ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸೆಗೆ ಮೇರೆಯನು ನಿರ್ಮಿಸಿದಿಯಿಲ್ಲವೋ ಬೇಸರವೆ ಇಲ್ಲಿದಕೆ ಎಷ್ಟಾದರಕಟ ಪ ಅನ್ನ ಸಿಗದ್ಹೊತ್ತಿನಲಿ ಅನ್ನ ಸಿಕ್ಕರೆ ಸಾಕು ಅನ್ಯಮೇನೊಲ್ಲೆಂದು ನಿನ್ನ ಕೋರುವುದು ಅನ್ನ ಚೆನ್ನಾಗಿ ಸಿಗಲು ತಣ್ಣಗಿರದುಂಡುಟ್ಟು ಹೊನ್ನು ಚಿನ್ನಕೆ ಸೋತು ಬನ್ನಬಡಿವುದಭವ 1 ಕಡುಕ್ಷೇತ್ರ ಮಾನ್ಯತನಗಡವಿ ತುಂಬಿರ್ದರು ಮಿಡುಕುವುದು ತಡೆಯದೆ ಎಡಬಲದಲಿರುವ ಬಡವರಾಸೆಗೆ ಕಂಡು ಪಡೆವ ಲವಲವಿಕೆಯಿಂ ಬಿಡದೆ ಅವರಿಗೆ ಕೆಡುಕು ಹುಡುಕುವುದು ಹರಿಯೆ 2 ಪೊಡವಿಯೆಲ್ಲನು ಒಂದೇ ಕೊಡೆಯಿಂದಾಳಲು ಮತ್ತು ಪಡೆಯಲಿಚ್ಛಿಪುದಿತರ ಪೊಡವಿಪರ ರಾಜ್ಯ ಸುಡುಗಾಡು ಕಡೆತನಕ ಸುಡುಸುಡೀ ಆಸೆಯನು ಬಿಡಿಸೆನ್ನ ರಕ್ಷಿಸೈ ಒಡೆಯ ಶ್ರೀರಾಮ 3
--------------
ರಾಮದಾಸರು
ನಗುಮೊಗ ಚಂದಿರ ಸೊಗಸುಗಳಿಗೆ ಬಲು ಮುಗಿ ಬೀಳುತಲಿಹರೊ ನೀ ಸಿಗದಿರೊ ಪ ಹಗರಣದಲ್ಲಿ ಪನ್ನಗವೇಣಿಯರು ಸಿಗಲು ಆಗಲೆ ಬಲು ರಗಳೆ ಮಾಡುವುದು ಅ.ಪ ಬಲ ಪೂತನಿಯೊಮ್ಮೆ ಲಲನೆಯ ವೇಷದಿ ಬಲು ಮೋಸದಿ ವಿಷ ಮೊಲೆಯನ್ನು ಉಣಿಸಿದ್ದು ಲಲನೆಯರಿಗೆ ನಿನ್ನ ಸುಳುವನು ಕೊಡದಿರೊ 1 ಪತಿಗಳ ತ್ಯಜಿಸುವ ಸತಿಜನರಿರುವರು ಅತಿಮೋಸದಿ ನಿನ್ನ ಹಿತವ ಬಯಸುವರು ಮತಿಗೊಟ್ಟರೆ ಇವರು ಅತಿ ಸುಲಭದಿ ನಿನ್ನ ರತಿಯಲಿ ಸಂಸಾರ ಚ್ಯುತಿಯ ಪೊಂದುವರು 2 ರೆನ್ನುತ ಕರೆವರು ಕನ್ಯೆಯರುಗಳು ಸಣ್ಣ ಲೋಭಕೆ ಇವರನು ಸೇರಿದರೆ ಪ್ರ ಸನ್ನನಾಗದಿರೆ ನಿನ್ನನು ಬಿಡರೋ 3
--------------
ವಿದ್ಯಾಪ್ರಸನ್ನತೀರ್ಥರು
