ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಕೋಟಿ ನಾಮಭಜನಾ ನೇಮದಿಂದ ಮಾಳ್ಪನು ಧನ್ಯ ಪ ಪ್ರೇಮಪಾಶದಿಂದಬಿಗಿದುಸ್ವಾಮಿಯನ್ನ ಹೃದಯದಿನೆನೆದು ಅ.ಪ ಶಂಭು ತನ್ನ ಮನದಿನಿತ್ಯ ಇಂಬಿನಿಂದ ಧ್ಯಾನಿಸುತ್ತ ಅಂಬಿಕೆಗನುಮೋದಿಸುತ್ತ ಸಂಭ್ರಮದಿಂದೊರೆದ ಸತ್ಯ1 ನೇಮದಿ ಕಾರ್ಯವನು ಬಗೆದು ಭೂಮಿಜಾತೆಯ ಕಂಡವಗೊಲಿದ 2 ಕರುಣಾಮೂರುತಿಯೊಲುಮೆವಡೆದು ಪರಮಪುಣ್ಯ ವಿಭೀಷಣ ಒರದ 3 ಭರತಭೂಮಿಯೊಳಗೆ ಜನಿಸಿ ಹರಿಯ ಭಕ್ತ ಗಣ್ಯರೆನಿಸಿ ಪುರಂದರ ಕನಕದಾಸರು ಕರುಣದೊರೆದ ಭವತಾರಕವಾ 4 ಸಾಸಿರನಾಮವ ಪಠಿಸಿ ವಾಸುದೇವನಿಗೆ ವಂದಿಸಿ ಭೂಸುರರಾನಂದಿಸುವ ಕೇಶವ ಜಾಜೀಶನ ತೋರ್ಪ 5
--------------
ಶಾಮಶರ್ಮರು
ವಿಮಲಮತಿಯ ಪಾಲಿಸಭವ ಅಮಿತದಯಾರ್ಣವ ದೇವ ಪ ದೀನಬಂಧು ಜ್ಞಾನಸಿಂಧು ದೀನನೊಳು ನೀನೆ ನಿಂದು ಹೀನಮತಿಯ ತರಿದು ತವ ಧ್ಯಾನ ಸದಾನಂದದಿಡುವ 1 ಆಶಾಪಾಶಗಳನು ತುಳಿದು ದೋಷರಾಸಿಗಳನು ಕಡಿದು ಶ್ರೀಶ ನಿಮ್ಮ ಸಾಸಿರನಾಮವ ಧ್ಯಾಸಕಿತ್ತು ಜ್ಞಾನ ಕೊಡುವ 2 ಸತ್ಯ ಶ್ರೀರಾಮ ನಿಮ್ಮ ಪಾದ ಭಕ್ತಿಯಿಂದ ಬೇಡ್ವೆ ಸದಾ ಚಿತ್ತ ಶುದ್ಧಿಗೈದು ಎನಗಾ ನಿತ್ಯ ಮುಕ್ತಿ ನೀಡಿ ಬೇಗ 3
--------------
ರಾಮದಾಸರು
ನಾರಾಯಣ ನಿನ್ನ ನಾಮದ ಸ್ಮರಣೆಯ |ಸಾರಮೃತವೆನ್ನ ನಾಲಗೆಗೆ ಬರಲಿ ಪಕೂಡುವಾಗಲು ನಿಂತಾಡುವಾಗಲು ಮತ್ತೆ |ಹಾಡುವಾಗಲು ಹರಿದಾಡುವಾಗ ||ಖೋಡಿವಿನೋದದಿ ನೋಡದೆ ನಾ ಬಲು |ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ 1ಊರಿಗೆ ಹೋಗಲಿ ಊರೊಳಗಿರಲಿ-|ಕಾರಾಣಾರ್ಥಗಳೆಲ್ಲ ಕಾದಿರಲಿ ||ವಾರಿಜನಾಭನರಸಾರಥಿಸನ್ನುತ|ಸಾರಿಸಾರಿಗೆ ನಾ ಬೇಸರಿಸದ ಹಾಗೆ 2ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |ರಸ-ಕಸವಿರಲಿ ಹರುಷವಿರಲಿ ||ವಸುದೇವಾತ್ಮಜ ಶಿಶುಪಾಲಕ್ಷಯ ||ಅಸುರಾಂತಕ ನಿನ್ನ ಹೆಸರು ಮರೆಯದಂತೆ 3ಕಷ್ಟದಲ್ಲಿರಲಿ ಉತ್ಕøಷ್ಟದಲ್ಲಿರಲಿ-|ಎಷ್ಟಾದರು ಮತಿಗೆಟ್ಟಿರಲಿ ||ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |ಅಷ್ಟಾಕ್ಷರ ಮಹಾಮಂತ್ರದ ನಾಮದ 4ಕನಸಿನೊಳಾಗಲಿ ಕಳವಳಿಕಾಗಲಿ |ಮನಸುಗೊಟ್ಟಿರಲಿ ಮುನಿದಿರಲಿ ||ಜನಕಜಾಪತಿ ನಿನ್ನ ಚರಣಕಮಲವನು |ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ 5ಜ್ವರ ಬಂದಾಗಲು ಚಳಿ ಬಂದಾಗಲು |ಮರಳಿ ಮರಳಿ ಮತ್ತೆ ನಡೆವಾಗಲು ||ಹರಿನಾರಾಯಣದುರಿತನಿವಾರಣ |ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ 6ಸಂತತಹರಿನಿನ್ನ ಸಾಸಿರನಾಮವ |ಅಂತರಂಗದಾ ಒಳಗಿರಿಸಿ ||ಎಂತೋ ಪುರಂದರವಿಠಲರಾಯನೆ |ಅಂತ್ಯಕಾಲದಲಿ ಚಿಂತಿಸುವಂತೆ 7
--------------
ಪುರಂದರದಾಸರು
ಶ್ರೀ ಗಾಯತ್ರಿಪ್ರಣವಮಂತ್ರ ರಹಸ್ಯ62-4ಪ್ರಣವಾಷ್ಟ ದ್ವಾದಶಾಕ್ಷರ ಮನುಗಾಯತ್ರೀ |ಘನಪುರುಷಸೂಕ್ತ ಸಾಹಸ್ರನಾಮಾನಿಗಮವೇದ್ಯ ||ವರ್ಣ ವ್ಯಂಜನ ಸ್ವರಾಕ್ಷರಪ್ರತಿಪಾದ್ಯಾನಂತ ಕ್ರಿಯ |ಗುಣರೂಪಶ್ರೀಶ ನಮೋ ಸರ್ವೇಶ ಗುರುಗ |ಅನಂತ ಕ್ರಿಯ ಗುಣರೂಪಅನಘನಮೋ ವಾಯುಸ್ತ |ಗುಣರೂಪಾ ಕ್ರಿಯಾ `ನಮೋ' ಅನಘವಾಯುಸ್ತ ||ಅನಿಷ್ಟಹರ ಇಷ್ಟಪ್ರದ ವಿಷ್ಣುಸಾಸಿರನಾಮಾ ||ಅನುಷ್ಟಪ್ ಛಂದಸ್ ಶ್ರೀ ಕೃಷ್ಣದೇವತೆಯುಅನಘಜ್ಞಾನಾದಿನಿರ್ದೋಷಗುಣನಿಧಿಗುಣಪೂರ್ಣಅನಘಅಕಾರವಾಚ್ಯ ಅಂಭ್ರಣೀಶವಿಷ್ಣು ಅವತಾರ ವೇದ ವ್ಯಾಸನೇ ಋಷಿಯು ||ಪ್ರಣವೀಷ್ಟ ದ್ವಾದಶಾಕ್ಷರ ಮನುಗಾಯತ್ರೀ |ಘನಪುರುಷ ಸೂಕ್ತ ಸಾಸಿರನಾಮವೇದ |ವರ್ಣ ಸ್ವರವ್ಯಂಜನಾಕ್ಷರ ಸಾದುಶರಧಿಅನುಪಮ ಸರ್ವೋತ್ತಮ ಪ್ರತಿಪಾದ್ಯ ಶರಣು ||
--------------
ಪ್ರಸನ್ನ ಶ್ರೀನಿವಾಸದಾಸರು