ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಪಾರ್ವತಿ) ಬಾರಮ್ಮ ಬಾ ಬಾ ಬೊಮ್ಮನ ಮಗನಾಂಗೀ ಪ ತೋರೆ ತೋರೆ ತವ ಕರುಣಾಪಾಂಗೀ ಅ.ಪ. ಮನವೆಲ್ಲಾ ತಿರುತಿರುಗಿದೆ ಮದನಾಂಗೀಮಾವನ ಮಗನಿಗೆ ಪೇಳೆ ಶುಭಾಂಗೀಮನೋಹಾರನ ತಾಪವ ಹರಿಸು ಕೃಪಾಂಗೀ ಮಧ್ಯದಯಾಂಗೀಮದಪಿತ ಪತಿಯ ಮೋಹಿತಳಾಗಿ ಮರೆಪೊಕ್ಕುದು ಪದೋಪದಿಗೆ ಸ್ಮರಿಸುತ ಬೇಗಾ 1 ಗತಿಯಾರು ಪೇಳಮ್ಮಾ ನಿನ್ಹೊರತು ಮತ್ತೊಬ್ಬನ ನಾ ಕಾಣೆನಮ್ಮಾಬೊಮ್ಮನ ಮಗನಿಹನಮ್ಮಾ ಮದುವ್ಯಾದೆಯಮ್ಮಾಮದುವಿಯ ಮಾಡಿಕೊಂಡು ಮರುಳುಮಾಡಿ ನಿನ್ನ ಕರಪುಟದೊಳಗಿಟ್ಟು ಬಾಯ್ಬಾಯ್ಬಿಡಿಸಲು 2 ಯಷ್ಟೆಂದು ಪೇಳಲಮ್ಮಾ ಇನ್ನೆಷ್ಟೆಂತು ತುತಿಸಾವೆಮ್ಮ ಕಷ್ಟಪಡಲಾರೆ ನಮ್ಮಾ ಬಲು ಭ್ರಷ್ಟನಾದೆನಮ್ಮಾಇಷ್ಟನ ಕರಪುಟ ಜೇಷ್ಠ ಸುರರ ಗೆಲಿದಗುರುಕೃಷ್ಣವಂದಿತ ತಂದೆವರದಗೋಪಾಲವಿಠಲನ ಪಠಿಸುವ 3
--------------
ತಂದೆವರದಗೋಪಾಲವಿಠಲರು
ಶರೀರ ಜರಿಯಬೇಡಾ | ಬೆರಿಯಬೇಡಾ | ಸ್ಥಿರವಿದ್ದ ಕೈಯಲಿ ಗುರು ಶರಣವ ಹೊಕ್ಕು | ತಾರಿಸೋ ಭವದಿಂದ ನೀ ಮರಳು ಜೀವವೇ ಪ ಲೋಕದೊಳು ವಾರಿಜೋದ್ಭವ ನಿನ್ನ ಜನ್ಮ ಕೊಟ್ಟು | ನೂಕಲಾಗ ತಾಯಿ ಗರ್ಭದೊಳಾವರಿಸಿ ತಾನು ಧರಿಸಿ | ರೇಖೆ ರೂಪ ಲಾವಣ್ಯ ಅವಯವಂಗಳಿಂದ | ಸಾಕಾರವಾಗಿ ಸುಂದರೆನಿಸಿ ವರನೆನಿಸಿ | ಬೇಕಾದ ವಿದ್ಯವನು ಸರ್ವ ಸಂಪಾದಿಸಲು | ತಾ ಕಾರ್ಯವಾಗಿ ಅಭ್ಯಾಸದಿಂದಾ ಧ್ಯಾಸದಿಂದಾ | ವಾಕ್ಪಟುದಲಿ ಸಮರ್ಥನೆಂಬನಾಮ ಪಡೆದು | ಪ್ರಖ್ಯಾತವಾದೆ ಈ ಕಾಯದಿಂದ 1 ಸ್ನಾನವನು ಮಾಡಿ ತ್ರಿಕಾಲ ಸಂಧ್ಯಾನ ವಿಧಿಯನು | ಮೌನ ಜಪಗಳವನು ತಪಗಳನು | ಸ್ವಾನುಭಾವ ಸೂರ್ಯಾಡಲಾಗಿ ನೇಮವನುಷ್ಠಾನ ಮೊದಲಾದ | ಧ್ಯಾನ ಧಾರಣವನು ಕಾರವನು | ಜ್ಞಾನ ಭಕ್ತಿ ವೈರಾಗ್ಯ ಶಮದಮ ಕರುಣನು ದಿನಮಾಳ್ಪಾ | ಕರ್ಮ ನೈಮಿತ್ಯವಾದಾ ನಿತ್ಯವಾದಾ | ತಾನು ತನ್ನ ಉದ್ಧರಿಸಿಕೊಳಲಿಕ್ಕೆ ಭಾವದಿಂದಾ | ಮಾನುಭಾವg ದಯ ಪಡೆವುದರಿಂದಾ 2 ತಾನು ಕುಣಿಯಲಾರದೆ ಅಂಕಣವು ಡೊಂಕು ಎಂದು | ಹೀನೋಯಿಸಿ ನುಡಿವ ನಟ ವೇಷಿಯಂತೆ | ನೀನು ನೀಟ ನಡಿಯದ್ಹೋಗಿ ದೇಹ ಕಶ್ಮಲವೆಂದು | ಜ್ಞಾನ ರಹಿತನಾಗಿ ಹಳಿವುದು ಉಚಿತ ಇದು ಪ್ರಾಚೀತ | ಈ ನಾಲ್ಕೆರಡು ವೈರಿಗಳ ದಂಡಿಸದೇ ಬರಿದೇ | ಹೀನ ವೈರಾಗ್ಯವಾ ಶಣಸಬೇಡಾ ದಣಿಸಬೇಡಾ | ಕಾನನದ ಹುತ್ತಮ್ಯಾಲ ಬಡಿದರೇನು ವರಗಿರುವಾ | ಆ ನಾಗದರ್ಪಗುಂದದು ಕಂಡಾ 3 ಪರಿಪರಿ ಮುಮ್ಮುಳಿ ವಳಗಾಗಿ ಜೀವಿಸುವ | ತೆರನಂತೋಯಂದು ಚಿಂತಿಸಬಹುದು ಸುರಿಸಬಹುದು | ನೂರು ಭಂಡಿಗಳ ತÀುಂಬಿ ಬಂದರೇನು ತಾ | ಧರೆಯೊಳು ಸೂಲ ತಾ ಹಾವುದೊಂದೇ ನೋವುದೊಂದೇ | ಬರೆದ ಬರಹವೇ ಪಣಿಯಾಲಿದ್ದಪರಿ ತಪ್ಪದೈ | ವರ ಕೂಡಿ ಕೊಟ್ಟಡವಿ ಮಾಡುವದೇನು ನೋಡುದೇನು | ಪರಿ | ಪಡಿ ನೀನು 4 ಸಾಕ್ಷರಾವೆಂಬ ಮೂರಕ್ಷರವ ಬರೆದು ತಾ | ರಾಕ್ಷಸಾವೆಂಬುದೇ ಅರ್ಥವಹುದು ಅನರ್ಥ ವಹುದು | ಪರಿ ವಳಿತು ಹೊಲ್ಲೆ | ಪಕ್ಷದ್ವಯಕ ಬಾಹುದು ಮಾಡಿದಾಂಗ ಕೂಡಿದಾಂಗ | ರಕ್ಷಿಸೆಂದು ಮಹಿಪತಿಸುತ ಜೀವನಾದಿ ವಿಶ್ವಾ | ಭವ ಹಿಂಗು ಬ್ಯಾಗ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶೋಕವಾಗುವುದು ಯಾತಕೆ ಎಲಾ | ಕಾಕುಲಾತೀ ಸಲ್ಲ ಕರಣಶುದ್ಧನಾಗು ಪ ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ ಜೀವನಿತ್ಯ ಸುಖೀ ಎಲ್ಲಿದ್ದರೂ ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು ಕ್ಲೇಶ 1 ಶರೀರಕೆಂಬೆನೆ ಚೇತನ ತಪ್ಪಿದರೆ ಇರುವುದು ಜಡವಾಗಿ ಬಿದ್ದುಕೊಂಡು ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ 2 ಪರಿ ಜ್ಞಾನದಲಿದು ಸಾರ ಕಾಣಿಸದು ಸಂಸಾರದೊಳಗೆ ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು 3
--------------
ವಿಜಯದಾಸ
ಸ್ವಾಮಿ ನೀನೇ ತಂದೆ ನೀನೇ ಯೆನ್ನಯ ಬಂಧು ಪ್ರೇಮದಿಂದಲಿ ಯೆನ್ನ ಸಲಹಯ್ಯ ಬಂದೇ ಪ ಐದು ಹುಲಿಗಳು ಬಂದು ಗಾರುಮಾಡುತಲೆನ್ನ ಕೈದಿನಲ್ಲಿಟ್ಟಿಹವು ಬಿಡಿಸಯ್ಯ ಹರಿಯೇ ಕೈದಿನಲ್ಲಿಟ್ಟೆನ್ನ ಕೆಲಸಕ್ಕೆ ಎಳತಂದು ಬÁಧೆಯ ಕೊಡುತಿಹವು ಬಿಡಿಸಯ್ಯ ಹರಿಯೇ 1 ಭವವೆಂಬ ಮೃಗರಾಜ ಬಗೆಯುತ್ತ ದೇಹದ ಜವದಿಂದ ತಿನ್ನುವಾ ಬಿಡಿಸಯ್ಯ ಹರಿಯೇ ಅವನಿಯೊಳು ಹುಟ್ಟು ಸಾವೆಂಬ ಗಜನಕ್ರಗಳು ತಿವಿದೆನ್ನ ಹೆಳೆಯುದರು ಬಿಡಿಸಯ್ಯ ಹರಿಯೇ 2 ಆರು ವೈರಿಗಳೆÀನ್ನ ಕಾಯವನು ಪಿಡಿದೊಯ್ದು ಯೆರಿಸೀ ಸುಡುತಿಹರು ಬಿಡಿಸಯ್ಯ ಹರಿಯೇ ಮಾರಿ ವಶಮಾಡುವದು ಬಿಡಿಸಯ್ಯ ಹರಿಯೇ 3 ಅನ್ಯರನು ಕಾಣೆ ನಾದೇವ ನಿನ್ನುಳಿದೀಗ ನೀನೆನ್ನ ಅಪರಾಧ ಕ್ಷಮಿಸೋ ಮರೆಹÉೂಕ್ಕೇ ಗಮನ ಶ್ರೀ ಚನ್ನಕೇಶವನೆ ಸನ್ನುತದಾಸನನು ಬಾಲನೆಂತೆಣಿಸೋ 4
--------------
ಕರ್ಕಿ ಕೇಶವದಾಸ
ಹಿಂದಿನ ದಿನದಂತಿದಲ್ಲಣ್ಣ ಈಗ ಬಂದಿಹ ದಿನವತಿ ಹೊಸದಣ್ಣ ಪ ಹೆಂಡಿರು ಮಕ್ಕಳ ಕರೆದರೆ ಒಳಗೆ ತಂಡುಲವಿಲ್ಲ ಗಂಜಿಗೆಶರೆ ಉಂಡೆವೆನುತ ಬಾಯ ಬಿಡುತಾರೆ ಇದ ಕಂಡು ನಾಕ್ಷಣವು ಜೀವಿಸಲಾರೆ 1 ಕಡಕಟ್ಟು ಹುಟ್ಟಿತೆಂಬುದು ಹುಸಿಯಿನ್ನು ಕೊಡುವರು ಕೊಡುವುದಿಲ್ಲವೋ ರೋಸಿ ಉಡಲು ತೊಡಲಿಕ್ಕಿಲ್ಲ ಕೈ ಬೀಸಿ ಎದೆ ನಡುಗಿ ಸಾವೆನು ನಾನು ಪರದೇಶಿ 2 ಅತಿಥಿಗಿಕ್ಕಲಿಕೆ ತನಗೇ ಇಲ್ಲ ಪ್ರತಿಮೆ ಲಿಂಗ ಪೂಜೆಗಳು ಜನ್ಮದೊಳಿಲ್ಲ ವ್ರತನೇಮ ದಾನ ಧರ್ಮಗಳಿಲ್ಲ ಪರ ಗತಿಗೇನು ಮುಂದೆ ಸಾಧನವಿಲ್ಲ 3 ಸಂಸಾರದೊಳಗೇನು ಸುಖವಿಲ್ಲ ಪರಮ ಹಂಸನಾಗಲು ಮುಂದೆ ಪಥವಿಲ್ಲ ಕಂಸಾರಿ ಸ್ಮರಣೆ ಎಂದಿಗೂ ಇಲ್ಲ ತಮ ಧ್ವಂಸಿ ಯಣುಗನ ಕೈವಶರೆಲ್ಲ 4 ಕಾಲಗತಿಯು ಬಲು ಬಿರುಸಣ್ಣ ಜನ ಬಾಳುವ ಪರಿಯಿನ್ನು ಹೆಂಗಣ್ಣ ಕೂಳಿಗೆ ಬಗೆಯಿಲ್ಲದಾಯ್ತಣ್ಣ ಲಕ್ಷ್ಮೀ ಲೋಲನ ಮೇಲೆ ಭಕ್ತಿಯಿಲ್ಲಣ್ಣ 5
--------------
ಕವಿ ಪರಮದೇವದಾಸರು