ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಏಕಾದಶಿಯ ಮಹಿಮೆ) ಸಾರುತ ಬಂದಿತೇಕಾದಶಿ ನಮ್ಮ ನಾರಾಯಣನಾರಾಧಿಸಿ ಸುಖಗೊಳಿರೆಂದು ಪ. ಕರ್ಮ ಕಲುಷವೆಲ್ಲ ಕಳಕೊಂಡು ಕುಲವನ್ನೆ ನಿರ್ಮಲ ಮಾಡುವ ಮರ್ಮವಿದು ಸ್ವರ್ಮಹೀಶ ದೇವ ಶರ್ಮವರದನ ಚಾ- ತುರ್ಮಾಸೆಯಲಿ ಪೂಜಿಸಿರಿಯೆಂದು ಡಂಗುರ 1 ಕಮಲ ಮುಖ್ಯ ಹಲವು ಪುಷ್ಪವನೇರಿ ಸಲು ಕೋಟಿಮಡಿಯಾದ ಫಲವೀವುದು ನಿತ್ಯ ಮೋದದಿ ಸಿರಿಯಪ್ಪಿ ಮಲಗಿರುವನು ವೃಂದಾವನ ಮೂಲದಲಿಯೆಂದು2 ಸುಂದರತರ ಪೂರ್ಣಾನಂದ ವೆಂಕಟರಾಜಾ- ಜಾಗರ ಸಹಿತ ಒಂದುಪವಾಸವಾÀದರು ಮಾಡಲಘವೆಲ್ಲ ಇಂದು ನಿಶ್ಚಯವಾಗಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಾತನೀತ ಯತಿನಾಥ ನಿಜಪದ ದೂತಜನರ ಪೊರೆವಾ ಪ ಧಾತನಾಂಡದೊಳತಿ ಖ್ಯಾತನಾಗಿ ಶಿರಿ ನಾಥ ನೊಲಿಸಿ ಮೆರೆವಾ ನೀತಮನದಿ ತನ ಮಾತು ಮೀರಿದಿಹ - ಗೀತೆರದಿ ತಾನೆ ಒಲಿವಾ ತಾತನೆ ಮನೋಗತ ಭೀತಿಯ ಬಿಡಿಸೆನೆ ಪ್ರೀತಿ ಮನದಿ ತಾ ಬರುವಾ ಅ.ಪ ರಾಮ ಕೃಷ್ಣ ನರಹರ್ಯಂಘ್ರಿಯ ಪ್ರೇಮಮನದಿ ಭಜಿಪಾ ನೇಮದಿ ತನ್ನನು ಕಾಮಿಪ ಜನರಿಗೆ ಕಾಮಿತ ಫಲರೂಪಾ ಈ ಮಹಾ ಮಹಿಮೆಯ ನೇಮದಿ ತೋರುವ ಭೂವಿ ಸುರರ ಭೂಪಾ ತಾಮಸ ಮತಿ ನಿರ್ಧೂಮ ಗೈಸುವ ಧೂಮಕೇತುನೆನಿಪಾ 1 ಮಂದ ಜನರಿಗೆ ಎಂದಿಗಲಭ್ಯನ - ಪೊಂದಿದ ಜನರಾ ಕುಂದೆÀಣಿಸದೆ ತಾ ನಂದ ಕೊಡವೊ ಮಹಾರಾಯಾ ವಂದಿಪ ಜನರಘ - ವೃಂದವ ದರುಶನ - ದಿಂದ ತರಿವೊ ಜೀಯಾ ಸುಂದರತರ ವೃಂದಾವನ ನಿಜ ಮಂದಿರ ಗತ ಧ್ಯೇಯಾ 2 ದಾತಗುರು ಜಗನ್ನಾಥ ವಿಠಲನತಿ ಪ್ರೀತಿಯಿಂದ ಭಜಿಪಾ ದೂತ ಜನರು ಬಲು ಆತುರದಲಿ ಕರಿಯೆ ಪ್ರೀತ ಮನದಿ ತಾ ಬಪ್ಪ ಮಾತೆಯತೆರ ನಿಜ ದೂತರÀ ಮನಸಿನ ಮಾತು ನಡೆಸುವ ನೀಭೂಪಾ ಈತಗೆ ಸರಿಯತಿನಾಥ ಕಾಣೆನೊ ಭೂತಳೇಶರಧಿಪಾ 3
--------------
ಗುರುಜಗನ್ನಾಥದಾಸರು
ದೃಷ್ಟಿ ತಾಕಿತೆ ನಿನಗೆ ಶ್ರೀರಾಮ ಸುಂದರತರ ಮುಖ ಚಂದ್ರನ ನೋಡುತಲಿ ಸುಂದರಿಯರೆಲ್ಲ ಬಂದು ಕಂದ ನಿನ್ನ ಮುದ್ದಿಡಲು 1 ನೀಲ ಶುಭಕುಂತಲವ ನೀಲ ವೇಣಿಯರು ತಿದ್ದಿ ಲಾಲಿಸಿದ ಕಾರಣದಿಂ 2 ಮಂಗಳವಾದ ನಿನ್ನ ಕಂಗಳ ಢಾಳವನ್ನು ಅಂಗನೆಯರೆಲ್ಲ ನೋಡಿ ಹೆಂಗಿಸಿದ ಕಾರಣದಿಂ 3 ಮಾರಸುಂದರ ಸುಕು ಮಾರವರ ರೂಪವನು ಸಾರಸಾಕ್ಷಿಯರು ಕೂಡಿ ಮೀರಿಮಾತನಾಡಿದರಿಂ 4 ಮಾನವ ವಂದಿತನೆ ಮೌನಿಕುಲ ಸೇವಿತನೆ ಧೇನುಪುರ ವೆಂಕಟೇಶ ಶ್ರೀನಿವಾಸ ಪಾಲಿಸಲಿ 5
--------------
ಬೇಟೆರಾಯ ದೀಕ್ಷಿತರು
ಶ್ರೀ ಸತ್ಯ ಸಂಧರ ಚರಿತ್ರೆ127ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿಭೃತ್ಯನಾ ಎಂದೆಣಿಸಿನಿತ್ಯಪಾಲಿಸುವುದುಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆವಿಧಿಸನಕಮೊದಲಾದಗುರುಪರಂಪರೆಗೆಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದತೀರ್ಥರಾಂಬುಜ ಪಾದಗಳಿಗೆ ಆನಮಿಪೆ 1ಪದ್ಮನಾಭನರಹರಿಮಾಧವಅಕ್ಷೋಭ್ಯರಪದ್ಮಾಂಘ್ರಿಗಳ ನಮಿಸಿ ಜಯತೀರ್ಥರವಿದ್ಯಾಧಿರಾಜರಪಾದಪಂಕಜಕ್ಕೆರಗಿವಿದ್ಯಾಧಿರಾಜರು ಈರ್ವರಿಗೂ ನಮಿಪೆ 2ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆರಾಮಚಂದ್ರರಿಗೆ ಆ ಯತಿವರರಹಸ್ತಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ 3ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯ ತತ್ವಜÕ ರಘೂತ್ತಮಾರ್ಯರಿಗೆವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 4ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯಬೋಧರಿಗೆ ಎನ್ನ ವಂದನೆ ಅರ್ಪಿಸುವೆ 5ಸತ್ಯಬೋಧಾರ್ಯರ ಕರಕಮಲ ಸಂಜಾತಸತ್ಯಸಂಧರ ಮಹಿಮೆ ಬಹು ಬಹು ಬಹಳವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯುಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ 6ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯಹಾವೇರಿಯವರು ಈ ಯತಿವರಮಹಂತದೇವ ಸ್ವಭಾವರು ವೇದಾಂತ ಕೋವಿದರುಸರ್ವದಾ ಹರಿನಾಮ ಸಂಸ್ಮರಿಸುವವರು 7ರಾಮಚಂದ್ರಾಚಾರ್ಯ ಸರ್ವಪ್ರಕಾರದಲುತಮ್ಮ ಸಂಸ್ಥಾನ ಪೀಠಾರ್ಹರು ಎಂದುನೇಮದಿಂ ಪ್ರಣವೋಪದೇಶ ಅಭಿಷೇಕಸಂಮುದದಿ ಮಾಡಿದರು ಸತ್ಯಬೋಧಾರ್ಯ 8ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತಧರೆಯಲ್ಲಿಜ್ಞಾನಿಶ್ರೇಷ್ಠರು ಎಂದು ಸ್ತುತಿಕೊಂಡಧೀರ ಗುರುವರ ಸತ್ಯಸಂಧರಿಗೆ ನಮಿಪೆ 9ಸತ್ಯಂ ವಿದಾತಂ ನಿಜಭೃತ್ಯಭಾಷಿತಂಅಂದು ಕಂಬದಿ ತೋರ್ದಹರಿಪ್ರಹ್ಲಾದನಿಗೆಇಂದುವಟುರೂಪದಿ ಬಂದು ವಿಠ್ಠಲ ಸತ್ಯಸಂಧರಿಗೆ ತೋರಿದನು ತನ್ನಿಚ್ಛೆಯಿಂದ 10ವಿಠ್ಠಲನ್ನ ವಂದಿಸಿ ಪಂಡರೀಪುರದಿಂದಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ 11ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರುವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದುನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದುಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ 12ಶ್ರೀವಿಷ್ಣುಪಾದಮಂದಿರದ ಮುಖದ್ವಾರಅವಿವೇಕದಲಿ ಗಯಾವಾಳರು ಬಂಧಿಸಲುಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರುವಿಶ್ವವಿಷ್ಣು ವಷಟ್ಕಾರನು ವಲಿದ 13ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆಈ ರೀತಿ ಅದ್ಬುತವು ಜರುಗಿದ್ದು ಕಂಡುಎರಗಿ ಕೊಂಡಾಡಿದರು ಅಲ್ಲಿದ್ದ ಜನರು 14ತಮ್ಮ ತಪ್ಪುಗಳನ್ನು ಮನ್ನಿಸೆಕ್ಷಮೆಬೇಡಿತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆಹೇಮರತ್ನಾದಿಗಳಕಾಣಿಕೆಅರ್ಪಿಸಿನಮಿಸಿ ಪೂಜಿಸಿದರು ಗಯಾವಾಳರು 15ಸೂರಿಕುಲ ತಿಲಕರು ಸತ್ಯ ಸಂಧಾರ್ಯರುಹರಿಪೂಜೆ ಮಾಡುವಾಗಹರಿಶಿರಿ ವಾಯುಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆಬರುವುದು ನೋಡುವ ಯೋಗ್ಯ ಭಕ್ತರಿಗೆ 16ಶ್ರೀಹರಿಅರ್ಚನೆಗೆ ಸ್ವಾಮಿಗಳು ಕುಳಿತರುಬ್ರಾಹ್ಮಣ ಮಹಾಪುರುಷ ಓರ್ವನು ಬಂದಸಹಸ್ರದಳ ಸುಂದರತರ ಕಮಲಪುಷ್ಪವಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ 17ಪ್ರಣವಅಷ್ಟಾಕ್ಷರಿ ಮೊದಲಾದ ಮಂತ್ರಗಳಆಮ್ನಾಯಋಗ್ ಯಜುಸ್ಸಾಮಾಥರ್ವಣದಅನುಪಮ ಮಹಾ ಇತಿಹಾಸ ಎರಡರಸಾರವಿಷ್ಣು ಸಹಸ್ರನಾಮಗಳಿರುತಿವೆಯು 18ಉತ್ಕøಷ್ಟತಮ ವಿಷ್ಣು ಸಹಸ್ರ ನಾಮಂಗಳಶ್ರೀ ಕೃಷ್ಣ ಸುಪ್ರೀತಿಕರವ್ಯಾಖ್ಯಾನಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣುಸೂರಿವರಧೀರರು ಸತ್ಯ ಸಂಧಾರ್ಯ 19ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿವೃಂದಾವನದಿ ಕೂಡುವಕಾಲಬರಲುಭೂದೇವಿಪತಿವಕ್ತ್ರದಿಂದುದಿತಸಾಧು ಸುಪವಿತ್ರ ತೀರಕ್ಕೆ ಬಂದಿಹರು 20ಹದಿನೇಳು ನೂರು ಹದಿನಾರನೇ ಶಾಲಿ ಶಕಆನಂದ ಸಂವತ್ಸರ ಜೇಷ್ಠ ಶುದ್ಧದ್ವಿತೀಯಪುಣ್ಯತಮ ದಿನದಲ್ಲಿ ಶ್ರೀಹರಿಯಪಾದಯೆಯ್ದಿದರು ಈ ಗುರುವರಮಹಂತ21ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿದೊಡ್ಡದಲ್ಲದ ಗ್ರಾಮಮಹಿಷಿಎಂಬುವಲಿಕ್ರೋಡಜಾ ತೀರಸ್ಥ ವೃಂದಾವನಸದನಮಾಡಿ ಕುಳಿತರು ಮತ್ತೊಂದು ಅಂಶದಲಿ 22ವೃಂದಾವನದೊಳು ಇಹ ಸತ್ಯಸಂಧರೊಳುನಿಂತಿಹನು ಸತ್ಯಸಂಧನು ಮುಖ್ಯವಾಯುವಾತದೇವನೊಳು ಸತ್ಯಸಂಧ ನಾಮಾವಿಷ್ಣುಸತ್ಯಜ್ಞಾನಾನಂತಾನಂದ ವಾಯು ಇಹನು 23ವೃಂದಾವನಸ್ಥರ ಈ ರೀತಿ ತಿಳಿಯುತ್ತಬಂದು ಸೇವಿಸುವವರಿಗೂ ಸ್ಮರಿಸುವವರಿಗೂಕುಂದುಕೊರತೆನೀಗಿಇಷ್ಟಾರ್ಥ ಲಭಿಸುವವುಇಂದಿರಾಪತಿ ದಯಾಸಿಂಧು ಪಾಲಿಸುವನು 24ಹನುಮಸ್ತ ಅಜನಪಿತ `ಶ್ರೀ ಪ್ರಸನ್ನ ಶ್ರೀನಿವಾಸ'ಮೀನಕಮಠಕ್ರೋಡನೃಹರಿವಟುಪರಶುದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು 25 ಪ|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು