ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಿಕೊಂಬೆನೆ ವರವ ನಾ ನಿನ್ನ ಮಾಲಕ್ಷ್ಮಿತಾಯಿ ಮಾಡಿ ದಯವನು ನೋಡೆ ನೀ ಎನ್ನ ಪಾಡಿ ಕೊಂಡಾಡುವೆನು ಪಂಚಗಂಗಾ ತೀರದಲಿ ಕರವೀರ ವಾಸಿಯೆ ಪ ಒದೆಯುತಿರಲು ಆ ಪಾದದಿ ಬಂದು ಪದುಮಾಕ್ಷ ಮುನಿಯ ಮುದದಿ ಮನ್ನಿಸಿ ಕಳುಹುತಿರೆ ಕಂಡು ಒದಗಿ ಬಂದ ಕೋಪದಿಂದ ಯದುನಾಥನ ಎದೆಯಿಳಿದು ಬೇಗನೆ ಕದನ ಮಾಡುತ ಕೊಲ್ಲಾಪುರವನು ಸದನ ಮಾಡಿದೆ ಸುಂದರಾಂಗಿಯೆ 1 ಬಿಟ್ಟು ನಿನ್ನ ವೈಕುಂಠದಿ ಹರಿಯು ಇಳಿದು ಅಂಜನಾ ಬೆಟ್ಟದಲಿ ನಿಂತಿದ್ದನೆ ಬಂದು ಪಟ್ಟದರಸಿಯು ನೀನು ಜನಕನ ಪುತ್ರಿಯಾದ ಕಾಲದಲಿ ಕೊಟ್ಟ ವಚನವ ನಡೆಸಿ ಪತಿಗೆ ನೀ ಪತ್ನಿಮಾಡಿದೆ ಪದ್ಮಾವತಿಯ 2 ರಮ್ಯವಾದ ರಜತ ಹೇಮಗಳು ಗುಡಿಗೋಪುರಗಳು ನಿನ್ನಶಿರ ಶೃಂಗಾರಾಭರಣಗಳು ಅಮ್ಮ ತ್ರಿಜಗದಂಬಾ ನಿನ್ನ ಮುಖ ಒಮ್ಮೆ ನೋಡಲು ಧನ್ಯರಾಗೋರು ಬ್ರಹ್ಮನಪಿತನರಸಿ ಎನಗೆ ನೀ ರಮ್ಮೆಪತಿಪಾದಾಂಘ್ರಿ ತೋರಿಸೆ 3 ಪಕ್ಷಿವಾಹನನ್ವಕ್ಷಸ್ಥಳದಲ್ಲಿ ಆವಾಸವಾಗಿ ಲಕ್ಷ್ಮಿ ನೀ ಅಧ್ಯಕ್ಷಳಾಗಿದ್ದು ಇಕ್ಷುಚಾಪನ ಜನನಿ ಕರವೀರ ಕ್ಷೇತ್ರದಲಿ ಪ್ರತ್ಯಕ್ಷಳಾಗಿ ಮೋಕ್ಷಾಪೇಕ್ಷಿಗಳಾದ ಜನರಿಗೆ ರಕ್ಷಿಸಿ ವರಗಳ ಕೊಡುವ ಮಾತೆಯೆ4 ನೇಮದಿಂದಲಿ ನಮಿಸುವೆನು ನಿನಗೆ ಮಾಲಕ್ಷ್ಮಿತಾಯಿ ಪ್ರೇಮದಿಂದಲಿ ಪಾಲಿಸಿ ನೀನು ಶ್ಯಾಮವರ್ಣನ ದಿವ್ಯ ಸಾಸಿರ ನಾಮ ನಾಲಿಗೆಲಿರಲು ನಿಲಿಸಿ ಭೂಮಿಗೊಡೆಯ ಭೀಮೇಶಕೃಷ್ಣನ ಧಾಮದ ದಾರಿಗಳ ತೋರಿಸೆ 5
--------------
ಹರಪನಹಳ್ಳಿಭೀಮವ್ವ
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಪೂಜಿಸುವೆನೆ ತುಳಸಿ ನಿನ್ನ ಬೇಗ ಸಲಹೆ ನೀ ಪ. ಜಾಜಿ ಮಲ್ಲಿಗೆ ಕುಸುಮದಿಂದ ಪೂಜೆಗೈಯ್ಯವೆ ಅ.ಪ. ಧ್ಯಾನ ಆವಾಹನೆಯಿಂದ ಶ್ರೀ ವರನ ಸಹ ನಾನಾ ಮಂಗಳ ದ್ರವ್ಯದಿ ನಾನು ಪೂಜಿಪೆ 1 ವೃಂದಾವನದಿ ಮೆರೆಯುವವಳೆ ಸುಂದರಾಂಗಿಯೆ ಇಂದು ಕರುಣಿಸೆ 2 ಗೋಪಾಲಕೃಷ್ಣವಿಠ್ಠಲನ ರೂಪ ತೋರೆ ನೀ ಪಾದ ತೋರಿ ಕಾಪಾಡೆ ದೇವಿ 3
--------------
ಅಂಬಾಬಾಯಿ
ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಶರಧಿ ಸುಖಾತ್ಮಜೆ ಪ ಶರಣು ತವ ಚರಣಾರವಿಂದಕೆ ಶರಣು ಸುರನುತ ಜಂಘಕೇಶರಣು ಕರಿಕರಭೋರು ಯುಗಳಕೆ ಶರಣು ಸುಟೊಂಕಕೆ1 ಕರ ಕಣ್ಣು ಮೂಗು ಭ್ರೂಲತೆ ಕರಣಾಭರಣಕೆ 2 ಶರಣು ಸಾಲಕ ಬಿಂಬ ಫಾಲಕೆ ಶರಣು ಕುಸುಮಿತ ವೇಣಿಗೆಶರಣು ಮಾಧವನಂಕ ಬಿಂಬದಿ ಮೆರೆವ ಸುಖ ಮುತ್ತೈದಿಗೆ 3 ಕಾಲ ಸ್ವಭರ್ತೃಸುಮಜಿತೆ ಭಕ್ತಪೋಷಣೆಕೃತ್ಯ ಕರುಣಾ ಸಾರಸಾಂಡ ಸುಪಾಸ್ತ ಸಂಸಿತಳೆ ನೀ4 ಸೊಲ್ಲು ಪೇಳುವೆ ಸ್ನೇಹದಿಂದಲಿಪುಲ್ಲನಾಭನ ಪರಿಚಿಸೀ ಈಗವನಲ್ಲಿ ನೀ ಪೇಳೆ 5 ದೇವಶರ್ಮನು ನಿನ್ನ ಚರಣಾಧ್ಯಾನದಲಿ ಸನ್ನುತಿಸಿ ಕರುಣತೋಯಜಾಕ್ಷನ ಕಂಡು ಸುಖಿಸಿದುಪಾಯವ ಬಲ್ಲವನು 6 ಸುಂದರಾಂಗಿಯೆ ಸಾರಸಾಕ್ಷಿಯೆ ಮಂದಹಾಸಿನಿ ಮಾರಮೋಹಿನಿಇಂದಿರೇಶನ ಮಾನಿನಿಯೆ ತವಕದಿಂದ ನಿಂತಿಹೆನು 7
--------------
ಇಂದಿರೇಶರು
