ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತಿಸೋ ಭಾರತವ ನೀ ಚಿಂತಿಸೊ ಪ. ಚಿಂತಿಸೊ ಭಾರತ ಮಹಿಮಾ | ಸಿರಿಕಾಂತನೆ ಉತ್ತಮೋತ್ತಮಾ | ಆಹಪಂಕ್ತಿಪಂಕ್ತಿಯೊಳಂತೆ | ಚಿಂತಿತ ಫಲದನಸಂಗ್ತಿ ಪೇಳುವ ಶ್ರುತಿ | ಅರ್ಥ ಭೋಧಿಪುದೆಂದು ಅ.ಪ. ಕಾಳಗ ಸರ್ವ | ಧೀಶನ ಮಹಿಮೆಯ 1 ಅಧಿಭೂತ ಅಧ್ಯಾತ್ಮ ಉಂಟು | ಮತ್ತೆಅಧಿದೈವವೆಂಬುದು ಉಂಟು | ಕೇಳುವಿದಿತವಾಗುವುದಲ್ಲ ಗಂಟು | ಗುರುಮುದದಿಂದ ಬಿಡಿಸಲೀ | ಗಂಟು | ಆಹಅದುಭುತಾರ್ಥಗಳೆಲ್ಲ | ವಿದಿತವಾಗುತ ಹರಿಹೃದಯಾಂತರಂಗನ | ನಿಧಿಧ್ಯಾಸನಕ್ಕವಕಾಶ 2 ಮೂರ್ಬಗೆ ಭಾಷೆಗಳಲ್ಲಿ | ಉಕ್ತಸಾರ ಪ್ರಮೆಯಂಗಳಲ್ಲಿ | ಹರಿ ಉ-ದಾರ ಗುಣಂಗಳು ಅಲ್ಲಿ | ಉಕ್ತಮೀರದೆ ಸ್ಪಷ್ಟತ್ವದಲ್ಲಿ | ಆಹನೇರವಾಗಿಯೆ ಪೇಳ್ದ | ಕಾರಣ ಕರೆವರುಮೂರರೊಳ ಗೊಂದು | ಸಾರಸಮಾಧ್ಯೆಂದು 3 ದರ್ಶನಾಂತರ ಸಿದ್ಧವಾದ | ವೈಷ್ಣ್ವದರ್ಶನ ಪ್ರತ್ಯುಕ್ತವಾದ | ಶೈವದರ್ಶನಾದಿ ಸಿದ್ಧವಾದ | ವಸ್ತುದರ್ಶಿತ ಶಿವನರ್ಚಿಸೀದ | ಆಹ ವಿ-ಮರ್ಶನ ಯೋಗ್ಯ ಸ | ದೃರ್ಶನ ದಿಂದಲಿದರ್ಶನ ಭಾಷೆ ದಿ | ಗ್ದರ್ಶನ ವಿದು ತಿಳಿ 4 ಶೂಲಾಟ್ಟ ಜನಪದವೆಂಬ | ಶಿವಶೂಲವು ಚತುಷ್ಪಥವೆಂಬ | ಕೇಶಶೂಲಿಗಳ್ಪ್ರಮದೇರು ಎಂಬ | ಯುಗಕಲಿಯೊಳಗಿಹರು ಎಂಬೆಂಬ | ಆಹಮೇಲಾದ ಗೂಢಾರ್ಥ | ಜಾಲಗಳೆಲ್ಲವುಓಲೈಸು ಗುಹ್ಯದ | ಭಾಷೆ ಎಂದೆನುತಲಿ 5 ಪರ ಪಾಂಡವಾದಿಗಳ್ಪೆಸರೆಂದು 6 ಸ್ವರವರ್ಣ ವಾಕ್ಯ ಭಾರತ | ಗ್ರಂಥಸರ್ವವು ಮುಖ್ಯ ಪ್ರವೃತ್ತ | ಹರಿಸರ್ವೋತ್ತಮನೆಂಬ ತತ್ವ | ಪೇಳೆಸಿರಿ ವೇದವ್ಯಾಸ ವಿರಚಿತ | ಆಹಪರಮ ಭಕ್ತರು ಪೃಥೆ | ವರ ಉದರೋದ್ಭವಧರ್ಮಾದ್ಯರ ಚರಿತೆ | ಅರುಹುವುದೆನುತಲಿ 7 ಗುಣಗಳು ಭಕ್ತ್ಯಾದಿ ದಶವು | ಇನ್ನುಕರ್ಣದಿಂ ಕೇಳ್ವುದೆಲ್ಲವು | ಹಾಗೆಗುಣಗಳು ಶೀಲ ವಿನಿಯಾವು | ಮತ್ತೆಗುಣಸುವುದು ಮೂರು ವೇದವು | ಆಹಮನು ಪದ ವಾಚ್ಯಗ | ಳೆನಿಸುವುದೀ ಪಂಚಗುಣಧರ್ಮ ವಾಚ್ಯರು | ಪಾಂಡವರೆನಿಪರು 8 ಅಭಿಮಾನಿ ಧರ್ಮಕ್ಕೆ ಎಂದು | ಮನುಅಭಿಧನು ಧರ್ಮಜನೆಂದು | ಇನ್ನುಅಭಿಮಾನಿ ಭಕ್ತ್ಯಾದಿಗೆಂದು | ಭೀಮನಭಿಧನಾಗಿಹನವ ಎಂದು | ಆಹಅಭಿಧನರ್ಜುನ ಶ್ರುತ | ಕಭಿಮಾನ ಎನುತಲಿಶುಭ ಶೀಲ ವಿನಯಕ್ಕೆ | ಅಭಿಮಾನಿಯಮಳರು 9 ಪರಿ ಪತಿ ಪರಿ ಜ್ಞಾನುಳ್ಳ | ಆ ಪೃಥೆ ಸುತರೆಲ್ಲನೀ ಪರಿಭಾವಿಸು | ಆಸ್ತೀಕರೆನುತಲಿ 10 ದ್ರುಪದಜೆ ಧರ್ಮಾದಿ ಐದು | ಜನಸುಪುಣ್ಯ ಶ್ಲೋಕರ ಕಥೆ ಇದು | ಇನ್ನುಉಪರಿಚರಾಭಿಧನೆಂದು | ವಿಷ್ಣುಸುಪ್ರತಿಪಾಧ್ಯನು ಎಂದು | ಆಹಇಪ್ಪರಿ ಮಹಿಮೆಯು | ಪೇತವು ಭಾರತಸುಪ್ರತಿಷ್ಠಿತವಿದು | ಅಬ್ಜಜಾಂಡದಲೆಂದು11 ಭಕ್ತಿವೈರಾಗ್ಯವು ಜ್ಞಾನಾ | ಮತ್ತೆಧೃತಿಯು ಸುಮೇಧಾ ಸುಪ್ರಜ್ಞಾ | ಇನ್ನುಸ್ಥಿತಿ ಬಲಯೋಗವು ಪ್ರಾಣಾ | ಭೀಮಹತ್ತು ಗುಣಾತ್ಮಕ ಮಾನಾ | ಆಹಉತ್ತಮ ಗುಣಿಪರ | ನಾತ್ಮನಾ ಅದರಿಂದತತ್ತನು ಎನಿಸೀಹ | ಪೃಥ್ವಿಪ ಭೀಮನು 12 ಮೂರ್ತಿ ಮೂರ್ತಿ | ಆಹಕರೆಸಿಹ ಶಕುನಿಯು | ಮೂರುತಿ ನಾಸ್ತಿಕ್ಯಸರ್ವದೋಷಾತ್ಮಕ | ರೆನಿಪರಂಧಜರೆಲ್ಲಾ 13 ಹರವನಾತರನು ಎಂದು | ದ್ರೌಣಿಕರೆಸುವನಹಂಕಾರನೆಂದು | ಇನ್ನುಕರಣಗಳ್ಪ್ರಾಣಾದಿ ಎಂದು | ಮತ್ತೆವರ ಸೈನ್ಯ ಪಾಪಗಳೆಂದು | ಆಹಅರಿವುದರ ಪುಣ್ಯ | ಪರವೆಂದು ಪಾಂಡವರಇರುತಿಹ ವಿಷ್ಣುವು | ಅವರ ನಿಯೋಜಕ 14 ಸರ್ವವು ಅಧ್ಯಾತ್ಮನಿಷ್ಟ | ಗ್ರಂಥದುರ್ವಿಜ್ಞೇಯ ಸರ್ವರ್ಗೆ ಎನುತ | ವ್ಯಾಸಸರ್ವಜ್ಞ ತಾನೆಲ್ಲ ಜ್ಞಾತ | ನಿಹಪೂರ್ವ ಮಾರುತ ಹರಿದೂತ | ಆಹಅರಿವ ಗುರು ಗೋವಿಂದ | ವಿಠಲಾನುಗ್ರಹದಿಂದಮರುತಾನುಗ್ರಹದಿಂದ | ಅರಿವರು ಇತರರು 15
--------------
ಗುರುಗೋವಿಂದವಿಠಲರು
ದಾರಿ ಒಳ್ಳೇದಾಗಿರಬೇಕೂ ಹರಿದಾಸನಾದ ಮೇಲೆ ಪ ಯಾರೇ ಬಂದರೂ ಸರಿ ಯಾವ ಕಾಲದಲ್ಲಿಯು ಪಾರಗಾಣದಂಥಾ ಈ ಸಂಸಾರವಾರ್ಧಿ ದಾಟುವದಿಕ್ಕೆ ಅ.ಪ ಜ್ಞಾನ ಭಕ್ತಿ ದಾನಧರ್ಮ ವೈರಾಗ್ಯದಿ ಸದ್ಗುಣಂಗಳು ತಾನೆ ತಾನಾಗೆಲ್ಲವು ಸ್ವಾಧೀನವಾಗಿರಬೇಕಾದರೆ 1 ಓದಿದರ್ಥ ಮನಕೆ ತಿಳಿದು ನಿರತವು ಸಾಧನವು ಮಾಡುತ ಅ- ನಾದಿ ಸಿದ್ಧವಾದ ತತ್ವದ ಹಾದಿ ಕಾಣಬೇಕಾದರೆ 2 ತಾಮಸಾದಿ ದುರ್ಗುಣ ನಿರ್ನಾಮವಾಗಿ ಪ್ರೇಮದಿಂ ಗುರುರಾಮವಿಠಲನ್ನ ನೆನೆವದಕ್ಕೆ 3
--------------
ಗುರುರಾಮವಿಠಲ
ನಿತ್ಯ ಶ್ರೀಕರವು ಪ ಭೂಪತಿಯಂದದಿ ಭೂಮಿಯಾಳುವುದು ಕಾಪಾಡುತಿಹುದು ಲೋಕಿಗರಅ.ಪ ಆಳುವಾರುಗಳು ಆಚಾರ್ಯರುಗಳು ಪೇಳಿದರಿದರಾಂತರ್ಯವನು ಕೇಳುತ ಬಾಳಿದ ಬಹು ಭಾಗವತರ ಪಾಳಯವದು ತಾಂ ಪರಮಪದ 1 ಅಭಿಮತದಿಂದಲಿ ಮುನಿಗಳು ಮೂವರು ವಿಭವದಿಂದಲದ ಸಲಹಿದರು ಉಭಯ ವೇದಗಳ ಅಮೃತವರ್ಷದಿಂ ಸು ರಭಿತ ಕುಸುಮಗಳರಳಿದವು 2 ಶಂಖ ಸುದರ್ಶನ ಲಾಂಛನ ಭುಜಗಳಲ ಲಂಕಾರದ ಹನ್ನರೆಡು ನಾಮಗಳು ಪಂಕಜ ತುಳಸೀಮಣಿ ಪವಿತ್ರಗಳು ನಿಶ್ಶಂಕೆಯ ಮೂರು ಮಂತ್ರವೆ ಕಾಯ್ಗಳು 3 ಶಾಸ್ತ್ರ ಸಿದ್ಧವಾದರ್ಚಾಮೂರ್ತಿಯ ಕ್ಷೇತ್ರ ತೀರ್ಥಗಳು ಪಕ್ವಫಲ ಶ್ರೋತೃಗಳಿಗೆ ಮಧುರಾದತಿಮಧುರವು ಖ್ಯಾತಿಯ ವಿಜಯರಾಘವ ಕೃತಿ-ಪ್ರ- ಖ್ಯಾತಿಯ ಅಣ್ಣಂಗಾರ್ಯ ಕೃತಿ4 ನಿತ್ಯ ನೈಮಿತ್ತಿಕ ತಿರುವಾರಾಧದಿ ನವ್ಯ ತದೀಯದ ಕೈಂಕರ್ಯ ಸ್ತುತ್ಯಪ್ರಬಂಧ ಗೀತಾ ಶ್ರೀಭಾಷ್ಯ [ದರ್ಥಿ]ಪಾರಾಯಣ ಪರಮಾನಂದ 5 ಶ್ರೀರಂಗ ವೆಂಕಟ ವರದ ನಾರಾಯಣ [ರಾ ಶ್ರೀ] ಪದಯುಗ ಪೂಜನ ಪ್ರಾಪ್ತಿ ಫಲ ಓರಂತನುದಿನ ಧ್ಯಾನ ಗಾನಗಳು [ಬೀರುವವು] ತೃಪ್ತಿಕರ ಸುಧಾನಿಧಿ 6 ಜಾಜೀ ಕೇಶವ ಜಗವ ಪಾಲಿಸಲು ಮಾಜದೆ ಮಾಡಿದ ಉಪಕೃತಿಯು ರಾಜಿಪ ಚರಣಗಳಾಶ್ರಿತರಿಗೆ ಸವಿ ಭೋಜನವೀವುದು ಹರಿಯೆಡೆಯೊಳ್ 7
--------------
ಶಾಮಶರ್ಮರು
ಶ್ರುತಿಯ ಶಿರಗಳನೀಗ ಸೂಚಿಪೆ ಸ್ವಾಮಿವಿತತವಾಗಿಹ ವಿಶ್ವಕ್ಕೊಡೆಯ ನೀ ಗ್ರಹಿಸು ಪಆದಿ ಮಧ್ಯಾಂತಗಳಿಲ್ಲದನಾದಿಯಾದಾ ನಿರ್ಗುಣಬ್ರಹ್ಮ ನಿಜರೂಪವೆಂದುಸಾಧಿಸಿ ಬೋಧಿಸಿ ಸರ್ವೋಪಾಧಿಯನುಭೇದಿಸಿ ಬಿಡುತಿಹ ಬಹು ಸಿದ್ಧವಾದ 1ಮಾಯೆಯ ರೂಪದಿ ಮಾಡಿ ವಿಶ್ವವನುಆಯದಿಂದಾಧಾರವಾಗಿಯೂ ತಾನುನೋಯದೆ ನೋಡುತ್ತ ನಿಂದ ಸಾಕ್ಷಿಕನುಈಯಂಡದೊಳು ಪೂರ್ಣನಾಗಿಹನೆಂಬ 2ಹರಹುತ ಲೋಕವ ಹೊಂದಿಸು ತಿಂತುಇರುವನು ನಿತ್ಯದಲೀ ದೇವನೆಂದುಅರುಹುತಲಿದೆ ಶ್ರುತಿಶಿರವಿದು ಕೇಳುತಿರುಪತಿ ವೆಂಕಟಗಿರಿನಾಥ ಕೃಷ್ಣ 3ಓಂ ಶುಕವಾಗಮೃತಾಬ್ಧೀಂದವೇ ನಮಃ
--------------
ತಿಮ್ಮಪ್ಪದಾಸರು
