ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ಪ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ 1 ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ 2 ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ 3
--------------
ವಿಜಯದಾಸ
ಮಾಯವಾಯಿತು ರತುನ | ಮರೆ ಮೋಸಮಾಡಿ ಪ. ಮಾಯವಾಯಿತು ಎನ್ನ ಮೋಹದ ಮಮ ಗುರುವೆಂತೆಂಬ ರತುನ ನೋಯಲೇಕಿದಕಿನ್ನು ನೃಹರಿ ಉ- ಪಾಯದಿಂದಪಹರಿಸಿವೈದನು ಅ.ಪ. ಕರಗತವಾಗಿ ಇತ್ತು | ಪ್ರಕಾಶವು ಧರಣಿಯಲ್ಲಿ ವ್ಯಾಪಿಸಿತ್ತು ಪರಿಪರಿ ಸಜ್ಜನಕೆ ತತ್ವದ ವರ ಸುಧೆಯನುಣಿಸುತ್ತಲಿತ್ತು ಕರಕರದು ಅಂಕಿತವ ಕೊಡುತಲಿ ಪರಮ ಸಾಧನಗೈಸುತಿತ್ತು 1 ಸುಂದರವಾಗಿ ಇತ್ತು | ದುರ್ಜನರಿಗದ ರಂದ ತೋರದಲೆ ಇತ್ತು ಒಂದೊಂದೂ ಗುಣ ವರ್ಣಿಸಲು ಈ ಮಂದ ಮತಿಗಳವಲ್ಲವಿನ್ನು ತಂದೆ ಮುದ್ದುಮೋಹನಾರೆಂ- ತೆಂದು ಜಗದಲಿ ಮೆರೆಯುತಿತ್ತು 2 ಮಾಸಿ ಪೋದಂಥ ಹರಿ | ದಾಸಕೂಟ ತಾ ಸ್ಥಾಪಿಸುತ ಈ ಪರಿ ವಾಸುದೇವನ ಗುಣಮಣಿಗಳ ರಾಶಿಭೂತದಿ ಅರುಹಿ ಶಿಷ್ಯರ ಸಾಸಿರಾನೂರ್ಮೇಲೆ ಹೆಚ್ಚಿಸಿ ತಾ ಸೂರೆಗೊಂಡಾನಂದವನು3 ಗತಶಾಲಿ ಸಾಹಸ್ರವು | ಮೇಲೆಂಟು ಶತವು ಮತ್ತರವತ್ತೆರಸುವು ವತ್ಸವಿಕ್ರಮ ಪ್ರಥಮ ಮಾಸವು ಪ್ರಥಮ ಪಕ್ಷದ ರಾಮನವಮಿ ಹಿತದಿ ಮಂಗಳವಾರ ಸೂರ್ಯನ ಗತಿಯು ನೆತ್ತಿಯೊಳೋರೆ 4 ಎಷ್ಟು ಪೊಗಳಲಳವು | ಆನಂದ ರತ್ನದ ಗುಟ್ಟರಿಯದು ಜಗವು ಶ್ರೇಷ್ಠ ಗೋಪಾಲಕೃಷ್ಣವಿಠಲನು ಕೊಟ್ಟು ಕಳುಹಿಸಿ ಧರೆಯೊಳ್ಮೆರಸಿ ಥಟ್ಟನೇ ತಾ ಕರೆಸಿಕೊಂಡು ಶ್ರೇಷ್ಠ ಶಯ್ಯೆಯ ಮಾಡಿಕೊಂಡನು 5
--------------
ಅಂಬಾಬಾಯಿ
ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು ರಾಮಾ ನಿನ್ನಯ ದಿವ್ಯ ನಾಮಾ ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು 1 ದಶರಥನುದರದಿ ಶಿಶುವಾಗಿ ಜನಿಸಿದೆ ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ 2 ಛಂದದಿಂದಲಿ ಆನಂದದೊಳಿಹ ರಾಮಾ ಚಂದ್ರನ ಮೊಗ ಅತಿ ಸುಂದರವಾಗಿರುವವನೇ 3 ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ 4 ವಿಥುಳಾಪುರದಿ ಬಂದು ಅತುಳ ಧನುವ ಮುರಿದು ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ 5 ಮಾತೆಯ ವರ ಕೇಳಿ ನೀತಿಯಿಂದಲಿ ಅನು ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ 6 ಸರಯು ತೀರದಿ ಬಂದು ಪುರದ ಜನರ ಬಿಟ್ಟು ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ 7 ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ 8 ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ 9 ಶಾಂತಮೂರುತಿ ಹನುಮಂತರೆಲ್ಲರು ಕೂಡಿ ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ 10 ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು 11 ವಾನರರೊಡಗೊಂಡು ಸೇನೆ ಸಹಿತಲೇ ದಶಾ ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ 12 ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ 13 ಪಟ್ಟಣದಲಿ ಮಾಹಾ ಪಟ್ಟವನೇರಿಸಿ ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ 14 ಬ್ರಹ್ಮಮೂರುತಿ ರಾಮಾಗಮನ ಚರಣದಿ ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ 15
--------------
ಶಾಂತಿಬಾಯಿ