ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು
ಗೋವಿಂದ ಗೋವಿಂದ ಗೋವಿಂದನೆನ್ನಲು ಪ ಏನೆಂದು ಪೇಳಲಿ ಆನಂದವನು ನಾ ಅ.ಪ ಹಸಿವು ತೋರದೆನಗೆ ತೃಷೆಯು ತೋರದೆನಗೆ ಪರಿ ನಾಮರಸವ ಸೇವಿಸುತಿರೆ 1 ದ್ವೇಷವು ತೋರದು ರೋಷವು ತೋರದು ಶೇಷಶಯನ ನಿನ್ನ ಹರುಷದಿ ಪೊಗಳಲು 2 ಭಯವು ತೊಲಗುವುದು ಜಯವು ತೋರವುದು ನಯನಗಳಲಿ ಸುಖ ಜಲವು ಸುರಿಯುವುದು 3 ಎಂದಿನ ಪುಣ್ಯವೊ ಇಂದರಿತೆನು ಗೋ- ವಿಂದನಾಮ ಮಕರಂದದ ಸವಿಯನು4 ನಿನ್ನ ಸುಕರುಣದ ಚಿನ್ಹೆ ಕಾಣಿಸಿತು ಪ್ರ ಸನ್ನನಾಗುವಿಯೆಂದು ಚೆನಾÀÀ್ನಗಿ ಅರಿತೆನು5
--------------
ವಿದ್ಯಾಪ್ರಸನ್ನತೀರ್ಥರು
ತಾರಸೋ ಎನ್ನನು ನೀನು | ಮೊರೆಯ ಹೊಕ್ಕೆನು ಪ ಸುರಭಿ ಚೋರ ವಿದಾರಾ | ಸುರಭಿ ಸಂಸಾರ ಧೀರಾ | ಸುರಭಿ ಭಾಗವತರಾ | ಗುರುತನವರತದಲರಿತವರೋಳಗಿಹೆ 1 ನಗಜಾಮಾತಾಸನ್ನುತಾ | ನಗದಾ ವೈರಿಯಾ ಭ್ರಾತಾ| ನಗದಭಿಮಾನ ಸೂತಾ| ನಗಧರ ದುಗವಾಬ್ಧವಾಸ ನೆ 2 ಗುರು ಘಾತಕಾನುಜೆಯಾ | ಗುರುತಭಿಮಾನ ದೊಡೆಯಾ | ಸುಕರುಣಾಲು ಮೂರುತಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬ್ರಹ್ಮ ಸುಖದಲಿ ನಲಿದಾಡುವೆ ಧ್ರುವ ನಮೋ ಶ್ರೀ ಗಣನಾಯಕನಿಗೆ ನಮೋ ನಮೋ ಶ್ರೀ ಸರಸ್ವತಿಗೆ ನಮೋ ನಮೋ 1 ಸದ್ಗುರುವಿಗೆ ನಮೋ ಶ್ರೀ ಸ್ವಾಮಿಗೆ ನಮೋ ನಮೋ 2 ಇಷ್ಟದೈವಕೆ ನಮೋ ಮಹಿಮಗೆ ನಮೋ ನಮೋ 3 ಸೂತ್ರಾಂತ್ರಿಗೆ ನಮೋ ಸುಪಥಕೆ ನಮೋ ನಮೋ 4 ಸುಸರ್ವ ದೈವಕೆ ನಮೋ ರೂಪಕೆ ನಮೋ ನಮೋ 5 ಶಕ್ತಿಗೆ ನಮೋ ಮುನಿಗಳಿಗೆ ನಮೋ ನಮೋ 6 ಸುಭಾಗವತರಿಗೆ ನಮೋ ನಮೋ ನಮೋ 7 ಸುಮಹಿಮರಿಗೆ ನಮೋ ಸುತೀರ್ಥಕ್ಷೇತ್ರಕ್ಕೆ ನಮೋ ನಮೋ 8 ಸುಪುಣ್ಯಶ್ಲೋಕರಿಗೆ ನಮೋ ಸಜ್ಜನರಿಗೆ ನಮೋ ನಮೋ 9 ತ್ರೈಲೋಕ್ಯನಾಥಗೆ ನಮೋ ಸರ್ವೋತ್ಮಗೆ ನಮೋ ನಮೋ 10 ಸುಕರುಣಿಗೆ ನಮೋ ಭಕ್ತವತ್ಸಲಗೆ ನಮೋ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಾರತಿರಮಣ ನಾ ಸಾರುವೆ ಚರಣಾ ಭೂರಿ ಸುಕರುಣಾ ಪ ಮೂರು ಕಾಲದಿ ನಾನಾಮೂರೊಂದು ರೂಪಾ ಮೂರಾರು ಭಕುತಿಲಿ ಸಾರುವೆ ಸುರಪಾ 1 ಮೂರೆರಡಾರಿಂದಲಿ ಮೂರಿಂದ ತಾಪಾ ಮೂರುಮಾಡದಲೆನ್ನಾ ಪೊರೆಯಯ್ಯಾ ಭೂಪಾ 2 ಕುಟಿಲ ದುರ್ವಿಷsÀಯ ಲಂಪಟ ಬಿಡಿಸೀಗಾ ದಿಟ ಗುರುಜಗನ್ನಾಥ ವಿಠಲನ ನಣುಗಾ 3
--------------
ಗುರುಜಗನ್ನಾಥದಾಸರು
ಸುರಿಸುವ ಸುಖ ಸಂಭ್ರಮ ಸಾರಗುಣಗರಸುವ ಘನವದನೆ ಸುಕರುಣ ಸದ್ಗುರುಪಾದ ಪೂರ್ಣ 1 ಪರಿ ಮಿಂಚುದು ದಿವ್ಯಗುಣ ಸದ್ಗುರುಪಾದ ಪೂರ್ಣ 2 ನಿಜತತ್ವಜ್ಞಾನ ಸದ್ಗುರುಪಾದ ಪೂರ್ಣ 3 ನಿಜ ದಿವ್ಯಸ್ಥಾನ ಮನವೆ ಸದ್ಗುರುಪಾದ ಪೂರ್ಣ 4 ನಿಜದೃಷ್ಟಿ ಗುರುಕೃಪೆ ಙÁ್ಞನ ಪಾದ ಪೂರ್ಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿರಿದು ಸಂಸಾರ ನೆಲೆಯದು ಕಲ್ಪತರುಕಾಮಧೇನುವದು ಸುಖವೋ ದುಃಖವೋಹೊನ್ನು ಸತಿಯು ಸುತರೆನ್ನವರೆನ್ನದೆಚಿನ್ಮಯರೂಪೆಂದು ತಿಳಿದುಉನ್ನತವಾಗಿಹ ಸಾಧುಗುಣದಿ ತಾಮುನ್ನ ನೋಡುವವನ ನರನೋ ಹರನೋ1ಮನೆಯು ಮಾತಾ ಪಿತ ಮನುಜವರ್ಗವನೆಲ್ಲಘನಮಹಿಮನ ವಿನೋದವೆಂದುಸನುಮತದಲಿ ತಾನಧಿಕಾರಿಯೆನಿಸಿಯೆಮನದಿ ಸೂಚಿಪುದು ಉರಿಯೋ ಸಿರಿಯೋ2ಬಂಧನದೊಳು ಮಹಾ ನಿಂದನೆಯನು ಕೇಳುತಲಿಕುಂದುಕೊರತೆಗೆಲ್ಲ ಹಿಗ್ಗುತಲಿಇಂದಿದು ಅತ್ಮನ ಲೀಲಾ ಚರಿತನೆಂದುಮುಂದೆ ತೋರುವದಿದು ಭಯವೋ ಜಯವೋ3ಜನನ ಮರಣ ಸುಟ್ಟುಮನುಜ ಜೀವನ ಕೆಟ್ಟುಕನಸಿನ ತೆರ ಸಂಸಾರ ಮೂಡಿದಿನಕರಜ್ಯೋತಿಯಲಿ ಬಹುಬೆಳಗುತಲಿ ತಾ ನಿಹುದುಗೆಲುವೋ ಒಲವೋ4ಕರುಣಕಟಾಕ್ಷಸುಕರುಣ ಶಾಂತತ್ವದಿಸರಸ ಸುಜ್ಞಾನವನಳವಡಿಸಿಗುರುಚಿದಾನಂದಾವಧೂತನೆ ತಾನಾಗಿಹರುಷಿಸಿ ಸುಖಿಪುದು ದೊರೆಯೋ ಚರಿಯೋ5
--------------
ಚಿದಾನಂದ ಅವಧೂತರು