ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಡತೆ ಹೀನನಾದರೇನಯ್ಯ - ಜಗದೊಡೆಯನ ಭಕುತಿ ಇದ್ದರೆ ಸಾಲದೆ ಪ ಪುಂಡರಾ ಪಾಂಡುನಂದನರು ಮತ್ತದರೊಳುಕಂಡೋರ್ವಳೈವರು ಭೋಗಿಪರುಖಂಡಿಸಿದರು ರಣದೊಳು ಗುರುಹಿರಿಯರಪುಂಡರೀಕಾಕ್ಷನ ಒಲುಮೆಯೊಂದಲ್ಲದೆ 1 ಪರಿ ಬುದ್ಧಿಯ ಹೇಳಿ ಹಿರಣ್ಯಕಕಂದನ ನಿರ್ಬಂಧಿಸುತಿರಲುಅಂದು ಸಾಧಿಸಲು ಕಂಬದ ಬಳಿಯೆ ತನ್ನತಂದೆಯ ಕೊಲಿಸಿದನೆಂಬರು ಜನರು2 ದಾಸಿಯ ಜಠರದೊಳು ಜನಿಸಿದ ವಿದುರ - ಸ-ನ್ಯಾಸಿಯೆಂದೆನಿಸಿಕೊಂಡಸಾಸಿರನಾಮದೊಡೆಯ ಕೃಷ್ಣ ಬಾಡದಾದಿಕೇಶವನ ಭಕುತಿಯೊಂದಿದ್ದರೆ ಸಾಲದೆ 3
--------------
ಕನಕದಾಸ
ನಂದನ ಕಂದ ಸುಂದರ ಕೋಮಲಾಂಗ ಚಂದ್ರವದನ ಮುಚುಕುಂದವರದಗೆ ಮಂಗಳಂ ಮಂಗಳಂ 1 ಮುದ್ದು ಮುಖದಲಿ ತಿದ್ದಿಟ್ಟ ತ್ರಿನಾಮವ ಹದ್ದುವಾಹನ ಖದ್ರಿ (ಕದ್ರು?) ಸುತ ಫಣಿಶಯನ ಮಂಗಳಂ ಮಂಗಳಂ 2 ಶ್ರೀಶ ಭೀಮೇಶಕೃಷ್ಣನೆ ವೆಂಕಟೇಶ ಸಾಸಿರನಾಮದೊಡೆಯ ಶ್ರೀನಿವಾಸ ಮಂಗಳಂ ಮಂಗಳಂ 3
--------------
ಹರಪನಹಳ್ಳಿಭೀಮವ್ವ
ಬಯಸಿ ಕರೆದರೆ ಬರುವರೇನಯ್ಯಾ ನರಹರಿಯ ದಾಸರು ಬಯಸಿ ಕರೆದರೆ ಬರುವರೇನಯ್ಯಾ ಪ ಬಯಸಿಕರೆದರೆ ಬರುವರೇನೋ ಜಯಶ್ರೀ ಮುರಹರಿಯ ನಾಮ ಓದಿ ಕಳೆದುಕೊಂಡ ಶೂರರು ಅ.ಪ ಮಹ ವಿಷಯಲಂಪಟ ಬಿನುಗು ತ್ರಿಗುಣೆಂಬ್ಹೇಸಿಕೆಯ ಬಳಿದು ಸುಸ್ಸಂಗಶ್ರವಣ ಮನನದಿಂ ನಿಜಮೂಲ ಮರ್ಮರಿದು ಆಸನವ ಬಲಿದು ಲೇಖ್ಯದಮೇಲೆ ಘನ ಅನಂದದಿರುವರು 1 ಆರು ದ್ವಯಗಜ ಇಕ್ಕಡಿಯ ಗೈದು ಬಿಡದ್ಹಾರಿಬರುವ ಆರು ಹುಲಿಗಳ ತಾರ ಸೀಳೊಗೆದು ಬಲುಘೋರಬಡಿಪ ಆರುನಾಲ್ಕು ಶುನಕಗಳು ತುಳಿದು ಸತ್ಪಥವ ಪಿಡಿದು ಸಾರಾಸಾರ ಸುವಿಚಾರಪರರಾಗಿ ಮಾರನಯ್ಯನ - ಪಾರಮಹಿಮೆಯ ಅಮೃತ ಪೀರುವವರು 2 ತಾಸಿನ ಜಗಮಾಯವೆಂದರಿದು