ಸುಖದಿಂದ ಬಾಳೆ ಬಾಲೆ | ಸುಮಂಗಲೇ | ಪ ಸುಖದಿ ಬಾಳೆ ಸಾವಿತ್ರಿಯಂತೆ ಸುತರ ಪಡೆದಿಳೆಯೊಳ್ ನಿರಂತರ ಪತಿಯ ವಾಕ್ಯದಿ ನಿರತಳಾಗಿ ಅ.ಪ ಅತಿಶಯದಿ ನಿರುತ ಪತಿಯ ಸೇವಿಸುತ್ತ ಆತನೇ ಪರದೈವವೆಂದೆನುತ ಹಿತವಚನ ವಾಡುತ ಅತ್ತಿಮಾವನ ಸ್ಮರಿಸುತ್ತ ರತಿಪತಿ ಪಿತನಂಘ್ರಿ ಭಜಿಸುತ ಪೃಥ್ವಿಯೋಳ್ ಅನುಸೂಯಳಂತೆ 1 ಸುಂದರಾಂಗಿಯೆ ಸತತ ಗೃಹ ಕಾರ್ಯ ಮಾಡುತ ಇಂದಿರೇಶನ ಪಾಡುತ್ತ | ಬಂದಂಥ ವಿಪ್ರರ ದ್ವಂದ್ವ ಪಾದಕೆರಗುತ | ಹಿಂಗಿರುವದುಚಿತ ಮಂದ ಮತಿಗಳ ಮಾತು ಕೇಳದೆ ತಂದೆ ತಾಯಿಗೆ ಕುಂದು ತಾರದೆ ಇಂದು ಮುಖಿ ನೀ ಹಿಂಗಿದ್ದರನುದಿನ ಬಂದು ಕಾಯ್ವ ಶ್ರೀರಾಮಚಂದಿರ 2 ನಡಿದಾವರೆ ಪೂಜಿಸು ಸರ್ವದಾ ಬಿಡಿ ನುಡಿಗಳಾಡದೆ ಕಡು ಕರುಣದಿ ದ್ರೌಪದಾ ಮೋದ | ಪಡಿಸುಪುತ್ರರ ಪರ ರೊಡನೆ ಕಾಲ್ಕೆದರಿ ಕಲಹವ ತೆಗೆಯದಿರು ಸಖಿ ಒಡೆಯ ಶ್ರೀ ಶಾಮಸುಂದರನು ತಡೆಯದೆ ಸಂಪದವ ನೀಯುವ 3
--------------
ಶಾಮಸುಂದರ ವಿಠಲ
ಚಂಚಲಾಕ್ಷಿ ಕೇಳ್ ಪಂಚಬಾಣನ |ಮಿಂಚಿನಂಥ ಶರ ತಾಳಲಾರೆ ನಾನು |ಕಂಚುಕಿಯನು ನಿನಗೊಂಚಿಸದೀವೆನು |ಕೊಂಚ ಮುಖ ತೋರಿನ್ನು ಚಂಚಲಾಕ್ಷಿ 1ಜಾಣೆ ನಿನ್ನನು ಕಾಣೆದೆನ್ನಯ |ಪ್ರಾಣನಿಲ್ಲದೇನೇ ||ತ್ರಾಣಗುಂದಿತು ಪ್ರಾಣನಾಯಕಿ |ಕಾಣೆ ನಿನ್ನ ಗಂಡನಾಣೆ || 2ಪಟ್ಟೆ ಸೀರೆಯನ್ನುಟ್ಟುಕೊಳ್ಳೆ ನಿನ್ನ |ತೊಟ್ಟಿಕೊಳ್ವೆ ಬಾರೆ ||ಗಟ್ಟಿಗೆ ನಿನ್ನಯ ಗುಟ್ಟನರಿತೆನು |ಗಟ್ಟಿ ಬಳೆಯ ಕೊಡುವೆ ನೀರೆ 3ಮಂದಗಾಮಿನಿ ಸುಂದರಾಂಗಿಯೆ |ಬಂದು ಎನ್ನ ಕೂಡೆ ||ಚಂದದಿಂದ ಗೋವಿಂದನೊಡನೇ ಬೇ |ಗೊಂದು ಮಾತನಾಡೇ ||ಹ|| 4
--------------
ಗೋವಿಂದದಾಸ