ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಗಳಿಸಿದ್ಯೊ ಪ್ರಾಣಿ ಜ್ಞಾನಕ ಮಾಡಿ ನೀ ಹಾನಿ ಧ್ರುವ ಶಬ್ಧಜ್ಞಾನದ ಅಂಗಡಿನೀ ಹಾಕಿ ಲುಬ್ದಿಸಿದೊ ಬಲು ಪಾಕಿ ಲಬ್ದಾಲಬ್ಧಿಯು ತಿಳಿಯದೆ ಡೊಂಕಿ ಸ್ತಬ್ಧನಾದ್ಯೊ ವಿಶ ಸೋಂಕಿ 1 ವಿದ್ಯಾ ವ್ಯುತ್ಪತ್ತಿ ತೋರಿ ನೀ ಬಹಳ ಸದ್ಯಮಾಡಿದ್ಯೊ ತಾಳ ಮೇಳ ಸಿದ್ಧಾಂತನುಭವ ನೀ ಮಾಡಿ ಹಾಳ ಕೋಳ 2 ಗಳಿಸುವದೇನೆಂದರಿಯದೇ ಖೂನ ಬಾಳಿ ಬದುಕಿ ಪಡದೇನ ಬೆಳಗು ಬೀರುತಿರೆ ಮಹಿಪತಿ ಗುರುಜ್ಞಾನ ತಿಳಕೊಬಾರದೆ ನಿಜಖೂನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುಸೂಕ್ಷ್ಮ ಗುರು ಗೂಢವಿದ್ಯ ನೆಲೆವಂತಗಿದು ನಿಜವಾಗುದು ಸಾಧ್ಯ ಧ್ರುವ ಕಣ್ಣಿನ ಕೊನೆ ಮುಟ್ಟಿನೋಡಿ ನಿಜಖೂನ ಉನ್ಮನವಾಗಿ ಬೆರೆದಾಡುವ ನಿಜಸ್ಥಾನ ಚೆನ್ನಾಗ್ಯಾದಾನಂದ ಘನ ಭಿನ್ನವಿಲ್ಲದೆ ಮಾಡಿ ನಿಜಗುರು ಧ್ಯಾನ 1 ಜಾಗ್ರ ನಿದ್ರೆಯ ಮಧ್ಯ ಅರವಿನೊಳು ನಿಜಗೂಡಿ ಶೀಘ್ರ ಸಿದ್ಧಾಂತನುಭವಿಸಿ ತಾಂ ನಿಜಮಾಡಿ ಅಗ್ರ ಗುರುಪಾದವನು ಕೂಡಿ ಶುಕ ಮುನಿಗಳಿಗಿದೆ ನೋಡಿ 2 ಶಿರದಲಿ ಕರವಿಟ್ಟು ನೋಡಿ ನಿಜವರ್ಮ ಹರಿಸಿ ಅನೇಕ ಜನ್ಮಾಂತರದ ದುಷ್ಕರ್ಮ ತರಳಮಹಿಪತಿಗಿದೆ ಸುಬ್ರಹ್ಮ ಗುರು ಭಾಸ್ಕರಸ್ವಾಮಿ ಶ್ರೀಪಾದ ಧರ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶೋಭನವೆನ್ನಿರೋ ಶೋಭನ ಬನ್ನಿರೆ ಶೋಭನ ಬನ್ನಿ ಸವ್ಯದಿಂದ ಧ್ರುವ ಶೋಭಾನವೆಂಬೋದು ಸೋಹಂಭಾವಗುಣ ಅಹಂಭಾವಿಗಳು ಅರಿಯವು ಅಹಂಭಾವಿಗಳು ಅರಿಯುವು ಅನಂಗನ ಅಹಂಭ್ರಮೆಯು ವಿಪರೀತ 1 ಶೋಭನವೆನ್ನಿರೇ ಸಿದ್ಧಾಂತನುಭವಿಗಳು ಕಾಮಿ ಕಾಮಣ್ಣನ ಮದುವಿಗೆ ಪ್ರಾಣಿ ಮಾತ್ರಗಳೆಲ್ಲ ಬರಬೇಕು 2 ಶೋಭನವೆನ್ನಿರೇ ಮದೂಣಿಗಾನಂಗಗೆ ಕಾಮಿತದಳಗಿತ್ತಿ ಅರಸಗ ಕಾಮಿತದಳಗಿತ್ತಿ ಅರಸ ಮೋಹನ್ನಗೆ ನೆರೆಯಿತು ಲೋಕ ಧರೆಯೊಳು 3 ಶೋಭನವೆನ್ನಿರೇ ಕಾಮಿ ಕಾಮಣ್ಣಗೆ ಕಾಯದೊಳೀಹ್ಯ ಕರುಣಿಗೆ ಕಾಯದೊಳಿದ್ದು ಮೆರೆವ ಅನಂಗನು ಚರ್ಮದಬೊಂಬಿ ಗುರುತಾಗಿ 4 ಶೋಭನವೆನ್ನಿರೇ ಸಜ್ಜನ ಸಾವಿತ್ರೇರು ಆನಿ ಮೊದಲೆ ಇರುಹು ಕಡಿಗೆಲ್ಲ ಆನಿಮೊದಲೆ ಇರುಹು ಕಡಿಗೆಲ್ಲ ಮಹಿಪತಿ ಶೋಭಾನಯೆಂದ ಸಬೂದಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸವಿಸುಖ ಕಂಡೆ ಸುವಿದ್ಯ ಬ್ರಹ್ಮರಸವ ಧ್ರುವ ಅಧ್ಯಾತ್ಮಾನಂದದೂಟ ಸಿದ್ಧಾಂತನುಭವದಿಂದ ಬದ್ಧವಾಗಿ ಸೇವಸಿದ ಇದು ಏಕಾಗ್ರ 1 ಉಂಡು ಹರುಷವಾಯಿತು ಮಂಡಲದೊಳಗಿಂದು ಕಂಡು ಆನಂದ ಸುಖವ ಪಿಂಡಾಂಡದೊಳು 2 ಸುರಸ ಸಾರಾಯದೂಟ ಪರಿಪರಿ ಸವಿದಿನ್ನುಹರುಷವಾಯಿತು ಎನಗೆ ತರಳ ಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು