ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಲಭಯಾನೆ ಕಂಜಲೋಚನೆ ಕದವತೆಗೆಯೆಲೆ ಭಾಮಿನಿ ನಾಂ ಬಳಲಿ ಬಂದೆನು ಭಾಮಿನೀ ಪ. ಬಳಲಿ ಬಂದರೆ ಒಳ್ಳಿತಾಯಿತು ತಳರ್ವುದಿಲ್ಲಿಂ ನಿಲ್ಲದೆ ನಾಂ ಕದವ ತೆಗೆಯೆನು ಸಾರೆಲೆ ಅ.ಪ. ಭಾಪುಭಾಪೆಲೆ ಕೋಪಗೈವುದು ಚಾಪಲ್ಯಾಂಬಕಿ ಯೆನ್ನೊಳು ಓವನಲ್ಲೇ ಕೋಪಸಲ್ವುದೆ ಈ ಪರಿಯೊಳ್ ಪೇಳ್ವುದು ನೀ ನೀಪರಿಯೊಳ್ ಪೇಳ್ವುದು 1 ಪರಿ ಕಪಟನಾಟ್ಯವ ಮಾಳ್ಪರೇ ಓಪೆÀನೆಂದು ಕೂಗುತಿರುವ ಭೂಪನಾವನು ಸಾರೆಲೋ ನಾನೋಪೆ ಯಾರಿಗೆ ಸಾರೆಲೊ 2 ನೀರೆ ಮುಕ್ತಾಹಾರೆ ಸ್ಮರವೈಯ್ಯಾರೆಯಿಂತು ಪೇಳ್ವರೇ ಕೇಳ್ ನೀರನಾನೆಲೆ ಶ್ರೀಕರೆ 3 ನೀಂ ಜಾರನಂದದಿ ಕಾಣುವೆ ನೀನಾರು ಪೇಳು ನೋಡುವೆ 4 ದೇವಿಕೇಳು ವಸುದೇವ ದೇವಕಿಕುಮಾರ ನಾನೆಲೆ ಭಾಮಿನೀ ಸುಕುಮಾರನಾನೆಲೆ ಭಾಮಿನೀ ಭಾವಜಾತನ ಬಾಣಕೀಯದೆ ಕಾವುದೆನ್ನನು ಕಾಮಿನೀ ದಯೆತೋರು ಮನೋಮೋಹಿನೀ5 ದೇವಕೀಸುತನಾದರೊಳ್ಳಿತು ನಾವು ಬಲ್ಲೆವು ಸಾರುನೀಂ ಮಾವನನ್ನೆ ಮಥಿಸಿ ಬಂದ ಮಹಾಮಹಿಮನೆ ಸಾರು ನೀಂ, ಆಹ ಭಾವಿಸೀ ಭಯಪಡುವೆನೇಂ 6 ಭೀಷ್ಮಕಾತ್ಮಜೆ ಭೇಷಜಾಂಬಕಿ ಹಾಸ್ಯ ಮಾಡದೆ ಬೇಗನೆ ನಾಂ ಬೇಡಿಕೊಂಬೆನು ನಿನ್ನನು 7 ದೋಷವೆಣಿಸದೆ ಪೋಷಿಸೆನ್ನ ಮದೀಶ ಹಾಸ್ಯವ ಮಾಡಿದೆ ಶೇಷಶೈಲನಿ ವಾಸ ಎನ್ನನು ಪೋಷಿಸೆಂದಳು ವಿನಯದಿ ಕೈಪಿಡಿದ ದೇವನ ಮೋದದಿ 8 ಜಯಜಗನ್ನಾಥ ಭಕ್ತಾಭಯಪ್ರದ ಶ್ರೀಕರ ಜಯದೇವ ದಯಾಸಾಗರ ಶೇಷಗಿರೀಶ ಶ್ರೀಧರ 9
--------------
ನಂಜನಗೂಡು ತಿರುಮಲಾಂಬಾ
ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ ಅಪಾರ ಮಹಿಮ ಅನಂತಾನಂತ ರೂಪನಾ ಪ ನಖ ನಾಲ್ಬೆರಳು ಎರಡು ಜಾನು ಜಂಘೀ ಕಟಿ ನಾಭಿ ಉದರ ಉರುತರ ಕಂಠಾ ಕದಪು ಕರ್ಣ ನಯನಾ ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ1 ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ ಕಮಲ ತುಲಸಿಹಾರ ಮುತ್ತಿನಸರ ಪ ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ 2 ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ ಅಪ್ರಾಕೃತ ಶರೀರ ಯತಿಗಳ ಮನೋಹರ ಮತಿಗೆ ಅಗೋಚರ ಸಿರಿ ಪತಿ ವಿಜಯವಿಠ್ಠಲನಾ 3
--------------
ವಿಜಯದಾಸ