ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿದೆ ಏನೇ ಕೊಳಲ ದನಿಯ ಬಾಳಿಗೆ ಅಮೃತವ ಬೀರುವ ಸವಿಯ ಪ ಬೃಂದಾವನದಲಿ ನಂದಯಶೋದ ಕಂದನು ಮುರಳಿಯನೂದುತಿರೆ ಸುಂದರಿಯರು ಆನಂದದಿ ನರ್ತಿಸಿ ಇಂದಿರೆಯರಸನ ಹೊಗಳುವರು 1 ಕಿರುಗೆಜ್ಜೆಯ ದನಿ ಕಿಣಿಕಿಣಿಸುತಿರೆ ಕರದ ಕಂಕಣಬಳೆ ಗಣಗಣರೆನಲು ಚರಣದ ಕಡಗ ಝಣ್ ಝಣಿ ಝಣಿರೆನುತಿರೆ ಪರಮ ಸಂತೋಷದಲಿ ಹರಿಯರುಳುತಿರೆ 2 ಮರುಗ ಮಲ್ಲಿಗೆ ಪಾದರಿ ಸುಮ ಪರಿಮಳ ಭರಿತ ತಂಬೆಲರು ಪರಿಚರಿಸುತಿರೆ ಪರಮಾನಂದವೆ ಪುರುಷನಾಗಿರುವ ಮಾಂ ಗಿರಿಪತಿಯೊಲವನು ಪಡೆಯುವ ಗೆಳತಿ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೋಮಲೆ ರಮಾದೇವಿಯನ್ನ ನೋಡಬನ್ನಿರೆಕಮಲಾರಿ ಸಹೋದರಿಯನೀಗ ಬೇಡಬನ್ನಿರೆ ಪ. ಇಂದುನಿಭದ ಸುಂದರಿಯರು ಬಂದು ನೋಡಿರೆ ಈಕುಂದರದನೆ ಮಂದರೋದ್ಧರನರ್ಧಾಂಗಿಯೆ1 ಭಕ್ತಿಯಿಂದ ಭಜಿಪರಿಗೆ ಮುಕ್ತಿಕೊಡುವಳೆಶಕ್ತಿಯುಕ್ತಿಗಳನೆ ಕೊಟ್ಟು ಅರ್ತಿಮಾಳ್ಪಳೆ 2 ದಾಸಿಯಾದರೆ ಶ್ರೀಶನರಾಣಿ ಪೋಷಿಸುವಳೆಗೋಪಾಲವಿಠಲ ಘಾಸಿಮಾಡದೆ ಪೋಷಿಸೆನುವಳೆ 3
--------------
ಗೋಪಾಲದಾಸರು
ನೋಡು ನೋಡಮ್ಮ ಭಾರತಿದೇವಿ ಪ ನೋಡಿ ನೋಡಮ್ಮ ಜೋಡುಕರಗಳ ಜೋಡಿಸಿ ಎದುರಿಲಿ ಮೂಢನು ನಿಂತಿಹೆಅ.ಪ. ಕಾಳಿ ದ್ರೌಪದಿ ನೀಲಲೋಹಿತೆಬಾಲೇ ಮಂಗಳೇ ಶೀಲೆ ಸುಂದರಿ 1 ಇಂದ್ರಸತಿ ಮುಖ ಸುಂದರಿಯರುಬಂದು ಸೇವಿಸೆ ಪೊಂದಿಪುಟ್ಟಿದೆ 2 ವಾಸುದೇವನ ನೀ ಸ್ಮರಿಸೆ ವಸ್ತ್ರರಾಶಿ ಪಡೆದೆ ಇಂದಿರೇಶನ ಸುಪ್ರಿಯೆ 3
--------------
ಇಂದಿರೇಶರು
ಬಂದಾನು ಬಂದಾನು ಪ ಬಂದನಾಗ ಗೋವಿಂದ ಯದುಕುಲಾ ನಂದ ಮುಕುಂದನು ಮಂದಹಾಸದಲಿ ಅ.ಪ. ಬೀದಿ ಬೀದಿಯೊಳು ಬಲು ಶೃಂಗಾರ ಬಗೆ ಬಗೆ ತೋರಣದಿಂದಲಂಕಾರ ಕಾದುನಿಂತಿಹ ಜನ ಪರಿವಾರ ಮೋದದಿ ಮಾಡುವ ಜಯ ಜಯಕಾರ ಮೇದಿನಿ ಸುರರಾಮ ಮಂತ್ರದ ಉಚ್ಚಾರ ಸೌಧಗಳಲ್ಲಿಹ ಸ್ತ್ರೀಯರಪಾರ ಸಾಧರದಿಂದೀಕ್ಷಿಸೆ ಜನನಿ ಕರವು ಮೋದವೆ ಬೀರುತ ಯಾದವ ಕುಲಮಣಿ 1 ಸುಂದರಿಯರು ನಲವಿಂದ ನಿಂದಿಹರು ಗಂಧ ಪರಿಮಳದ ಜಲವೆರಚಿಹರು ಅಂದದರಳ ಪುಷÀ್ಪಗಳ ವರ್ಷಿಪರು ಕುಂದಣದಾರತಿಗಳ ಪಿಡಿದಿಹರು ವಂದಿಮಾಗಧರು