ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೇಳೇಳೆಲೆ ಮಾಮ | ಆರೋ ರೇಳೋದು ಸುಳ್ಳು ಬಂತು ಕ್ಷಾಮ ಪ ಹಾಳಾಗಿ ಹೋಯ್ತು ಮಳೆಬಳೆ ಕಾಳೆಲ್ಲ ಕಸವಾಯಿತು ಅ.ಪ ಭೂಮಿ ಒಕ್ಕಲಮಗನದು ಭೂಮೆಮ್ಮನ ಮಕ್ಕಳು ಒಕ್ಕಲಿಗರು ಭೂಮಿ ಬೆಳೆದರೆ ಅರ್ಧವನ್ನು ಬ್ರಾಹ್ಮಣರಿಗೇಕೆ ಕೊಡಬೇಕು 1 ಆರೋರು ಹೊಲ ಮಾಡಬಾರದು ಮಾಡಿದರೆ ಬಲು ಪಾಪ ಮಾರಲಿ ನಮಗೆ ಮೂರಕ್ಕೆ ನಾಲ್ಕಕ್ಕೊ ಏನಲಾ ಯೀರ್ಕೆಂಪ 2 ಎರವು ಇಸ್ತೆ ಚೇಸ್ತಾನು ಒದ್ದಂಟೆ ವಾಡೆ ಪೋನಿ ವಲ್ಲ ಬಾ ಪ್ನೋಳ್ ಚೇನು 3 ಹೊಲಕುಯಿದು ಕಟ್ಟುವಾಗ ಛಲದಿ ಹಾರುವೈಯ ಬೇಗ ಒಕ್ಕಲಿಗನ ಕಾಯಬೇಕಂತಾನೆ ಬಲು ಭ್ರಾಂತನು ತಾನೆ4 ಕೊಳಗ ಕೊಡÀುವೆವೇಳು ನಮ್ಮಲ್ಲಿ ನಡೆಯದು 5 ಕಂದಾಯ ಕೊಡುವಮಟ್ಟಿಗೆ ಕಾಳುಕೊಟ್ಟರೆ ಸಾಕು ಮುಂದಲು ಬಾರಿಗೆ ಸಾವೇ ಹಾಕಿ ಮೂಗಳಕ್ಕೆ ಗುತ್ತಿಗೆಬೇಕು 6 ನಾವು ತಿಂದು ಮಿಕ್ಕದರೊಳಗೆ ಹಾರೋರಿಗೆ ಸರಿಪಾಲು ಕಾಲ ಕಳ್ವೋದೆ ಮೇಲು 7 ಹೆಂಡಿರು ಹಿಟ್ಟು ಹೊರಲಿಲ್ಲ ಈ ಪುಂಡುತನ ನಮ್ಮಲಿ ಸಲ್ಲಾ ಭಂಡಿಸೌದೆ ಬೇಕೆಂದು ಬರುತಾನೆ ಭಲೆ ಭಲೆ ಹಾರೋನೆ 8 ನಮ್ಮದುಕೇಳಲೆ ಇನ್ನು ಉಳುಮೆಯಿಲ್ಲ ಹಾರುವೈಯಂಗೆ ರಾಜಿನಾಮೆ ಕೊಡಲಿ ಬಿಡಲೆ 9 ಎಷ್ಟು ಧರ್ಮದೊಳಿದ್ದುರು ರೈತರು ಕಷ್ಟಪಡುವರು ನಾವೆ ಬಿಟ್ಟಿ ಹಾರುವಯ್ಯ ಬಲ್ಲೆನೆ ಗುರುರಾಮವಿಠಲಗಾಗಲಿ ಸೇವೆ 10
--------------
ಗುರುರಾಮವಿಠಲ
ಚಿಂತಯಾಮಿ | ರಘುರಾಮಂ | ಸುತ ಕೌಸಲ್ಯೋದರಜಂ |ಸಂತತ ಶರಣರ ಕೃಪಾ | ಪಾಂಗವೀಕ್ಷಾ ಹಸಿತಂ ಪ ಸರಿ ಗ ಸರೀ | ಮಪ ಧಪ ಧಾ | ರಿಸ ನಿಧ ನಿಧ | ಪಮ ಗರಿ ಸದದ್ರುತ - ಸರಿಮಾ ಗರಿ | ಮಪ ದಾಪಮ | ಪಧಸಾ ನಿಧ | ನಿಧ ಪದಪಧ ||ಗರಿ ಸಧ | ``ರಿ ಸ ಧಾ ಸ | ಧಾ ಗ ರಿ ನಿಧಮ | ಗರಿಸಧ | ರವಿ ಕುಲಾನ್ವಯತಿಲಕಂ | ಋಷಿ ವಿಶ್ವಾಮಿತ್ರ ಕೃತಹವನ ಹೋಮ, ಬಾಧಾಗ್ರಸ್ತ | ವಿಮೋಚನ, ಶೀಲಂಅವನಿಜೆ ವೈವಾ, ಹಕ್ಕಾನೀತಂ | ಲಕ್ಷ್ಮಣ ಸಹ, ವಿಧಿಲಾಗ5ನಂ |ಶಿವಧನುವಂ, ಮುರಿದು ರಾಜ | ರುಗಳ ಗರ್ವಹರ | ಶ್ರೀರಾಮಂ 1 ಮಗ ಸಾ ನಿóದ | ನಿóಸಾ ರಿಗಮ | ನಿಧ ಮಾಗರಿ | ಗಮ ಪಗರಿಸದ್ರುತ - ನಿಧನಿಸ ರಿಗಮ ಧನಿಪಧ | ನಿಸ ನಿಧ ನಿಸರಿಗ ಮಗಸನಿ ||ಗರಿಸಧ, ರಿಸ ಧಾ, ಸ ಧಾಆ, ಗರಿ || ನಿದಮ | ಗರಿಸಧ || ರಾಗ - ಧನ್ಯಾಸಿ : ಅನುಜ ಸತಿಸಹ | ವನವಾಸಂ |ನಿಶಿಚರ ಹನನ | ಶೂರ್ಪನಖಿ | ನಾಸಛೇದಂ | ಚರಿತಂ 2 ರಾಗ :ಧಾನಿಸಿ :ನಿಸ ಗಾಮ ಪ | ಗಮ ಪಾನಿಸ | ರಿಸ ರಿನಿ ಸಪ | ಧಪಗಾರಿಸನೀ ಸ ಗ ಮಪ ಗಾ ಮಪನಿಸ | ಪಾ ನಿಸ ಗರಿ ಸನಿಧಪ ನಿಸಗರಿಸಧಾ, ಆರಿಸ ಧಾಸ, ಧಾ, ಗರಿ ನಿಧಮ ಗರಿಸದ || ರಾಗ - ಪರ | ಮಾನುಗ್ರಹ ಶೀಲಂ ರಾಮಂ 3 ಗಾ ಪ ಗರಿ, ಗರಿ ಸಧಸರಿ | ಗಾಪ ದಸದಪ ಗರಿ ಸರಿಗಪಗಗ, ರಿಸ | ರಿಗ, ರಿರಿಸ ಧ | ಸರಿಗರಿ ನಪಗಪ ಧಪಧಸ |ಗರಿಸಧಾ, ಆರಿಸ ಧಾ, ಸದಾ, ಗರಿನಿಧಮ, ಗರಿಸದ || ರಾಗ ಪೂರ್ವಕಲ್ಯಾಣಿ : ಲೇಸು ಕಪಿಗಳ ನಿಚಯ | ಸೀತಾಕೃತಿ ಹುಡುಕುತ |ಆ ಸಮೀರನು | ವಾರಿಧಿಯನು | ಹಾರಿ ಲಂಕೆಯ ಪುರದಲ್ಲಿಅಣುರೂಪದಿ ಹುಡುಕುತ | ಸೀತಾಕೃತಿಯ | ಕಂಡನುದೇಶ ಪುಚ್ಛಾಗ್ನಿಯಲಿ | ದಹಿಸಿ ಸೀತೆ | ವಾರ್ತೆ ಪೇಳಿದನು 4 ಗಾಮಗರಿಸ | ಧ ಸರಿ ಗಮ | ಪಾ ಧಪಸ | ನಿಧಪ ಮಗರಿ |ಗಮಪ ಮಾಪಗಾ | ಮರೀಗ | ಸಾರಿಗಆಮ ಪಧ ಪಸಾ ನಿ |ಗರಿಸಧಾ, ಆಸಧಾ ಸಧಾ ಗರಿ ನಿಧ ಮ ಗರಿಸಧ || ರಾಗ :ಮುಖಾರಿ : ಸತಿ ಪರಿವಾರ ಪುಷ್ಪಕವಿ | ಸ್ವಪುರ ಖೊರಟ 5 ಪಾ ಮಗರಿ | ಸಾ ನಿಧ ಸರಿ | ಮಾಗರಿಸ | ರಿಮ ಪದ ನಿಧ ಸಾ ಸನಿ ಧಪ ಪಾ | ಮಗರಿಸ | ನಿಧಸರಿ ಮಪನಿಧ ಮಪಧಸ ||ಗರಿಸಧಾ ಆರಿಸ ಧಾಅಸ | ಧಾಅ ಗರಿ ನಿಧಮ ಗರಿಸಧ || ರಾಗ ಮಧ್ಯಮಾವತಿ : ಸುರರು ಭಾರ ಕಳೆದ5ುರು ಗೋವಿಂದ ವಿಠಲ 6 ರೀ ಮರಿ ಮಪ | ನೀ ಪಮ ಪನಿ ಸಾ ರಿಸನಿ | ಪಪ ಮಮರಿ ಸ || ರೀಪಮ ರಿಸನಿಪ ರಿಮಪಾ || ರಾಗ :ಪೂರ್ವಕಲ್ಯಾಣಿ || ಧಪ ಸಾ ನಿಧಪಮ | ಮಪಗರಿರಾಗ :ಮೋಹನ || ಸರಿಮಾ ಗರಿ ಸರಿಗಾ | ಪಗರಿ ಸರಿ ಪದಸ ರಾಗ :ಮುಖಾರಿ | ರೀ ಸದಾ ಪದಪ ಗಾರಿ ಸರಾಗ :ನಾಟಿಕುರಂಜಿ || ನಿಸ ಮಗ ಧನಿ ಪಧನಿಸ ರಾಗ : ಸಾವೇರಿ || ಗರಿ ಸದಾ ರಿಸ ಧಾ ಸ | ಧಾ ಗ ರಿ ನಿದಮ ಗರಿಸದ
--------------
ಗುರುಗೋವಿಂದವಿಠಲರು
ಮುದ್ದು ಸುರಿಯುತಾನೆ ನೋಡಿ ಕೃಷ್ಣ ಪ ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯ ಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ ಅ.ಪ ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾ ಸಾವೇರಿ ಮೊದಲಾದ ರಾಗವ ಪಾಡುತ1 ಬಲದ ಪಾದದಿ ಚೆಲುವ ಎಡದ ಪಾದವನಿಟ್ಟು ನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ 2 ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜ ಮುಕುಟ ಶಿರಶ್ಚಕ್ರ ಶೋಭಿತಮುಖ 3 ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿ ಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ 4 ಶ್ರೀ ನರಹರಿಯು ತಾ ನೆನೆಯುವರಿಗೆ ಭವ ಕಾನನದ ಭಯದ ಮನ ಶಂಕಿಸದಿರೆಂದು5
--------------
ಪ್ರದ್ಯುಮ್ನತೀರ್ಥರು
ವಂದಿಪೆ ಮುದದಿಂದಲಿ ನಾನು ವಂದಿಪೆ ಮುದ್ದು ಗಣಪಗೆ ವಂದಿಪೆ ಪ ನಂನಂದನನಾಮ ಮನದೊಳು ಆ- ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ. ಆಕಾಶಕಭಿಮಾನಿ ಶ್ರೀಕಂಠವರಪುತ್ರ ರಾಕೇಂದುವದನ ಶ್ರೀಕಾಂತ ನಿಜಭಕ್ತ ಏಕಾಂತದಲಿ ಹರಿ ಆಕಾರತೋರಿಸಿ ನೂಕುತಭವಪಾಶ ಸಾಕು ಸಾಕು ಎಂದು 1 ವರವರದಾಯಕ ಸುರಗಣಪೂಜಿತ ವರಕರಿಮುಖವೇಷ ವರಸರ್ಪಕಟಿಸೂತ್ರ ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ ಭರದಿಂದ ತರಿಯುತ ಕರುಣದಿ ಸಲಹೆಂದು 2 ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ ಮದನನಸೋದರ ಮುದವಿದ್ಯೆದಾಯಕ ಮಧ್ವಾಗಮದಲಿ ಅದ್ದುತ ಎಮ್ಮನು ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3 ಏಕದಂತನೆ ವರ ಆಖುವಾಹನ ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ ರಕ್ತಾಂಬರ ತನು ರಕ್ತಗಂಧಪ್ರಿಯ ವಿ - ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4 ಪಾಶಾಂಕುಶ ಶಶಿದರ್ಪಭಂಜನ ಶ್ರೀಶನಾಭಿವಾಸ ವಿಶಾಲಕರ್ಣಯುತ ನಾಶಗೈಸುತವಿಷಯ ವಾಸನೆಗಳೆಲ್ಲ ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5 ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ ಸರಿನೀನು ಧನಪಗೆ ಗುರುಶೇಷಶತರಿಗೆ ತರಿದು ತಾಪತ್ರಯ ವರಜ್ಞಾನ ವೈರಾಗ್ಯ ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6 ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ ಸಿರಿ ತಾಂಡವ ಕೃಷ್ಣವಿಠಲ ರಾಯನ ಧ್ಯಾನ ಕಾಯಾ ವಾಚಾ ಮನಸಾ ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7
--------------
ಕೃಷ್ಣವಿಠಲದಾಸರು
