ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಡಮತಿಗಡ ಕಡಿದೀಡ್ಯಾಡಿ ಪಡಿರೋ ಸನ್ಮಾರ್ಗವ ಹುಡುಕ್ಯಾಡಿ ಪ ಗಡಗಡಸದೃಢದಯಿಡುತೋಡೋಡಿ ಪಡಿರೋ ಕಡು ಅನಂದ್ವೊಯ್ಕುಂಠ ನೋಡಿ ಅ.ಪ ಚಿಂತೆ ಭ್ರಾಂತಿಗಳ ದೂರಮಾಡಿ ನಿ ಶ್ಚಿಂತರಾಗಿರೋ ಮನ ಮಡಿಮಾಡಿ ಶಾಂತಿತೈಲ್ಹೊಯ್ದು ಜ್ಞಾನಜ್ಯೋತಿಕುಡಿ ಚಾಚಿ ನಿಂತು ನೋಡಿರೋ ಹರಿಪುರದಕಡೆ ಅಂತ್ಯ ಪಾರಿಲ್ಲದಾತ್ಯಂತ ಪ್ರಕಾಶದಿಂ ನಿಂತು ಬೆಳಗುತಾರೋ ಆನಂತಸೂರ್ಯರು ಕೂಡಿ 1 ಬೋಧಾದಿಮಯ ಮಹದ್ವಾರಗಳು ಮತ್ತು ವೇದ ನಿರ್ಮಯ ಪುರಬೀದಿಗಳು ಆದಿಅಂತಿಲ್ಲದಷ್ಟ ಭೋಗಗಳು ವಿ ನೋದ ಮುಕ್ತಿ ಕಾಂತೇರಾಟಗಳು ವೇದವೇದಾಂತ ಅಹ್ಲಾದದಿಂ ಪೊಗಳುವ ಸುಜನ ಮಹದಾದಿಪದವಿಗಳು2 ಸೇವಿಪ ಸುರಮುನಿಗಣಗಳು ಕೋವಿದ ನಾರದಾದಿ ಗಾನಗಳು ರಂಭೆ ನಾಯಕಿಯರ ಮಹನರ್ತನಗಳು ಸಾವಿರಮುಖಪೀಠದ್ಹೊಳೆವ ಶ್ರೀರಾಮನ ಪಾವನಪಾದಕಂಡು ಸಾವ್ಹುಟ್ಟು ಗೆಲಿರೆಲೋ 3
--------------
ರಾಮದಾಸರು
ಯಾತ್ರಕ್ಕೆ ಬಂದಿರ್ದೆನೋ ಭುವನ ಯಾತ್ರ ಮಾಡುವೆನು ಪ ಧಾತ್ರಿ ಈರೇಳಕ್ಕೆ ಸೂತ್ರಧಾರನ ಕೃಪಾ ಪಾತ್ರನಾಗಿ ಪವಿತ್ರನಾಗುವೆನು ಅ.ಪ ದೇಶ ತಿರುಗುವೆನು ದೇಹ್ಯದ ವಾಸನೆ ತೊಡೆಯುವೆನು ಆಶಾಪಾಶ ನೀಗಿ ದೋಷರಹಿತನಾಗಿ ದಾಸಜನಕೆ ಬಾಗಿ ಸಂತೋಷ ಪಡೆಯುವೆನು 1 ಪೃಥ್ವಿ ತಿರುಗುವೆನು ಹುಡುಕಿ ಸತ್ಯರ ಕಾಂಬುವೆನು ನಿತ್ಯನಿರ್ಮಲ ಹರಿಭಕ್ತಿ ಕವಚ ತೊಟ್ಟು ಮತ್ತೆ ಸಾವ್ಹುಟ್ಟುವ ಕುತ್ತ ಗೆಲಿಯುವೆನು 2 ಕ್ಲೇಶವ ತರಿಯುವೆನು ಮಾಯ ಮೋಸವ ಗೆಲಿಯುವೆನು ದಾಸಜನರ ಪ್ರಾಣೇಶ ಶ್ರೀರಾಮನ ದಾಸನಾಗಿ ಮುಕ್ತಿ ಆಸನೇರುವೆನು 3
--------------
ರಾಮದಾಸರು