ಪೊಗಳುತಿಹರು ಚಂದದಿ ಮಣಿಮಯ ಸ್ಯಂದನದಲಿ ಅರ ವಿಂದ ನಯನ ಬಲು ಸುಂದರಾಗನು 2 ಬಂಗಾರದ ರಥವೇರಿ ಬರುತಿಹನು ಕಂಗಳಿಗುತ್ಸವ ತಾ ತರುತಿಹನು ಮಂಗಳಕರ ತಿಲಕವನಿಟ್ಟಿಹನು ಬಂಗಾರದ ಮಕುಟ ಧರಿಸಿಹನು ಶೃಂಗಾರದ ಶಿಸ್ತಲಿ ಶೋಭಿಪನು ಅಂಗಜಕೋಟಿ ನಿಭಾಂಗನಾಗಿಹನು ಮಂಗಳಾಂಗ ಶ್ರೀರಂಗ ಕರಿಗಿರಿ ನೃಸಿಂಗನು ಕರುಣಾಪಾಂಗವ ಬೀರುತ 3
--------------
ವರಾವಾಣಿರಾಮರಾಯದಾಸರು
ಬಾಲೆಯರು ನಿನ್ನ ಲಾಲಿಸುವರೋ ಸೋಲದಿರು ಮನವ ಗೋಪಾಲ ಪ ಲೋಲತನದಿ ಬಾಲ ನಿನಗೆ ಕಾಲ ಕಳೆಯಲು ಅ.ಪ ಪೊಂದಲೋಸುಗ ಸುಂದರಿಯರು ಸಂದು ಮಾಡುವರೊ ಮುಕುಂದ ಮಂದಹಾಸದಿಂದ ನಿನಗೆ ಗಂಧ ಪೂಸುವರೊ ಗೋವಿಂದ 1 ಓರೆಗಣ್ಣಿನ ನೋಟದಿಂದ ಸೂರೆಗೊಳುವರೊ ನಾರೇರು ಕೋರಿಕೆಯನು ಮೀರಿದರೆ ನೀ ದೂರು ಮಾಡುವರೊ ಮುರಾರೆ 2 ಮುರಳಿನಾದವ ಮಾಡೆ ನಿನ್ನ ತೆರಳ ಬಿಡರಿವರು ಮನೆಗೆ ಸರಳನೆಂದು ಅರಿತು ನಿನ್ನ ಮರುಳು ಮಾಡುವರೊ ಶ್ರೀ ಕೃಷ್ಣ 3 ಎನ್ನ ಮನವನು ತಿಳಿಯುವುದಕೆ ಕನ್ಯೆಯರಿಗಳವೇ ಪೇಳಮ್ಮ ಇನ್ನು ಪೋಗುವುದಿಲ್ಲವೆ ಪ್ರ ಸನ್ನಳಾಗಮ್ಮ ಯಶೋದೆ 4
--------------
ವಿದ್ಯಾಪ್ರಸನ್ನತೀರ್ಥರು
ಭಾಳೆ ಗಾಬರಿಗೊಂಡಳು ಇಂದಿರಾದೇವಿಭಾಳೆ ಗಾಬರಿಗೊಂಡಳು ವ್ಯಾಲಾಶಯನನು ಇವಳ ಪೇಳಿದಂತಿರಲುಏನು ಬಾಳು ಯಾತಕೆ ಎಂದಳು ಪ. ಸಂಡಿಗೆ ಹಪ್ಪಳ ಮಂಡಗಿ ಗುಳ್ಳೋರಿಗೆ ದಿಂಡು ಸೂರಣವು ಮೊದಲಾಗಿದಿಂಡು ಸೂರಣವು ಮೊದಲಾಗಿ ಬಡಿಸೋರುದುಂಡು ಮುತ್ತುಗಳು ಉದುರುತ1 ಅಪಾರ ಮಹಿಮಗೆ ರೂಪಸುಂದರಿಯರು ಸೂಪ ಪರಮಾನ್ನ ಮೊದಲಾಗಿಸೂಪÀ ಪರಮಾನ್ನ ಮೊದಲಾಗಿ ಬಡಿಸುವವರಭಾಪುರಿ ಮುತ್ತು ಉದುರುತ 2 ಘೃತ ಘೃತ ಮೊದಲಾಗಿ ಬಡಿಸುವವರತೋರ ಮುತ್ತುಗಳು ಉದುರುತ 3 ನಗಧರನ ಪುರದೊಳಗೆ ಹಗಲು ರಾತ್ರಿಯು ಬಂದೆಝಗ ಝಗಿಸುವ ಮಣಿಯು ಖಚಿತದಝಗ ಝಗಿಸುವ ಮಣಿಯು ಖಚಿತವಾದುದರಿಂದಹಗಲು ರಾತ್ರಿಗಳು ತಿಳಿಯವು4 ಮಂದ ಗಮನೆಯರೆಲ್ಲ ಮಿಂದು ಮಡಿಯುಟ್ಟು ಇಂದಿರಾಪತಿಯ ಸರಿಯಾಗಿಇಂದಿರಾಪತಿಯ ಸರಿಯಾಗಿ ಊಟಕ್ಕೆ ಬಂದುಕುಳಿತವರು ಕಡೆಯಿಲ್ಲ5 ಪುಂಡರಿಕಾಕ್ಷÀನು ಉಂಡು ಕೈತೊಳೆದನು ದುಂಡುಮಲ್ಲಿಗೆಯ ಸೆಳಿಮಂಚದುಂಡು ಮಲ್ಲಿಗೆಯ ಸೆಳಿ ಮಂಚವನೇರಿದ ಪಾಡವಪ್ರಿಯ ಹರುಷದಿ 6 ಹದಿನಾರುಸಾವಿರ ಚದುರೆಯರು ಒಂದಾಗಿಚಲುವ ರಾಮೇಶನ ಉಪಚಾರಚಲುವ ರಾಮೇಶನ ಉಪಚಾರ ಮಾಡುವ ಸುದತೆಯರ ಸುಖಕೆ ಎಣೆಗಾಣೆ7
