ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಿಯನೇರಿ ಬರುತಿಹ ಸುಂದರನ್ಯಾರೆ ಪೇಳಮ್ಮಯ್ಯ ಪ. ಚಂದ್ರಚೂಡ ಗಂಗಾಧರ ಶಂಕರ ಸುಂದರ ಗೌರೀರಮಣ ಕಣಮ್ಮಾ ಅ.ಪ. ಕರದಿ ತ್ರಿಶೂಲ ಧರಿಸಿದನಾರೆ ಪೇಳಮ್ಮಯ್ಯ ವರ ಡಮರುಕಪಾಲ ಪಿಡಿದಿಹನಾರೆ ಪೇಳಮ್ಮಯ್ಯಾ ಕರುಣವ ತೋರುತ ಸಕಲರ ಮನ ಮಂದಿರದಲಿ ಪೊಳೆಯುವ ಗಿರಿಜಾ ರಮಣ ಕಣಮ್ಮ 1 ಗಜ ಚರ್ಮಾಂಬರ ಧರಿಸಿಹನಾರೆ ಪೇಳಮ್ಮಯ್ಯ ತ್ರಿಜUನ್ಮೂರುತಿ ನೊಸಲಿಗೆ ಭಸ್ಮವ ಧರಿಸಿಹನಾರೆ ಪೇಳಮ್ಮಯ್ಯ ಋಜುಗುಣದೊಡೆಯಗೆ ರಜತಾದ್ರಿನಿಲಯ ನಿಜ ಪಾರ್ವತೀರಮಣ ಕಣಮ್ಮಾ 2 ಶೇಷನಾಭರಣವ ಧರಿಶಿಹನಾರೆ ಪೇಳಮ್ಮಯ್ಯ ಸೋಸೀಲಿ ಮೂಗಣ್ಣವನಾರೆ ಪೇಳಮ್ಮಯ್ಯ ವಾಸುಕಿಶಯನ ಶ್ರೀ ಶ್ರೀನಿವಾಸನ ವಾಸ ಶಂಭೋ ಶಂಕರನು ಕಣಮ್ಮಾ 3
--------------
ಸರಸ್ವತಿ ಬಾಯಿ
ಬಾಲಕೃಷ್ಣ ಕೊಳಲನೂದುವ ಸುಂದರನ್ಯಾರೆ ತಂಗಿಸುಂದರನಿವನೆ ಮಂದರೋದ್ಧರನೆ ಪ ಪುರುಷರೂಪದಿ ಪಾಲುದಧಿ ಕಟಿದಾ ತಂಗಿತರುಣಿರೂಪದಿ ಸುಧೆ ಸುರರಿಗಿತ್ತನು ತಂಗಿ 1 ಸತಿಯಲ್ಲದಲೆ ಸುತರನು ಪಡೆದನು ತಂಗಿಪತಿಯ ಕೂಡದ ಅಪ್ರತಿಮ ತರುಣಿ ತಂಗಿ 2 ಮುಂಜಿ ಆಗದಲೆ ಮಕ್ಕಳ ಪಡೆದವ ತಂಗಿಸಂಜೆ ಆಗದಲೆ ರಾತ್ರಿ ಮಾಡಿದ ತಂಗಿ 3 ಅತ್ತೆಯಾ ಕಾಲಿಂದ ಪಡೆದಾನೆ ತಂಗಿಚಿತ್ರ ಚರಿತ್ರೆ ವೃಜದೊಳಾಡಿದ ತಂಗಿ 4 ವಾಸುದೇವ ಇಂದಿರೇಶ ಇವನ ತಂಗಿಕೂಸು ತರುಣನಾಗಿ ಮೋಸ ಮಾಡಿದ ತಂಗಿ 5
--------------
ಇಂದಿರೇಶರು