ಶ್ರೀ ಮದ್ಭಾಗವತ ಚಿಂತಯಾಮಿ | ಶಿರಿಕೃಷ್ಣ | ಸತತ ಸುಗುಣೋ | ಪೇತಂ ಪ ಸಂತತ ಭಕುತರ ಕೃಪಾ | ಪಾಂಗ ವೀಕ್ಷಾ ಹಸಿತಂಅ.ಪ. ಚಿಟ್ಟೆಸ್ವರ - ಸರಿ ಗಸರೀ | ಮಪ ದಪ ಧಾ | ರಿಸ ನಿಧ ನಿಧ | ಪಮ ಗರಿ ಸಧ |ದ್ರುತ :- ಸರಿಮಾ ಗರಿ | ಮಪ ದಾಸಮ || ಪದ ಸಾ ನಿಧ | ನಿಧ ಪಮಪಧ |ಗರಿ ಸಧ | ರಿಸ ಧಾ ಸ | ಧಾ ಗರಿ ನಿಧಮ ಗರಿಸಧ || ದುರುಳ ಬಂಧಂ | ವಸುಮತಿಯೆಂ, ಗಗನಖಾರಿ, ಕಂಸಗರ್ವಹರ, ದುರ್ಗಾಂಬಂ 1 ವಿಗತಾ ಅಸು, ಪಾಲುಣಿಸಿದ, ರಕ್ಕಸಿ, ಪೂಥಣಿಯುಮಿಗೆ ಊರ್ವಶಿ ಸುರೆ ಶಾಪಹರಂ | ಶಕಟಾಖ್ಯಾಸುರವಿಗಡ ಪ್ರಾಣಹರ | ಶೀಲಂ ತೃಣ ವತ್ಸಾಹರ | ಬಕ ಧುನಿ ಚಮುಮಿಗಿಲಾದವರ ಅಸುಹರಣಂ | ಮಣಿಗೊರಳರ ಶಾಪಹರಂ |ಮದ ವಿಭಂಜನ ಕಾಳೀಯನ | ವನ್ಹಿಯ ಪಾನಂ ಚರಿತಂ 2 ಚಿಟ್ಟೆಸ್ವರ - ನಿಸ ಗಾ ಮಪ | ಗಮ ಪಾ ನಿಸ | ರಿ ಸ ರಿ ನಿ ಸಸ | ಧಪ ಗಾರಿಸ |ನೀ ಸಗ ಮಪ ಗಾ ಮಪನಿಸ | ಪಾನಿಸ ಗರಿಸನಿ ಧ ಪನಿಸ |ಗರಿಸಧ, ಆರಿಸ ಧಾ, ಸ || ಧಾ, ಗರಿ ನಿಧಮ ಗರಿಸಧ || ರಾಗ ಮೋಹನ : ಹನನ ಅಸುರ | ವಿಷತರು ರೂಪಿ | ಘನ ಧೇನುಕ ಭಂಜನಹನನ ಪ್ರಲಂಬನು ಬಲ ನಿಂ | ಪುನರಪಿ ವನ್ಹಿಯ ಪಾನಂಮುನಿ ಪತ್ನ್ಯಾನೀತಾನ್ನ | ಸುಭೋಜನ ಶೀಲಂ |ತೃಣಸಮ ಗಿರಿಧರ ಶಂಖನ | ಮಣಿಹರ ಅರಿಷ್ಠಾ ಅಸುರ ಹರ 3 ಗಾ ಅಪ ಗರಿ, ಗರಿ ಸಧ ಸರಿ | ಗಾಪ ಧಸ, ಧಪ ಗರಿ ಸರಿ |ಗಪ ಗಗ ರಿಸ, ರಿಗ ರಿರಿಸ ಧ | ಸರಿಗರಿ ಗಪಗಪ ಧಪ ಧಸ |ಗರಿಸಧ, ಆರಿಸ, ಧಾ ಸ || ಧಾ, ಗರಿ ನಿಧಮ ಗರಿಸಧ || ಕೇಶಿ ಅಸುರನ ಅಂತೆ ವ್ಯೋಮಾಸುರ ಹನನದಕ್ಲೇಶ ವಾರ್ತೆಯ ಕೇಳಿ ಕಂಸನು ದಾನಪತಿಯನುಯಶೋದೆ ಕಂದನ ಕರೆಯೆ ಅಜ್ಞಾಪಿಸಿದ ಬಿಲ್ಲು ಹಬ್ಬಕೆಲೇಸೆನುತ ಬರವಾಯ್ತು ಸಖ ಅಕ್ರೂರ ಗೋಕುಲಕೆ 4 ಚಿಟ್ಟೆಸ್ವರ - ಅರಿ ಗಮ | ಪಾಧಪಸ | ನಿಧಪಮಗರಿಗಮಪ ಮಾಪ, ಗಾಮರೀಗ, ಸಾರಿಗಾ ಮ, ಪದ ಪ, ಸಾನಿ ||ಗರಿ ಸಧಾ, ರಿ ಸಧಾ ಸದಾ ಗರಿ ನಿಧಮ, ಗರಿ ಸಧ || ಪತಿ | ಸ್ನಾನದಲಿ ಹರಿ ವೀಕ್ಷಣಂಮನ ಕಲಕಿ ಹರಿ ಮಹಿಮೆ ಆಶ್ಚರ್ಯದಿ ಮಧುರೆ ಸೇರಿವನದಿ ಪರಿವಾರ ನಿಲೆ ಬಲ ಸಹಿತ ಪುರಖೊರಟ 5 ಪಾ ಮಗರಿ | ಸಾ ನಿಧ ಸರಿ | ಮಾ ಗರಿಸ | ರಿಮ ಪಮನಿಧ |ಸಾ ಸನಿ ಧಪ ಪಾ ಮಗರಿಸ | ನಿಧ ಸರಿ ಮಪನಿಧ ಮಪಧಸ |ಗರಿ ಸಧ ಆರಿ ಸ ಧಾ ಸ || ಧಾ ಗರಿ ನಿಧಮ, ಗರಿಸಧ || ಭಾರ ಕಳೆದ ಗುರು ಗೋವಿಂದ ವಿಠಲ 6 ಚಿಟ್ಟೆಸ್ವರ ರೀ, ಮರಿ ಮಪ | ನೀ ಪಮ ಪನಿ | ಸಾರಿಸನಿ | ಪಪ ಮಮ ರಿಸ |ರೀ ಪಮ ರಿಸ ನಿಸ ರಿಮಪಾ || ರಾಗ :ಪೂರ್ವಿಕಲ್ಯಾಣಿ :ಧಪಸಾ ನಿಧಪಮ | ಪಮಗರಿ ರಾಗ :ಮೋಹನ :ಸರಿಮಾ ಗರಿ ಸರಿಗಾ | ದಪಗರಿ ಸರಿ ಗಪದಸರಾಗ :ಮುಖಾರಿ :ರೀ ಸದಾ ಪ ದಪ ಗಾರಿಸ | ರಾಗ :ನಾಟಿ ಕುರಂಜಿ :ನಿಸ ಮಗ ಮನಿ ಧನಿ ಪದನಿಸ | ರಾಗ :ಸಾವೇರಿ :ಗರಿ ಸಧಾ ರಿಸ ಧಾ ಸ || ಧಾ ಗರಿ ನಿದಮ ಗರಿ ಸಧ
--------------
ಗುರುಗೋವಿಂದವಿಠಲರು
ಶ್ರೀಶ ಕೊಳಲನೂದಿದನಂದು ಶ್ರೀಧರನಿಂದು ವಾಸವ ವಂದಿತ ವಾತಜ ಸೇವಿತ ವಾಸುಕಿಶಯನನು ವಾರೆ ಸುನೋಟದಿ ಪ ಬೆರಳ ಸಂದಿಲಿ ಮುರಳಿ ಪಿಡಿದು, ಮುರಾರಿ ತಾನು ಹರುಷದಿಂದಲಿ ಸ್ವರವ ನುಡಿದು, ವಾರಿಜನೇತ್ರ ಅರಳು ಮಲ್ಲಿಗೆ ಸರಗಳ ಮುಡಿದು ಕೌಸ್ತುಭ ಮರುಳು ಮಾಡುತ ಮಡದಿಯೆಲ್ಲರ 1 ಗೌರಿ ಗಾಂಧಾರಿ ಗೌಳಪಂತು ಗೌರೀಶ ಭೂಷಣ ಶೌರೀ ಸಾರಂಗ ಮೋಹನವಿಂತು ಸಾವೇರಿ ಸುರುಟಿ ಭೈರವಿ ಬ್ಯಾಗಡೆ ಊದುತ ನಿಂತು ಮಾರಜನಕ ತಾನಾನಂದದಿಂದಲಿ ವೀರ ಶ್ರೀ ಕೃಷ್ಣನು ವಿಧವಿಧ ರಾಗದಿ2 ನಾರದ ತುಂಬುರ ನಾಟ್ಯವನಾಡೆ, ನಳಿನನಾಭನ ಭಾರತಿಪತಿ ತಾ ಕೊಂಡಾಡೆ ವರಗುರು ವಂದಿತ ವಿಜಯವಿಠ್ಠಲರೇಯಹರುಷವ ಪಡಿಸುತ ವನಿತೆಯರೆಲ್ಲರ 3
