಸಾರಿ] 3
--------------
ನಂಜನಗೂಡು ತಿರುಮಲಾಂಬಾ