ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂಬೂರಿ ಹಿಡಿಸಿದನು ಪ ಅಂಬುಜಾಕ್ಷನು ದಯದಿ ಅ.ಪ ನಂಬೀದ ಜನರಿಗೆ ಬೆಂಬಲ ತಾನೆಂಬ ನಂಬಿಕೆ ಹೃದಯದಿ ತುಂಬುತ ತಾನೀಗ 1 ಆಶಾ ಪಾಶಕೆ ಸಿಲುಕಿ ಬೇಸತ್ತು ಬೆಂಡಾಗಿ ಮೋಸ ಹೋಗುತ್ತಲಿದ್ದೆ ಶ್ರೀಶ ದಯಾಂಬುಧಿ 2 ಹುಟ್ಟಿದ ದಿನದಿಂದ ಕಷ್ಟದಲ್ಲೇ ಬಂದೆ ಮುಟ್ಟಲಿದನು ಈಗ ಸಂತುಷ್ಟಿಯ ಕಂಡೆನು 3 ಕಾಡಿ ಬೇಡುವರಿಲ್ಲ ನಾಡೆಲ್ಲ ನಮ್ಮದೇನೆ ನೀಡುವ ದೊರೆ ಒಬ್ಬ ಈಡಿಲ್ಲದವನಾತ 4 ವಿಧಿ ವಿಸ್ಮರಣೆ ನಿಷೇಧ ಹರಿನಾಮ ಸುಧೆಯನ್ನು ಕರೆದು ಕರೆದು ಕುಡಿವೆ5 ತಂಬೂರಿ ಸಿಗುವುದು ತುಂಬ ಭಾಗ್ಯವು ಸತ್ಯ ಹಂಬಲಂಗಳ ಬಿಡಿಸಿ ತುಂಬುವ ಹರಿ ಮನದಿ6 ಪುಣ್ಯ ರಾಶಿಗಳೆಲ್ಲ ವದಗಿ ಬಂದವೊ ಏನೋ ಚಿನ್ಮಯ “ಶ್ರೀ ಕೃಷ್ಣವಿಠಲ”ನ ದಾಸನಾದೆ7
--------------
ಕೃಷ್ಣವಿಠಲದಾಸರು
ಯೋಗಿ ವಲ್ಲಭನ ಅನುರಾಗವನು ಪಡೆದವಗೆ ಲಾಗವೆಲ್ಲವು ದೊಡ್ಡ ಯೋಗವಾಗುವುದು ಪ ಹೋಗಿ ಗಂಗೆಯ ತೀರದಲಿ ಬಾವಿ ತೋಡಿದರೂ ಬೇಗ ಸಿಗುವುದು ದಿವÀ್ಯ ಬಲಮುರಿಯ ಶಂಖವು ಅ.ಪ ಮಾಧವನ ಪರಮ ಕರುಣವ ಪಡೆದ ಮನುಜನಿಗೆ ಹೋದ ಕಡೆಗಳಲಿ ದೊರೆಕುವುದಾದರೆ ಮೂದಲಿಸುವರ ಮನವು ಕಾದ ಬೆಣ್ಣೆಯು ಕರಗಿ ಹೋದ ತೆರದಲಿ ಕ್ಷಣದಿ ಸಾಧುವಾಗುವುದು 1 ವೇದಾಂತ ರಾಜ್ಯದಲಿ ಜ್ಞಾನಭಕುತಿಗಳಿಂದ ಮೋದ ಪಡಿಸುವನು ಕಾದ ಮರುಭೂಮಿಯಲಿ ಸಕಲ ಸಂಪತ್ತುಗಳ ಸಾಧಿಸುವ ಬೇಧಿಸುವ ವಿಘ್ನರಾಶಿಗಳನ್ನು 2 ಕುರುಡ ನೋಡುವನೆಲ್ಲ ಕಿವುಡ ಕೇಳುವನೆಲ್ಲ ಗುರುವರ ಪ್ರಸನ್ನ ನೀ ಮರುಕ ತೋರಿದರೆ ಕರಡಿ ಕೈ ಗೊಂಬೆಯಾಗುವುದು ಕೈಗೊಂಬೆಯು ತ್ವರಿತದಲಿ ಕಲ್ಪತರುವಾಗಿ ಕೊಡುವುದು ಫಲವ 3
--------------
ವಿದ್ಯಾಪ್ರಸನ್ನತೀರ್ಥರು
ನಿನ್ನ ಕೃಪೆಯಿರೆ ಬಲುಸುಖ ಈ ಸಂಸಾರನಿನ್ನ ಕೃಪೆಯಗಲಿದರೆ ಘನಗೋಳು ಹರಿಯೆ ಪಅಲ್ಲ ಅಹುದಾಗುವುದು ಸುಳ್ಳೆ ಖರೆಯಾಗುವುದುಎಲ್ಲಸಿರಿ ಒದಗುವುದು ಒಲ್ಲೆನಲು ಬಿಡದೆಪುಲ್ಲನಾಭನ ಒಲುಮೆವುಳ್ಳ ಮಾನವರಿಗೆಕಲ್ಲಿನೊಳು ಜಲಪುಟ್ಟಿ ಹೊಳೆಯಾಗಿ ಹರಿಯುವುದು 1ಹೀನನಾದರು ಬಹುಮಾನ ಸಿಗುವುದು ಗೊಡ್ಡುಧೇನುಗಳೆಲ್ಲ ಬಿಡದೆ ಹೈನಗರೆಯುವುವುದೀನನಾಥನು ಒಲಿಯೆ ನಾನಾ ಸಿರಿಸೌಭಾಗ್ಯತಾನೆ ಬರುವುದು ತೆಂಗಿನೊಳುದಕದಂತೆ 2ವಿಷವೆ ಅಮೃತವಹುದು ಕಸವೆ ಕರ್ಪುರವಹುದುವಿಷಮ ವಿಷಯದ ಎಡರು ಹಸನಹುದು ನಿಖಿಲವಸುದೆಗಧಿಕ ನಮ್ಮ ಬಿಸಜಾಕ್ಷ ಶ್ರೀರಾಮನೊಶವಾದ ಬಳಿಕ ನಿಜ ಅಸಮ ಮುಕ್ತಿಹುದು 3
--------------
ರಾಮದಾಸರು