ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ನೋಡಿದ್ರ್ಯಾ ಕಂಡಿದ್ರ್ಯಾ ಶ್ರೀಸುಬ್ಬರಾಯ ದಾಸರ್ಯರಾ ಪ ಕಾಡೂವ ಭವದ ದೂರೋಡಿಪ ಮಾರ್ಗದಜಾಡನೆ ತಿಳಿಸುವಾಗಾಢ ಮಹಿಮರ ಅ.ಪ. ಪುರಂದರ | ದಾಸರ ಪೀಳಿಗೆ ಶರಧಿಗಾಶಶಿಗೊಪ್ಪುವ ದಾಸವರ್ಯರನ 1 ಮುದ್ದು ಮೋಹನ ಗುರು | ಮುದ್ದು ಶಿಷ್ಯರು ತಂದೆಮುದ್ದು ಮೋಹನರು | ಪ್ರಸಿದ್ಧರಾಗಿಹರಾ 2 ಪರ | ಮಾರ್ಥ ಚಂದಿರ ಹರಿಕೀರ್ತನೆ ಗೈವ ಸ | ತ್ಪಂಥ ಬೀರಿದರಾ 3 ಅಂಕಿತರಹಿತ ನಿ | ಷಿದ್ಧ ದೇಹವು ಎಂದುಅಂಕನಗೈಧರಿ | ಲೆಂಕತನವ ಬೀರ್ದರ 4 ಸಹಸ್ರಾರು ಅಂಕಿತ | ವಿಹಿತೋಪದೇಶ ಸ-ನ್ನಿಹಿತರ ಗೈದೂ | ದ್ಧರಿಸಿದ ಗುರುಗಳ5 | ದಾಸಕೂಟಾಬ್ಧಿ ತಾ | ರೇಶನ ಪರಿಯಲಿಭಾಸಿಸಿ ಶರಣರ | ಪೋಷಿಸಿದವರನು 6 ಸಾರ ಶಾಸ್ತ್ರದ ಸವಿ | ಆರು ಮೊಗನ ಪರಿಆರು ಬಗೇಯಲಿ | ಬೀರಿದ ವರನ 7 ಸುಂದರೇಶ ಪ್ರಾಣ | ಅಂದ ಪ್ರತೀಕವಅಂದೇಭ ಗಿರಿಯಲ್ಲಿ | ಚಂದದಿ ನಿಲಿಸಿದರ 8 ಪ್ರಥಮ ಮಾಸವು ವರ | ಸಿತ ನವಮಿ ಮಧ್ಯಾಹ್ನಪೃಥುವಿ ಸಂಬಂಧವ | ಮತಿಯಿಂದ ತ್ಯಜಿಸಿದರ 9 ಇಂದು ಕರಿಗಿರಿಲಿಹರ 10 ಗೋವಿದಾಂಪತಿ ಗುರು ಗೋವಿಂದ ವಿಠಲ ಪರಾವರೇಶನು ಎಂದು | ಓವಿ ತುತಿಸುತ್ತಿಹರ11
--------------
ಗುರುಗೋವಿಂದವಿಠಲರು
ಮೀನಾಕ್ಷಿದೇವಿ ಮಾಮಮ ಮಧುರ ಪ ಸದಾ ನಿನ್ನ ಆನತರಿಗೆ ಡಿಂಗರಿಗನು ನಾನಮ್ಮ ಅ.ಪ ಬಹು ಜನ್ಮದಿಂದ ಮಾಡಿದ ಪುಣ್ಯ ವಿಹಿತ ಫಲದಿಂದ ತವಪದ ಪಂಕೇ ರುಹವ ಕಂಡೆನು ಇಂದಿಗಹಹ ಧನ್ಯನು ನಾನು 1 ಕಲುಷವಿರಹಿತೆ ಕರಪಿಡಿದೀ ಜಲಜಾಕ್ಷನಡಿದಾವರೆಗಳ ತೋರಮ್ಮ 2 ದಾಸರ ದಾಸ್ಯವನು ಕರುಣಿಸಿ ಲೇಸುಪಾಲಿಸೆ ಸುಂದರೇಶನರ್ಧಾಂಗಿಯೆ 3 ಹಿರಿಯರಿಗೆಲ್ಲಾ ವರಗಳ ಕೊಟ್ಟು ಪೊರೆದುದನೆಲ್ಲ ಕೇಳಿ ನಿನ್ನ ಚರಣವ ನಂಬಿದೆ ಸ್ಥಿರ ಮನವನು ಕೊಡೆ 4 ತಾಮಸನರನು ಬಾಲಕನೆಂದು ಪ್ರೇಮದಿ ನೋಡೆ ಗುರುರಾಮ ವಿಠಲನ ತಂಗಿ5
--------------
ಗುರುರಾಮವಿಠಲ
ಶ್ರೀವರ ಶುಭಗುಣನಿಚಯ ರಮಾಸ್ವದ ಪಾಲಯ ಮಾಂ ಸತತಂ ಪ. ನೀಲ ಮೇಘ ಶೋಭ ಸುಖ ಕಲ್ಲೋಲ ನಿತ್ಯಲಾಭ ಲೋಲಾಂಬಕ ಕಮಲಾಲಯವರ ಕರು ಣಾಲವಾಲ ಮಾತಾಲಿಸು ತ್ವರಿತದಿ 1 ಮಂದಹಾಸದಿಂದ ಮೆಚ್ಚಿದ ಸುಂದರೇಶ ವೃಂದ ಹೊಂದುತ ಹೊಸ ಪರಿಯಿಂದ ರಮಿಸಿ ಸ್ವಾ- ನಂದವಿತ್ತ ಗೋವಿಂದ ಮುಕುಂದ 2 ದಾಸಾನಂದಕರ ನಿತ್ಯವಿಲಾಸಿತ ಸುರನಿಕರ ಶ್ರೀಶಯನ್ನನಕಲುಷಿತ ಪೂರಿಸು ಶೇಷಗಿರಿಯ ಶ್ರೀವಾಸ ಪರಾತ್ಪರ 3
--------------
ತುಪಾಕಿ ವೆಂಕಟರಮಣಾಚಾರ್ಯ