--------------
ವಿಜಯದಾಸ
ನಳಿನಜಾಂಡತಲೆಯದೂಗೆ |ಇಳೆಯು ನಲಿದು ಮೋಹಿಸುತಿರಲು ||ಕೊಳಲ ಪಿಡಿದು ಬಾರಿಸಿದನು |ಚೆಲುವ ಕೃಷ್ಣರಾಯನು ಪಪೊಳೆವ ಪೊಂಬಟ್ಟೆಯ ದಟ್ಟಿ |ಅಳವಡಿಸಿ ನೆಗಹಿನಿಂದ ||ಹಲವು ರನ್ನದುಂಗುರವಿಟ್ಟ |ಚೆಲುವ ಬೆರಳ ನಟಿಸುತ |||ಲಲಿತವಾಮಭಾಗತೋಳ-|ಲೊಲಿದು ಓರೆನೋಟದಿಂದ ||ಬಲದಪಾದಎಡಕೆ ಚಾಚೆ |ನಳಿನಪದಗಳೊಪ್ಪುತಿರಲು 1ಸೆಳನಡುವಿನೊಳಗೆ ಕತ್ತರಿ |ಕಳೆಯ ಸಂಚಿ, ಗಜುಗು ಚೀಲ ||ಬಿಳಿಯ ಮಣಿಯು ಗುಳ್ಳೆಗಳಿರಲು |ಮಲಯಜಾನು ಲೇಪನ ||ಜಲಜನೇತ್ರ ಕೌಸ್ತುಬಾಧಿ-|ಗಳದಿ ಸ್ವರಗಳೊಪ್ಪುತಿರಲು ||ಲಲಿತವೇಣುಕಲ್ಪನೆಯಲಿ ಗೋ-|ವಳರೆಲ್ಲರು ಕುಣಿಯಲು 2ಮಾರವಿ ದೇಸಿ ಗುರ್ಜರಿ ಭೈರವಿ |ಗೌರಿನಾಟಿಸಾವೇರಿ ಆಹೇರಿ ||ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|ಶಕರಾಭರಣ ರಾಗದಿ ||ಪೂರವಿ ಕಲ್ಯಾಣಿ ವಸಂತ ತೋಡಿ |ವರಾಳಿ ಗುಂಡಕ್ರಿ ಸಾರಂಗ ಸಾಳಗ ||---------------------ಸೋರಟ ಭೂಪಾಳಿ ಶ್ರೀ ರಾಗದಿಂದಲಿ 3ಹರುಷದಿ ಬಾರಿಸುವ ರವಕೆ |ಪುರದ ಸ್ತ್ರೀ ಜನರು ಎಲ್ಲ ||ಮರೆದು ಮಕ್ಕಳ ಮನೆಯ ಕೆಲಸ |ಮರೆದು ಹರಿಯ ಬಳಸಲು ||ಕರಿಯು ಮೃಗವುಕೇಸರಿಶರಭ|ಹರಿಣ ನವಿಲುಉರಗಮೋಹಿಸಿ ||ನೆರೆದು ಮರೆದು ಜಾತಿವೈರವ |ಸ್ವರವ ಕೇಳುತಿರಲು 4ಕರಗೆ ಗಿರಿಯ ಕಲ್ಲು ತರುಗ-|ಳೆರಗಿ ಪಕ್ಷಿ ತತಿಗಳಿರಲು ||ಸುರರುಸುಮನ ಸುರಿಯುತಿರಲು |ಧರೆಯು ಮುದದಿ ಕುಣಿಯುತಿರಲು ||ಶರಧಿಉಕ್ಕಿಸರಿತುಸೊಕ್ಕಿ |ಪುರರಿಪುವಿಧಿಪೊಗಳುತಿರಲು ||ವಿರಚಿಸಿದ ಪುರಂದರವಿಠಲ |ಮುರಲಿಗಾನ ಮಾಡಿದ 5
--------------
ಪುರಂದರದಾಸರು