ಇದು ಸತ್ಯವಲ್ಲೆಂದು ಬೇಸರಿಲ್ಲದೆನುಭವದಿ ದಿನಗಳೆದು ಸುಚಿಂತದನುದಿನ ದಾಸದಾಸರ ಸಾಕ್ಷಿಗಳ ತಿಳಿದು ನಿಜಧ್ಯಾಸದ್ಹುಡಿಕ್ಹಿಡಿದು ನಾಶನಭವದ್ವಾಸನೆಯ ನೀಗಿ ಸಾಸಿರನಾಮದೊಡೆಯ ನಮ್ಮ ಶ್ರೀಶ ಶ್ರೀರಾಮಚರಣಕಮಲದಾಸರಾಗಿ ಸಂತೋಷದಿರುವರು 3
--------------
ರಾಮದಾಸರು
ರಂಗ ಬಾರೊ ನರಸಿಂಗ ಬಾರೊ ಪ. ಸಾಸಿರ ಮೂರುತಿ ವಾಸವವಂದ್ಯನೆಸಾಸಿರನಾಮದೊಡೆಯನೆಸಾಸಿರನಾಮದೊಡೆಯನೆ ನರಹರಿಕೇಶವ ನಮ್ಮ ಮನೆದೈವ 1 ವಾರಣವಂದ್ಯನೆ ಕಾರುಣ್ಯರೂಪನೆಪುರಾಣಗಳಲ್ಲಿ ಪೊಗಳುವಪುರಾಣಗಳಲ್ಲಿ ಪೊಗಳುವ ನರಹರಿನಾರಾಯಣ ನಮ್ಮ ಮನೆದೈವ2 ಯಾದವಕುಲದಲ್ಲಿ ಸಾಧುಗಳರಸನೆಭೇದಿಸಿ ದನುಜರ ಗೆಲಿದನೆಭೇದಿಸಿ ದನುಜರ ಗೆಲಿದನೆ ನರಹರಿಮಾಧವ ನಮ್ಮ ಮನೆದೈವ 3 ದೇವೆಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆಗೋವಿಂದ ನಮ್ಮ ಮನೆದೈವ 4 ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದುಶಿಷ್ಟಪರಿಪಾಲನೆನಿಸಿದಶಿಷ್ಟಪರಿಪಾಲನೆನಿಸಿದ ನರಹರಿವಿಷ್ಣುವೆ ನಮ್ಮ ಮನೆದೈವ5 ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆವಿದುರನ ಮನೆಯಲಿ ನಲಿದುಂಡವಿದುರನ ಮನೆಯಲಿ ನಲಿದುಂಡ ನರಹರಿಮಧುಸೂದನ ನಮ್ಮ ಮನೆದೈವ 6 ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆಅಕ್ರೂರನೊಡನೆ ಮಧುರೆಗೆಅಕ್ರೂರನೊಡನೆ ಮಧುರೆಗೆ ಪೋದ ತ್ರಿ-ವಿಕ್ರಮ ನಮ್ಮ ಮನೆದೈವ7 ಸಾಮವನೋದುತ್ತ ದಾನವ ಬೇಡುತ್ತನಾಮದ ಮಹಿಮೆ ಪೊಗಳುತ್ತನಾಮದ ಮಹಿಮೆ ಪೊಗಳುತ್ತ ನರಹರಿವಾಮನ ನಮ್ಮ ಮನೆದೈವ8 ಶ್ರೀಧರ ಎಸಿಸಿದ ಶ್ರೀವತ್ಸ ಲಾಂಛನಶ್ರೀಧರ ಗೋಪೀತನಯನೆ ಶ್ರೀಧರ ಗೋಪೀತನಯನೆ ನರಹರಿಶ್ರೀಧರ ನಮ್ಮ ಮನೆದೈವ 9 ಋಷಿಜನ ವಂದ್ಯನೆ ಬಿಸಜನಾಭನೆ ದೇವಋಷಿಜನರಿಗೆಲ್ಲ ಅಭಯವಋಷಿಜನರಿಗೆಲ್ಲ ಅಭಯವ ಕೊಡುವೋನೆಹೃಷಿಕೇಶನೆ ನಮ್ಮ ಮನೆದೈವ10 ಪದುಮಸಂಭವಪಿತ ಪದುಮದಾಮೋದರ[ಪದುಮ]ದಿಂದಭಯವ ಕೊಡುವೋನೆ[ಪದುಮ]ದಿಂದಭಯವ ಕೊಡುವೋನೆ ನರಹರಿಪದುಮನಾಭನೆ ನಮ್ಮ ಮನೆದೈವ 11 ನಾಮದ ಮಹಿಮೆಯ ಪ್ರೇಮದಿ ಪೊಗಳಲುಕಾಮಿತಾರ್ಥಗಳ ಕೊಡುವೋನೆಕಾಮಿತಾರ್ಥಗಳ ಕೊಡುವೋನೆ ನರಹರಿದಾಮೋದರ ನಮ್ಮ ಮನೆದೈವ 12 ಸಂಕಟಗಳ ತರಿವೋನೆ ಪಂಕಜನಾಭನೆಶಂಕೆಯಿಲ್ಲದೆ ಅಸುರರಶಂಕೆಯಿಲ್ಲದೆ ಅಸುರರ ಸಂಹರಿಸಿದಸಂಕರ್ಷಣ ನಮ್ಮ ಮನೆದೈವ 13 ವಸುದೇವತನಯನೆ ಶಿಶುಪಾಲನ ಗೆಲಿದನೆವಶವ ಮಾಡಿದೆಯೊ ತ್ರಿಪುರರವಶವ ಮಾಡಿದೆಯೊ ತ್ರಿಪುರರ ನರಹರಿವಾಸುದೇವ ನಮ್ಮ ಮನೆದೈವ14 ಶುದ್ಧಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯಹದ್ದುವಾಹನನಾದ ದೇವನೆಹದ್ದುವಾಹನನಾದ ದೇವನೆ ನರಹರಿಪ್ರದ್ಯುಮ್ನ ನಮ್ಮ ಮನೆದೈವ 15 ವನಜಲೋಚನ ಹರಿ ವಿನಯ ಉಳ್ಳವನೆಧ್ವನಿಕೇಳಿ ಬಂದ ಕುಬುಜೆಯ ಧ್ವನಿಕೇಳಿ ಬಂದ ಕುಬುಜೆಯ ನರಹರಿಅನಿರುದ್ಧ ನಮ್ಮ ಮನೆದೈವ 16 ಪಾರಿಜಾತದ ಹೂವ ನಾರಿಗೆ ಇತ್ತನೆವೀರ ದಾನವರ ಗೆಲಿದನೆವೀರ ದಾನವರ ಗೆಲಿದನೆ ನರಹರಿಪುರುಷೋತ್ತಮ ನಮ್ಮ ಮನೆದೈವ 17 ಅಕ್ಷಯಪದವೀವ ಪಕ್ಷಿವಾಹನಸ್ವಾಮಿಕುಕ್ಷಿಯೊಳೀರೇಳು ಭುವನವಕುಕ್ಷಿಯೊಳೀರೇಳು [ಭುವನವನಾಳಿದ] ನರಹರಿ ಅ-ಧೋಕ್ಷಜ ನಮ್ಮ ಮನೆದೈವ18 ನರಕಾಸುರನ ಕೊಂದು ಹಿರಣ್ಯನ ಮರ್ದಿಸಿಕರುಳ ಬಗೆದು ವನಮಾಲೆ ಹಾಕಿಕರುಳ ಬಗೆದು ವನಮಾಲೆ ಹಾಕಿದ ಹರಿನರಸಿಂಹನೆ ನಮ್ಮ ಮನೆದೈವ19 ಅಚ್ಚ್ಚುತಾನಂತನೆ ಸಚ್ಚಿದಾನಂದನೆ[ಮಚ್ಚಾವತಾರದಿ] ನಲಿದನೆ[ಮಚ್ಚಾವತಾರದಿ] ನಲಿದನೆ ನರಹರಿಅಚ್ಚುತ ನಮ್ಮ ಮನೆದೈವ 20 ಜಾನಕಿರಮಣನೆ ದಾನವಾಂತಕನೆದೀನರಕ್ಷಕನೆ ಸಲಹಯ್ಯದೀನರಕ್ಷಕನೆ ಸಲಹಯ್ಯ ನರಹರಿಜನಾರ್ದನ ನಮ್ಮ ಮನೆದೈವ 21 ಅಪರಿಮಿತಮಹಿಮನೆ ವಿಪರೀತ ಚರಿತನೆ[ಗುಪಿತವೇಷಗಳ] ತಾಳಿದನೆ[ಗುಪಿತವೇಷಗಳ] ತಾಳಿದ ನರಹರಿಉಪೇಂದ್ರ ನಮ್ಮ ಮನೆದೈವ 22 ಹರನ ಭಸ್ಮಾಸುರನು ಮರಳಿ ಬೆನ್ನ್ಹತ್ತಲುತರುಣಿರೂಪವನು ತಾಳಿದÀನೆತರುಣಿರೂಪವನು ತಾಳಿದ ನರಹರಿ ಶ್ರೀ-ಹರಿಯೆ ನಮ್ಮ ಮನೆದೈವ 23 ಕೃಷ್ಣಾವತಾರದಲಿ ದುಷ್ಟರ ಗೆಲಿದನೆವೃಷ್ಣಿಯರ [ಕುಲತಿಲಕನೆ]ವೃಷ್ಣಿಯರ [ಕುಲತಿಲಕನೆ] ನರಹರಿ ಶ್ರೀ-ಕೃಷ್ಣನೆ ನಮ್ಮ ಮನೆದೈವ 24 ಇಪ್ಪತ್ತು ನಾಲ್ಕು ನಾಮಂಗಳ ಪಾಡುವೆನುಅಪ್ಪ ಕೇಶವನ ಚರಿತೆಯನುಅಪ್ಪ ಕೇಶವನ ಚರಿತೆಯನು ಪಾಡಲುಒಪ್ಪಿಸಿಕೊಳ್ಳುವ ಹಯವದನ25
--------------
ವಾದಿರಾಜ
ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ ಸಾಸಿರನಾಮದೊಡೆಯ ಸಕಲಲೋಕಕರ್ತನಾದ ಸುಜನ ಪೋಷಕ ಭಕ್ತವಿಲಾಸ ಅ.ಪ ಪಂಕಜೋದರ ಪರಮ ಪಾವನ ಸರ್ವಜಗವ ಬಿಂಕದಿಂದ ಪೊರೆವ ದೇವನಾ ಶಂಕೆಯಿಲ್ಲದ ದನುಜ ಮರ್ದನನಾದ ತನ್ನ ಕಿಂಕರರÀನು ಬಿಡದೆ ಕಾಯುವಾ ವೆಂಕಟಾದ್ರಿ----ದ ವೇಣುನಾದದಲಿ ಬುಧವಂದ್ಯ ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ 1 -----ಶ್ವ ರೂಪನಾ ಎಂದು ಎಂದಾನಂದ ದಿಂದ ಅನುದಿನ ಚಂದದಿಂದ ---ಸನಾ |----ಭವ ಬಂಧಕವನೆ ಪರಿಹರಿಸುವನಾ ಕಂದ ಕೂಗಲು ಕಂಭದಿಂದಾ ಬಂದ ನಾರಸಿಂಹನ ಮೂರ್ತಿ 2 ----------ಮಹಾನುಭಾವ ಕಂಡ ಮುನಿಗಳಂತರ್ಭಾವನಾ ಕುಂಡಲೀಶÀ ಭೂಷಣ ಪ್ರೀಯನಾಕರ ಘನಾ ಕೋದಂಡಧರ ಶ್ರೀರಾಮನಾದನಾ ಪುಂಡಲೀಕ ವರದಹರಿ-----ತನಾದ ವೇದವೇದ್ಯ ಅಂಡಜನ--------ಹರಿ 'ಹೊನ್ನಯ್ಯ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ವಿಶ್ವಧಾರನೋ ಶ್ರೀಶ ವಿಶ್ವಕಾರನೋ ವಿಶ್ವ ವಿಶ್ವಭರಿತ ವಿಶ್ವರಕ್ಷ ವಿಶ್ವಚರಿತ ಪ ನಾದಭರಿತನೋ ಹರಿ ನಾದಾತೀತನೋ ವೇದಾಧರನೋ ರಂಗ ವೇದ ಗೋಚರನೋ ವೇದವೇದಾಂತ ಸ್ವಾದ ನಿಖಿಲ ಬೋಧರೂಪ ಭೇದರಹಿತ ಆದಿ ಅನಾದಿದಾತ ಸತತ ಸಾಧುಸಜ್ಜನವಿನುತ ಅಮಿತ1 ದೇವದೇವನೋ ಸ್ವಾಮಿ ದಿವ್ಯಚರಿತನೋ ಕಾವ ಕರುಣನೋ ಭಕ್ತಿ ಭಾವಪೂರ್ಣನೋ ಸಾವುಹುಟ್ಟು ಭಯವಿದೂರ ಮಾಯಗೆಲಿದ ಮಹಪ್ರಕಾಶ ಭಾವಜಜನಕ ಭವಭಂಗ ಸೇವಕಜನರ ಜೀವದಾಪ್ತ 2 ದೋಷನಾಶನೋ ಕೃಷ್ಣ ಮೀಸಲಾತ್ಮನೋ ಭಾಸುರಂಗನೋ ಜಗದೀಶ ಗಮ್ಯನೋ ವಾಸುಕಿಶಯನ ವಾಸುದೇವ ಸಾಸಿರನಾಮದೊಡೆಯ ಇಂದಿ ರೇಶ ಗೋವಿಂದ ಪೋಷಿಸೆನ್ನ ಶ್ರೀಶ ಶ್ರೀರಾಮದಾಸಪ್ರಿಯ 3
--------------
ರಾಮದಾಸರು
ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ ಶೌರಿ _ ಬಾ ಬಾ ಬಾ ಪ ಸಾಸಿರನಾಮದೊಡೆಯ ವಾಸವವಿನುತನೆ ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ ವೇದಾವಕದ್ದಂಥ ಉದ್ದಂಡ ದೈತ್ಯನ ಮರ್ಧಿಸಿ ವೇದವ ತಂದು ವೇಧನ ಸಲಹಿದ ಮತ್ಸ್ಯ ಬಾ ಬಾ ಬಾ 1 ಸಿಂಧು ವಿನೊಳಗಿದ್ದ ಮಂದರಗಿರಿಯನ್ನು ಬಂದು ಬೆನ್ನಿಲಿಪೊತ್ತು ತಂದು ಪೀಯೂಷವ ಚಂದದಿ ಸಲಹಿದ ಕೂರ್ಮಸ್ವರೂಪನೆ _ ಬಾ ಬಾ ಬಾ 2 ಕನಕನೇತ್ರನ ಕೊಂದು ಕಾಂತೆಯಹಿಡಿದೆತ್ತಿ ಕನಕಗರ್ಭನಿಗೊಲಿದ ಕಾರುಣ್ಯನಿಧಿಚಂದ್ರ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3 ತರುಳನಮೊರೆಕೇಳಿ ದುರುಳನ ಕರುಳನೆ ಬಗೆದು ಕೊರಳೊಳು ಕರುಳ ಧರಿಸಿ ಸುರರನ್ನು ಪೊರೆದಂಥ ಸರ್ವವ್ಯಾಪಿ ಕರುಣಿಯೆ ಮೂರ್ತಿ _ ಬಾ ಬಾ ಬಾ 4 ಅನುಜನ ಪೊರೆಯಲು ತನುವನು ಮರೆಸಿಕೊಂಡು ದಾನವನು ಬೇಡುತ ಬಲಿ ಯನು ತುಳಿದು ಪೊರೆದ ಘನ್ನ ಮಹಿಮ ವಟು ವಾ ಮನ ರೂಪಿಯೆ _ ಬಾ ಬಾ ಬಾ 5 ಕೊಡಲಿಯ ಪಿಡಿಯುತ ಒಡೆಯರ ತರಿದು ಕಡಿದು ಮಾತೆಯ ಪಿತ ನುಡಿಯನು ಸಲಿಸಿದ ಚಂಡವಿಕ್ರಮ ಮಹಿಮ ಭಾರ್ಗವ ಮೂರುತಿ _ ಬಾ ಬಾ ಬಾ 6 ಕಾಂತೆಯನೆಪದಿಂದ ಕದನವ ಹೂಡಿಕೊಂಡು ಅಂತಕಸದನಕೆ ಅರಿಗಳ ತಳ್ಳುತ ಶಾಂತತೆ ಬೀರಿಪೊರೆದ ದಶರಥ ರಾಮನೆ _ ಬಾ ಬಾ ಬಾ 7 ಚೋರತನದಿ ಬಲು ಬೆಣ್ಣೆಯ ಮೆಲ್ಲುತ ಜಾರತನದಿ ಋಷಿ ಸ್ತ್ರೀಯರಿಗೊಲಿದಂಥ ಮಾರಜನಕ ಶ್ರೀ ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8 ವೇದಗೋಚರ ವಿಶ್ವ ವೇದ ಬಾಹ್ಯರಿಗೆಲ್ಲ ವೇದ ವಿರುದ್ಧವಾದ ವಾದಗಳ ತೋರಿ ನಿಂದು ಬೆತ್ತಲೆ ಮೆರದ ಬೌದ್ಧ ಸ್ವರೂಪನೆ _ ಬಾ ಬಾ ಬಾ 9 ಕಲಿಬಾಧೆ ಹೆಚ್ಚಾಗೆ ಕಲಿಯುಗ ಕೊನೆಯಲ್ಲಿ ಮಲಿನಾರ ಮರ್ಧಿಸಿ ಉಳಿಸಲು ಧರ್ಮವ ಚಲುವ ರಾಹುತನಾದ ಕಲ್ಕಿ ಸ್ವರೂಪನೆ _ ಬಾ ಬಾ ಬಾ 10 ಸತ್ಯಸಂಕಲ್ಪನೆ ನಿತ್ಯಸ್ವರೂಪನೆ ಉತ್ತಮನೀನೆಂದು ಒತ್ತೊತ್ತಿ ಪೊಗಳುವೆ ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11 ಏಕರೂಪನೆ ನಿನ್ನನೇಕ ರೂಪಂಗಳ ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು ಕಾಕುಮತಿಯು ನಾನು ಎಂತು ವರ್ಣಿಸಲಯ್ಯ _ ಬಾ ಬಾ ಬಾ12 ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ ಪೂರ್ಣಬೋಧರ ಪೂರ್ಣ ಕರುಣಾವ ಬೀರಿಸು _ ಬಾ ಬಾ ಬಾ 13 ಮಾತುಮಾತಿಗೆ ನಿನ್ನ ನಾಮದಸ್ಮರಣೆಯ ನಿತ್ತು ಪಾಲಿಸು ಎನ್ನ ಮೃತ್ಯೋಪಮೃತ್ಯುವೆ ದೇವ ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14 ದೋಷದೂರನೆ ನಿನ್ನ ದಾಸನುನಾನಯ್ಯ ವಾಸವ ಜಯಮುನಿ ವಾತನೊಳ್ವಾಸಿಪ ಈಶ ಸಿರಿಕೃಷ್ಣ ವಿಠಲರಾಯನೆ ಬೇಗ ಬಾ ಬಾ ಬಾ 15
--------------
ಕೃಷ್ಣವಿಠಲದಾಸರು