ಉದ್ಧಾರ ಮಾಡಿದ ಶ್ರೀರಾಮ ಅಹಲ್ಯಾ | ಉದ್ಧಾರ ಮಾಡಿದ ||ಪದ್ಮಜಾಂಡದೊಳು ಪ್ರಸಿದ್ಧವಾದ ಮಾತಿದು ಪಮುನಿ ಶಾಪದಿಂದಲಿ ವನದಿ ಕಲ್ಲಾಗಿ ಬಲುದಿನ ಚಿಂತಿಸುತಲಿಹ |ವನಿತೆಯ ದಯೆಯಿಂದ1ಮಂದಮತಿ ಮಾಟಕೀ ಇಂದುಮುಖಿಗೆ ಇಂಥಕುಂದುಬಂತಲ್ಲಾ |ಎಂದು ಇಂದ್ರರ ಪ್ರಾರ್ಥಿಸುತಿರೆ2ಮೌನಿ ಮಾತಿಗೆ ಪಾದರೇಣು ಸ್ಪರ್ಶವಿತ್ತು ಮಾನಿನಿಯ ಮಾಡಿದಾ |ಪ್ರಾಣೇಶ ವಿಠಲನು 3
--------------
ಪ್ರಾಣೇಶದಾಸರು
ಮಧ್ಯರಾತ್ರಿಯೊಳೀಗ ನಾ ನಿದ್ದೆಯೊಳಿರೆ ಬಾಗಿಲು |ಸದ್ದು ಮಾಡಿ ವೊತ್ತಿದವರಾರೈ | ಬಾಳ್ವರಿಗಿದುಬುದ್ಧೆ ಹೆಣ್ಣೋ ಗಂಡೋ ಪೇಳಿರೈ ಪಮೇದಿನಿಯೊಳು ಪ್ರಸಿದ್ಧವಾದ ತುಂಗಮಹಿಮ ಶ್ರೀ |ಮಾಧವಬಂದಿಹೆ ಕೇಳೆಲೆ | ಆದರೊಳ್ಳಿತುಮದನನೊಳಾಡಲಿ ಹೋಗೆ 1ಹೇ ಸಖಿ ವಿಚಾರ ಮಾಡೆ ವಸಂತನಲ್ಲವೆ | ಸರ್ವದೇಶ ಬಲ್ಲದು ನಾಚಕ್ರಿಯೆ | ಇಲ್ಲಿ ಬೇಕಿಲ್ಲಆ ಸಂತಿಯೊಳಿಟ್ಟು ಮಾರೊದೈ 2ಉತ್ತಮಗಂಬುವದಲ್ಲೆ ವೈತ್ತಿಕೆ ತುಳಿವನೆಂದುಧರೆ|ಹೊತ್ತವ ಕೇಳೆಲೆ ಸುಂದರಿ | ಒಳ್ಳೆದು ನಿನ್ನಹುತ್ತಿನೊಳು ವಾಸ ಮಾಡೊದೈ3ಸರ್ಪನಲ್ಲವೆ ಅಖಂಡಲ ದರ್ಪ ತಗ್ಗಿಸಿದವ ಸ- |ಮರ್ಪಕವಾಯಿತೇನೆ ಮನಕೆ | ಮರದ ಗೂಡೊಳುತೆಪ್ಪನೆ ಸೇರುವುದೇ ಬಹು ಲೇಸೈ 4ಸೂರಿಗಳೆಲ್ಲರು ಯನ್ನ ಕೀರುತಿ ಬಲ್ಲರುಹುದಲ್ಲ |ನಾರೀಮಣಿಹರಿಬಂಧಿನಿ ಕೇಳೆ | ಮನಗಳಲ್ಲಿ ವಿ-ಹಾರ ಮಾಡುವುದೇ ಲೇಸೈ 5ತರುಗಳಲ್ಲಿಹೊದಕ್ಕೆ ವಾನರನಲ್ಲೆ ಜನನಾದಿ ದೋಷ |ವಿರಹಿತ ನಾರಾಯಣ ಬಂಧಿನೆ | ಈ ನಾಮಕ್ಕಿನ್ನು-ತ್ತರವೇನು ಇದ್ದರೆ ಪೇಳೆ ಗುಣಧೀ 6ನಾನರಿತೆನೀಗ ದೇವ ಪ್ರಾಣೇಶ ವಿಠಲನೆಂಬೊದು |ಏನಾಡಿದಾಪದ್ಧವನು ಕ್ಷಮಿಸೈ | ತನುವೆ ನಿನ್ನದುಮಾನದಿಂದೆನ್ನನು ರಕ್ಷಿಸೈ 7
--------------
ಪ್ರಾಣೇಶದಾಸರು