ನೀನೆ ಗತಿ ಭಕುತಜನಕೆ ಧೀನದಯಾಸಿಂಧು ಹರಿಯೆ ಪ ವನದಿಯಿರಲು ಗುಹೆಯಪೊಗಲು ಮನೆಯೊಳಿರಲು ಗಿರಿಯನೇರಲು ದಣವಿನಿಂ ಬಳಲುತಿರಲು ಪರದೇಶ ದೇಶ ತಿರುಗಲು 1 ಒಡಲಿಗಿಲ್ಲದೆ ತೊಳಲುತಿರಲು ಬಡತನದಿಂ ಬೇಡುತಿರಲು ಕಡಲಧುಮುಕಿ ಘೋರಬಡಲು ಪೊಡವಿಪರ ಕೈಯೊಳ್ಸಿಗಲು 2 ಕಾಮಿಜನರ ಕಾಮಿತಂಗಳ ಪ್ರೇಮದಿತ್ತು ಕಾಯ್ವ ಮಮ ಸ್ವಾಮಿ ಶ್ರೀರಾಮ ನಂಬಿದವರ ಕಾಮಧೇನು ಪರಮಪುರಷ3
--------------
ರಾಮದಾಸರು
ಹಗಲು ಸಮಯದಲಿ ಇರುಳು ನೋಡಿದ ಬಾವಿ ಗುರುಳಬಹುದೇ ನರರು ಈ ಜಗದೊಳು ಪ ಮರುಳು ಮಾಡುವ ಭವದುರುಳು ಬಂಧನದೊಳು ಸಿಗಲು ಬಯಸಬಹುದೇ ಅವಿವೇಕದಿ ಅ.ಪ ಅಡಿ ಐದು ಉದ್ದದ ಒಡಕು ಒಂಭತ್ತಿನ ಕಡು ದುಃಖ ದೇಹಕೆ ಸಿಡಿವುದು ತರವೆ ಪೊಡವೀಶನಾದರೂ ಮಡಿಯಲು ನಿನ್ನಯ ಸಡಗರವೆಲ್ಲವು ಹಿಡಿಯೊಳಗಲ್ಲವೇ 1 ಅನುದಿನದಲಿ ನೀನು ಹಣ ಹಣವೆನ್ನುತ ಕುಣಿಯುವುದನು ನೋಡಿ ಅಣಕಿಸುವರು ನಿನ್ನ ತನುಮನ ಕ್ಲೇಶವನನುಭವಿಸುತ ಸದಾ ಹಣವಗಳಿಸಲದನುಣುವರು ಬೇರಿಹರು 2 ಗೃಹಿಣಿ ಗೃಹಿಗಳೆಲ್ಲ ಕುಹಕವೆಂದರಿಯದೆ ಗೃಹವು ಎನ್ನದು ಎಂದು ಗೃಹಿಣಿ ಎನ್ನವಳೆಂದು ಬಹುವಿಧ ವೈಭವವೆನಗಿಹುದೆನ್ನುವ ಮಹದಾಗ್ರವನ್ನು ಸಹಿಸುವನೇ ಹರಿ 3 ಸಿರಿ ಸಂತತ ಗಳಿಸಲು ಅಂತಕ ತನುವನು ಸೆಳೆಯಲು ಗಳಿಸಿದ ಕಂತೆಗಳೆಲ್ಲವೂ ಎಂತು ನಿಲ್ಲಿಸುವುವು ಚಿಂತಿಸಿ ಮನದೊಳು ಹರಿಯನು ನಿಲಿಸೊ 4 ಊಹಿಸುತೆಲ್ಲವ ಈ ಮಹಿಯೊಳಗಿನ ಮೋಹವ ಜರಿಯುತ ಪಾಹಿ ಎಂದು ಆ ಮಹಾಮಹಿಮ ಪ್ರಸನ್ನ ಹರಿಯ ದಿವ್ಯ ಸ್ನೇಹಸುಜಲದ ಪ್ರವಾಹದೊಳಗೆ ನಲಿಯೊ 5
--------------
ವಿದ್ಯಾಪ್ರಸನ್ನತೀರ್ಥರು