ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆನ್ನಿ ಕೋಲೆ ಕೋಲೆ ಕೋಲೆನ್ನಿ ಮುತ್ತಿನ ಕೋಲನ್ಹೊಯ್ದು ಪಾಡಿರಮ್ಮ ಜಾಣ ರಂಗಗೆ 1 ನಿಗಮ ತಂದ ಶೂರನ್ಯಾರೆ ರುಕ್ಮಿಣಿ ಮೀನರೂಪ ಧರಿಸಿದ್ವಾರಿಜಾಕ್ಷ ಭಾಮಿನಿ 2 ಮಂದರ ಪೊತ್ತವನ್ಯಾರೆ ರುಕ್ಮಿಣಿ ತಂದು ಸುಧೆಯ ಸುರರಿಗೆರೆದ ಕೂರ್ಮ(ಅ)ವ ಭಾಮಿನಿ 3 ಆದಿದೈತ್ಯನಂಗ ಸೀಳಿದವನು ದಾರೆ ರುಕ್ಮಿಣಿ ವರಾಹ ಭಾಮಿನಿ 4 ತಂದೆ ಕೊಂದು ಕಂದನ ಸಲಹಿದವನದಾರೆ ರುಕ್ಮಿಣಿ ಕಂದರಾಕ್ಹಾಕಿದ ಕರುಳ ನಾರಸಿಂಹ ಭಾಮಿನಿ 5 ಇಳೆಯ ದಾನ ಬೇಡಿದಂಥ ತರಳನ್ಯಾರೆ ರುಕ್ಮಿಣಿ ಅಳೆದÀು ಭೂಮಿ ತುಳಿದ ಬಲಿಯ ವಾಮನ ಭಾಮಿನಿ 6 ಕ್ಷತ್ರ್ರೇರ್ಹತವ ಮಾಡಿದ ಸಮರ್ಥನ್ಯಾರೆ ರುಕ್ಮಿಣಿ ಹೆತ್ತ ತಾಯಿ ಕಡಿದ ಶೂರ ಭಾರ್ಗವ ಭಾಮಿನಿ 7 ಸೇತುಗಟ್ಟಿ ಸೀತೆಯ ತಂದಾತನ್ಯಾರೆ ರುಕ್ಮಿಣಿ ವಾತಸುತನಿಗೊಲಿದ ಶ್ರೀರಘುನಾಥ ಭಾಮಿನಿ 8 ಕÀಳ್ಳತನದಿ ಕಡೆದ ಬೆಣ್ಣೆ ಕದ್ದವನ್ಯಾರೆ ರುಕ್ಮಿಣಿ ಗೊಲ್ಲರೊಡೆಯ ಗೋವ್ಗÀಳ ಕಾಯ್ದ ಕೃಷ್ಣ ಭಾಮಿನಿ 9 ವಸನ ಬಿಟ್ಟು ನಾಚಿಕಿಲ್ಲದ ಪುರುಷನ್ಯಾರೆ ರುಕ್ಮಿಣಿ ಅಸುರರ್ವೈರಿ ಆದಿಪುರುಷ ಬೌದ್ಧ ಭಾಮಿನಿ 10 ಕುದುರೆನೇರಿ ಎದುರು ಬರುವ ಚೆದುರನ್ಯಾರೆ ರುಕ್ಮಿಣಿ ಮದನಮೂರುತಿ ಮುದ್ದು ಭೀಮೇಶಕೃಷ್ಣ ಭಾಮಿನಿ11
--------------
ಹರಪನಹಳ್ಳಿಭೀಮವ್ವ
ಬಾಲಗೋಪಾಲನ ತೋರೆಲೆ ಲಲನೆ ಲೀಲೆಗಳಲ್ಲಿ ಮುದದಿಂದ ಪ ಕಾಲ ಕಳೆಯುತಿರೆ ಬಾಲೆಯರು ಕೇಳೆ ಪೇಳದೆ ಅಗಲಿದನೆಮ್ಮ ಬಲು ಲೋಲನಾಗಿಹನಿವನಮ್ಮ ಎಮ್ಮ ಮೇಲೆ ಅತಿ ಕಠಿಣನಮ್ಮ ಮೋರೆ ಕೀಳು ಮಾಡುವನಿವನಮ್ಮ ಕೋಪ ಜ್ವಾಲೆಯಿಂದುರಿಯುವನಮ್ಮ ಬಲು ಬಾಲನಾಗಿಹನಿವನಮ್ಮ ಗುಣ ಶಾಲಿ ಮಾತೆಯ ಕೊಂದನಮ್ಮ ಕಪಿ ಜಾಲದೊಳತಿ ಪ್ರಿಯನಮ್ಮ ಪರ ಬಾಲೆಯೊಳತಿ ಮೋಹವಮ್ಮ ಮಾಯಾ ಜಾಲವ ಬೀಸುವನಮ್ಮ ಬಲು ಕೀಳನು ಮೇಲು ಮಾಡುವನು ಇಂಥಾ 1 ಸಾರಸಾಕ್ಷನ ವಿರಹವನು ಸೈರಿಸಲಾರೆವೆ ಕರುಣದಲಿ ತೋರೆ ಕೋರುವೆವು ವಿನಯದಲಿ ಅವ ನೀರೊಳಗಡಗಿದನೇನೆ ದೊಡ್ಡ ಮೇರು ಬುಡದಲಿಹನೇನೆ ಅವ ಚಾರು ಸೂಕರನಾಗಿಹನೇನೆ ಅವ ಬಾರಿ ಕಂಭದಲಿಹನೇನೆ ವೇಷ ಧಾರಿ ಬ್ರಹ್ಮಚಾರಿಯೇನೆ ಕ್ಷಿತಿ ಪಾರಿಯೆನಿಸಿ ತಿರುಗುವನೆ ಅವ ಸೇರಿಹನೆ ಹನುಮನನು ಅಯ್ಯೋ ಜಾರ ಚೋರನಿವನಮ್ಮ ಮಾನ ಮೀರಿ ಬತ್ತಲೆ ನಿಂತಿಹನೇ ವಾಜಿ ಏರುತ ಓಡುತಲಿಹನೇ ಇಂಥಾ 2 ವೇಣು ವಿನೋದದಿ ಕುಣಿಯುತಲಿ ಕಾಣುವುದೆಂತು ಪ್ರಸನ್ನ ಮಾಧವನ ಮೀನ ರೂಪವ ತಾಳಿದನ ಬಲು ಪೀನ ಶರೀರ ಕಂಠನ ಧರೆ ಯಾನನದಲ್ಲಿ ಪೊತ್ತಿಹನ ದುಷ್ಟ ದಾನವನನು ಸೀಳಿದವನ ಭೂಮಿ ದಾನವ ಯಾಚಿಸಿದವನ ಭೃಗು ಮುನಿಯೊಳವತರಿಸಿದನ ಕಡು ಕಾನನದೊಳು ತಿರುಗಿದನ ಸವಿ ವೇಣು ಗಾನವ ಮಾಡಿದನ ಬಹು ಮಾನಿನಿ ವ್ರತಗಳನಳಿದವನ ಪ್ರಸ ನ್ನಾನನ ತುರಗವಾಹನನ 3
--------------
ವಿದ್ಯಾಪ್ರಸನ್ನತೀರ್ಥರು
ಮರೆವೆನೆ ನಾ ನಿನ್ನ ಕರಿಗಿರಿ ದೊರೆ ಕರುಣಾಪೂರ್ಣನ್ನ ಪ ನರಹರಿ ರೂಪದವನ ನಖದೀ ಹಿರಣ್ಯನ ಸೀಳಿದವನ ವರಪ್ರಹ್ಲಾದ ವರದನ ಅಂಕದಿ ಸಿರಿಯ ಧರಿಸಿಕೊಂಡಿಹನ 1 ದಾನವಕುಲ ಸಂಹರನ ತನ್ನ ಧ್ಯಾನಿಸಿದರೆ ಒದಗುವನ ಆನೆಗೊಲಿದು ಬಂದವನ ಭಕ್ತಾಧೀನನಾಗಿ ಇರುತಿಹನ 2 ಶುದ್ಧ ಸತ್ವ ಶರೀರನ ಅಷ್ಟ ಸಿದ್ಧಿಪ್ರದನೆಂಬುವನ ಮದ್ಗುರು ಅಂತರ್ಗತನ ಸ್ತಂಭದಿ ಉದ್ಭವಿಸಿ ಬಂದವನ 3 ಗೀರ್ವಾಣ ಶುಭತಮ ಚರಿತನ 4 ಇಂಗಡಲಸುತೆಯಾಣ್ಮನ ಮುದ್ದು ರಂಗೇಶವಿಠಲರೇಯನ5
--------------
ರಂಗೇಶವಿಠಲದಾಸರು
ಲಾಲಿ ಲಾಲಿ ಹನುಮ ಲಾಲಿ ಬಲಭೀಮ ಲಾಲಿ ಲಾಲಿ ಮಧ್ವರಾಯ ಗುರುವರ್ಯ ಪ ತ್ರೇತೆಯಲಿ ರಘುಪತಿಯ ಸೇವೆ ಸಲಿಸಿದವನೆ ಸೀತೆಯನು ಕಂಡು ರಕ್ಕಸರ ಗೆಲಿದವನೆ ದೂತರಾವಣಗೆ ನೀತಿಗಳ ಕಲಿಸಿದವನೆ ಭೀತಿಯಿಲ್ಲದೆ ಲಂಕಾಪುರವ ದಹಿಸಿದವನೆ 1 ದ್ವಾಪರದಿ ಶ್ರೀ ಕೃಷ್ಣನನು ಪೂಜಿಸಿದವನೆ ಪಾಪಿ ದುರ್ಯೋಧನಾದಿಗಳ ಗೆಲಿದವನೆ ಕೋಪದಲಿ ಜರಾಸಂಧನನು ಸೀಳಿದವನೆ ಶ್ರೀಪತಿಯ ಸೇವೆಯಲಿ ನಿಸ್ಸೀಮನೆನಿಸಿದವನೆ2 ಮಧ್ವಮತದವರನುದ್ಧರಿಸಿ ಮೆರೆದವನೆ ಶ್ರದ್ಧೆಯಿಂದಲಿ ಹರಿಯ ಭಜಿಪ ಗುರುವರನೆ ಮುದ್ದು ಕಮಲನಾಭ ವಿಠ್ಠಲನೊಲಿಸಿದವನೆ ಶುದ್ಧ ಮೂರುತಿ ಉಡುಪಿ ಕೃಷ್ಣನರ್ಚಿಸಿದವನೆ3
--------------
ನಿಡಗುರುಕಿ ಜೀವೂಬಾಯಿ