ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶನೀನೆ ದಯಾಸಿಂಧು ದಾಸಜನರ ಪ್ರೇಮಬಂಧು ಪ ಹೇವವಿಲ್ಲದೆ ಕಾಸಾರಕೈದಿ ಬೋವನಾಗಿ ಬಂಡಿ ಹೊಡಿದಿ ಕೇವಲ ಮಾನಕಾಯ್ದಿ ಸತಿಯ ಸೇವಕಜನರ ಬೆಂಬಲನೆ 1 ನಿನ್ನ ಭಜಿಸಿ ಬೇಡುವವರ ಭಿನ್ನವಿಲ್ಲದೆ ದಯದಿ ಒದಗಿ ಸಾವುಹುಟ್ಟು ಬಂಧಗೆಲ್ಲಿಸಿ ಧನ್ಯರೆನಿಸಿ ಸಲಹುವಿ 2 ಕಾಮಿತಾರ್ಥಪೂರ್ಣ ಭಕ್ತ ಕಾಮಧೇನು ಕಲ್ಪತರು ಸ್ವಾಮಿ ಶ್ರೀರಾಮ ನಿಮ್ಮ ವಿಮಲ ನಾಮ ಎನ್ನ ಜಿಹ್ವೆಗೆ ನೀಡೊ 3
--------------
ರಾಮದಾಸರು
ಯೋಗಿಯಾಗೆಲೆ ಇಲ್ಲ ತ್ಯಾಗಿಯಾಗೆಲೆ ಪ ಹಾಗೂ ಹೀಗೂ ಆಗದೆ ಭವ ರೋಗಿಯೆನಿಸದರೆಲೆ ಗೂಗಿ ಅ.ಪ ಮಾತುಮಾತಿಗೆ ನೀತಿವಚನ ಆತುರಕ್ಕಾಗಿ ಕೂಗಿ ಕೂಗಿ ಪಾತಕದೊಳಗೆ ಬಿದ್ದು ಯಮನ ಯಾತನಕಿಳಿಯಬೇಡ ಭವಿ 1 ಕಾವಿಕಪನಿಲಾಂಛನ್ಹೊದ್ದು ಸೇವೆಗೊಂಡು ಭಾವಗೆಟ್ಟು ಸಾವುಹುಟ್ಟು ಬಲೆಗೆ ಬಿದ್ದು ನೋಯಬೇಡೆಲೆ ನೀಚಮತಿ2 ನಿತ್ಯ ನಿತ್ಯವೆನಿಪ ಪರ ಮಾರ್ಥತತ್ತ್ವಗುರ್ತುಯಿಲ್ಲದೆ ಕತ್ತೆಯಂತೆ ಒದರಿ ವ್ಯರ್ಥ ಮೃತ್ಯುಹೊಂದ ಬೇಡ ಮೂರ್ಖ 3 ಸೋಗುಹಾಕಿ ಸಾಧುಯೆನಿಸಿ ಕಾಗೆಯಂದದಿ ತೀರ್ಥಮುಳುಗಿ ಜಾಗರ ಮಾಡಿ ಪೋಗದಿರಲೆ ನರಕಕಧಮ 4 ಭೂಮಿ ಪ್ರೇಮ ತಾಮಸ ನೀಗಿ ಕಾಮ ಕ್ರೋಧ ಲೋಭ ಜೈಸಿ ಭೂಮಿತ್ರಯಂಗಳೊಡೆಯ ಶ್ರೀ ರಾಮನಾಮ ಭಜಿಸಿ ಮುಕ್ತನಾಗೆಲೊ 5
--------------
ರಾಮದಾಸರು
ವಿಶ್ವಧಾರನೋ ಶ್ರೀಶ ವಿಶ್ವಕಾರನೋ ವಿಶ್ವ ವಿಶ್ವಭರಿತ ವಿಶ್ವರಕ್ಷ ವಿಶ್ವಚರಿತ ಪ ನಾದಭರಿತನೋ ಹರಿ ನಾದಾತೀತನೋ ವೇದಾಧರನೋ ರಂಗ ವೇದ ಗೋಚರನೋ ವೇದವೇದಾಂತ ಸ್ವಾದ ನಿಖಿಲ ಬೋಧರೂಪ ಭೇದರಹಿತ ಆದಿ ಅನಾದಿದಾತ ಸತತ ಸಾಧುಸಜ್ಜನವಿನುತ ಅಮಿತ1 ದೇವದೇವನೋ ಸ್ವಾಮಿ ದಿವ್ಯಚರಿತನೋ ಕಾವ ಕರುಣನೋ ಭಕ್ತಿ ಭಾವಪೂರ್ಣನೋ ಸಾವುಹುಟ್ಟು ಭಯವಿದೂರ ಮಾಯಗೆಲಿದ ಮಹಪ್ರಕಾಶ ಭಾವಜಜನಕ ಭವಭಂಗ ಸೇವಕಜನರ ಜೀವದಾಪ್ತ 2 ದೋಷನಾಶನೋ ಕೃಷ್ಣ ಮೀಸಲಾತ್ಮನೋ ಭಾಸುರಂಗನೋ ಜಗದೀಶ ಗಮ್ಯನೋ ವಾಸುಕಿಶಯನ ವಾಸುದೇವ ಸಾಸಿರನಾಮದೊಡೆಯ ಇಂದಿ ರೇಶ ಗೋವಿಂದ ಪೋಷಿಸೆನ್ನ ಶ್ರೀಶ ಶ್ರೀರಾಮದಾಸಪ್ರಿಯ 3
--------------
ರಾಮದಾಸರು