--------------
ಗಲಗಲಿಅವ್ವನವರು
ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ. ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು 1 ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ 2 ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ 3 ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ4
--------------
ಬೇಟೆರಾಯ ದೀಕ್ಷಿತರು
ಸಿರಿ ತಂಬೂರಿ ಪ ನರಹರಿ ನಾಮಸ್ಮರಣೆಯಗೈಯುವ ನರರಿಗೆ ಸಹಕಾರಿ ಅ.ಪ ತಾಪತ್ರಯವನು ಲೋಪಗೈವ ಸುಖರೂಪಿನ ತಂಬೂರಿ ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ 1 ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ ವಾಸುಕಿಶಯನ ವಿಲಾಸದ ಕೀರ್ತಿ ವಿಕಾಸದ ಜಯಭೇರಿ 2 ಅಂಬುಜಭವನ ಕುಟುಂಬಿನೆಯ ಕರಾಲಂಬನ ತಂಬೂರಿ ತುಂಬುರು ನಾರದರಂಬುರುಹಾಕ್ಷನ ಹಂಬಲಿಗನು ಸಾರಿ3 ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ ಸುಂದರಿಯರು ನಲವಿಂದಲಿ ನುಡಿಸುವಾನಂದ ಸುಗುಣಧಾರಿ 4 ಶ್ರುತಿಯುತಮಾಗಲು ಮತಿಯುತರಿಗೆ ಸಮ್ಮತವಹ ತಂಬೂರಿ ಕೃತಿ ಶತವದು ಸಾರಿ5 ಸುಕೃತ ಪರಿಪಾಕದ ತಂಬೂರಿ ಈಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖದಾರಿ 6 ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ 7
--------------
ವೆಂಕಟವರದಾರ್ಯರು
ಸುಂದರಿಯರು ಅಂದದಾರತಿ ಬೆಳಗಿ ಕುಂದರದನ ದಿವ್ಯ ಮಂದಸುಹಾಸೆಗೆ ಇಂದಿರಾಪತಿ ಹರಿಗೆ ಪ ಭಂಗ ನಿರ್ಮಲ ಗುಣ ಸಂಗರಹಿತ ಹರಿಗೆ 1 ಮಹಿಮ ನಾದ ವಿನೋದ ಹರಿಗೆ 2 ಪೀತಾಂಬರಾಚ್ಯುತ ಧಾತೃಕಾರಣ ನಿಜ ವಾತ್ಸಲ್ಯ ಭಕ್ತ ಹರಿಗೆ 3 ಜಂಭಾರಿ ಸೋದರ ಗಂಭೀರದಾಕಾರ ಸ್ತಂಭ ತನುಜ ಹರಿಗೆ 4 ಮಾನವಿವರ್ಜಿತ ಮಾನವಪೂಜಿತ ಧೇನುನಗರ ಹರಿಗೆ 5
--------------
ಬೇಟೆರಾಯ ದೀಕ್ಷಿತರು