ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ
ಛಲಾವ್ಯಾಕೊ ನಿನಗೆ ಎನ್ನಲಿ ಪ ಛಲಾವ್ಯಾಕೊ ಕೋಲಾಚಲವೇಂಕಟ ಫಲಾ ನೀಡಿ ನೀ ಭಲಾನೆನಿಸೊ ದೇವಾ ಅ.ಪ ಧರಾತಳದಿ ಭೂಧರಾಗ್ರಮಂದಿರ ಪರಾವರೇಶನೆ ದರಾರಿಕರಶೂರ 1 ರಮಾವರನೆ ತವ ಸಮಾನರಾಗಿಹ ಸುಮಾನಸಾರ್ಕರ ಕ್ಷಮಾತಳದಿ ಕಾಣೆ 2 ಕುಲಾಲಕೃತ ಮೃತ್ ಕಲಾಪಧರಮಹಾ ಉಲಾಯುಗಾತ್ಮಜ ಬಲಾರಿಸುತಸುಖ 3 ಶತ್ರುಬವರದೊಳು ವೃತ್ರಾರಿತನಯನ ಮಿತ್ರಾನ ತೋರಿ ಪೊರೆದ್ಯೊ ಶತ್ರುಹನನದೇವ 4 ತಕ್ಷಣದಲಿ ಸಾಸಿರಾಕ್ಷ ತನಯನ ಪೊರೆದಿ 5 ಭರ್ಮಾನಸ್ತ್ರದ ನಿಜ ಮರ್ಮವರಿತು ನೀ ಧರ್ಮಾಪೌತ್ರನ ಕಾಯ್ದಿ ಸುಧರ್ಮನಾಮಕ ನಿನಗೆ 6 ದಶಾಸ್ಯ ಮುಖಮಹನಿಶಾಚರೇಶರ ದಶಾಕಳದ ಮಹಾ ದಶಾವತಾರನೆ 7 ವಟಾದ ಎಲೆಸಂಪುಟಾದಲೊರಗುಂ - ಗುಟಾವ ನುಂಬುವ ದಿಟಾ ವಿಶ್ವೋದರ 8 ದಾತಾ ಗುರುಜಗನ್ನಾಥ ವಿಠಲ ನಿಜ ದೂತಾಪಾಲಕನೆಂದು ಖ್ಯಾತಾನಾಗಿಹ ನಿನಗೆ 9
--------------
ಗುರುಜಗನ್ನಾಥದಾಸರು